6+1=7...ಇದು ಕಥೆಯಲ್ಲ..ಜೀವನ...!

6+1=7...ಇದು ಕಥೆಯಲ್ಲ..ಜೀವನ...!

ಒಂದು ಕೆಲಸ. ಇದರಿಂದ ಸಿಕ್ಕದ್ದು 7 ದಿನ ರಜೆ. ಎಂಜಾಯ್ ಮಾಡಿದ್ದು 6 ದಿನ. ದು:ಖ ಆವರಿಸಿದ್ದು ಒಂದು ದಿನ. ಎಲ್ಲವೂ ಸೇರಿ 6+1=7 ಆಗಿದೆ. ಎಲ್ಲರೂ ಸರಿನೇ. ಆದರೆ, ಅನುಭವದಲ್ಲಿ ವ್ಯತ್ಯಾಸವಿದೆ. ಅದನ್ನ ಹೇಳೋಕನೇ ಈ ಸೈಟ್ ಬಳಸಿಕೊಂಡಿದ್ದೇನೆ. ತಪ್ಪ ಅನಿಸುತ್ತಿದೆ. ಆದರೆ, ನೆನಪನ್ನ ಕಟ್ಟಿ ಹಿಡಿಕೋ ಆಗೋದಿಲ್ಲ. ಬರೆದು ಇಡಬಹುದು ಎಂಬ ನಂಬಿಕೆ. ಅದನ್ನ ಮಾಡಿರೋ ಸಾರ್ಥಕ ಭಾವ ಉಂಟಾಗಿದೆ. ಓದಬೇಕು ಅನಿಸಿದರೇ ಮುಂದಿನದನ್ನು ಓದಿದೆ....

‍‍‍‍‍‍ರಜೆ ಬಂದ್ರೆ ಖುಷಿ. ಸುದೀರ್ಘ ರಜೆ ಸಿಕ್ಕರೆ. ದಿಲ್ ಖುಷ್. ಈ ಖುಷಿಯೊಂದಿಗೆ ಕಳೆದ 19 ಕ್ಕೆ ಊರಿಗೆ ಹೊರಟೆ. ಅದು ರಾತ್ರಿ ಪಯಣ. ಆಫೀಸಿನಿಂದ ಕೆಲಸ ಮುಗಿಸಿ ಹೊರಟೆ. ಮನೆಯಿಂದ ನಮ್ಮ ಹುಡುಗಿ ಬ್ಯಾಗ್ ಹೊತ್ತು ಬಂದಳು. ನಮ್ಮ ಮೀಟಿಂಗ್ ಪಾಯಿಂಟ್. ಮೆಜೆಸ್ಟಿಕ್ ಬಸ್ ಸ್ಟಾಂಡ್. ಜೊತೆಗೆ ಸಾಗಿದೆ. ಊರಿನ ಬಸ್ ಕೂಡ ಸಿಕ್ತು. ನಿಂದೆ ಬರಲಿಲ್ಲ. ಮಾತು ಮುಗಿಲಿಲ್ಲ. ರಾತ್ರಿಯಿಡಿ ಜಾಗರಣೆಯ ಜರ್ನಿ. ಬೆಳಗ್ಗೆ 6 ಗಂಟೆ ಹೊತ್ತು. ಹುಬ್ಬಳ್ಳಿ ತಲುಪಿದೆವು. ಧಾರವಾಡ ಬಸ್ ಹತ್ತಿ ಎಪಿಎಂಸಿ ಬಸ್ ಸ್ಟಾಪ್ ಗೆ ಇಳಿದೆವು. ಆಗ ಒಂದು ಸಂತೋಷ. ಹೆಣ್ಣು ಕೊಟ್ಟ ಮಾವ, ಟಿ.ವಿ.ಎಸ್. ಹತ್ತಿಕೊಂಡು ಬಂದು ಕಾಯ್ತಾಯಿದ್ದರು. ಅದನ್ನ ರೈಡ್ ಮಾಡಬೇಕೆಂಬ ಹುಚ್ಚು ಆಗ ಹುಟ್ಟಿರಲಿಲ್ಲ. ಅದೇಕೋ ನಮ್ಮ ಮಾವ ಯಾರ ಜೊತೆಗೋ ಮಾತಿಗಳಿದಿರು. ನನಗೆ ಆ ಗಾಡಿ ರೈಡ್ ಮಾಡಿಕೊಂಡು ಮನೆಗೆ ತಲುಪುವ ಅವಕಾಶ. ಹೊರಟೆ. ಹಿಂದೆ ನನ್ನವಳು. ಮುಂದೆ ರೋಡು. ಸಾಗಿತು ನಮ್ಮ ಸವಾರಿ....

