ವಿಧ: ಬ್ಲಾಗ್ ಬರಹ
October 15, 2015
ಸಂಜೆ ಬಣ್ಣದ ರೀತಿ ಚಂಚಲ ಅಂಕು ಡೊಂಕಿನ ಗಂಗೆಯು
ಎರಡು ನಾಲಿಗೆ ಹಾವು ಬಾಗಿದ ಕೊಳಕು ಮೊಗದವ ಚಂದಿರ
ಪೆದ್ದು ನಂದಿಯು ಹೀಗೆ ಗಂಡನ ಮನೆಯ ತುಂಬಿರೆ ಸಂಕಟ
ಬಾಳ್ವುದೆಂತೋ ಎನುತ ಬುರುಡೆಯ ಹಿಡಿದ ಗೌರಿಯೆ ಕಾಯಲಿ!
ಸಂಸ್ಕೃತ ಮೂಲ:
ಸಂಧ್ಯಾರಾಗವತೀ ಸ್ವಭಾವಕುಟಿಲಾ ಗಂಗಾ ದ್ವಿಜಿಹ್ವಃ ಫಣೀ
ವಕ್ರಾಂಗೈರ್ಮಲಿನಃ ಶಶೀ ಕಪಿಮುಖೋ ನಂದೀಚ ಮೂರ್ಖೋ ವೃಷಃ |
ಇತ್ಥಂದುರ್ಜನ ಸಂಕಟೇ ಪತಿಗೃಹೇ ವಸ್ತವ್ಯಮೇತತ್ಕಥಂ
ಗೌರೀತ್ಥಂ ನೃಕಪಾಲಪಾಣಿಕಮಲಾ ಚಿಂತಾನ್ವಿತಾ ಪಾತು ವಃ ||
सन्ध्यारागवती स्वभावकुटिला गंगा…
ವಿಧ: ಬ್ಲಾಗ್ ಬರಹ
October 14, 2015
ಅಮೂಲ್ಯವಾದ ಈ ಮುತ್ತು
ಭಾರತದ ಮಡಿಲಲ್ಲಿ ಮಿಂಚಿತ್ತು
ಜಗತ್ತಿಗೇ ಆಶ್ಚರ್ಯ ಪಡಿಸಿತ್ತು
ಮೊಗ್ಗೊಂದು ಅರಳಿತು ಈ ಭೂಮಿಯಲ್ಲಿ
ಭಾರತಾಂಬೆಯ ಮಮತೆಯ ಮಡಿಲಲ್ಲಿ
ಭಾರತದ ಶಕ್ತಿಯನು ಜಗತ್ತಿಗೆ ಬಿಂಬಿಸಲು
ಬಡತನದ ಬೇಗೆಯಲಿ ಬೆಂದ ಈ ಕಂದ
ಕಷ್ಟದಲು ಕನಸು ಕಂಡ ಈ ಕಂದ
ಎದೆಗುಂದದೆ ಸಾಧನೆಗೈದ ಈ ಕಂದ
ಜ್ಞಾನದಲಿ ಅದ್ಭುತ ಶಕ್ತಿ ಹೊಂದಿದ ಚತುರ
ದೇಶವ ಅಭಿವೃದ್ಧಿಯತ್ತ ತಂದ ಛಲಗಾರ
ನೀವು ನಮ್ಮ ಭಾರತದ ಹೆಮ್ಮೆಯ ಕುವರ
ಕಲಿತು ಕಲಿಸುತ ಸಾಗಿಸಿದಿರಿ ಜೀವನವ
ವಿದ್ಯಾರ್ಥಿಗಳಿಗೆ ನೀವೆಂದರೆ ಬಹಳ ಇಷ್ಟ…
ವಿಧ: ಬ್ಲಾಗ್ ಬರಹ
October 13, 2015
ಮೌಲ್ಯ
ಅವನು ಯಾರಲ್ಲೂ ಮಾರುವುದಿಲ್ಲ ಏನೊಂದು
ಆದರೂ ಅನ್ನುವರು ಬಲು ತುಟ್ಟಿ ಸಹಿಯೆಂದು
ಅಗ್ಗವಾದುದಕ್ಕೆ ಮುಗಿಬೀಳಬೇಕಲ್ಲವೇ
