‘ಸಂಪದ’ ನಗೆಬುಗ್ಗೆ - ಭಾಗ ೧೦೪
1 day 12 hours ago - Ashwin Rao K Pಸ್ವಂತ ತಮ್ಮ !
ಊರಲ್ಲಿ ಎಲೆಕ್ಷನ್ ಭರಾಟೆ ಜೋರಾಗಿಯೇ ಇತ್ತು. ಎಲ್ಲ ಕಡೆ ಪ್ರಚಾರದ ಹವಾ. ಸೂರಿ ಕೂಡಾ ಎಲೆಕ್ಷನ್ ನಲ್ಲಿ ಬಿಸಿಯಾಗಿದ್ದ. ಒಂದು ದಿನ ಬೆಳಿಗ್ಗೆ ಹೀಗೇ ತಮ್ಮ ಪಕ್ಷದ ಕಾರ್ಯಕರ್ತರೊಡನೆ ಊರಲ್ಲಿ ತಿರುಗಾಡುತ್ತಿದ್ದಾಗ ಅಲ್ಲಿಗೆ ಮಾರಿ ಬಂದ. ಅದಾಗಲೇ ಫುಲ್ ಟೈಟಾಗಿದ್ದ ಪಾರ್ಟಿ, ಸೂರಿ ಹತ್ರ ಬಂದು ‘ಸರ್, ನೀವು ನಮ್ ಪಾರ್ಟಿಗೇ ಓಟ್ ಹಾಕಬೇಕು. ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’ ಅಂದ. ಅದನ್ನು ಕೇಳಿದ ಸೂರಿಗೆ ಕೆಂಡಾ ಮಂಡಲ ಸಿಟ್ಟು ಬಂತು. ಒಂದೇ ಸಮನೆ ಮಾರಿಯನ್ನು ಹಿಡಿದು ಹಿಗ್ಗಾಮುಗ್ಗ ಬಾರಿಸತೊಡಗಿದ. ಸರಿ ಮಾರಿ ಅಲ್ಲಿಂದ ಎಸ್ಕೇಪ್. ನಂತರ ಮಧ್ಯಾಹ್ನದ ಹೊತ್ತಿಗೆ ಮಾರಿ ಮತ್ತೆ ಸೂರಿ ಮುಂದೆ ಹಾಜರಾದ. ಈಗಲೂ ಫುಲ್ ಟೈಟು. ಈಗಲೂ ಅದೇ ಡೈಲಾಗ್. ‘ಸರ್, ನೀವು ನಮ್ ಪಾರ್ಟಿಗೇ ಓಟು ಹಾಕ್ಬೇಕು, ನಾನು ನಿಮ್ಮ ತಮ್ಮ ಇದ್ದಂಗೆ ಅಂದ್ಕಳಿ’. ಮತ್ತೆ ಸೂರಿ ಕಡೆಯಿಂದ ಅವನಿಗೆ ಧರ್ಮದೇಟುಗಳು ಬಿದ್ದವು. ಮತ್ತೆ ಮಾರಿ ಎಸ್ಕೇಪ್.
ಸಂಜೆ ಇನ್ನೇನು ಕತ್ತಲಾಗಿ ಸ್ವಲ್ಪ ಹೊತ್ತು ಕಳೆದು ಪ್ರಚಾರ ಮುಗಿಯುವ ಹಂತಕ್ಕೆ ಬಂದಿತ್ತು. ಸೂರಿ ಬಳಿಗೆ ಮತ್ತೆ ಮಾರಿ ಅದಾಗಲೇ ಸಾಕಷ್ಟು ರಿಪೀಟ್ ಆರ್ಡರ್ ಮಾಡಿ ಇನ್ನಷ್ಟು ಟೈಟ್ ಆಗಿ, ಸೇಮ್ ಡೈಲಾಗ್ ರಿಪೀಟ್ ಮಾಡಿದ. ‘ಸರ್, ನೀವು ನಮ್ ಪಾರ್ಟಿಗೇ ಓಟ್ ಹಾಕ್ಬೇಕು. ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’. ಸೂರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಇನ್ನೇನು ಹೊಡೆಯಲು ಕೈ ಎತ್ತಬೇಕು. ಅಷ್ಟರಲ್ಲಿ ಸೂರಿ ಪಕ್ಕದಲ್ಲಿದ್ದವರು ಕೇಳಿದರು. ‘ಅಲ್ರೀ ಸೂರಿ, ಪಾಪ ಅವನಿಗೆ ಯಾಕ್ರೀ ಹೊಡಿತೀರಾ? ಏನೋ ವೋಟ್ ಕೇಳ್ತಾನೆ, ಹಾಕಂಗಿದ್ರೆ ಹಾಕಿ, ಇಲ್ಲಾಂದ್ರೆ ಬಿಟ್ಟಾಕಿ. ಪಾಪ ಅದಕ್ಯಾಕೆ ಅವನಿಗೆ ಧರ್ಮದೇಟು ಹಾಕ್ತೀರಿ? ಪಾಪ, ನಾನು ನಿಮ್ಮ ತಮ್ಮ ಇದ್ದಂಗೆ ಅಂತ ತಿಳ್ಕಳಿ ಅಂತ… ಮುಂದೆ ಓದಿ...