ಆಳವಾಗಿ ಪ್ರೀತಿಸುವವರು ಒಂದಷ್ಟು ಜನ, ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ, ಮೆಚ್ಚುವವರಿಗೆ ಬರವಿಲ್ಲ, ಟೀಕಿಸುವವರು ಕಡಿಮೆಯೇನಿಲ್ಲ, ಅಸೂಯೆ ಒಳಗೊಳಗೆ, ಕುಹುಕ ನಗು ಮೇಲಿನ ಹೊದಿಕೆ, ಎತ್ತಿ ಕಟ್ಟುವವರು ಹಲವರು, ಎಚ್ಚರಿಸುವವರು ಕೆಲವರು, ಹೃದಯ ತಟ್ಟುವವರು ಇದ್ದಾರೆ, ಬೆನ್ನಿಗೆ ಇರಿಯುವವರೂ ಉಂಟು, ಧೈರ್ಯ ತುಂಬುವವರು, ಭಯ ಪಡಿಸುವವರು, ಜೊತೆಯಾಗುವವರು, ದೂರ ಸರಿಯುವವರು, ಸ್ವಾಗತಿಸುವವರು, ವಿರೋಧಿಸುವವರು, ತಪ್ಪು ಅರ್ಥೈಸಿಕೊಂಡವರು, ನಿಜದ ಅನುಭಾವಿಗಳು, ಪೂರ್ವಾಗ್ರಹ ಪೀಡಿತರು, ವಿಶಾಲ ದೃಷ್ಟಿಯವರು, ಮಜಾ ತೆಗೆದುಕೊಳ್ಳುವವರು, ಹಿತ ಬಯಸುವವರು, ನಿರ್ಲಿಪ್ತರು - ನಿರ್ಲಕ್ಷ್ಯವಹಿಸುವವರು, ಹಿಂಸಾವಾದಿಗಳು, ಕರುಣಾಮಯಿಗಳು, ಮೇಲೆತ್ತುವವರು, ಕೆಳಗೆ ತುಳಿಯುವವರು, ಸ್ವಾಭಿಮಾನಗಳು, ಮಾರಿಕೊಂಡವರು, ಮುಖವಾಡ ಧರಿಸಿರುವವರು, ಸಹಜ ಸ್ವಭಾವದವರು, ಆಕ್ರೋಶ ನುಡಿಯ ಮಾತುಗಳು ಮೆಲು ಧ್ವನಿಯ ವಿನಯಿಗಳು, ನಗುನಗುತ್ತಾ ಅಳಿಸುವವರು, ಅಳುವಿನಲ್ಲಿ ನಗುತ್ತಾ ಜೊತೆಯಾಗುವವರು, ನಿಜ ವೀರರು, ರಣ ಹೇಡಿಗಳು, ಬಹುಮಾನಿಸುವವರು, ಅವಮಾನಿಸುವವರು, ಪ್ರೇರೇಪಿಸುವವರು, ಪ್ರಚೋದಿಸುವವರು, ತ್ಯಾಗಿಗಳು - ಸ್ವಾರ್ಥಿಗಳು, ಜಾಣ ಪೆದ್ದರು - ಪೆದ್ದ ಜಾಣರು.
ಮುಂದೆ ಓದಿ...