ದೂರ ಓಡುವರೆಲ್ಲ.... ಅವಳು ಅಗ್ಗವೆಂದು
ಸಾವಿಲ್ಲ, ಅಮೂಲ್ಯ ಎಂದೇ ಬೊಬ್ಬೆ ಅದಕೆ
ನಿತ್ಯ ಮಾತುಗಳಲ್ಲಿ ಶವವಾಗುವುದು ಸತ್ಯವೊಂದು
ಎಷ್ಟೊಂದು ಹಗುರ ಅವನ ಮಾತುಗಳಾದರೂ
ನೆಗುವ ಧೈರ್ಯ ಮಾಡರಾರೂ ಎಂದೆಂದು
ಉಚಿತವೆಂದರೂ ಯಾರೂ ಇಲ್ಲ ಸರತಿಯಲ್ಲಿ
ಕೆಲ ರೈತರಷ್ಟೆ , ಸಾವಿನ ಮನೆಯಲ್ಲಿ ಇಂದು
ವಿಧ: ಬ್ಲಾಗ್ ಬರಹ
October 13, 2015
“ಅಮ್ಮ, ನಾಳೆ ನೀಲಿ-ಕೆಂಪು ಹಾಕಲಾ? ಅಥವಾ ಹಸಿರು-ಬಿಳಿನಾ?” , “ಎಷ್ಟು ಸಲ ಕೇಳ್ತೀಯಾ? ಈಗ ಗಂಟೆ ಹನ್ನೊಂದು ಮಲಕ್ಕೋ ಸುಮ್ಮನೆ”. ಬೆಳಗ್ಗೆ ಎದ್ದಾಗ ಕೂಡ ನಂಗಿನ್ನು ಡಿಸೈಡ್ ಮಾಡಕ್ಕೆ ಆಗಿರಲಿಲ್ಲ. ಕೊನೆಗೆ ಒಂದನ್ನು ಹಾಕಿ, ಸರಿಯಾಗದೆ ಮತ್ತೆ ಬಿಚ್ಚಿ ಇನ್ನೊಂದನ್ನು ಹಾಕಿಕೊಂಡು ಹೊರಟೆ. ಆದರೂ ಮೊದಲು ಹಾಕಿದ ಡ್ರೆಸ್ಸೇ ಇರಬೇಕಿತ್ತು ಅಂತ ಮನಸಲ್ಲಿ ಕೊರೆಯೋಕೆ ಆಗಲೇ ಶುರುವಾಗಿತ್ತು.
ಕಾಲೇಜಿನ ಮೊದಲ ದಿನ ಆವತ್ತು. ಎಷ್ಟು ಸಾಧ್ಯನೋ ಅಷ್ಟು ರೆಡಿಯಾಗಿದ್ದೆ. ಎಲ್ಲ ಸರಿಯಿದ್ದರೂ ಮತ್ತೆ ಮತ್ತೆ…
ವಿಧ: ಬ್ಲಾಗ್ ಬರಹ
October 12, 2015
ಅದಾಗಲೇ ಮಧ್ಯರಾತ್ರಿ ಹನ್ನೆರಡಾಗಿತ್ತು, ನಿದ್ದೆ ತುಂಬಿ ತೂಕಡಿಸುತ್ತಿದ್ದ ಕಣ್ಣುಗಳಲ್ಲೇ ಖಾಲಿ ಬಿದ್ದಿದ್ದ ಹೆಬ್ಬಾವಿನಂಥ ರಸ್ತೆಯಲ್ಲಿ ಕಾರು ಓಡಿಸುತ್ತಾ ದುಬೈನಿಂದ ಶಾರ್ಜಾಗೆ ಬರುತ್ತಿದ್ದೆ. ಆ ನಿದ್ದೆಯ ಮಂಪರಿನಲ್ಲಿಯೂ ಅವಳಾಡಿದ ಮಾತುಗಳೇ ಕಿವಿಯಲ್ಲಿ ರಿಂಗಣಿಸುತ್ತಿದ್ದವು, ಅವಳ ಧ್ವನಿಯಲ್ಲಿದ್ದ ಅಸಹಾಯಕತೆ, ಕಣ್ಣುಗಳಲ್ಲಿ ಮಡುಗಟ್ಟಿದ್ದ ಆಕ್ರೋಶ ಕಣ್ಮುಂದೆ ಸುಳಿಯುತ್ತಿತ್ತು! ಆಗೊಂದು, ಈಗೊಂದು ಭರ್ರೆಂದು ಎಡ ಬಲಗಳಿಂದ ಸಾಗಿ ಹೋಗುತ್ತಿದ್ದ ಅರಬ್ಬಿಗಳ ದೊಡ್ಡ ಕಾರುಗಳ ಆರ್ಭಟದ ನಡುವೆಯೇ…
