ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.
“ಅಮ್ಮ”, ಮಹಾತ್ಯಾಗಿ ಅಮ್ಮ !
(ಅಮ್ಮನ ಎಷ್ಟು ಗುಣಗಾನ ಮಾಡಿದರೂ ಅದು ಸ್ವಲ್ಪವೇ. ಅಮ್ಮನ ಆತಿಥ್ಯ ಎಲ್ಲರಿಗೂ ಒಂದಲ್ಲ ಒಂದುತರಹ ಅನುಭವ ಆಗಿರುವುದು ಶುದ್ಧ ಸತ್ಯ. ಅಮ್ಮನ ಈ ಒಲವು ಒಂದು “ಅಪೂರ್ವವಾದ ಪ್ರೀತಿ”, ಇದು ಬೇರೆ ಯಾರಿಂದಲೂ ಧಕ್ಕದು. ಈ ಒಂದು ಸಂಬಂಧದಲ್ಲಿ ಅದೆಷ್ಟು ತ್ಯಾಗಮಯವಾದ, ಎನನ್ನೂ ಅಪೇಕ್ಷಿಸದ, ಒಂದೇ ದಾರಿಯಲ್ಲಿ ಹರಿಯುವ ಈ ಪ್ರೇಮಕ್ಕೆ ಅಮ್ಮನ ಪ್ರೀತಿಯಷ್ಟೇ ಸರಿಸಾಟಿ. ಈ ಒಲವು ಆ “ಮಹಾತ್ಯಾಗಿ ಅಮ್ಮ” ನಿಂದಷ್ಟೇ ಸಾದ್ಯ. ಅನುಭವಿಸುವವರು ಕೇವಲ ಚಿರಋಣಿಗಳಷ್ಟೆ.)
ನಾ ಹುಟ್ಟುವ ಮೊದಲೇ ಆಸೆ ಹೊತ್ತಿದ್ದೆ.
ನನ್ನ ಆ ಸಮಯ ಬಂದಾಗ ಹೆತ್ತಿದ್ದೆ.
ಮಗುವ ಆ ಮುಗ್ಧ ಮುಖವ ನೋಡಿ ಸೋತಿದ್ದೆ.
ಮುಗುಳ್ನಗೆಯ ಮುಖದಿಂದ ಅಕ್ಕರೆಯ ಸುರಿದಿದ್ದೆ.
“ಅಮ್ಮಾ” ಎಂಬ ಕರೆಗೆ ಅರಳಿದಮುಖದಿ ಅವಸರದಿ ಓಡೋಡಿ ಬಂದೆ.
“ಅತ್ತು” ಅಬ್ಬರದ ಕರೆಗೆ ಅನುಕಂಪದಿ ಅಭಿಮಾನ ತೋರಿಸಿ ನಿಂತೆ.
“ಕಂದಾ” ಎಂಬ ಕೂಗಿಗೆ ಅನುಕರಿಸಿದ ಕಾಲ್ಗಳ ಹೆಮ್ಮೆಯಿಂದ ನೋಡುತ್ತಾ ನಿಂತೆ.
“ಕೋಪ” ಕೆಂಡದಷ್ಟಾದರೂ, ತಂಪನು ತರಿಸಿ ನಗುತ್ತಾ ನಗಿಸಿದೆ.
ಬೆಳೆದುದ್ದಕ್ಕೂ ಮೈಮರೆತು ಕಾಪಾಡಿ ರಕ್ಷಿಸಿದೆ.
ಬಂಧು – ಬಾಂಧವರನು ಸ್ನೇಹದಲಿ ಕಾಣೆಂದೆ.
ಬರೆದು – ಓದುಗಳ ಪಾಠಕೆ ನೀ ಮೊದಲ ಗುರುವಾದೆ.
ಬೇಕು – ಬೇಡಗಳ ಭೇಧಿಸಿ ಸನ್ಮಾರ್ಗವ ತೋರಿಸಿದೆ.
ಉಳ್ಳಲ್ಲಿ ಸಹಾಯವೆಸಗಿದರೆ ಒಳಿತೆಂದೆ.
ಉಪ್ಪು ತಿಂದಲ್ಲಿಗೆ ವಂಚಕತನ ವಲ್ಲೆ ಎಂದೆ.
ಉಳಿಸಲು ಸು-ಧರ್ಮ – ಸತ್ಸಂಘಗಳ ಯತ್ನವ ಮಾಡೆಂದೆ.
ಉರಿದು ಬೀಳುವವರಿಗೂ, ಮುಪ್ಪಿದ್ದರೆ, ಕ್ಷಮಿಸೆಂದೆ.
“ಅಮ್ಮಾ” ನೀ ಮನುಕುಲದ “ಮಹಾತಾಯಿ” ಯಾದೆ.
“ಅಮ್ಮಾ” ನೀ ಮಾನವೀಯತೆಯ “ಮೊದಲ ಪ್ರತಿನಿಧಿ”ಯಾದೆ.
“ಅಮ್ಮಾ” ನೀ ಸರ್ವಜೀವಿಗಳ ಸಹೃದಯತೆಯ “ಸಾಕಾರ”ವಾದೆ.
“ಅಮ್ಮಾ” ನಾ ನಿನಗೆ ಸದಾ “ಚಿರಋಣಿ” ಯಾದೆ.
Comments
ಜಗತ್ತಿನ ಎಲ್ಲ ತಾಯಂದಿರಿಗೂ
ಜಗತ್ತಿನ ಎಲ್ಲ ತಾಯಂದಿರಿಗೂ "ತಾಯಿಯ ದಿನದ ಶುಭಾಶಯಗಳು"! ಈ ಕವನ ನನ್ನ ಎರಡನೇ ಬರಹ. ಮೊದಲನೆಯದು "ಗಣೇಶನ ಪ್ರಾರ್ಥನೆ ಕವನ - ಬರಹಗಾರ್ತಿ ಇನ್ನೂ ನಾನಾಗಿಲ್ಲ" ನಮ್ಮ ಅಮ್ಮ ಇದನ್ನು ಓದಿ ತುಂಬಾ ಆನಂದಿಸಿದ್ದರು ಎನ್ನುವುದೇ ನನಗೆ ಸಮಾಧಾನ ಮತ್ತು ಖುಷಿ ತಂದ ವಿಷಯವಾಗಿದೆ.
~ಮೀನಾ
In reply to ಜಗತ್ತಿನ ಎಲ್ಲ ತಾಯಂದಿರಿಗೂ by rasikathe
ಚೆನ್ನಿದೆ ನಿಮ್ಮ 'ಅಮ್ಮನ' ಕವಿತೆ.
ಚೆನ್ನಿದೆ ನಿಮ್ಮ 'ಅಮ್ಮನ' ಕವಿತೆ. ಮತ್ತಷ್ಟು ಬರೆಯಿರಿ. ಶುಭವಾಗಲಿ.
In reply to ಚೆನ್ನಿದೆ ನಿಮ್ಮ 'ಅಮ್ಮನ' ಕವಿತೆ. by Maalu
ಧನ್ಯವಾದಗಳು ಮಾಲು ಅವರೆ, ~ಮೀನಾ
ಧನ್ಯವಾದಗಳು ಮಾಲು ಅವರೆ,
~ಮೀನಾ