ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ನವೋದಯಕ್ಕೆ ಶ್ರೀಕಾರ ಹಾಕಿಕೊಟ್ಟ ಬಿಎಂಶ್ರೀ "ಇಂಗ್ಲೀಷ್ ಗೀತಗಳು"

'ಶ್ರೀ' ಕಾವ್ಯನಾಮದಿಂದ ಪ್ರಸಿದ್ಧ ರಾದವರು ಶ್ರೀ ಬಿ ಎಂ ಶ್ರೀ , ' ಕನ್ನಡದ_ಕಣ್ವ'  ಎಂದೇ ಹೆಸರಾದ ಇವರು ಕನ್ನಡದ ಜನರೇ ಕನ್ನಡ ಮಾತಾಡಲು ಹಿಂದೆಗೆಯುತ್ತಿದ್ದ ಕಾಲದಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ದೂ ಕನ್ನಡದಲ್ಲಿ ಕೃತಿಗಳನ್ನು ರಚಿಸಿದವರು. ಇವರ ' ಅಶ್ವತ್ತಾಮನ್ '' ಗದಾಯುದ್ಧ ನಾಟಕಮ್ ' ಎಷ್ಟು ಪ್ರಸಿದ್ಧವೋ ಅಷ್ಟೇ ಅವರ ರಚನೆಯ ' ಇಂಗ್ಲೀಷ್ ಗೀತಗಳು ' ಕೂಡ. ಅನೇಕ ಇಂಗ್ಲೀಷ್ ಕವನಗಳನ್ನು ಕನ್ನಡಕ್ಕೆ ತಂದು ಕನ್ನಡಿಗರಿಗೆ ಇಂಗ್ಲೀಷ್ ಕವನ ಸಾಹಿತ್ಯದ ಸೊಬಗನ್ನು ಉಣಬಡಿಸಿದ್ದಾರೆ. ಮೂಲ ಕವನದ ಸೊಗಸಿಗೆ ಸ್ವಲ್ಪವೂ ಭಂಗ ಬರದಂತೆ ಕವನಗಳನ್ನು ರಚಿಸಿದ್ದಾರೆ. ಇವ್ಯಾವುವೂ ಪದಶಃ ಅನುವಾದವಲ್ಲ. ಎಲ್ಲ ಭಾವಾನುವಾದಗಳು. ಮೂಲ ಆಂಗ್ಲ ಕವನದ ಭಾವಗಳ ರಸಘಟ್ಟಿಯನ್ನು  ಕನ್ನಡದಲ್ಲಿಯೂ ಹಾಗೆಯೇ ಇಳಿಸಿದ್ದಾರೆ ಎನ್ನಬಹುದು.

Image

ಕುವೆಂಪು ಮತ್ತು ಸಾಹಿತ್ಯ (ಭಾಗ 2)

ಕುಪಳಿಯಲ್ಲಿ ಹುಟ್ಟಿ - ಮೈಸೂರಿನಲ್ಲಿ ಬೆಳೆದು - ಕರ್ನಾಟಕದಲ್ಲಿ ಪಸರಿಸಿ - ವಿಶ್ಚ ಮಾನವತ್ವದ ಪ್ರಜ್ಞೆಯೊಂದಿಗೆ ಸಾಹಿತ್ಯದಲ್ಲಿ ರಸ ಋಷಿಯಾಗಿ - ಕವಿ ಶೈಲದಲ್ಲಿ ಲೀನರಾದ ರಾಷ್ಟ್ರ ಕವಿ ಕುವೆಂಪು ಅವರ ಜನುಮ ದಿನದ ಶುಭಾಶಯಗಳನ್ನು ಕೋರುತ್ತಾ ( ಡಿಸೆಂಬರ್ - 29 )...