ವಿಧ: ಪುಸ್ತಕ ವಿಮರ್ಶೆ
October 10, 2015
ಡಾ. ಸರಜೂ ಕಾಟ್ಕರ್ ನಮ್ಮ ಓರಗೆಯ ಒಬ್ಬ ಸತ್ವಶಾಲೀ ಲೇಖಕರು. ಪತ್ರಕರ್ತರಾಗಿ ಹಾಗೂ ವ್ಯಾಪಕ ಓಡಾಟ ಮಾಡಿದವರಾಗಿ ಅವರ ಅನುಭವ ವಿಶಿಷ್ಟವಾದುದು.ಅವರ ಹಲವು ಕ್ಱತಿಗಳು ಬಹುಬೇಗನೆ ಮರುಮುದ್ರಣ ಕ0ಡಿವೆ.
ಅವರ ಈ ಕಾದ0ಬರಿ 'ಜುಲೈ 22, 1947' ಕೇವಲ ಒ0ದು ನೂರು ಪುಟಗಳದ್ದು. ಆದರೆ ಕನ್ನಡದಲ್ಲಿ ಹೊಸದೊದು ವಸ್ತುವನ್ನು ಆರಿಸಿಕೊ0ಡಿದ್ದಾರೆ. ಸತ್ಯಪ್ಪ ಎ0ಬ ಸಾಮಾನ್ಯ ಅಟೆ0ಡರ್ ಒಬ್ಬನು ರಾಷ್ಟ್ರದ್ವಜದ ಬಗ್ಗೆ ಹೊದಿದ್ದ ಅತೀವ ಅಭಿಮಾನ, ಅವನ ನಿಷ್ಟೆ, ಅವನ ಪ್ರಾಮಣಿಕತೆ, ಅವನನ್ನು…
ವಿಧ: ಬ್ಲಾಗ್ ಬರಹ
October 09, 2015
ಸಾಗರದಾಚೆಯಲೊಂದು ಸುಭಿಕ್ಷ ನಾಡು
ಪರಮ ಶಿವಭಕ್ತ ರಾಜ ಕಾಯುವ ಬೀಡು
ದೊರೆಗೊಬ್ಬಳು ಮುದ್ದಿನ ತಂಗಿ ಜೊತೆಗೆ
ವಿಧವೆ ಅವಳ ಬಾಳೇ ಬೇಸರ ಅವಗೆ
ತವರಲ್ಲೇ ಇದ್ದವಳು ಹೊರಟಳು ಹೊರಗೆ
ಸುಮ್ಮನೆ ವಾಯುವಿಹಾರ ಕಾಲಹರಣಕೆಂದೆ
ಸಂಜೆಯ ತಂಗಾಳಿಗೆ ಎದೆಯ ಆಸೆಯುಕ್ಕಿ
ವಿರಹದ ಬೇಗೆಯು ಕಾಯಿಸಿತು ಬಡದೇಹವ
ಕಂಡಳಾಗ ನೀಳ ಸುಂದರ ಪುರುಷನೊಬ್ಬನ
ಮಾಡಿಕೊಂಡಳು ತಾನೇ ಪ್ರೇಮ ನಿವೇದನೆ
ಆದರೇನು? ಅವ ವಿವಾಹಿತನೆಂದ ನಸು ನಕ್ಕು
ಅವನೇ ತೋರಿದ ಜೊತೆಯಲ್ಲಿದ್ದ ಇನ್ನೋರ್ವನ
ಮನದ ಕಾವನಿಳಿಸಿ ನಾಚುತ್ತಾ ಕೇಳಿದಳು
ಅನುರಾಗದ…
ವಿಧ: ಪುಸ್ತಕ ವಿಮರ್ಶೆ
October 04, 2015
ಒಂದು ಕಾದಂಬರಿಯ ಸುತ್ತಾ ....
