2 ವಿದ್ಯಾಧರೆ

2 ವಿದ್ಯಾಧರೆ

ಕವನ

 ವಿದ್ಯಾಧರೆ ಪತಿ ಪ್ರಿಯಕರನ ಜಾಳವನರಸುತ ದೇಶ ವಿದೇಶಗಳ ಜಾಳಿಸುತ

ಧಾರಾನಗರ ಪುರ ಪ್ರವೇಶಿಸಿದಳ್  ಪುರುಷ ರೂಪದಿಂ ಪೂರ್ಣೇಂದು ಬಿಂಬ ಸರಿ ರಾತ್ರಿಯೊಳ್

ಸರಸ ಸಂಭ್ರಮದ ಕನಸ ಕಾಣುತ ನಿಂದಿಸಿದಳುಡುರಾಜನ ಮದನ ಪೀಡಿತೆ ಮದನಮಂಜರಿ

ಧಾರಾನಗರಿಯಭಿಸಾರಿಕೆ ವಿರಹವೇದನೆಯ ಸೈರಿಸದೆ ಶಶಿಯ ತಂಪನರಸಿ ನಿಟ್ಟಿಸೆ

ರಾಜಬೀದಿಯೊಳ್ಕಂಡ ಸವಾರನನುನಯಿಸಿ ಸಂಭ್ರಮದಿ ಸ್ವಾಗತಿಸಿದಳಿಂದುಮುಖಿ

ವಿದ್ಯಾಧರೆಯ ಪುರುಷನೆಂದೆ ಭ್ರಮಿಸಿ ಕಾಮಿಸಿ ಪೀಡಿಸಿದಳ್ ರಾಸಲೀಲೆಗೆ

ಮುಜುಗರಿದಿ ವಿದ್ಯಾಧರೆ ನಿಜವೇಷದೊಳರುಹಿದ ಪತಿಯ  ವೃತ್ತಾಂತವ ಕೇಳಿ

ಬಾರದಿಹರಾರೆನ್ನ ಮನೆಗೆ ಧಾರಾನಗರಿಯಲಿ ಚಿಂತಿಸಿದಿರಿನ್ನು ನಿನ್ನಿನಿಯನಿರವನರಿಯುವೆ

ಶೀಘ್ರದಲಿ ಸೇರುವೆ ಪ್ರಿಯಕರನ ವಿಶ್ರಮಿಸೆಂದುಪಚರಿಸಿದಳು ಘನ ಧನದಾಸೆಯಲಿ ಮದನಮಂಜರಿ.