ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಊಟದ ತಟ್ಟೆಯಲ್ಲಿ ರಾಸಾಯನಿಕ ರಾಕ್ಷಸ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಆಮೀರ್ ಖಾನ್, ಕನ್ನಡ ಪುಸ್ತಕ ರೂಪ: ಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಷ
ಪ್ರಕಾಶಕರು
ಲಡಾಯಿ ಪ್ರಕಾಶನ, ಗದಗ
ಪುಸ್ತಕದ ಬೆಲೆ
ರೂ. ೭೦.೦೦, ಮುದ್ರಣ: ೨೦೨೪

‘ಸತ್ಯಮೇವ ಜಯತೆ’ ಮೇ ೨೦೧೨ರಿಂದ ಅಕ್ಟೋಬರ್ ೨೦೧೪ರವರೆಗೆ ದೂರದರ್ಶನದಲ್ಲಿ ಪ್ರಸಾರವಾದ ೨೫ ಎಪಿಸೋಡುಗಳ ಅತ್ಯಂತ ಜನಪ್ರಿಯವಾದ ಒಂದು ಟಾಕ್ ಶೋ ಆಗಿತ್ತು. ದೇಶವನ್ನು ಕಾಡುತ್ತಿರುವ ಹಲವಾರು ವಿಷಯಗಳ ಕುರಿತು ಈ ಸರಣಿಯು ಆಳವಾದ ಸಂಶೋಧನೆ ಸಾಕ್ಷ್ಯ ಮತ್ತು ಸಂಬಂಧಿತ ಜನರ ಭಾಗವಹಿಸುವಿಕೆಯನ್ನು ಒಳಗೊಂಡಿತ್ತು.

ಭಾರತೀಯತೆ - ಹಿಂದುತ್ವ - ಹವ್ಯಕ ಸಮ್ಮೇಳನ…

ಬರೆಯಬಾರದೆಂದಿದ್ದರೂ ಮನಸ್ಸು ತಡೆಯಲಿಲ್ಲ. ಸತ್ಯದ ಹುಡುಕಾಟದಲ್ಲಿ ನಿಂದನೆಗೆ ಒಳಗಾಗುವ ಸಾಧ್ಯತೆಯಿದ್ದರೂ ನಾವು ಕಂಡ ಸತ್ಯವನ್ನು, ನಮಗೆ ಅನಿಸಿದ ಅಭಿಪ್ರಾಯಗಳನ್ನು ಹೇಳಲೇಬೇಕಾಗುತ್ತದೆ. ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹವ್ಯಕ ಮಹಾಸಭಾ ಕಾರ್ಯಕ್ರಮ ಮೂರು ದಿನ ಅದ್ದೂರಿಯಾಗಿ ನಡೆಯಿತು.

Image

ಸ್ಟೇಟಸ್ ಕತೆಗಳು (ಭಾಗ ೧೧೯೩) - ಬಾಗಿಲು

ಅವನು ಬಾಗಿಲ ಮುಂದೆ ನಿಂತಿದ್ದಾನೆ. ಹಲವು ಸಮಯದಿಂದ ಅಳುತ್ತಲೇ ಇದ್ದಾನೆ. ಯಾರಾದರೂ ಬಾಗಿಲು ತೆಗೆಯಿರಿ ಎಂದು ಯಾಚಿಸುತ್ತಿದ್ದಾನೆ. ಸುತ್ತ ಯಾರೂ ಇಲ್ಲ, ಬಾಗಿಲು ತೆಗೆಯುವವರು. ತನ್ನ ದೀನ ಪರಿಸ್ಥಿತಿಯನ್ನು ಕಂಡು ಮರುಗಿದ್ದಾನೆ. ತನಗಾಗಿರುವ ಸ್ಥಿತಿ ಕಂಡು ಕಣ್ಣೀರು ಇಳಿಸಿದ್ದಾನೆ. ತನಗೂ ಜೊತೆಗೆ ನಿಂತ ಎಲ್ಲರಿಗೂ ಶಪಿಸುತ್ತಲೇ ಹೊರಟು ವಾಪಾಸು ತಿರುಗಿ ಬಂದವನಿದ್ದಾನೆ.