----
ಇದು ಒಂದು ಹಂತ; ಇಡೀ ದಿನ  ನನ್ನವಳ ಜೊತೆಗೆ ಕಳೆದಿದ್ದೇ ಆಯಿತು. ಅವಳ ಮಾತು. ಅವಳ ನೋಟ. ಅವಳ ಚೇಷ್ಠೇಗಳೇ ಆದವು. ಮರುದಿನ ಮಧ್ಯಾಹ್ನದ ಹೊತ್ತಿಗೆ ಶಾಪಿಂಗ್ ಮಾಡೋ ತವಕ. ಎಲ್ಲವನ್ನೂ ಕರೀದಿ ಮಾಡೋಕೆ  ಹೊರಟವೆ. ಮಧ್ಯೆ ಒಂದು ಕೆಲಸ ಬಂದು. ಬ್ಯಾಂಕ್​ ನಲ್ಲಿ ದುಡ್ಡು ತೆಗೆಸೋ ವಿಚಾರದ ಅದು. ಆಗ ನನ್ನ ಹಳೆ ಗಳೆಯ ಶಂಕ್ರ ಸಿಕ್ಕ. (ಶಂಕರ್ ಕೇರಿಮಠ್) ಬಾರೋ ಚಾ ಕುಡಿಯೋನ ಅಂತ. ಚಾ ಬಿಟ್ಟು ಹೆಚ್ಚು ಕಡಿಮೆ ಮೂರ್ನಾಲ್ಕು ದಿನವೇ ಆಗಿತ್ತು. ಆದರೂ ಗಳೆಯ ಆಹ್ವಾನಕ್ಕೆ ಹೋದೆ. ಚಹಾ ಕುಡಿದೆ. ಹೋಗುವಾಗ ಆತ ಒಂದು ಮಾತು ಹೇಳಿದೆ. ನಿನ್ನ ತಂದೆ ನೋಡಿಕೋ...ನಾನು ಕಳೆದು ಕೊಂಡಿದ್ದೇನೆ ತಂದೆಯನ್ನ. ನೀನು ಇರೋವಾಗಲೇ ಚೆನ್ನಾಗಿ ನೋಡಿ ಅಂದ....

