9. ಸುರತಸೆಣಸಿನದಣಿವನ..
ಕವನ
ಮಾದಕದಮಾತಿನಿಂಕರೆವಕರೆವೆಣ್ಣುಗಳಿಂಪಿನನುದನಿಯಿಲ್ಲ
ಮಧುಪರ್ಕದಿಂದಿದಿರುಗೊಳೊವಿಂದಿರೆಯರಸರಸದಸ್ವಾಗತಮಿಲ್ಲ
ಮಧುಕುಂದಿಬಸವಳಿದಕುಸುಮದಂದದಿಮೈಮರೆದುನಿದ್ರಿಪರುನೀರೆಯರೆಲ್ಲ
ಮದಿರೆಮದಮತ್ತಿನಿಂಜಾರಿದಸೀರೆಯಸರಿದರವಿಕೆಯಕುಂಭಕುಚೋನ್ನತೆಯರ್
ಮದನಮದವಿಳಿಸಿಸುರತಸೆಣಸಿನದಣಿವನಡಗಿಸುವಸವಿನಿದ್ದೆಯಲಿ
ಮದನಮಂಜರಿಗಣಿಕೆಯರಿರಲುಹೊಕ್ಕನುಕವಿತವಕದಿನಿಯಳನರಸಿ
ಸರಸಕೆಳಸುವಸಮಯವಿದಲ್ಲವೆಂದಚ್ಚರಿಯಲಿಸಾವರಿಸಿಸ್ವಾಗತಿಸಿದಳ್ ಮಂಜರಿ
ವರಕವಿಮೇಲರಸನೊಲುಮೆಯಮಿತ್ರನೆನಗಿನ್ನೇನಕೇಡುಕಾದಿದೆಯೋಯೆಂದವ
ಸರದಿಮದನಮಂಜರಿಯುಪಚರಿಸಿದಳ್ ಕವಿಯನಿಂಗಿತವತಿಳಿಯುವತವಕದಲಿ
ಪೇಳಿರಯ್ಯೇನಪಚಾರವೆಮ್ಮಿಂದಮನ್ನಿಸಿರೆಮ್ಮನುಪಚರಿಪದಪಚಾರದಿಂದೆಂದುಸುರಿ
ಹೇಳಿರಯ್ಯವೆಮ್ಮಿಂದೇನಬಯಸುವಿರೀಸಮಯದಲಿಂದುವದನೆಯರ್ ಬಲು
ಬಳಲಿಹರು ಬೇಸರಿಸದಿರೆಂದುಬಿನ್ನೈಸೆಹೊನ್ನವರಹವನಿದಿರವಿಡಿದುವರಕವಿ
ಕೇಳಿದನವಸರಿಸಿಪುರುಷವೇಷದಿಂದಿಳಿದಸರಸಿಯಪ್ರವರವಬೆಚ್ಚುತಲಿಮಂಜರಿಯುಸುರಿ
ದಳವಳರಸಿಸರಸೆಕೆಳಸುವರುಂಟೆಕೆಂಡದುಂಡೆಯಮಂಡಿಗೆಯೆಂದುಮೆದ್ದವರುಂಟೆಂ
ದಳುಕುತಲಿನಿಮ್ಮಬಲ್ಮೆಗೊಪ್ಪುವಸುರಸುಂದರಿಯರಿಹರೆನ್ನಠಾವಲಿವಿಶ್ರಮಿಸಿರೆಂದುಸುರಿ
ದಳುಪಾಯದಿಕವಿವರನನೆಲಮಾಳಿಗೆಯವೈಭವದಕೋಠಿಯಲಿರಿಸಿದಳುಚಿಂತಿಸುತ