Image

ಸ್ಟೇಟಸ್ ಕತೆಗಳು (ಭಾಗ ೧೧೯೦) - ಪ್ರತಿಭೆ

ವೇದಿಕೆಯ ಕೆಳಗೆ ಕುಳಿತ ಅಮ್ಮ ಮತ್ತು ಅಪ್ಪ ಸಂಭ್ರಮದಿಂದ ಚಪ್ಪಾಳೆ ತಟ್ಟುತ್ತಿದ್ದಾರೆ. ಅವರ ಮಗಳ ನೃತ್ಯವನ್ನು ಕಣ್ತುಂಬಿಸಿಕೊಳ್ಳಲು ತುಂಬಾ ಜನ ಕಾದು ಕುಳಿತಿದ್ದಾರೆ. ಮಗಳು ವೇದಿಕೆಯಲ್ಲಿ ನೃತ್ಯ ಮಾಡುವಾಗ ಶಿಳ್ಳೆ ಚಪ್ಪಾಳೆಗಳದ್ದೇ ಅಬ್ಬರ. ಶಾಲೆಯಲ್ಲಿ ಓದುವ ಈ ಮಗಳ ನೃತ್ಯಕ್ಕೆ ಜನರ ಅಭಿಮಾನವನ್ನು ಕಂಡು ತಂದೆ ತಾಯಿಗಳ ಕಣ್ಣಲ್ಲಿ ಸಂಭ್ರಮದ ಕಣ್ಣೀರು ಇಳಿಯುತ್ತಿದೆ.

Image

ಕಡಲ ಸೆರಗಲಿ ಶತ್ರು ನಡುಗಿಸಿದ ಮೆಣಸಿನ ರಾಣಿಯ ಮಿರ್ಜಾನ್ ಕೋಟೆ

ಬಲಿಷ್ಠ ಸಾಮ್ರಾಜ್ಯ ನಿರ್ಮಿಸಿ ರಾಜವಂಶ, ಉತ್ತಮ ಆಡಳಿತ ಮತ್ತು ಜನರ ರಕ್ಷಣೆ ಮಾಡಲು ಕೋಟೆಗಳು ಪ್ರಭಲ ರಾಜಾಡಳಿತಕ್ಕೆ ಆತ್ಮಗಳಾಗಿದ್ದವು. ಅಂತಹ ಕೋಟೆಗಳಲ್ಲಿ ಉತ್ತರ ಕನ್ನಡ ( ಕಾರವಾರ) ಜಿಲ್ಲೆ ಕುಮಟಾ ತಾಲೂಕಿನ ಮಿರ್ಜಾನ್ ಕೋಟೆ ಒಂದಾಗಿದೆ. ಇದು ಐತಿಹಾಸಿಕತೆಯನ್ನು ಸಾರಿ ಸಾರಿ ಹೇಳುತ್ತಿದೆ.

Image

ತೆಂಗಿನ ಎಣ್ಣೆ ಸೇವನೆಯಿಂದ ಲಾಭವಿದೆಯೇ?

ತೆಂಗಿನ ಮರವನ್ನು ನಾವು ಕಲ್ಪವೃಕ್ಷ ಎಂದು ಕರೆಯುತ್ತೇವೆ. ಏಕೆಂದರೆ ಇದರ ಎಲ್ಲಾ ಭಾಗಗಳು ಉಪಯುಕ್ತವೇ ಆಗಿದೆ. ತೆಂಗಿನ ಕಾಯಿ ಎನ್ನುವುದು ನಮಗೆ ಪ್ರಕೃತಿ ನೀಡಿದ ವರ ಎನ್ನಬಹುದು. ಏಕೆಂದರೆ ಎಳನೀರು ದೇಹದ ದಾಹ ತೀರಿಸಿ ಬಲ ನೀಡುತ್ತದೆ. ತೆಂಗಿನ ಕಾಯಿ ಆರೋಗ್ಯಕ್ಕೆ ಬಹು ಉತ್ತಮ. ತೆಂಗಿನ ಎಣ್ಣೆಯೂ ಬಹಳ ಉತ್ತಮ ಎಂದು ತಿಳಿದು ಬರುತ್ತದೆ.

