ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
235) ಮೂಲ ಹಾಡು:- ಜಿಂದಗೀ ಕೇ ಸಫರ್ ಮೆ ಗುಜರ್ ಜಾತೇ ಹೈ
ನನ್ನ ಅನುವಾದ :
ಬಾಳಿನ ಪಯಣದಿ ಸಿಗುವಂಥ ಮಜಲುಗಳು
ಅವು ಮತ್ತೆ ಸಿಗುವುದಿಲ್ಲ
ಓ ಅವು ಮತ್ತೆ ಸಿಗುವುದಿಲ್ಲ
236) ಮೂಲ ಹಾಡು:- ಪೆಹಲೀ ಪೆಹಲೀ ಬಾರ್ ಮುಹಬ್ಬತ್ ಕೀ ಹೈ
ನನ್ನ ಅನುವಾದ :
ಮೊದಲನೇ ಬಾರಿ ಪ್ರೀತಿ ನಾನು ಮಾಡಿರುವೆ
ಮಾಡಲಿ ಏನು ತೋಚದ ಹಾಗೆ ಆಗಿದೆ
237) ಮೂಲ ಹಾಡು:- ಘರ್ ಸೇ ನಿಕಲತೇ ಹೀ
ನನ್ನ ಅನುವಾದ :
ಮನೆಯಿಂದ ಹೊರ ಬಿದ್ದು
ಸ್ವಲ್ಪೇ ದೂರ ಹೋದರೆ ಸಾಕು
ದಾರೀಲೇ ಇಹುದು ಅವಳ ಮನೆ
238) ಮೂಲ ಹಾಡು:- ಮೈ ದುನಿಯಾ ಭುಲಾ ದೂಂಗಾ
ನನ್ನ ಅನುವಾದ :
ಜಗವನ್ನೆ ಮರೆಯುವೆನು
ನಾ ನಿನ್ನ ಬಯಸುತಲಿ
239) ಮೂಲ ಹಾಡು:- ಮೇರಿ ಜಿಂದಗೀ ಮ ಅಜನಬೀ ಸೇ
ನನ್ನ ಅನುವಾದ :
ನನ್ನ ಬಾಳಲಿ ಇದೆ ಅವಳ ನಿರೀಕ್ಷೆಯು
ನಾ ಮಾಡಲೇನು ಅವಳಲ್ಲಿ ನಂಗೆ ಪ್ರೀತಿಯು
240) ಮೂಲ ಹಾಡು:- ಜೋ ತುಂ ಕೋ ಹೋ ಪಸಂದ್
ನನ್ನ ಅನುವಾದ :
ನಿನ್ನಿಷ್ಟ ಹೇಗೆ ಹಾಗೆಯೇ
ನಾ ಮಾತನಾಡುವೆ
ಹಗಲೀಗೆ ನೀ ರಾತ್ರಿ ಎನಲು
ನಾನೂನು ರಾತ್ರಿ ಎನುವೆ
241) ಮೂಲ ಹಾಡು: ಜಿನ್ಹೆ ನಾಜ ಹೈ ಹಿಂದ್ ಪರ ಕಹಾಂ ಹೈ
ನನ್ನ ಅನುವಾದ :
ಭಾರತದ ಬಗ್ಗೆ ಹೆಮ್ಮೆ ಪಡೋರು
ಎಲ್ಲಿದ್ದಾರೆ ಎಲ್ಲಿದ್ದಾರೆ ಎಲ್ಲಿದ್ದಾರೆ
ಮುಂದೆ ಓದಿ...