Image

ಪಾನಿ ಪೂರಿ

Image

ಪೂರಿ ತಯಾರಿಕೆ: ಹಾಲು, ಸಕ್ಕರೆಗಳಿಗೆ ಮೈದಾ ಹಿಟ್ಟು, ಚಿರೋಟಿ ರವೆ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿ ಅರ್ಧ ಗಂಟೆ ನೆನೆಸಿ. ನೆನೆದ ಹಿಟ್ಟಿನಿಂದ ಚಿಕ್ಕ ಚಿಕ್ಕ ಪೂರಿಗಳನ್ನು ಲಟ್ಟಿಸಿ ಕರಿದು ಮಧ್ಯಕ್ಕೆ ತೂತು ಮಾಡಿ ಚಟ್ನಿ ಹಾಕಿ ಸವಿಯಿರಿ.

ಬೇಕಿರುವ ಸಾಮಗ್ರಿ

ವಸ್ತುಗಳು: ಚಿರೋಟಿ ರವೆ - ೩ ಕಪ್, ಮೈದಾ ಹಿಟ್ಟು - ೨ ಕಪ್, ಸಕ್ಕರೆ - ೨ ಚಮಚ, ಹಾಲು - ೧/೨ ಕಪ್.

ಸಿಹಿ ಚಟ್ನಿಗೆ: ಖರ್ಜೂರದ ತುಂಡುಗಳು: ಅರ್ಧ ಕಪ್, ಹುಣಸೆ ರಸ - ೪ ಚಮಚ, ಬೆಲ್ಲದ ತುರಿ - ಕಾಲು ಕಪ್, ಕೊತ್ತಂಬರಿ ಹುಡಿ - ೧ ಚಮಚ, ಜೀರಿಗೆ ಹುಡಿ - ಅರ್ಧ ಚಮಚ, ಮೆಣಸಿನ ಹುಡಿ - ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಖಾರದ ಚಟ್ನಿಗೆ: ಹಸಿ ಮೆಣಸಿನಕಾಯಿ -೮, ಶುಂಠಿಯತುರಿ - ೧ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು - ಕಾಲು ಕಪ್, ಕತ್ತರಿಸಿದ ಪುದೀನಾ ಎಲೆಗಳು - ೧೦, ರುಚಿಗೆ ತಕ್ಕಷ್ಟು ಉಪ್ಪು. 

 

ಸಂತೃಪ್ತಿ

ಇಂದು ಸಂತೃಷ್ಟತೆಯ ಬಗ್ಗೆ ತಿಳಿದುಕೊಳ್ಳೋಣ. ಈ ಘಟನೆ ಓದಿ. ಒಬ್ಬ ರೈತ ಚೆನ್ನಾಗಿ ದುಡಿದಿದ್ದಾನೆ. ಮೈಯೆಲ್ಲಾ ಬೆವರು. ಚೆನ್ನಾಗಿ ಹಸಿವಾಗಿತ್ತು. ಮನೆಯಿಂದ ತಂದ ಬುತ್ತಿ ತೆಗೆದು ಊಟ ಮಾಡಿದನು. ಏನು ರುಚಿ?. ಅದ್ಭುತ. ಅಲ್ಲೇ ಮರದ ನೆರಳಿನಲ್ಲಿ ಟವಲ್ ಹಾಸಿ ಮಲಗಿದನು. ಹಾಸಿಗೆ ಇಲ್ಲ. ದಿಂಬು ಇಲ್ಲ. ಗಾಡವಾದ ನಿದ್ರೆ ಬಂದಿತ್ತು. ಇನ್ನೊಬ್ಬ ದೊಡ್ಡ ಮನೆ ಕಟ್ಟಿಸಿದ್ದಾನೆ.

Image

ದೀಪದಿಂದ ದೀಪವ ಹಚ್ಚಬೇಕು ಮಾನವ… (ಭಾಗ 2)

ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು ತನ್ನ ಕಕ್ಷೆಯಲ್ಲಿ ತಾನೇ ಸುತ್ತಲು ತೆಗೆದುಕೊಳ್ಳುವ  24 ಗಂಟೆಗಳಲ್ಲಿ ನಮ್ಮ ಮೇಲೆ ಆಗುವ ನೆರಳು ಬೆಳಕಿನ ಆಟವನ್ನು ಒಂದು ವರ್ಷ ಮತ್ತು ಒಂದು ದಿನ  ಎಂದು ಅನುಕ್ರಮವಾಗಿ ಗುರುತಿಸಲಾಗುತ್ತದೆ. ಪಾಶ್ಚಿಮಾತ್ಯರು  ಜನವರಿ 1 ನ್ನು ವರ್ಷದ ಪ್ರಾರಂಭವೆಂತಲೂ ಡಿಸೆಂಬರ್ 31 ನ್ನು ಕೊನೆಯ ದಿನ ಎಂತಲೂ ಪರಿಗಣಿಸುತ್ತಾರೆ.

