ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹತ್ತೇ ರೂಪಾಯಿ ಕೊಡಿ ...

ಸ್ವಚ್ಛ ಬೆಂಗಳೋರು, ನಂಗಂತೂ ತುಂಬಾ ಖುಷಿ ಆಗುತ್ತೆ, ಬೆಳಿಗ್ಗೆ, ಆ ಕಸಾ ಗುಡಿಸೋ ಜನರ್ನ ಕಂಡ್ರೆ.
ಎಲ್ಲ ಏರಿಯಾ ಕು ಹೋಗಿ, ಫುಳ್ಲ್ ಕ್ಲೀನ್ ಮಾಡೋ ಆ ಕ್ಲೀನ್ ಮಾಡೋ ಜನ ತುಂಬಾ ಹೊಲಸಗಿ ನಮ್ಮ ಎಲ್ಲ ಹೊಲಸನ್ನ ತೊಟ್ಟಿಗೆ ಹಾಕಿ, ನಮ್ಮ ಏರಿಯಾ ನ ಕ್ಲೀನ್ ಆಗಿ ಇಡ್ತಾರೆ.

ಮಳೆ ಹನಿ

ಮಳೆ ಹನಿ ಮನ ಮುಟಿನಿಂತಿದೆ
ಒಂದು ಹೂವು ಶಿಲ್ಪವಾಗಿ ಕಂಡಿದೆ
ಎದುರು ಬರುತಿರುವ ಹೂವಿನ ತೆರಿಗೆ
ದಾರಿ ನೀಡಿರೆ
ಮುತ್ತು ಹನಿಗಳೇ ದಾರಿ ನೀಡಿರೆ

ಕನಸಲ್ಲಿಯು ನಿನ್ನ ನೋಡ ಬಂದೆ
ನೀನಾದೆ ನನ್ನ ಉಸಿರ ಚಿಂತೆ
ನಿನ್ನ ಸ್ಪರ್ಶದ ಸಿಹಿ ಗುರುತು
ನಾ ಹಾರಿದೆ ನನ್ನೇ ಮರೆತು
ಜಿಗ್ಗಿ ಜಾರಾಡಿದೆ ನನ್ನೇ ಮರೆತು

ಮಳೆ ಹನಿ ಮನ ಮುಟಿನಿಂತಿದೆ

ಹಂಚಿಕೊಳ್ಳದ ಲೋಕ

ನನ್ನ ಲೋಕದ ಏನೇನು ಇಲ್ಲಿ ಬರೆದುಕೊಳ್ಳುತ್ತೇನೋ ಅದರಲ್ಲಿ ಎಷ್ಟೋ ತಲುಪುತ್ತದೆ, ಮತ್ತೆಷ್ಟೋ ತಲುಪುವುದೇ ಇಲ್ಲ. ಹಂಚಿಕೊಳ್ಳುವುದು ತಲುಪಲಿಕ್ಕೇ. ಆದರೂ ಬರೆಯುವುದು ತಲುಪಲಷ್ಟೇ ಅಲ್ಲ. ಅದು ಒಂದು ಮಾತು. ಯಾವುದು ತಲುಪುತ್ತದೆ ಯಾವುದು ತಲುಪುವುದಿಲ್ಲ ಅನ್ನುವುದು ಬರೇ ಕುತೂಹಲವಷ್ಟೇ ಅಲ್ಲ. ತುಂಬಾ ಮುಖ್ಯ ಕೂಡ.

ಅನಾಮಿಕನಿಗೆ

ಹೆಸರಿಲ್ಲದವನಿಗೆ
ನಾನು ನೆನ್ನೆ ನಿನ್ನ ನೋಡಿದೆ ೧೦ ವರ್ಷಗಳ ಈ ಸುಧೀರ್ಘ ಅವಧಿಯ ನಂತರ. ಸಮಯ ನನ್ನಲ್ಲೂ, ನನ್ನ್ ಜೀವನದಲ್ಲೂ ಏನೇನೋ ಬದಲಾವಣೆ ಮಾಡಿದೆ. ಹಾಗೆಯೆ ನಿನ್ನ ಮುಖದಲ್ಲೂ .
ಹಿಂದಿನ ಆ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರೆ ಈಗಲೂ ಕಿರುನಗೆ ಬರುತ್ತದೆ.

