ಭಾರತದ ಕೌಟುಂಬಿಕ ವ್ಯವಸ್ಥೆ
ಐವಿಎಫ್ ವಿಧಾನ, ಭಾವನಾ ರಾಮಣ್ಣ, ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯ ಹಾಗು ಭಾರತದ ಕೌಟುಂಬಿಕ ವ್ಯವಸ್ಥೆ.
- Read more about ಭಾರತದ ಕೌಟುಂಬಿಕ ವ್ಯವಸ್ಥೆ
- Log in or register to post comments
ಐವಿಎಫ್ ವಿಧಾನ, ಭಾವನಾ ರಾಮಣ್ಣ, ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯ ಹಾಗು ಭಾರತದ ಕೌಟುಂಬಿಕ ವ್ಯವಸ್ಥೆ.
ನಾನು ಮೆಸೇಜ್ ಅನ್ನ ಕಳುಹಿಸಿ ಬಿಟ್ಟಿದ್ದೆ. ತುಂಬಾ ಯೋಚನೆ ಕೂಡ ಮಾಡಿರಲಿಲ್ಲ. ಅದರ ಸಾಧಕ ಬಾದಕಗಳನ್ನ, ಸತ್ಯಾಸತ್ಯತೆಗಳನ್ನ ಎಣಿಸಿಯೂ ಇರಲಿಲ್ಲ ಸಮಾಜಕ್ಕೊಂದು ಸಂದೇಶ ನೀಡಬೇಕು ತಪ್ಪು ಮಾಡುವವರಿಗೆ ಶಿಕ್ಷೆ ಆಗಬೇಕು ಅನ್ನೋದಷ್ಟೇ ನನ್ನ ವಾದವಾಗಿತ್ತು. ಹಾಗಾಗಿ ನನ್ನ ಮೊಬೈಲಿಗೆ ಬಂದ ಮೆಸೇಜನ್ನು ಹಾಗೆ ದಾಟಿಸಿಬಿಟ್ಟಿದ್ದೆ.
ಒಂದು ದಿನ ಸಂಜೆ ಸುಮಾರು ಆರೂವರೆ ಗಂಟೆಗೆ ಮಂಗಳೂರಿನ ಎಂ.ಜಿ.ರೋಡ್ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಅಲ್ಲೊಂದು ಸುಮಾರು ಇಪ್ಪತ್ತೈದು ಅಡಿ ಅಗಲದ ನೀರು ಹರಿಯುವ ತೋಡು. ಮಳೆಗಾಲ ಬಂದರೆ ತುಂಬಿ ಹರಿಯುವ ಆ ತೋಡು ಮಳೆಗಾಲ ಮುಗಿಯುತ್ತಲೇ ಮಂಗಳೂರಿನ ಮುಖ್ಯ ಕೊಳಕು ನೀರು ಹರಿಯುವ ಮೋರಿ ಎನಿಸಿಕೊಂಡು ಗಬ್ಬು ನಾರುತ್ತದೆ.
ಆನಂದಮಯ ಈ ಕುಕ್ಕರಳ್ಳಿ ಕೆರೆ ಹೃದಯವು. ಕುವೆಂಪು ಮನದಲ್ಲಿ ಕವನಗಳ ಅಲೆಯೆಬ್ಬಿಸಿದ ಕೆರೆ, ಅಷ್ಟೇ ಏಕೆ, ಪುಸ್ತಕ 'ಪ್ರೇಮಿಗಳು' ಸುಳಿದಾಡುವ ತಾಣವೂ, ಮೈಸೂರಿಗೆ ಬರುವ ಪ್ರವಾಸಿಗರು ನೋಡಲೇ ಬೇಕೆಂಬ ಮಹದಾಸೆ ತರುವ ಕೆರೆಯಿದು.
ಪ್ರೀತಿಯುಸಿರಲಿ ನಿನ್ನನು ಸಲಹುತ್ತಲೇ ಬಂದಿರುವೆ ನಾನು
ಖ್ಯಾತ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರ ಆತ್ಮ ಕಥೆ ‘ಪತ್ರಕರ್ತನ ಪಯಣ’ ಇತ್ತೀಚೆಗೆ ಬಿಡುಗಡೆಯಾಗಿದೆ. ಪತ್ರಕರ್ತರಾಗಿ ತಾವು ಕಂಡ, ಅನುಭವಿಸಿದ ಘಟನೆಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ಈ ಕೃತಿಯ ಬೆನ್ನುಡಿಯಲ್ಲಿ ಮಹನೀಯರಾದ ಪ್ರೊ. ಓಂಕಾರ ಕಾಕಡೆ ಮತ್ತು ಡಾ. ಬಿ.ಕೆ.ರವಿ ಅವರು ಲಕ್ಷ್ಮಣ ಕೊಡಸೆ ಅವರ ಬಗ್ಗೆ ಅಭಿಪ್ರಾಯಗಳನು ತಿಳಿಸಿದ್ದಾರೆ. “ನಾನು ಅದೆಷ್ಟೋ ಸಲ ನನ್ನಲ್ಲಿಯೇ ಅಂದುಕೊಂಡದ್ದಿದೆ.
ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ… ಸುಮಾರು 30 ವರ್ಷಗಳು ಅಥವಾ ಅದಕ್ಕಿಂತ ಹಿಂದೆ ಹೀಗೆ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದರೆ ಅದು ಎಷ್ಟೊಂದು ಪರಿಣಾಮಕಾರಿಯಾಗಿರುತ್ತಿತ್ತೆಂದರೆ ಇಡೀ ದೇಶದಲ್ಲಿ ಬಹುತೇಕ ಬಂದ್ ಆಚರಿಸಲಾಗುತ್ತಿತ್ತು. ಸಣ್ಣಪುಟ್ಟ ಗ್ರಾಮಗಳಲ್ಲಿ ಸಹ ಅಂಗಡಿಗಳನ್ನು ಮುಚ್ಚಲಾಗುತ್ತಿತ್ತು.
ಬಾಲಗಂಗಾಧರ ತಿಲಕರು ಲೋಕಮಾನ್ಯರೆಂದೇ ಹೆಸರಾಗಿದ್ದವರು. ಅವರು ಹೋದೆಡೆಯಲ್ಲೆಲ್ಲಾ ಸಹಸ್ರಾರು ಸ್ವಾತಂತ್ರ್ಯಪ್ರಿಯರು ಸೇರುವುದು ರೂಢಿಯಾಗಿತ್ತು. ಜನರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದ ತಿಲಕರು ಅನಕ್ಷರಸ್ಥರಲ್ಲೂ ಸ್ವಾತಂತ್ರ್ಯದ ಆಸೆ ಚಿಗುರಿಸುತ್ತಿದ್ದರು. 'ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು'' ಎಂದು ಘೋಷಿಸಿದ ಅವರ ಮೇಲೆ ಆಂಗ್ಲ ಸರ್ಕಾರಕ್ಕೆ ಸಾಕಷ್ಟು ಕೋಪವಿತ್ತು.
ಅವನ ಕೈ ಕಾಲುಗಳ ಮೇಲೆ ಅಂಟಿರುವ ಮಣ್ಣನ್ನು ಗಮನಿಸಿದಾಗ, ಬಣ್ಣವನ್ನ ಕಳೆದುಕೊಂಡು ಮಾಸಿರುವ ಬಟ್ಟೆಯನ್ನ ಗಮನವಿಲ್ಲದ ಅವನ ಕೈಯಲ್ಲಿ ಹಿಡಿದಿರಬಹುದು. ಯಾರಿಗೂ ಖರೀದಿಸುವ ಮನಸ್ಸು ಬಾರಲಿಕ್ಕಿಲ್ಲ.
ಒಂದು ವಿಶಾಲವಾದ ಹುಲ್ಲುಗಾವಲಿನ ಮಧ್ಯೆ ಬೃಹತ್ತಾದ ಒಂದು ಒಂಟಿ ಮರವನ್ನು ಊಹಿಸಿಕೊಳ್ಳಿ. ಸೊಂಪಾದ ಎಲೆಗಳು, ಅದರ ನೆರಳಲ್ಲಿ ಆಶ್ರಯ ಪಡೆಯುತ್ತಿರುವ ಖಗ ಮೃಗಗಳು. ಒಳಗಿರುವ, ಮರದ ಕೆಳಗಿರುವವರಿಗೆ ಒಂದಿನಿತೂ ಬಿಸಿಲು ಸೋಕುವುದಿಲ್ಲ. ಕಾರಣ ಸುಸ್ಪಷ್ಟ. ಎಲೆಗಳ ಹಂದರ ಬಿಸಿಲನ್ನು ತಾನಿರಿಸಿಕೊಂಡು ನೆರಳನ್ನು ಕೆಳಕ್ಕಿಳಿಸುತ್ತದೆ. ಈಗ ನೋಡೋಣ ಈ ಎಲ್ಲ ಎಲೆಗಳೂ ಒಂದೇ ತೆರನ ಬಿಸಿಲು ದೊರೆಯುತ್ತದೆಯೇ ಎಂದು.