25. ಶ್ರೇಷ್ಠ ಚಲನಚಿತ್ರ ನಟ ಸಿಡ್ನಿ ಪೊಯಿಟರ್

25. ಶ್ರೇಷ್ಠ ಚಲನಚಿತ್ರ ನಟ ಸಿಡ್ನಿ ಪೊಯಿಟರ್

ನೀವು ಸಿಡ್ನಿ ಪೊಯಿಟರ್ ಹೆಸರನ್ನು ಖಂಡಿತವಾಗಿ ಕೇಳಿರುತ್ತೀರಿ. ಬಹಾಮಾಸ್‌ನಿಂದ ಅವನ ಹೆತ್ತವರು ಅಮೇರಿಕಾದ ಫ್ಲೋರಿಡಾದ ಮಿಯಾಮಿಗೆ ರಜೆಯಲ್ಲಿ ಬಂದಿದ್ದಾಗ ಅಲ್ಲಿ ಆತನ ಜನನ. ಬಹಾಮಾಸ್‌ಗೆ ಹೆತ್ತವರ ಜೊತೆ ಹಿಂತಿರುಗಿದ ಸಿಡ್ನಿ ಪೊಯಿಟರ್, ಅಲ್ಲಿ ತನ್ನ ತಂದೆಯ ಟೊಮೆಟೊ ಹೊಲದಲ್ಲಿ ಕೆಲಸ ಮಾಡುತ್ತಾ ಬೆಳೆದ. ಕೊನೆಗೆ ಆ ಕೃಷಿಯಿಂದ ನಷ್ಟವಾಯಿತು. ಆಗ ಅವನ ತಂದೆ, ದುಡಿದು ಬದುಕಲಿಕ್ಕಾಗಿ ಸಿಡ್ನಿ ಪೊಯಿಟರನನ್ನು ಯು.ಎಸ್.ಎ. ದೇಶಕ್ಕೆ ಕಳಿಸಿದ.

ಹೀಗೆ ಅಮೇರಿಕಕ್ಕೆ ಬಂದಿಳಿದ ಯುವಕ ಸಿಡ್ನಿ ಪೊಯಿಟರ್ ಮಹಾನಗರ ನ್ಯೂಯಾರ್ಕಿನಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡತೊಡಗಿದ. ಒಮ್ಮೆ, “ನಟರು ಬೇಕಾಗಿದ್ದಾರೆ" ಎಂಬ ಜಾಹೀರಾತನ್ನು ಅವನು ವಾರ್ತಾಪತ್ರಿಕೆಯಲ್ಲಿ ನೋಡಿದ. ಹೆಚ್ಚು ಶಿಕ್ಷಣ ಪಡೆಯದಿದ್ದ ಸಿಡ್ನಿ ಪೊಯಿಟರ್ ಚಲನಚಿತ್ರ ಸಂಭಾಷಣೆಗಳ ಬರಹ (ಸ್ಕ್ರಿಪ್ಟ್) ಓದಲು ತಡಬಡಾಯಿಸಿದ. ಈತನನ್ನು ಅಲ್ಲಿಂದ ಹೊರಕ್ಕೆ ತಳ್ಳಿದ ಆ ಚಲನಚಿತ್ರದ ನಿರ್ಮಾಪಕ ಈತನಿಗೆ ಹೇಳಿದ್ದು ಹೀಗೆ: “ಹೋಗು, ಇಲ್ಲಿಂದ ಹೋಗು. ಎಲ್ಲಾದರೂ  ಪಾತ್ರೆ ತೊಳೆಯುವಂತಹ ಕೆಲಸವಿದ್ದರೆ ಹುಡುಕು.”

ಆ ಕ್ಷಣದಲ್ಲಿ ಸಿಡ್ನಿ ಪೊಯಿಟರ್ ಮನಸ್ಸಿನಲ್ಲಿ ಮೂಡಿದ ಯೋಚನೆ: "ನಾನು ಪಾತ್ರೆ ತೊಳೆಯುವ ಕೆಲಸದವನಂತೆ ಕಾಣಿಸುತ್ತೇನೆಯೇ?” ಆದರೆ, ಆ ಕ್ಷಣದಿಂದ ಅವನ ಜೀವನವೇ ಬದಲಾಯಿತು. ಅವನು ಚೆನ್ನಾಗಿ ಕಾಣಲಿಕ್ಕಾಗಿ ಒಳ್ಳೆಯ ಉಡುಪು ಧರಿಸ ತೊಡಗಿದ ಮತ್ತು ನಟನೆಯೇ ತನ್ನ ಜೀವನದ ಗುರಿಯೆಂದು ನಿರ್ಧರಿಸಿ ಅದನ್ನು ಸಾಧಿಸಲಿಕ್ಕಾಗಿ ಪರಿಶ್ರಮ ಪಡತೊಡಗಿದ. ಕೊನೆಗೂ ಅವನು ಜಗತ್ತಿನ ಶ್ರೇಷ್ಠ ಚಲನಚಿತ್ರ ನಟರಲ್ಲಿ ಒಬ್ಬನೆಂದು ಪ್ರಖ್ಯಾತನಾದ. ಕರಿಯ ಜನಾಂಗದವರಲ್ಲಿ ಮೊತ್ತಮೊದಲ ಅಕಾಡೆಮಿ ಪುರಸ್ಕಾರ (1963ರಲ್ಲಿ) ಪಡೆದ ನಟನೆಂದು ಅವನು ಹೆಸರಾದ.

