2020 ಅತ್ಯಂತ ಕೆಟ್ಟ ವರ್ಷವೇ?

2020 ಅತ್ಯಂತ ಕೆಟ್ಟ ವರ್ಷವೇ?

ಎಲ್ಲರೂ ಹೇಳ್ತಾ ಇದ್ದಿದ್ದು 2020 ಮರೆಯಲಿಕ್ಕಾಗದಷ್ಟು ಕೆಟ್ಟ ವರ್ಷ ಎಂದು. ಆದರೆ ನನಗೆ ಹಾಗೆ ಅನಿಸುತ್ತಿಲ್ಲ.

* ನಮ್ಮ ತಂದೆ ತಾಯಿ ಜೊತೆಗೆ, ಹೆಂಡತಿ ಮಕ್ಕಳೊಡನೆ ಅತಿ ಹೆಚ್ಚು  ಕಳೆದಿದ್ದು, 2020 ರಲ್ಲಿ. 

* ನಮ್ಮ ದುಶ್ಚಟಗಳಾದ ಧೂಮಪಾನ ಮದ್ಯಪಾನ ಗಳನ್ನು ನಿಯಂತ್ರಿಸಿದ ವರ್ಷ 2020.

* ಮೀನು ಮಾಂಸವನ್ನು ತಿನ್ನದೇ ಸುಖವಾಗಿ ಜೀವಿಸಬಹುದೆಂದು ಕಲಿಸಿಕೊಟ್ಟ ವರ್ಷ 2020.

* ಸಣ್ಣ ಸಣ್ಣ ರೋಗಗಳಿಗೆ ಡಾಕ್ಟರಿಗೆ ತೋರಿಸದಯೇ ಮನೆಯ ಮದ್ದಿನಲ್ಲೇ ಗುಣಪಡಿಸಬಹುದೆಂದು ಕಲಿಸಿಕೊಟ್ಟ ವರ್ಷ 2020.

*ವಿಜೃಂಭಣೆಯಿಲ್ಲದೇ ಅತಿ ಸರಳವಾಗಿ ಅತಿ ಕಡಿಮೆ ಜನಗಳನ್ನು  ಕರೆದು ಮದುವೆ ಮಾಡಬಹುದೆಂದು  ತೋರಿಸಿಕೊಟ್ಟ ವರ್ಷ 2020.

*ಬೇಕಾಬಿಟ್ಟಿ ರಸ್ತೆಗಳಲ್ಲಿ ಬಿಸಿಲಿನಲ್ಲಿ ಸುತ್ತದೇ  ಹಾಯಾಗಿ ಮನೆಯಲ್ಲಿ ಹೇಗೆ ಕಾಲ ಕಳೆಯಬಹುದೆಂದು ಕಲಿಸಿಕೊಟ್ಟ ವರ್ಷ 2020.

*ದೇವಸ್ಥಾನಗಳಿಗೆ ಹೋಗದೆ ಅತ್ಯಂತ ಭಕ್ತಿಯಿಂದ ಮನೆಯಲ್ಲೇ ಕುಳಿತು ಪ್ರಾರ್ಥಿಸಿದ ವರ್ಷ 2020.

*ಅದೆಷ್ಟೋ ಓದುವ ಹವ್ಯಾಸ ಇಲ್ಲದ ಜನರಿಗೆ ಧರ್ಮ ಗ್ರಂಥಗಳನ್ನು, ಪ್ರೇರಣಾದಾಯಕ ಪುಸ್ತಕಗಳನ್ನು ಕೈಗೆತ್ತಿಕೊಳ್ಳುವಂತೆ ಪ್ರೇರಣೆ ತಂದುಕೊಟ್ಟ ವರ್ಷ 2020.

*ದುಂದುವೆಚ್ಚ ಮಾಡದೇ, ಕಡಿಮೆ ಖರ್ಚಿನಲ್ಲಿ, ಸಂಬಳ ಪೂರ್ತಿಯಾಗಿ ಕೈಗೆ ಸಿಗದಿದ್ದರೂ ಹೇಗೆ ಜೀವನ ನಡೆಸ ಬಹುದೆಂದು ಎಚ್ಚರಿಸಿದ ವರ್ಷ 2020.

*ವ್ಯಕ್ತಿ ಶುಚಿತ್ವದ ಬಗ್ಗೆ ಗೊತ್ತಿದ್ದರೂ ಅಷ್ಟಾಗಿ ಪಾಲಿಸದಿದ್ದ ನಾವು ಈಗ ಶುಚಿತ್ವದ ಬಗ್ಗೆ ಗಮನ ಕೊಡುವಂತಹ ಮಾಡಿದ್ದು 2020.

*ಮಕ್ಕಳು ಮೊಬೈಲ್ ಫೋನ್ ಮುಟ್ಟಿದರೆ ಕೋಪಿಸಿಕೊಳ್ಳುತಿದ್ದ ತಂದೆ ತಾಯಿಗಳೇ ಅದೇ ಮಕ್ಕಳಿಗೆ ಆಂಡ್ರಾಯಿಡ್ ಫೋನ್ ಕೊಡಿಸಿದ ವರ್ಷ 2020.

ಹೀಗೆ ನಮ್ಮ ಬದುಕಿಗೆ ಅನೇಕ ಬೆಳಕನ್ನು ತಂದು ಕೊಟ್ಟ 2020 ನ್ನು ಹೇಗೆ ಮರೆಯುವುದು.

-ರಂಗನಾಥ್ ರಾಠೋಡ್

(ವಾಟ್ಸಾಪ್ ಸಂಗ್ರಹದಿಂದ)

ಚಿತ್ರ ಕೃಪೆ : ಇಂಟರ್ನೆಟ್ ತಾಣ