2D ಮತ್ತು 3D

2D ಮತ್ತು 3D

ಬರಹ

         2D ಮತ್ತು 3D

ಮೊದಲು ವಿಸ್ತರಿಸಿ
ನಿಮ್ಮ ಮನದ ವೃತ್ತದ ತ್ರಿಜ್ಯವ
ನಂತರ
ವೃತ್ತದ ಆಯಾಮವ
ವೃತ್ತವಾಗುವುದಾಗ ಗೋಳ
ಮುಗಿವುದೆಲ್ಲ ಜಗದ ಜಗಳ

*******************
 

 

     ನಿವೇದನೆ

ಗುಪ್ತಗಾಮಿನಿಗಿಂತ ಮುಕ್ತ ವಾಹಿನಿಯಾಗು
ನೆಲೆಸೆಲ್ಲ ಜನಗಣದ ತನುಮನಗಳೊಳಗೆ

ಬೆಳಗೆಲ್ಲ ಜೀವನವ
ಅರಳಿಸು ಮನದಿ ಸುಮವ

ಇದುವೇ ನಿವೇದನ
ಓ ನನ್ನ ಚೇತನ..

********************


    ನಾಳೆ

ನಾಳೆ ಬರೆಯೋಣವೆಂದು
ಬರೆಯದೇ  ಉಳಿಸಿದ್ದೆ
ಕೆಲ ಪುಠಗಳ
ಹಾಗೆಯೇ ಖಾಲಿ ಖಾಲಿ

ನಾಳೆಗಳ ಸರಣಿಯ ನಂತರ
ಒಂದು ದಿನ ತೆರೆದು ನೋಡಿದರೆ
ಅಯ್ಯೋ!.. ಅಲ್ಲಿ ಪುಠಗಳೇ ಖಾಲಿ
ಕೊಬ್ಬಿ ಕುಣಿದಿದ್ದವು ಗೂಡು ತುಂಬಾ
ಜೇಡ, ಗೆದ್ದಲು,ಜಿರಳೆ,ಇಲಿ.. :(

***********************