21. ಸೋಲುಗಳ ಸರಮಾಲೆ ಎದುರಿಸಿ ಗೆದ್ದ ಅಬ್ರಾಹಾಂ ಲಿಂಕನ್
ಹಲವಾರು ವರುಷಗಳ ಹಿಂದೆ ಥೋಮಸ್ ಮತ್ತು ನ್ಯಾನ್ಸಿ ಲಿಂಕನ್ ಒಂದೇ ಕೋಣೆಯ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅವರ ಮಗನೇ ಅಬ್ರಹಾಂ ಲಿಂಕನ್. ಅವನು ಬೆಳೆದಂತೆ ಅನೇಕ ಸೋಲುಗಳನ್ನು ಎದುರಿಸಬೇಕಾಯಿತು. ಅವನ 21ನೆಯ ವರುಷದಲ್ಲಿ ಒಂದು ವ್ಯವಹಾರದಲ್ಲಿ ಅವನು ಭಾರೀ ನಷ್ಟ ಅನುಭವಿಸಿದ. ತನ್ನ 22ನೆಯ ವಯಸ್ಸಿನಲ್ಲಿ ಶಾಸನ ಸಭೆಯ ಚುನಾವಣೆಯಲ್ಲಿ ಅವನಿಗೆ ಸೋಲುಂಟಾಯಿತು. ತನ್ನ 24ನೆಯ ವಯಸ್ಸಿನಲ್ಲಿ ಅವನು ಪುನಃ ವ್ಯವಹಾರದಲ್ಲಿ ನಷ್ಟದಲ್ಲಿ ಮುಳುಗಿದ. 26ನೆಯ ವಯಸ್ಸಿನಲ್ಲಿ ಅವನು ಪ್ರೀತಿಸಿದ್ದ ಯುವತಿ ತೀರಿಕೊಂಡಳು.
ಮುಂದಿನ ವರುಷ ಅಬ್ರಹಾಂ ಲಿಂಕನ್ ನರಮಂಡಲದ ಕುಸಿತಕ್ಕೆ ಒಳಗಾಗಿ ಹೈರಾಣಾದ. ಅನಂತರ, ಅವನ 37ನೆಯ ವಯಸ್ಸಿನಲ್ಲಿ ಯು.ಎಸ್.ಎ. ದೇಶದ ಕಾಂಗ್ರೆಸಿನ ಚುನಾವಣೆಗೆ ಸ್ಪರ್ಧಿಸಿ ಸೋತು ಹೋದ. ಅದಾಗಿ ಹತ್ತು ವರುಷಗಳಲ್ಲಿ (47ನೆಯ ವಯಸ್ಸಿನಲ್ಲಿ) ಯು.ಎಸ್.ಎ. ದೇಶದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೂ ಅವನು ಗೆಲ್ಲಲಿಲ್ಲ. ಪುನಃ ಅವನ 49ನೆಯ ವಯಸ್ಸಿನಲ್ಲಿಯೂ ಹಾಗೆಯೇ ಆಯಿತು. ಇಷ್ಟೆಲ್ಲ ಸೋಲುಗಳು ಒಂದಾದ ಮೇಲೊಂದರಂತೆ ಅಪ್ಪಳಿಸಿದರೂ ಅಬ್ರಹಾಂ ಲಿಂಕನ್ ಎದೆಗುಂದಲಿಲ್ಲ. ಅಂತಿಮವಾಗಿ, 52ನೆಯ ವಯಸ್ಸಿನಲ್ಲಿ ಅಬ್ರಹಾಂ ಲಿಂಕನ್ ಅಮೇರಿಕಾದ 16ನೇ ಅಧ್ಯಕ್ಷನಾಗಿ ಚುನಾಯಿತನಾದ. ತದನಂತರ ಸಿವಿಲ್ ಯುದ್ಧದಲ್ಲಿ ಅಮೇರಿಕಾವನ್ನು ಮುನ್ನಡೆಸಿ, ಜೀತ ಪದ್ಧತಿಯನ್ನು ನಿಷೇಧಿಸಿದ. ಜಗತ್ತಿನಲ್ಲಿ ಧನಾತ್ಮಕ ಬದಲಾವಣೆ ತರುತ್ತೇನೆಂಬ ನಂಬಿಕೆಯನ್ನೇ ನೆಚ್ಚಿಕೊಂಡು ಬಾಳಿದ ಅಬ್ರಹಾಂ ಲಿಂಕನ್ ಚರಿತ್ರೆಯಲ್ಲಿ ಅಚ್ಚಳಿಯದ ಸಾಧನೆ ಮಾಡಿದ ಕೆಲವೇ ವ್ಯಕ್ತಿಗಳಲ್ಲಿ ಒಬ್ಬನೆಂಬುದು ದೊಡ್ಡ ಸಾಧನೆ.
Comments
ಕೆಲವೇ ಕೆಲವು ಸಾಲುಗಳಲ್ಲಿ…
ಕೆಲವೇ ಕೆಲವು ಸಾಲುಗಳಲ್ಲಿ...
ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಸಾಗಿ ಬಂದ ಹಾದಿಯನ್ನು ಕೆಲವೇ ಕೆಲವು ಸಾಲುಗಳಲ್ಲಿ ಅರ್ಥಪೂರ್ಣವಾಗಿ ವಿವರಿಸಿದ್ದೀರಿ. ಸಣ್ಣ ತರಗತಿಯ ಮಕ್ಕಳಿಗೆ ಅಬ್ರಹಾಂ ಲಿಂಕನ್ ಕುರಿತಂತೆ ತಿಳಿದುಕೊಂಡು ನೆನಪಿನಲ್ಲಿಡಲು ಈ ರೀತಿಯ ಬರಹಗಳು ಸಹಕಾರಿ. ನಿಜಕ್ಕೂ ಲೇಖಕರ ಬರವಣಿಗೆಯ ಶೈಲಿ ಅದ್ಭುತ. ಇಷ್ಟು ಕಡಿಮೆ ಸಾಲುಗಳಲ್ಲಿ ಅಬ್ರಹಾಂ ಲಿಂಕನ್ ಎಂಬ ವ್ಯಕ್ತಿಯ ಪೂರ್ಣ ಪರಿಚಯವನ್ನು ನೀಡಿದ್ದು ಅಭಿನಂದನಾರ್ಹ. ಇಂತಹ ಲೇಖನಗಳು ಇನ್ನಷ್ಟು ಬರಲಿ.
-ಶ್ರೀರಾಮ ದಿವಾಣ, ಉಡುಪಿ