Image

ದೀಪದಿಂದ ದೀಪವ ಹಚ್ಚಬೇಕು ಮಾನವ… (ಭಾಗ 1)

"ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ......." - ದತ್ತಾತ್ರೇಯ ರಾಮಚಂದ್ರ ಬೇಂದ್ರೆ. 21ನೆಯ ಶತಮಾನದಲ್ಲಿ ಕಾಲು ಶತಮಾನ ಮುಗಿದಿದೆ. ಅಂದರೆ 2025 ಪ್ರಾರಂಭವಾಗಿದೆ. ಅದಕ್ಕೆ ಸ್ವಾಗತ ಕೋರುತ್ತಾ, ಎಲ್ಲರಿಗೂ ಇಂಗ್ಲಿಷ್ ಕ್ಯಾಲೆಂಡರ್ ನ ಹೊಸ ವರ್ಷದ ಶುಭಾಶಯಗಳನ್ನು ಹೇಳುತ್ತಾ....

Image

ಸ್ಟೇಟಸ್ ಕತೆಗಳು (ಭಾಗ ೧೧೯೨) - ಕ್ಯಾಲೆಂಡರ್

ಸೂರ್ಯ ಮುಳುಗಿ ಮತ್ತೆ ಏಳುತ್ತಾನೆ, ಅಂತಹ ದೊಡ್ಡ ಬದಲಾವಣೆ ಏನು ಘಟಿಸುವುದಿಲ್ಲ ನೀನು ಮನಸ್ಸು ಮಾಡಿದರೆ  ನಿನ್ನ ದಿನಚರಿಯಲ್ಲಿ ಏನಾದರೂ ಬದಲಾವಣೆಯಾದರೆ, ನಿನ್ನ ಸಮಯವನ್ನ ಹೊಂದಿಸಿಕೊಂಡ್ರೆ, ಹೊಸದೇನಾದರೂ ಕಲಿತರೆ, ಏನಾದರೂ ಮಾಡಬೇಕು ಎನ್ನುವ ಮನಸ್ಸನ್ನು ಕಾರ್ಯರೂಪಕ್ಕೆ ತಂದರೆ, ನಿನ್ನ ಸಾಧ್ಯತೆಗಳ ಪಟ್ಟಿ ಮಾಡಿಕೊಂಡು ಪ್ರತಿಯೊಂದು ಸಾಧಿಸುವುದರ ಕಡೆಗೆ ಹೆಜ್ಜೆ ಇಟ್ಟರೆ, ಸಮಾಜದ ಕಡೆಗೆ ತುದಿಯುವಂತ ಮನಸ್ಸನ್ನ

Image

ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನ

ಮಂಡ್ಯ ಜಿಲ್ಲೆಯಲ್ಲಿ ಸುಮಾರು 3000 ಅಡಿಗಳಷ್ಟು ಎತ್ತರದಲ್ಲಿರುವ ಊರು ಮೇಲುಕೋಟೆ, ಶತಮಾನಗಳ ಹಿಂದೆ ವಿಶಿಷ್ಟಾಂತ ಪ್ರತಿಪಾದಕರಾದ ಶ್ರೀ ರಾಮಾನುಜಾಚಾರ್ಯರು ತಮ್ಮ ಕರ್ಮಭೂಮಿಯನ್ನಾಗಿ ಆಯ್ಕೆಮಾಡಿಕೊಂಡ ಪುಣ್ಯಭೂಮಿ. ಇದು ಶ್ರೀ ವೈಷ್ಣವ ಪಂಥದ ಪುಣ್ಯನೆಲ. ಈ ಸ್ಥಳಕ್ಕೆ ತಿರುನಾರಾಯಣಪುರ, ದಕ್ಷಿಣಬದರಿ, ಯಾದವಾದ್ರಿ, ನಾರಾಯಣಾದ್ರಿ, ವೇದಾದ್ರಿ, ಯದುಗಿರಿ ಎಂಬ ಹೆಸರುಗಳಿದ್ದವು.

Image