ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ೧೯೦೦ರ ಏಪ್ರಿಲ್ ೧೬ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ..
ಕೃಷ್ಣಶರ್ಮರು ೧೨ನೇ ವರ್ಷದವನಿರುವಾಗ ತಂದೆ, ೧೫ನೇ ವರ್ಷಕ್ಕೆ ಅಣ್ಣ ಹಣಮಂತರಾಯ, ೧೮ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೇ ತಮ್ಮ ೧೪ನೇ ವಯಸ್ಸಿನಲ್ಲಿ ವಿಷಮಶೀತ ಜ್ವರ ಹಾಗೂ ೧೫ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. ೧೯೨೮ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು ೫೬ ವಯಸ್ಸಿನವರಿದ್ದಾಗ ಮಗಳು ಹಾಗೂ ಮರು ವರ್ಷವೇ ಪತ್ನಿ ತೀರಿ ಹೋದರು.
೫ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ ೫ ಕಿ.ಮೀ. ದೂರದ ಮುಮದಾಪುರಕ್ಕೆ ದಿನಾಲು ತೆರಳಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು. ಮುಂದೆ ಬೆಳಗಾವಿಯಲ್ಲಿ ಮುಲ್ಕಿ ಪರೀಕ್ಷೆ ತೇರ್ಗಡೆಯಾದರು. ೧೯೧೮ರಲ್ಲಿ ಬೆಳಗಾವಿಯ ನಗರಪಾಲಿಕೆಯಲ್ಲಿಕೆಲಸ ಸಿಕ್ಕಿತು. ಅದು-ಮನೆಮನೆಗಳಿಗೆ ಹೋಗಿ ಇಲಿ ಹಿಡಿಯುವುದು. ನಂತರ ಈ ಕೆಲಸ ತೊರೆದು ಕಿತ್ತೂರಿನಲ್ಲಿ ಸಂಸ್ಕೃತ ಅಧ್ಯಯನ ಮಾಡಿ ಶಿಕ್ಷಕರಾದರು. ಮತ್ತೆ ಕೆಲಸ ತೊರೆದು ಧಾರವಾಡ ನಂತರ ಬೆಂಗಳೂರಿನಲ್ಲಿ ಕೆಲಸ ಮಾಡಿ, ಮತ್ತೆ ಧಾರವಾಡಕ್ಕೆ ಮರಳಿ ಜಯಂತಿ ಪತ್ರಿಕೆಯ ಸಂಪಾದಕರಾದರು.
ಭಾವಗೀತ, ನಲ್ವಾಡುಗಳು ಸೇರಿದಂತೆ ಒಟ್ಟು ೧೪ ಕವನ ಸಂಕಲನಗಳು, ಸಂಸಾರದ ಚಿತ್ರ ಹಾಗೂ ಬಡತನದ ಬಾಳು ಸೇರಿದಂತೆ ಒಟ್ಟು ೮ ಕಥಾ ಸಂಕಲನಗಳು, ಸುದರ್ಶನ, ರಾಜಯೋಗಿ ಸೇರಿದಂತೆ ಒಟ್ಟು ೫ ಕಾದಂಬರಿಗಳು, ಬೆಳವಡಿ ಮಲ್ಲಮ್ಮ, ಬೆಂದ ಹೃದಯ, ಮುಂಡರಗಿಯ ಗಂಡುಗಲಿ, ಪಂಚಗಂಗಾ (ಆಕಾಶವಾಣಿ ತರಂಗ ರೂಪಕಗಳು) ಕನ್ನಡ ರಾಜ್ಯ ರಮಾರಮಣ-ಚರಿತ್ರೆ,…
ಮುಂದೆ ಓದಿ...