ಆರೋಪ ಪಟ್ಟಿ ಅಥವಾ ಚಾರ್ಜ್ ಶೀಟ್.....
2 days ago - Shreerama Diwanaರಾಜ್ಯದಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ ಮತ್ತು ಈಗಲೂ ನಿರಂತರ ಎಲೆಕ್ಟ್ರಾನಿಕ್ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಆಗಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ದರ್ಶನ್ ಮತ್ತು ಇತರರ ಮೇಲಿನ ಆರೋಪ ಪಟ್ಟಿ ಮತ್ತು ಇಡೀ ದೇಶಾದ್ಯಂತ ಸುದ್ದಿ ಮಾಡಿದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪ ಪಟ್ಟಿ ಎರಡನ್ನು ಕಾನೂನಿನ ನಿಯಮದಂತೆ 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಆರೋಪ ಪಟ್ಟಿಯನ್ನು ದೃಶ್ಯ ಮಾಧ್ಯಮಗಳು ಮತ್ತು ಪತ್ರಿಕಾ ಮಾಧ್ಯಮಗಳು ವಿಮರ್ಶಾತ್ಮಕವಾಗಿ ಅದರ ಮುಖ್ಯಾಂಶಗಳನ್ನು ಚರ್ಚಿಸುತ್ತಾ, ಪ್ರಕಟಿಸುತ್ತಾ ಇವೆ. ಜನರಿಗೂ ಈ ಆರೋಪ ಪಟ್ಟಿಯ ಅಂಶಗಳು ಸಾಕಷ್ಟು ಕುತೂಹಲ ಮೂಡಿಸುತ್ತಿದೆ.
ಪೊಲೀಸರು ಸಲ್ಲಿಸಿರುವ ಈ ಆರೋಪ ಪಟ್ಟಿ ನ್ಯಾಯಾಲಯದಲ್ಲಿ ಹೇಗೆ ಸಾಕ್ಷಿ ಸಮೇತ ಆರೋಪಿಗಳ ಮೇಲೆ ಶಿಕ್ಷಾರ್ಹ ಅಪರಾಧವನ್ನು ನಿರೂಪಿಸುತ್ತದೆ, ಪ್ರತಿವಾದಿಗಳು ಹೇಗೆ ಆ ಆರೋಪಗಳನ್ನು ನಿರಾಕರಿಸುತ್ತಾರೆ, ಕೊನೆಗೆ ನ್ಯಾಯಾಲಯ ಯಾವ ರೀತಿಯ ತೀರ್ಪು ನೀಡಬಹುದು ಎಂದು ಅತ್ಯಂತ ಆಸಕ್ತಿಯಿಂದ ಗಮನಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಈ ವಿಷಯಗಳ ವಾದ ಪ್ರತಿವಾದಗಳು ಸಹ ಇದೇ ರೀತಿ ಮಾಧ್ಯಮಗಳಲ್ಲಿ ಬಹಿರಂಗವಾಗಿ ಪ್ರಚಾರ ಮತ್ತು ಪ್ರಸಾರವಾಗಬಹುದು.
ವಾಸ್ತವಿಕವಾಗಿ ನಮ್ಮ ಪೊಲೀಸ್ ವ್ಯವಸ್ಥೆ ಕಾರ್ಯನಿರ್ವಹಣೆ ವಿವಿಧ ರೀತಿಯಲ್ಲಿ ಭಿನ್ನವಾಗಿರುತ್ತದೆ. ಕಡು ಬಡವರು, ಹೆಚ್ಚು ಕಡಿಮೆ ಯಾರೂ ದಿಕ್ಕಿಲ್ಲದವರು, ಯಾವುದೇ ಪ್ರಭಾವ ಹೊಂದಿರದವರು ಅಪರಾಧ ಮಾಡಿದಾಗ ಅವರ ಮೇಲಿನ ಆರೋಪ ಪಟ್ಟಿ ಒಂದು ರೀತಿಯಲ್ಲಿದ್ದರೆ ಅಂದರೆ ಅವರು ಮಾಡಿರುವ ತಪ್ಪುಗಳ ಜೊತೆ ಅವಕಾಶ ಸಿಕ್ಕರೆ ಅವರು ಮಾಡದ ತಪ್ಪುಗಳನ್ನು ಸೇರಿಸಿ ಆರೋಪಪಟ್ಟಿ ಸಲ್ಲಿಸುತ್ತಾರೆ.
ಹಾಗೆಯೇ ಅಪರಾಧ ಮಾಡುವವರು ಸ್ವಲ್ಪಮಟ್ಟಿಗೆ ಶ್ರೀಮಂತ… ಮುಂದೆ ಓದಿ...