ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೋಪಕ್ಕೆ ಕತ್ತರಿ ಹಾಕಿ !

‘ಅನ್ನ ತಿನ್ನುವ ಪ್ರತಿಯೊಬ್ಬನಿಗೂ ಕೋಪ ಬರುತ್ತೆ' ಈ ಮಾತನ್ನು ನನ್ನ ಅಜ್ಜಿ ಯಾವಾಗಲೂ ಹೇಳುತ್ತಾ ಇರುತ್ತಿದ್ದರು. ಅವರಿಗೂ ಕೋಪ ಬರುತ್ತಿತ್ತು. ಆದರೆ ವಯಸ್ಸಿನ ಅನುಭವೋ ಏನೋ ಅದನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದರು. ಅವರಿಗೆ ಬಹಳಷ್ಟು ತಾಳ್ಮೆ ಇತ್ತು. ಕೋಪ ಬಂದಾಗ ಬಹುತೇಕರು ತಮ್ಮ ತಾಳ್ಮೆಯನ್ನು ಕಳೆದುಕೊಂಡು ಬಿಡುತ್ತಾರೆ. ಕೋಪ ನೆತ್ತಿಗೇರಿದಾಗ ಬೇಡದ ಕಾರ್ಯಗಳನ್ನು ಮಾಡುತ್ತಾರೆ.

Image

ಅಮೀಬಾ

ಪುಸ್ತಕದ ಲೇಖಕ/ಕವಿಯ ಹೆಸರು
ಭಗೀರಥ
ಪ್ರಕಾಶಕರು
ಟೋಟಲ್ ಕನ್ನಡ, ಜಯನಗರ, ಬೆಂಗಳೂರು -೫೬೦೦೧೧
ಪುಸ್ತಕದ ಬೆಲೆ
ರೂ. ೩೫೦.೦೦, ಮುದ್ರಣ: ೨೦೨೪

‘ಅಮೀಬಾ’ ಎನ್ನುವ ರೋಚಕ ಕಾದಂಬರಿಯನ್ನು ಬರೆದದ್ದು ಉದಯೋನ್ಮುಖ ಕಾದಂಬರಿಕಾರರಾದ ಭಗೀರಥ. ಅವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಪುಸ್ತಕದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಅದರ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

ಬ್ಲೇಡ್ ಕಂಪನಿಗಳ ಅಟ್ಟಹಾಸ...

ಕೇವಲ ನಾಲ್ಕು ತಿಂಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬ್ಲೇಡ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸುಮಾರು 20 ಕೋಟಿಗೂ ಹೆಚ್ಚು ಹಣ ವಂಚನೆಯಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೯೫೪)- ಕಾರ್ಮಿಕರ ದಿನ

ದೊಡ್ಡ ಕಟ್ಟಡದ ಒಳಗೆ ಕುಳಿತುಕೊಳ್ಳುವುದಕ್ಕೆ ಸಾವಕಾಶ ವ್ಯವಸ್ಥೆ ಇದೆ. ದಿನದ ಎಲ್ಲಾ ಹೊತ್ತು ತಿರುಗುವ ಫ್ಯಾನುಗಳಿದ್ದಾವೆ, ದೇಹವನ್ನು ತಂಪುಗೊಳಿಸುವುದಕ್ಕೆ ಎಸಿಗಳು ಕೆಲಸ ಮಾಡ್ತಾ ಇದ್ದಾವೆ. ಇವೆಲ್ಲವೂ ಆ ಕೊಠಡಿಯ ಒಳಗೆ ಬದುಕುತ್ತಿರುವವರಿಗೆ. ಇನ್ನೊಂದಷ್ಟು ಹೆಚ್ಚು ಹೊತ್ತು ಕೆಲಸ ಮಾಡುವುದಕ್ಕೆ ಪ್ರೇರಣೆಯನ್ನು ನೀಡುತ್ತಿದ್ದಾವೆ.

Image

ಪ್ರವಾಸ ಕಥನ : ಅಮೇರಿಕಾ... ಅಮೇರಿಕಾ... (ಭಾಗ 1)

(ಅಮೇರಿಕಾ ಪ್ರವಾಸ ಹೊರಡುವ ಮೊದಲು... ಬೆಂಗಳೂರಿನ ವಿಜ್ಞಾನ ಬರಹಗಾರ ಕೆ ನಟರಾಜ್ ಅವರು ತಮ್ಮ ಕುಟುಂಬದ ಜೊತೆ ಅಮೇರಿಕಾಗೆ ಪ್ರವಾಸ ಹೋಗಿದ್ದರು. ಆ ಪ್ರವಾಸದಲ್ಲಿ ಅವರು ಕಂಡ, ತಿರುಗಾಡಿದ ಸ್ಥಳಗಳ ಬಗ್ಗೆ ಪ್ರವಾಸ ಕಥನ ಬರೆದಿದ್ದಾರೆ. ಈ ಪ್ರವಾಸ ಕಥನವು ಧಾರವಾಹಿ ರೂಪದಲ್ಲಿ ಪ್ರತೀ ಶುಕ್ರವಾರ 'ಸಂಪದ' ದಲ್ಲಿ ಪ್ರಕಟವಾಗಲಿದೆ.

Image

ನೆನೆಯೋಣ ನರಸಿಂಹನ...

ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಉಗ್ರ ಮತ್ತು ಭಯಂಕರ ರೂಪಿನ ಅವತಾರವೇ ನರಸಿಂಹವವತಾರ ಎಂದು ಪುರಾಣಗಳಲ್ಲಿ ಓದಿದ ನೆನಪು. ವಿಷ್ಣು ಭಕ್ತನಾದ ಶಿಶು ಪ್ರ‌ಹ್ಲಾದನ ಕಷ್ಟವನ್ನು, ಪ್ರಜೆಗಳ ನಂಬಿಕೆಯನ್ನು ಉಳಿಸಲು, ಕಾಪಾಡಲು ದೇವ ನರಸಿಂಹ ಭೂಮಿಗಿಳಿದನಂತೆ. ಅಸುರರಾಜ ಹಿರಣ್ಯಕಶ್ಯಪುವನ್ನು ವಧಿಸಿ ಲೋಕಕ್ಷೇಮ ಉಂಟುಮಾಡಿದ ದೇವನೀತ.

Image

ನಮಗೆ ತಿಳಿಯದ ಆಯುರ್ವೇದ ಹಾಗೂ ಆರೋಗ್ಯದ ಲೋಕ

ಅನಂತ ವಿಶ್ವದಲ್ಲಿ ನಮಗೆ ತಿಳಿಯದ ಅಪಾರ ಸಂಗತಿಗಳಿವೆ. ಆದರೆ, ಇದನ್ನು ಒಪ್ಪಲು ಹಲವರು ತಯಾರಿಲ್ಲ.
-ನಾವು ಕಲ್ಪಿಸಲಾಗದ ವಿಶ್ವ ಕ್ಷಣಕ್ಷಣವೂ ಹೇಗೆ ವಿಸ್ತರಿಸುತ್ತಿದೆ?
-ನಕ್ಷತ್ರಗಳ ಹುಟ್ಟು-ಸಾವಿಗೆ ಕಾರಣಗಳೇನು?
-ಸೂರ್ಯನ ಕಿರಣಗಳು ಮತ್ತು ಶಾಖ ನಮ್ಮ ಬದುಕಿನ ಮೇಲೆ ಏನೆಲ್ಲ ಪರಿಣಾಮಗಳನ್ನು ಬೀರುತ್ತಿದೆ?
-ಆಕಾಶದಲ್ಲಿ ಈ ಭೂಮಿ ಕುಸಿಯದೆ, ಸಾವಿರಾರು ವರುಷಗಳಿಂದ ಹೇಗೆ ಜೀವಸಂಕುಲವನ್ನು ರಕ್ಷಿಸುತ್ತಿದೆ?
-ಬೇರೆ ಗ್ರಹಗಳಲ್ಲಿ ಜೀವಿಗಳು ಇದ್ದಾವೆಯೇ? ಅವನ್ನು ಹೇಗೆ ಸಂಪರ್ಕಿಸಬಹುದು?

ಇಂತಹ ಸಾವಿರಾರು ಪ್ರಶ್ನೆಗಳ ಉತ್ತರಗಳು ನಮಗೆ ಗೊತ್ತಿಲ್ಲ. ಅವುಗಳಿಗೆ ಇನ್ನು ನೂರು ವರುಷಗಳೊಳಗೆ ಉತ್ತರ ಸಿಗುವ ಯಾವ ಸೂಚನೆಯೂ ಇಲ್ಲ.

Image

ಪೆನ್ ಡ್ರೈವ್ ಕೇಸ್: ನಿಷ್ಪಕ್ಷಪಾತ ತನಿಖೆಯಾಗಲಿ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೇಶದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಅಶ್ಲೀಲ ಪೆನ್ ಡ್ರೈವ್ ಪ್ರಕರಣ ಇಡೀ ನಾಡನ್ನೇ ತಲೆತಗ್ಗಿಸುವಂತೆ ಮಾಡಿರುವುದು ದುರಂತ. ಸಂಸದ ಪ್ರಜ್ವಲ್ ರೇವಣ್ಣ ಎಸಗಿದರೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಈಗಾಗಲೇ ವಿಚಾರಣೆ ಹಂತದಲ್ಲಿದ್ದು, ಇದೊಂದು ಘನಘೋರ ಅಪರಾಧ ಎನ್ನುವ ಭಾವನೆ ಜನಸಾಮಾನ್ಯರೊಳಗೆ ಹುಟ್ಟಿರುವುದಂತೂ ವಾಸ್ತವ.

Image

ಇವುಗಳಲ್ಲಿ ಯಾವುದು ನಮ್ಮ ಆದ್ಯತೆಯಾಗಬೇಕು..?

ತಾಪಮಾನ - ಬರಗಾಲ - ಪೆನ್ ಡ್ರೈವ್ ಮತ್ತು ಸೆಕ್ಸ್. ಯಾವುದು ನಮ್ಮ ಆದ್ಯತೆಯಾಗಬೇಕು? ಬೆಂಗಳೂರಿನಲ್ಲಿ ಇತಿಹಾಸವೇ ಕಂಡರಿಯದ 41.8 ಡಿಗ್ರಿ ಸೆಲ್ಸಿಯಸ್ ತಾಪಮಾನ ಕೆಂಗೇರಿ ಬಳಿ ದಾಖಲಾಗಿದೆ. ಕಲ್ಬುರ್ಗಿಯಲ್ಲಿ 42.7 ಡಿಗ್ರಿ ಸೆಲ್ಸಿಯಸ್, ಈಗಿನ ಅಲ್ಲಿನ ಸಂಸದರು ಚುನಾವಣಾ ಪ್ರಚಾರ ಸಮಯದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

Image