Busy ಕನ್ನಡಕ್ಕೆ ಬಂದಾಗ ಏನಾಗುತ್ತದೆ?

ಬಿಝಿ.

ಯಾರಾದರೂ ಈ ಆಂಗ್ಲ ಪದಕ್ಕೊಂದು ಅಷ್ಟೇ ಚುಟುಕಾದ ಮತ್ತು ಅದೇ ಅರ್ಥ ಕೊಡುವ ಅಪ್ಪಟ ಕನ್ನಡ ಪದ ಹುಡುಕಿ ಕೊಡುತ್ತೀರಾ?
ವ್ಯಸ್ತ, ನಿರತ - ಇವೆಲ್ಲ ಸಂಸ್ಕೃತ ಮೂಲದ್ದು. ಅವು ಬೇಡ. ಕನ್ನಡದ್ದೇ ಪದ ಬೇಕಾಗಿದೆ. ತದ್ಭವವಾದರೂ ಆದೀತು.

ಎಲ್ಲಿ ಹೋದರು?

ಈಗ ನಡೆಯುತ್ತಿರುವ ಐ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಗಳಿಗೆ ವಿದೇಶೀ ಬಾಲೆಯರನ್ನು ಕರೆಸಿ ಅರೆನಗ್ನ ನೃತ್ಯ ಮಾಡಿಸುವ ಕೆಟ್ಟ ಚಾಳಿ ಶುರುವಾಗಿದೆ. ವಿದೇಶೀ ನೆಲಗಳಲ್ಲಿ ಅಲ್ಲಿನ ಸಂಸ್ಕೃತಿಗೆ ತಕ್ಕಂತೆ ಪುಟ್ಬಾಲ್ ಪಂದ್ಯಗಳಲ್ಲಿ ಈ ರೀತಿ ನೃತ್ಯ ಮಾಡಿಸುವ ರೂಢಿ ಇದೆ. ಇಲ್ಲಿನ ಸಂಸ್ಕೃತಿಗೆ ಒಗ್ಗದ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದಾಗಿತ್ತು.

ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್

ಬಹುಶ: ಈ ಕೆಟ್ಟ ಟ್ರೆಂಡನ್ನು ಶುರು ಮಾಡಿದವರು ಯೋಗರಾಜ ಭಟ್ಟರೇ ಇರಬೇಕು. ಕನ್ನಡ ಚಿತ್ರದ ಹೆಸರಿನ ಜೊತೆ ಹಿಂದಿ ಪದವನ್ನೊಳಗೊಂಡ ಒಂದು ಉಪಶೀರ್ಷಿಕೆ ಕೊಡುವುದು. ಮುಂಗಾರು ಮಳೆ ಜೊತೆಗೆ "ಹನಿ ಹನಿ ಪ್ರೇಮ್ ಕಹಾನಿ" ಎಂದು ಇಟ್ಟಿದ್ದರು. ಚಿತ್ರ ಹಿಟ್ಟಾಯಿತು. ನಮ್ಮ ಕನ್ನಡ ಚಿತ್ರ ರಂಗದವರು ಹೇಗಿದ್ದರೂ ಗೆದ್ದೆತ್ತಿನ ಬಾಲ ಹಿಡಿಯುವವರು.

ಮುಂಜಾನೆ ಮೂಡಿದ ಹಾಗೆ...

ಸಿನಿಮಾ: ಮುದುಡಿದ ತಾವರೆ ಅರಳಿತು
ಹಾಡಿರುವವರು : ಎಸ್ .ಪಿ.ಬಿ
ಇನಿ/ಸಂಗೀತ : ?
ಬರೆದಿರುವವರು: ಚಿ.ಉದಯಶಂಕರ್ (?) ಇರಬಹುದು

ಮುಂಜಾನೆ ಮೂಡಿದ ಹಾಗೆ
ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ
ಕೆಂದಾವರೆ ನೀನು ನನಗೆ. ಆ. ಹಾ.. ಆಅ....|| ಪಲ್ಲವಿ||