----
ನನ್ನ ಹುಡುಗಿಯ ಮನೆಯಿಂದ ನಮ್ಮನೆಗೆ ಹೋಗುವ ಖುಷಿ. ಅವಳೊಟ್ಟಿಗೆ ನಮ್ಮಗೆ ಹೋಗೋದೆ ಒಂದು ಉತ್ಸಾಹ. ಅದೇ ಹುಮ್ಮಸ್ಸಿನಲ್ಲಿ ಹೋದೆವು. ಅಪ್ಪ ಕಾಳು ಮಡಚಿಕೊಂಡು ಕುಳಿತಿದ್ದರು. ಹೇಗಿದಿಯಾ ಅಂತ ಕೇಳಿದೆ..? ಅಪ್ಪ ಯಾವಾಗಲೂ ಹೇಳೋ ಥರ ಈ ಸಲ ಹೇಳಲಿಲ್ಲ. ಚೆನ್ನಾಗಿಲ್ಲ ನಾನು ಅಂದು ಬಿಟ್ಟು. ಅಲ್ಲಿಗೇ ಏಕೋ ಮನಸ್ಸಿಗೆ ಬೇಸರ. ಮುಂದೆ ಏನೋ ಆಗೋ ಸೂಚನೆ ಆಗಲೇ ಸಿಕ್ಕಿತೂ ಅನಿಸುತ್ತದೆ....ಆದರೆ, ಮನಸ್ಸಿಗೆ ಅದು ಅರ್ಥ ಆಗಲೇಯಿಲ್ಲ. ಈ ನೋವಿನ ಸುಳಿಯಿಂದ ಹೊರಗೆ ಬರೋ ಹೊತ್ತಿಗೆ, ಗಳೆಯ ಪ್ರಕಾಸ್ ಸಿಕ್ಕ. ಈತ ಹೇಗಿದಿಯೋ ಅಂತ. ಚೆನ್ನಾಗಿದ್ದೀನಿ ಅಂದೆ. ನಾನೇ ಒಂಚೂರು ಹೆಚ್ಚು ಉತ್ಸಾಹ ತೋರಿ, ಮಠಕ್ಕೆಹೋಗೋಣ ಅಂದೆ. ಅವೂ ಸರಿ ಹೋಗೋಣ ಅಂದೆ. ಇನ್​ಸ್ಟಂಟ್ ಪ್ಲಾನ್ ಆಯಿತು. ಮಠ ಅಂದ್ರೆ, ಎಲ್ಲರಿಗೂ ಗೊತ್ತಿರೋ ಹಾಗೆ, ಅದು ಹುಬ್ಬಳ್ಲಿ ಸಿದ್ಧಾರೂಢ ಮಠ. ಅಲ್ಲಿಗೆ ಹೋದವು. ಕಾರ್ತಿಕ ಮಾಸ. ದೀಪಕ್ಕೆ ಎಣ್ಣೆ ಹಾಕಿ ಅಂತ ಮನೆಯಲ್ಲಿಯೇ ಮನೆಯವರ ಮನವಿ. ಅದೂ ಆಯಿತು. ಈ ಹೊತ್ತಿಗೆ ಗಳೆಯರಾದ ಶಂಕ್ರ, ಪ್ರಕಾಶ,ರಾಜು ಗೊಂದಿ, ಮಂಜ್ಯಾ ಎಲ್ಲರೂ ಸಿಕ್ಕರು...ಎಲ್ಲರೂ ಸೇರಿ ಗಿರ್ಮಿಟ್ ತಿಂದೇವು...ಅಲ್ಲಿಗೆ ಎಣ್ನೆ ಹೊಡೆಯೋ ವಿಚಾರ ಬಂತು.. ಅದು ಅಲ್ಲಿಯೇ ಪ್ಲಾನ್ ಆಯಿತು.ಆದರೆ, ಅಂದು ಸಿದ್ಧಾರೂಢರ ಬೇಟಿಗೆ ಬಂದಿದ್ದವು. ಅದಕ್ಕೆ ಅಂದು ಅದು ಕ್ಯಾನ್ಸಲ್...

----
ಸೈಕಲ್ ಹೊಡದು ಅದೆಷ್ಟೋ ವರ್ಷಗಳೇ ಕಳೆದಿವೆ. ರಜೆಯಲ್ಲಿ ಸೈಕಲ್ ಹೊಡೆಯೋ ಅವಕಾಶ ಸಿಕ್ತು. ಒಮ್ಮೆ ನಮ್ಮ ಮಾವನ ಮನೆಯಲ್ಲಿದ್ದ ಸೈಕಲ್ ತೆಗೆದುಕೊಂಡು ನವನಗರದವರೆಗೂ ಹೋಗಿ ಬಂದೆ. ಮತ್ತೊಮ್ಮೆ ನನ್ನ ಅಣ್ಣನ ಸೈಕಲ್ ತೆಗೆದುಕೊಂಡು ನಮ್ಮ ಮನೆಯ ಕಡೆ ಸುತ್ತಿದೆ. ಆದರೆ, ಆ ಸುತ್ತುವಿಕೆಯಲ್ಲೂ ಒಂದು ಹುಮ್ಮಸ್ಸು. ಆದರೆ, ಈ ಹುಮ್ಮಸ್ಸಿನ ಹಿಂದೆ ಒಂದು ಆಸೆನೂ ಇತ್ತು.ಅದು ಪೂರಿ ತಿನ್ನೋ ಹುಚ್ಚು. ನಮ್ಮ ಈ ಏರಿಯಾದಲ್ಲಿ ಬಸಪ್ಪನ ಹೋಟೆಲ್ ಇದೆ. ನಮ್ಮನೆ ಕಟ್ಟಿಸೋವಾಗಿನಿಂದಲೂ ಇದ್ದ ಹೋಟೆಲ್ ಇದು. ಅಲ್ಲಿ ಪೂರಿ ಮಾಡ್ತಿದ್ದ ಬಸಣ್ಣ ಈಗಲೂ ಇದ್ದಾರೆ. ಕೊಂಚ ವಯಸ್ಸಾಗಿದೆ. ಉತ್ಸಾಹ ಕುಗ್ಗಿಲ್ಲ. ಪೂರಿ ಮಾಡ್ತಾನೇ ಇದ್ದಾರೆ. ಅದನ್ನ ತರೋಕೆಂದೆ ನಾನು ಒಮ್ಮೆ ಸೈಕಲ್ ತೆಗೆದುಕೊಂಡು ಹೋದೆ. ಪೂರಿ ಮಾತ್ರ ಸಿಗಿಲ್ಲ. ಬೆಳಗ್ಗೆ 8.30 ಕ್ಕೆ ಖಾಲಿಯಾಗಿಬಿಡುತ್ತವೆ ಪೂರಿ. ಮರು ದಿನ ಗೆಳೆಯ ಪ್ರಕಾಶನ ಗೇರ್ ಗಾಡಿ ತೆಗೆದುಕೊಂಡು ಹೋದೆ. ಆ ದಿನ ಪೂರಿ ಸಿಕ್ಕವು....ಪೂರಿ ತಂದ ಈ ದಿನವೇ ಸ್ವತಂತ್ರವಾಗಿ ನಾನು ಗೇರ್ ಗಾಡಿ ಹೊಡೆದದ್ದು. ಅಲ್ಲಿ ತನಕ ಅಳಿಯನ ಸಹಾಯದಲ್ಲಿಯೇ ಎರಡು ದಿನ ಗೇರ್ ಗಾಡಿ ಕಲಿತಿದ್ದೇ....

