40 ಕೋಟಿ ನಾಗರಹಾವು...!
ರೋಚಕ ನಾಗರಹಾವು ! 40 ಕೋಟಿ ವೆಚ್ಚದ ಸಿನಿಮಾ.50 ರಿಂದ 60 ನಿಮಿಷ ಸಿಜಿ ಕಮಾಲ್. ಹಾವಿನ ರೂಪದಲ್ಲಿ ರಮ್ಯ ರೋಚಕತೆ.120 ಅಡಿ ಉದ್ದದ ರಮ್ಯ ಹಾವಿನ ರೂಪ.
ವಿಷ್ಣುವರ್ಧನ್ ಚಿತ್ರದಲ್ಲಿ ನಾಗರಹಾವು.140 ಅಡಿ ಉದ್ದ ರೂಪ ತಾಳ್ತಾರೆ ವಿಷ್ಣು ಕೋಡಿ ರಾಮಕೃಷ್ಣ ನಿರ್ದೇಶನದ ಕಮಾಲ್.ಜುಲೈ ತಿಂಗಳಲ್ಲಿ ಬರ್ತಿದೆ ನಾಗರಹಾವು.
-----
ಕನ್ನಡದ ಬಹು ನಿರೀಕ್ಷಿತ ಚಿತ್ರ. 40 ಕೋಟಿ ಬಜೆಟ್ಲ್ಲಿ ತಯಾರಾಗಿದೆ. ಬರೋಬ್ಬರಿ 4 ವರ್ಷ ತೆಗೆದುಕೊಂಡಿದೆ. ಅರುಂಧತಿಯಂತ ಚಿತ್ರ ಕೊಟ್ಟ ನಿರ್ದೇಶಕರು ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ನಟಿ ರಮ್ಯಾ ಈ ಚಿತ್ರದಲ್ಲಿ ನಿಮಲ್ಲಿ ಭಾರೀ ರೋಚಕತೆ ಮೂಡಿಸಲಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ಮತ್ತೆ ಅಭಿನಯಿಸಿದ್ದಾರೆ. ಈ ಚಿತ್ರದ ಹೆಸರು ನಾಗರಹಾವು.
ನಾಗರಹಾವು.ಒಂದು ಅದ್ಭುತ ಪ್ರಯೋಗ.ಕನ್ನಡದ ಮಟ್ಟಿಗೆ ಅತಿ ದೊಡ್ಡ ಚಿತ್ರ.ಎಂದೂ ಯಾವತ್ತು ನಿರೀಕ್ಷಿಸದ ರೋಚಕತೆ ಅಡಗಿದೆ ಚಿತ್ರದಲ್ಲಿ. ಬಹುವಾಗಿ ಕುತೂಹಲವೂ ಕೆರಳುತ್ತದೆ ಚಿತ್ರದಲ್ಲಿ. ಅಷ್ಟು ಕೌತುಗಳನ್ನ ಒಳಗೊಂಡಿದೆ ನಾಗರಹಾವು..
ಹಾವಿನ ರೂಪದಲ್ಲಿ ಮೋಹಕತಾರೆ
120 ಅಡಿ ಉದ್ದ ನಾಗರಹಾವಾಗಿ ರಮ್ಯ
ನಾಗರಹಾವು ಚಿತ್ರದಲ್ಲಿ ರಮ್ಯ ನಾಗಿಣಿ
ಹೌದು..! ರಮ್ಯ ನಾಗರಹಾವು ಚಿತ್ರದಲ್ಲಿ ನಾಗಿಣಿ.ಈ ನಾಗಿಣಿಗೆ ಜೋಡಿ ಯಾರು. ಅದು ಸಸ್ಪೆನ್ಸ್. ಆದರೆ, ರಮ್ಯ ಇಲ್ಲಿ ನಾಗಿಣಿನೂ ಹೌದು. ಮನುಷ್ಯ ರೂಪದ ರೂಪಸಿನೂ ಹೌದು. ಕ್ವೀನ್ ರಮ್ಯ ಚಿತ್ರದಲ್ಲಿ ಪ್ರೇಕ್ಷಕರಲ್ಲಿ ರೋಚಕತೆ ಮೂಡಿಸಲಿದ್ದಾರೆ. ಕಳೆದು ಹೋಗೋವಷ್ಟು ಕುತೂಹಲ ಹೆಚ್ಚಿಸಲಿದ್ದಾರೆ.
