ದಣಿವರಿಯದ ಹಕ್ಕಿ - ಸಮುದ್ರ ಗರುಡ
23 hours 6 minutes ago - ಬರಹಗಾರರ ಬಳಗ
ನಾವು ಒಂದಷ್ಟು ಪಕ್ಷಿಪ್ರಿಯರು ಸೇರಿಕೊಂಡು ಒಮ್ಮೆ ಉತ್ತರಕನ್ನಡ ಜಿಲ್ಲೆಯ ಕೈಗಾ ಎಂಬ ಊರಿಗೆ ಹೋಗಿದ್ದೆವು. ನಮ್ಮಂತೆಯೇ ಪಕ್ಷಿವೀಕ್ಷಕರು ಸೇರಿಕೊಂಡು ಅಲ್ಲಿನ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೈಗಾ ಪಕ್ಷಿ ಹಬ್ಬವನ್ನು ಆಯೋಜನೆ ಮಾಡಿದ್ದರು. ಅಲ್ಲಿ ಕಾಳೀನದಿ ಹರಿಯುತ್ತಿತ್ತು. ಕಾಳೀ ನದಿಗೆ ಅಡ್ಡಲಾಗಿ ನಾಲ್ಕು ಅಣೆಕಟ್ಟೆಗಳನ್ನು ಕಟ್ಟಲಾಗಿದೆ. ಅವುಗಳೆಂದರೆ ಗಣೇಶಗುಡಿ, ಬೊಮ್ಮನಹಳ್ಳಿ, ಕೊಡಸಳ್ಳಿ ಮತ್ತು ಕದ್ರಾ. ಕಾಳೀ ನದಿ ಸಮುದ್ರ ಸೇರುವ ಮೊದಲು ಈ ಕದ್ರಾ ಅಣೆಕಟ್ಟನ್ನು ದಾಟಿಯೇ ಬರಬೇಕು. ಕದ್ರಾ ಅಣೆಕಟ್ಟೆಯ ತುಸು ದೂರದಲ್ಲೇ ಕೈಗಾ ಅಣುವಿದ್ಯುತ್ ಸ್ಥಾವರ ಮತ್ತು ಅಲ್ಲಿನ ನೌಕರರು ವಾಸವಾಗಿರುವ ವಸತಿ ಸಂಕೀರ್ಣಗಳು ಇವೆ. ಕದ್ರಾ ಅಣೆಕಟ್ಟಿನಲ್ಲಿ ಹಿನ್ನೀರು ತುಂಬಿರುವ ಕಾಲದಲ್ಲಿ ಅದು ಸಮುದ್ರದಂತೆಯೇ ಕಾಣುತ್ತದೆ. ಹಿನ್ನೀರಿನ ಆಸುಪಾಸಿನಲ್ಲಿ ಪಕ್ಷಿವೀಕ್ಷಣೆ ಮಾಡಲು ನಾವು ಹೋಗಿದ್ದೆವು. ನಾನು ಮೊದಲನೆಯ ಬಾರಿ ಈ ಸಮುದ್ರ ಗರುಡ ಹಕ್ಕಿಯನ್ನು ನೋಡಿದ್ದು ಅಲ್ಲೇ.
ಗಿಡುಗದ ಜಾತಿಯ ಹಕ್ಕಿಗಳು ಆಕಾಶದಲ್ಲಿ ಹಾರುವಾಗ ರೆಕ್ಕೆ ಬಡಿಯುವುದು ಬಹಳ ಅಪರೂಪ. ಗಾಳಿಪಟದಂತೆ ರೆಕ್ಕೆಯನ್ನು ಅಗಲವಾಗಿ ಬಿಚ್ಚಿಕೊಂಡು ಎತ್ತರಕ್ಕೆ, ಇನ್ನೂ ಎತ್ತರಕ್ಕೆ ಹಾರುತ್ತವೆ. ಇಷ್ಟು ಕಡಿಮೆ ಶ್ರಮದಲ್ಲಿ ಅಷ್ಟು ಎತ್ತರಕ್ಕೆ ಹೇಗೆ ಹಾರುತ್ತವೆ ಎಂಬುದು ನನಗೂ ಸೋಜಿಗದ ವಿಷಯವಾಗಿತ್ತು. ಸಾಮಾನ್ಯವಾಗಿ ಗಿಡುಗ, ಹದ್ದುಗಳು ಮತ್ತು ಗರುಡ ಜಾತಿಯ ಹಕ್ಕಿಗಳು ಉಳಿದ ಹಕ್ಕಿಗಳಂತೆ ಬೆಳ್ಳಂಬೆಳಗ್ಗೆ ಆಹಾರ ಹುಡುಕಲು ಹೊರಡುವುದಿಲ್ಲ. ಅವು ಹಾರಾಟ ಪ್ರಾರಂಭಮಾಡುವುದು ಸುಮಾರು ಎಂಟು ಗಂಟೆಯ ನಂತರ. ಅದಕ್ಕೊಂದು ಕಾರಣ ಇದೆ. ರಾತ್ರಿ ಇಡೀ ಸೂರ್ಯನ ಬೆಳಕು ಇಲ್ಲದ ಕಾರಣ ಭೂಮಿಯ ವಾತಾವರಣ ಒಂದಿಷ್ಟು ತಂಪಾಗಿರುತ್ತದೆ. ಬೆಳಗ್ಗೆ ಸೂರ್ಯನ ಬ… ಮುಂದೆ ಓದಿ...