‍‍‍‍‍‍------
ಇಷ್ಟು ಹೊತ್ತಿಗೆ ಬಾಕಿ ಉಳಿದ ರಜಗೆಳು ಮುಗೀತಾ ಬಂದವು. ಇಡೀ ರಜ ಎಂಜಯ್ ಮಾಡಿದೆ ಅನ್ನೋ ಹೊತ್ತಿಗೆ ನಮ್ಮ ತಂದೆ ಮತ್ತೊಮ್ಮೆ ಬಿದ್ದರು. 83 ವರ್ಷ ನೋಡಿ. ಬ್ಯಾಲನ್ಸ್ ತಪ್ಪುತ್ತದೆ. ಬೇಕು..ಬೇಡ ಅಂತ ಹೇಳುತ್ತಲೇ, ಅಪ್ಪನ ನೋವಿನ ಸಂಗತಿಯನ್ನ ಸೀರಿಯೆಸ್ ಆಗಿ ತೆಗೆದುಕೊಳ್ಳಲೇಯಿಲ್ಲ. ಆದರೆ, ಆ ದಿನ ಎರಡನೇ ಬಾರಿ ಬಿದ್ದಾಗ, ಎಲ್ಲರೂ ಸೀರಿಯೆಸ್ ಆದೇವು. ಇಎಸ್​ಐ ಆಸ್ಪತ್ರೆಗೆ ಹೋದರು ನನ್ನ ಅಣ್ಣ ಮತ್ತು ಅತ್ತಿಗೆ. ಆಗ ತಿಳಿದಿದ್ದೇ ಒಂದೇ ಮಾತು. ಬೋನ್ ಬ್ರೇಕ್ ಆಗಿದೆ ಎಂಬ ಸತ್ಯ. ಆ ಸತ್ಯ ತಿಳಿದ ತಕ್ಷಣ ಎಲ್ಲರಿಗೂ ಆತಂಕ. ಸದ್ಯ ಅಪ್ಪ ಹುಬ್ಬಳ್ಳಿ ‍ಧಾರವಾಡದ ಮಧ್ಯೆದಲ್ಲಿ ಬರೋ ಎಸ್.ಡಿ.ಎಂ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ.ನಾನು ಊರಿಗೆ ಹೊರಟು ಬಂದಿದ್ದೇನೆ. ನನ್ನವಳನ್ನ ಅಪನನ್ನ ನೋಡಿಕೊಳ್ಳಲು ಸಹಾಯವಾಗಲಿ ಎಂದು ಬಿಟ್ಟು ಬಂದಿದ್ದೇನೆ....ರಜಾ ಖುಷಿನೂ ಕೊಡ್ತು..ಜೊತೆಗೆ ದು:ಖವನ್ನೂ ಕೊಟ್ಟಿದೆ.

‍‍‍‍‍ರೇವನ್

Comments