ಪರಾಗದಾನಿಗಳನ್ನು ಉಳಿಸೋಣ ಬನ್ನಿ…! (ಭಾಗ ೪)
1 day 20 hours ago - Ashwin Rao K Pರೋಗಗಳು: ಪರಾಗದಾನಿಗಳಿಗೆ ಶಿಲೀಂದ್ರ ರೋಗ, ವೈರಸ್ ಮತ್ತು ಬ್ಯಾಕ್ಟೀರಿಯಾ ಸೋಂಕು ರೋಗಗಳು ಇರುವ ಕಾರಣ ವಾತಾವರಣದ ಅನನುಕೂಲತೆಯ ಜೊತೆಗೆ ಇವು ಪ್ರಾಬಲ್ಯವನ್ನು ಉಂಟು ಮಾಡಿ ಪರಾಗದಾನಿಗಳ ಸಂತತಿ ಕ್ಷೀಣವಾಗಲು ಕಾರಣವಾಗಿದೆ. ಜೇನು ನೊಣಕ್ಕೆ ಶಿಲೀಂದ್ರ ಸೋಂಕು ಮತ್ತು ಬ್ಯಾಕ್ಟೀರಿಯಾ ಸೋಂಕು ತಗುಲಿದರೆ ಹೆಚ್ಚಿನ ಪ್ರಮಾಣದಲ್ಲಿ ಜೇನಿನ ಭ್ರೂಣಗಳು ನಾಶವಾಗುತ್ತಿವೆ. ಬ್ಯಾಕ್ಟೀರಿಯಾ ಸೋಂಕಿನಿಂದ ಜೇನು ನೊಣಗಳು ವೇಗವಾಗಿ ಸಾಯುತ್ತವೆ. ಶಿಲೀಂದ್ರ ಸೋಂಕಿನಿಂದ ಸಂಖ್ಯೆ ಕಡಿಮೆಯಾಗುತ್ತಾ ಸಂತತಿ ಕ್ಷೀಣಿಸಿ ಸಾಯುತ್ತದೆ. ರಾಣಿ ಬಂಜೆಯಾಗುತ್ತದೆ. ಜೇನು ನೊಣ ಹಾಗೂ ಇನ್ನಿತರ ಪರಾಗದಾನಿಗಳಲ್ಲಿ ರಾಣಿ ನೊಣಕ್ಕೆ ಯಾವುದೇ ಹಾನಿಯಾದರೂ ಸಹ ಅವು ಸಂತಾನ ಕ್ಷೀಣಿಸುತ್ತವೆ. ರೋಗಸೋಂಕು ಬೇರೆ ಬೇರೆ ವಿಧಗಳಿಂದ ಹರಡುತ್ತದೆ. ಇದಕ್ಕೆ ನಿರ್ದಿಷ್ಟ ಔಷಧಿಗಳಿಲ್ಲ. ಸಣ್ಣ ಕುರುವಾಯಿ ತರಹದ ಒಂದು ಕೀಟ ಜೇನು ನೊಣಗಳಿಗೆ ವೈರಿಯಾಗಿದ್ದು ಇದು ಆಫ್ರಿಕಾದಲ್ಲಿ ಮೊದಲಾಗಿ ಕಾಣಿಸಿತ್ತಾದರೂ ಈಗ ಅದು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಕಂಡು ಬರುತ್ತದೆ. ಇದು ಜೇನಿನ ಎರಿಗಳನ್ನು ಹಾಳು ಮಾಡುತ್ತದೆ. ಇದನ್ನು ಎಲ್ಲರೂ ನೋಡಿರಬಹುದು. ಈ ದುಂಬಿಯ ಲಾರ್ವೆಯು ಜೇನ್ನು ತಿಂದು ಅದನ್ನು ಕಲುಶಿತಗೊಳಿಸುತ್ತವೆ. ಎರಿಗಳಲ್ಲಿ ಹುಳ ಇದ್ದರೆ ಇದು ಇದೆ ಎಂದರ್ಥ.
ಸಾಮಾಜಿಕ ಅರಣ್ಯ ಮತ್ತು ಪರಾಗದಾನಿಗಳು
ಗ್ರೀನ್ ಬೆಲ್ಟ್ ಮತ್ತು ಪರಾಗದಾನಿಗಳು: ನಮ್ಮ ಸರಕಾರ ಈ ತನಕ ಲಕ್ಷಾಂತರ ಹೆಕ್ಟೇರು ಭೂಮಿಯನ್ನು ಕೈಗಾರಿಕೆ, ಸೇವಾ ಕ್ಷೇತ್ರಕ್ಕೆ ಕೊಡುತ್ತದೆ. ಕೆಲವು ಕಡೆ ಫಲವತ್ತಾದ ಭೂಮಿಯನ್ನೂ ಇಲ್ಲೂ ಕೆಲವು ಕಡೆ ಸಾಧಾರಣ ಭೂಮಿಯನ್ನೂ ಒಟ್ಟಾರೆಯಾಗಿ ಮೂಲ ಸೌಕರ್ಯ ಉತ್ತಮವಿರುವ ಭೂಮಿಯನ್ನು ಇವುಗಳಿಗೆ ಕೊಡುತ್ತದೆ. ಸುಮಾರು ೨-೩ ಎಕರೆಯಲ್ಲಿ ಕಟ್ಟಡ ಇತ್ಯಾ… ಮುಂದೆ ಓದಿ...