Image

ರಕ್ಷಣಾ ಕ್ಷೇತ್ರದಲ್ಲಿ ಸುಧಾರಣೆ : ಪ್ರಕ್ರಿಯೆ ಪಾರದರ್ಶಕ ಆಗಿರಲಿ

ಭಾರತದ ರಕ್ಷಣಾ ಕ್ಷೇತ್ರ ದಿನದಿಂದ ದಿನಕ್ಕೆ ಆತ್ಮನಿರ್ಭರತೆ ಸಾಧಿಸುತ್ತಿದೆ. ಕಳೆದ ವರ್ಷ ಭಾರತದ ರಕ್ಷಣಾ ಉತ್ಪಾದನೆ ಹಾಗೂ ರಫ್ತಿನಲ್ಲಿ ದಾಖಲೆ ಸ್ಥಾಪಿಸಿದೆ. ಇದೀಗ ೨೦೨೫ನೇ ವರ್ಷಾರಂಭದಲ್ಲೇ ಕೇಂದ್ರ ಸರಕಾರವು ಈ ವರ್ಷವನ್ನು ‘ರಕ್ಷಣಾ ಸುಧಾರಣೆಗಳ ವರ್ಷ’ ಎಂದು ಘೋಷಿಸಿದೆ. ಹೀಗಾಗಿ ಭಾರತ ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಪ್ರಗತಿಯತ್ತ ದಾಪುಗಾಲು ಇರಿಸಿದೆ.

Image

ಕುವೆಂಪು ಮತ್ತು ಸಾಹಿತ್ಯ (ಭಾಗ 1)

ಅಕ್ಷರಗಳ ಸಂಶೋಧನೆ - ಬರವಣಿಗೆ - ಸಾಹಿತ್ಯ - ಕುವೆಂಪು - ಕನ್ನಡ ಭಾಷೆ. ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ ಸಂದರ್ಭದಲ್ಲಿ ಬರವಣಿಗೆ -  ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ. (ಡಿಸೆಂಬರ್ 29)

Image

ಸ್ಟೇಟಸ್ ಕತೆಗಳು (ಭಾಗ ೧೧೮೯) - ಸಂದೇಶ

ಎಲ್ಲರ ಹಾಗೆ ಒಂದಷ್ಟು ಸಮಯ ವ್ಯರ್ಥ ಮಾಡಿಕೊಂಡು ಗೆಳೆಯರ ಜೊತೆ ಸೇರಿಕೊಂಡು ಮೋಜು ಮಸ್ತಿಯಲ್ಲಿ ಮುಳುಗಿದ್ದವ. ಅವತ್ತು ಬೆಳಗ್ಗೆ ಬೇಗ ಏಳೋಣ ಅಂತ ಅನ್ನಿಸ್ತು. ಒಂದಷ್ಟು ಸಮಯ ಎದ್ದು ಓಡಾಟ ನಡಿಗೆ ಎಲ್ಲವನ್ನು ಮಾಡಿಕೊಂಡಿದ್ದ. ಯಾರೋ ಒಬ್ಬರು 75 ದಿವಸದ ಚಾಲೆಂಜ್ ಹೇಳಿದ್ದಕ್ಕೆ ಅದನ್ನು ಪೂರ್ತಿ ಗೊಳಿಸಿಯೇ ಬಿಟ್ಟ. ದೇಹ ದಂಡಿಸಿ ಒಂದಷ್ಟು ಶಿಸ್ತು ಕಲಿತಿದ್ದರಿಂದ ಹೊಸತೇನೋ ಮಾಡಬೇಕೆನಿಸಿತು.

Image

ನಿಷ್ಪಾಪಿ ಸಸ್ಯಗಳು (ಭಾಗ ೮೧) - ಇನ್ಸುಲಿನ್ ಗಿಡ

ಇಲ್ಲಿ ಹರಿಯುತ್ತಿರುವ ನೀರಿನ ಪ್ರವಾಹವನ್ನೊಮ್ಮೆ ನೋಡಿರಿ. ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತಿರುವ ಇದನ್ನು 'ಕಟ್ಟತ್ತಿಲ ಹೊಳೆ' ಎನ್ನುತ್ತಾರೆ. ಇದು ನಮಗಮ ಜಿಲ್ಲೆಯ ದಕ್ಷಿಣ ದಿಕ್ಕಿನಲ್ಲಿದೆ. ವಿಶೇಷವೇನೆಂದರೆ ಕರ್ನಾಟಕದ ಗಡಿ ದಾಟಿ ಸ್ವಲ್ಪವೇ ದೂರದಲ್ಲಿ ಕೇರಳ ಪ್ರವೇಶಿಸಿ ಪಯಸ್ವಿನಿ ನದಿಯ ಜೊತೆ ಐಕ್ಯಗೊಳ್ಳುತ್ತದೆ. ನದಿಗೆ ಹೋಲಿಸಿದರೆ ಇದೊಂದು ಸಣ್ಣ ನೀರಿನ ಹರಿವು.

Image