Comments

Submitted by venkatesh Sat, 10/22/2022 - 08:05

೧೯೬೭ ರಲ್ಲಿ  ಬೊಂಬಾಯಿಗೆ ಆಗತಾನೆ ಬಂದಿದ್ದೆ. ಹಾಲಿವುಡ್  ನಟ ಸಿಡ್ನಿ ಪಾಯಿಟರ್  ಬಗ್ಗೆ  ನನಗೆ ವಿಶೇಷ ಆಕರ್ಷಣೆಯಿತ್ತು. ಬೊಂಬಾಯಿಗೆ ಬಂದ ಹೊಸದರಲ್ಲಿ ಹಾಲಿವುಡ್ ಚಲನಚಿತ್ರಗಳ ಮೋಡಿ ಗೆ ಸಿಕ್ಕಿಹಾಕಿಕೊಂಡಾಗ ಮೊದಲು ನನ್ನನ್ನು ಅಯಸ್ಕಾಂತದಂತೆ  ಸೆಳೆದವರು, ಸಿಡ್ನಿ ಪಾಟಿಯೆಯ್ ರವರು. ಅವರ ಮಾಟವಾದ ಕಪ್ಪು ಬಣ್ಣದ ವ್ಯಕ್ತಿತ್ವ, ಮಾತಾಡುವ,ಯೋಚಿಸಿ ಉತ್ತರಕೊಡುವ  ಸ್ಟೈಲ್  ನನಗೆ ನಿಜಕ್ಕೂ ಮೆಚ್ಚುಗೆಯ ಸಂಕೇತವಾಗಿದ್ದವು. ಅಂದಮೇಲೆ, ಒಬ್ಬ ಬಿಳಿ ಅಮೇರಿಕನ್ ಬೆಡಗಿ ಅವರ ಹಿಂದೆ ಬೀಳುವುದು, ಲಟ್ಟು ಆಗುವುದು  ಆಶ್ಚರ್ಯದ ಮಾತೇ ? ನಮ್ಮ ಹೆಮ್ಮೆಯ ಆಫ್ರಿಕನ್ ಅಮೇರಿಕನ್ ಅಧ್ಯಕ್ಷ ಬರಾಕ್ ಒಬಾಮ ರವರ  ತಂದೆಯವರನ್ನು ಕಪ್ಪುಬಣ್ಣದವರಾದರೂ  ಒಬಾಮರವರ ತಾಯಿ ಅವರನ್ನು  ಪ್ರೀತಿಸಿ ಮದುವೆಯಾಗಲಿಲ್ಲವೇ  ? ಹೀಗೆ ಆಕರ್ಷಣೆ ಬಣ್ಣದಮೇಲೆಯೇ ಪೂರ್ತಿ ನಿಂತಿಲ್ಲ, ಎನ್ನುವ ಮಾತು ಸಾಬೀತಾಯಿತು. ಹುಡುಗಿಯನ್ನು ಎಷ್ಟು ತೀವ್ರವಾಗಿ ಪ್ರೀತಿಸುತ್ತಾನೆ, ಅವರನ್ನು ಎಷ್ಟು ಆದರಿಸಿ ಅವರ ಅತಿ ಚಿಕ್ಕ ಆದ್ಯತೆಗಳನ್ನೂ ಅತ್ಯಂತ ಬೆಲೆಯನ್ನು ಕೊಡುತ್ತಾನೆ ಎನ್ನುವುದರಮೇಲೆ ಸಂಬಂಧಗಳು ನಿಂತಿವೆ. ಬಣ್ಣದಮೇಲಲ್ಲ. ಇನ್ನು ಪದಗಳ  ಉಚ್ಚಾರಣೆಯ ವಿಷಯಬಂದಾಗ, ಶಿಕಾಗೋ ಎನ್ನುವ ಪದವನ್ನು ಮೊದಲಿನಿಂದಲೂ ಕನ್ನಡಿಗರ (ಲೆಕ್ಸಿಕಾನ್  ನಲ್ಲಿ ) ರವಣಿಗೆಯಲ್ಲಿ ಚಿಕಾಗೋ ಎಂದೇ ನಾವು ಓದಿಕೊಂಡು ಬೆಳೆದವರು. ಜೇಮ್ಸ್ ಬಾಂಡ್ ನನ್ನು  ನಾವು ಕರೆಯುವ ರೀತಿ, ಸೀನ್ ಕಾನೂರಿ ಎಂದು. ಶಾನ್ ಕಾನೂರಿ ಎಂದು ಪ್ರೆಸ್ ಗಳಲ್ಲಿ ಓದುತ್ತೇವೆ ಅಷ್ಟೇ. ಅದೇ ರೀತಿ ಸಿಡ್ನಿಯವರನ್ನು ಪಾಯಿಟರ್ ಎಂದು ಕರೆದರೆ ಬೇಜಾರುಪಡಬೇಕಿಲ್ಲ. ಆದರೆ ಮೀಡಿಯಾದಲ್ಲಿ ಕರೆಯುವುದು ಪಾಟಿಯೆಯ್ ಎಂದು. ಅದಕ್ಕೆ ನಾನು ನನ್ನ ಲೇಖನದಲ್ಲಿ ಆ ಪದವನ್ನೇ ಉಪಯೋಗಿಸಿ ಬರೆದಿದ್ದೇನೆ.  ಓದಲು ಯೋಗ್ಯ ಮತ್ತು ಅನೇಕ ಮಾಹಿತಿಗಳನ್ನು ಸ್ವಲ್ಪ ಮುತುವರ್ಜಿ ವಹಿಸಿ ಬರೆದಿದ್ದೇನೆ. ಒಮ್ಮೆ ಓದುತ್ತೀರೆಂದು ನಂಬಲೇ ?  

ನನ್ನ ಲೇಖನದ ಲಿಂಕ್h :ttps://nasuku.com/ಡಾ-ಸಿಡ್ನಿ-ಪಾಟಿಯೆಯ್/

-ಎಚ್ಚಾರೆಲ್