ಈ ಚಿತ್ರದಲ್ಲಿ ದಿಗಂತ್ ಪಾತ್ರವೂ ಇದೆ. ಆದರೆ, ದಿಗಂತ್ ಇಲ್ಲಿ ಹಾವೇ..ಅಥವಾ ಮನುಷ್ಯನೇ. ಇದು ಚಿತ್ರದಲ್ಲಿ ನೋಡಿ.
ಸಾಹಸ ಸಿಂಹ ವಿಷ್ಣವರ್ಧನ್ ಬರ್ತಾರೆ..!
ಸಾಹಸ ಸಿಂಹ ಮತ್ತೆ ಅಭಿನಯಿಸಿದ್ದಾರೆ. ಬಹು ಕೋಟಿ ವೆಚ್ಚದ ಈ ಚಿತ್ರದಲ್ಲಿ ಸಾಹಸ ಸಿಂಹ ನಿಮ್ಮನ್ನ ಭಯಗೊಳಿಸಲಿದ್ದಾರೆ. ಭಯಂಕರವಾಗಿ ಬಂದು ನಿಮಲ್ಲಿ ಸಣ್ಣ ನಡುಕ ಹುಟ್ಟಿಸಲಿದ್ದಾರೆ..
ಚಿತ್ರದಲ್ಲಿ ವಿಷ್ಣುವರ್ಧನ್ ನಾಗರಹಾವು !
140 ಅಡಿ ಉದ್ದದ ಹಾವಿನ ವಿಷ್ಣು ರೂಪ
ವಿಷ್ಣುವರ್ಧನ್ ಅಭಿನಯವನ್ನ ಅಷ್ಟೇ ನೈಜವಾಗಿ ಚಿತ್ರದಲ್ಲಿ ನೋಡಬಹುದು.ಆದರೆ, ಇದು ಫೇಸ್ ಮಾರ್ಫಿಂಗ್ ಟೆಕ್ನಾಲಜಿಯ ಕೈಚಳಕ. ನಾಲ್ಕು ದೇಶದಲ್ಲಿ ಈ ಪಾತ್ರದ ಕೆಲಸ ಆಗಿದೆ.ಕಾರಣ, ಇಡೀ ಚಿತ್ರದಲ್ಲಿ ವಿಷ್ಣು ಆಗಮನ ಅಷ್ಟೂ ಭರ್ಜರಿಯಾಗಲಿದೆ. .
ಚಿತ್ರದಲ್ಲಿದೆ ಭಾರೀ ಸಿಜಿ ವರ್ಕ್ !
50 ರಿಂದ 60 ನಿಮಿಷ ಸಿಜಿ ಕಮಾಲ್
40 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣ
ಸಾಜಿದ್-ಜಯಂತ್ ನಿರ್ಮಾಪಕರು
ಮೇ-30 ಕ್ಕೆ ದೊಡ್ಡಮಟ್ಟದಲ್ಲಿ ಟೀಜರ್ ರಿಲೀಸ್ !
ಕೋಡಿ ರಾಮಕೃಷ್ಣ ಸಿನಿಮಾ ಪ್ರೇಮವೇ ದೊಡ್ಡದ್ದು. ಅರುಧಂತಿ ಅದಕ್ಕೆ ದೊಡ್ಡ ಸಾಕ್ಷಿ. ಕನ್ನಡದಲ್ಲೂ ಈ ನಾಗರಹಾವು ಅಂತ ಸಂಚಲನ ಮೂಡಿಸೋ ಭರವಸೆ ದೊಡ್ಡಮಟ್ಟದಲ್ಲಿದೆ. ಮೇ-30 ಕ್ಕೆ ದೊಡ್ಡಮಟ್ಟದಲ್ಲಿ ಟೀಜರ್ ಹೊರ ಬೀಳ್ತಿದೆ. ರಮ್ಯ ಕೂಡ ಅಂದು ಟೀಜರ್ ರಿಲೀಸ್ ಗೆ ಬರ್ತಿದ್ದಾರೆ. ನಿರ್ಮಾಪಕರಾದ ಸಾಜಿದ್ ಕುರೇಶಿ,ಜಯಂತ್ ಲಾಲ್ಗಡ್ 40 ಕೋಟಿಯಷ್ಟು ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಇದೇ ಜುಲೈ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.
-ರೇವನ್ ಪಿ.ಜೇವೂರ್