ದೇಹ ಪ್ರೇಮ
16 hours 10 minutes ago - ಬರಹಗಾರರ ಬಳಗದೇಹ, ದೇಶ ಮತ್ತು ದೇವ ಈ ಮೂರಂಶಗಳು ಮನುಷ್ಯನ ವಿಕಾಸದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿವೆ. ಇವುಗಳೊಳಗಿನ ಸಂಬಂಧವೂ ಅವಿನಾಭಾವ. ಲೇಖನವನ್ನು ದೇಹ ಪ್ರೇಮಕ್ಕಷ್ಟೇ ಮೀಸಲಿಟ್ಟು ಮುಂದುವರಿಯುವೆ. ತಾಯಿಯ ಗರ್ಭದೊಳಗೆ ನವಮಾಸ ನಮ್ಮ ಬೆಳವಣಿಗೆಯ ನಂತರವೇ ನಮ್ಮ ಜನನವಾಗಿದೆ. ಜನನದ ನಂತರ ಕೆಲವು ಕಾಲ ದೇಹವನ್ನು ತಾಯಿ, ತಂದೆ ಮತ್ತು ಹಿರಿಯರು ಪೋಷಿಸುತ್ತಾರೆ, ನಮ್ಮ ಬೆಳವಣಿಗೆಗೆ ಪರಿಸರ, ಸಮಾಜ, ಸರಕಾರ ಎಲ್ಲದರ ಪಾತ್ರ ಬಹಳ ಮುಖ್ಯವಾದರೂ, ದೇಹ ಬಲಿತ ಮೇಲೆ ದೇಹವನ್ನು ಚೆನ್ನಾಗಿ ಕಾಪಾಡುವ ಹೊಣೆಗಾರಿಕೆ ಅವರವರದೇ ಆಗಿರುತ್ತದೆ.
ಪ್ರತಿಯೊಬ್ಬನೂ ಕುಟುಂಬದ ಭಾಗವಾಗಿರು ವಂತೆಯೇ ಸಮಾಜದ ಭಾಗವೂ ಹೌದು. ತನ್ನ ರಕ್ಷಣೆ, ವಿಕಾಸದ ಜೊತೆಗೆ ಸಮಾಜದ ರಕ್ಷಣೆ ಮತ್ತು ವಿಕಾಸದ ಬದ್ಧತೆ ಪ್ರತಿ ವ್ಯಕ್ತಿಗಿದೆ. ಎಲ್ಲ ಬದ್ಧತೆಗಳ ಯಶಸ್ವೀ ನಿರ್ವಹಣೆಗೆ ದೇಹದ ಯಾವುದೇ ಅಂಗಾಂಗಗಳಿಗೆ ಚ್ಯುತಿ ಬಾರದಂತೆ ವಹಿಸುವ ಎಚ್ಚರಿಕೆಯೇ ದೇಹ ಪ್ರೇಮ. ಸೌಂದರ್ಯೀಕರಣಕ್ಕಿಂತಲೂ ಮಿಗಿಲಾಗಿ ದೇಹದ ಆರೋಗ್ಯ ಮತ್ತು ಕಾರ್ಯಸಾಮರ್ಥ್ಯ ವರ್ಧನೆಯತ್ತ ನಮ್ಮ ಚಿತ್ತವಿರಬೇಕಾಗುತ್ತದೆ. ದೇಹದ ಸೃಷ್ಟಿಯಲ್ಲಿ ಸಾಧನೆಯ ಆಶಯವಿದೆ. ಉತ್ತಮ ಕೆಲಸಗಳನ್ನು ಮಾಡುವ ಗುರುತರ ಜವಾಬ್ದಾರಿಯನ್ನು ನಿಭಾಯಿಸಲು ದೇಹ ಕಟಿಬದ್ಧವಾಗಬೇಕಾಗಿದೆ. ಈ ದೇಹ ಮನುಷ್ಯರೂ ಸೇರಿದಂತೆ ಇತರೆ ದೇಹಗಳಿಗೆ ಹಾನಿ ಮಾಡಬಾರದು. ನಮ್ಮ ದೇಹದ ಮೇಲೆ ನಮಗೆ ಪ್ರೀತಿಯಿರುವಂತೆಯೇ ಇತರ ದೇಹಿಗಳಿಗೂ ಅವರ ಅಥವಾ ಅವುಗಳ ದೇಹದ ಮೇಲೆ ಪ್ರೇಮ ಸಹಜ. ತಾವು ಪ್ರೇಮಿಸುವ ನಮ್ಮ ದೇಹಕ್ಕೆ ಇತರೆ ದೇಹಿಗಳಿಂದ ಆಘಾತ ಅಥವಾ ನೋವಾದರೆ ಉಂಟಾಗಬಹುದಾದ ದುಃಖದ ಪ್ರಮಾಣದ ಅರಿವು ಪ್ರತಿಯೊಬ್ಬರಿಗೂ ಇದ್ದಾಗ ಸಮಷ್ಠಿ ಸಂತಸದಿಂದಿರುತ್ತದೆ. ನೋವು ರಹಿತವಾದ ಸಮಾಜದ ಉದಯಕ್ಕೆ ಸ್ವದೇಹ ಪ್ರೇಮವೇ ಹೇತುವಾಗುತ್… ಮುಂದೆ ಓದಿ...