ಈಗಷ್ಟೇ ಮುಗಿಸಿದ 'ಪರಿಭ್ರಮಣ' ಎಂಬ ಕಾದಂಬರಿಯ ಕುರಿತು ಈ ಬರಹ. ನಾಗೇಶ ಮೈಸೂರು ಅವರ ಈ ಕೃತಿ, ಸಂಪದ online ಪತ್ರಿಕೆಯಲ್ಲಿ ಅರವತ್ತಕ್ಕೂ ಹೆಚ್ಚು ಕಂತುಗಳಲ್ಲಿ ಮೂಡಿಬಂದಿದೆ.ಕೆಳಗಿನ ಲಿಂಕ್ ನಲ್ಲಿ ಈ ಸರಣಿ ಲಭ್ಯವಿದೆ.
https://nageshamysore.wordpress.com/00162-%e0%b2%95%e0%b2%a5%e0%b3%86-%e...
ಪರಿಭ್ರಮಣೆ ಮುಗಿದಿದೆಯಾದರೂ ಇದೊಂದು ಕಾಡುವ ಆವರ್ತನ. ಕಥೆಯಲ್ಲಿ ಜೀವನದ ಅವರೋಹಣವನ್ನು, ಅದರ ಅಧಃಪತನದ ವಿವಿಧ ಮುಖಗಳನ್ನು ಯಶಸ್ವಿಯಾಗಿ…
ವಿಧ: ಪುಸ್ತಕ ವಿಮರ್ಶೆ
October 04, 2015
ಜನನಾರಾಭ್ಯ ಒಂದಷ್ಟು ಪ್ರಶ್ನೆಗಳು, ಕುತೂಹಲಗಳು ಉತ್ತರವಿಲ್ಲದೆ ಉಳಿದುಕೊಂಡೇ ಇರುತ್ತದೆ. ಈ ವಿಶ್ವ, ಭೂಮಿ, ಚರಾಚರ ವಸ್ತುಗಳು, ಅವುಗಳ ಬದುಕು ಹೀಗೆ ಯಾವುದೇ ವಿಚಾರ ತೆಗೆದುಕೊಂಡರೂ ನಮಗಿನ್ನೂ ಸಂಪೂರ್ಣವಾಗಿ ತೆರೆದುಕೊಂಡಿಲ್ಲ. ವಿಜ್ಞಾನ ಇಷ್ಟು ಮುಂದುವರಿದು ಬದುಕನ್ನು ಸರಾಗವಾಗಿಸಿದ್ದರೂ ಸಹ ಇನ್ನೂ ಪ್ರಕೃತಿ ತನ್ನ ನಿಗೂಢತೆಯನ್ನು ಬಿಟ್ಟು ಕೊಟ್ಟಿಲ್ಲ.
ರಾತ್ರಿ ಸುಮ್ಮನೆ ನಿಂತು ಕೋಟ್ಯಾನುಕೋಟಿ ನಕ್ಷತ್ರಗಳನ್ನು ವೀಕ್ಷಿಸಿದರೆ ಈ ಅಗಾಧತೆ ಅರಿವಾಗುತ್ತದೆ. ಸುತ್ತ ಮುತ್ತಲಿರುವ ಸಾಕಷ್ಟು…
ವಿಧ: ಬ್ಲಾಗ್ ಬರಹ
September 30, 2015
ನಾನು ಹುಟ್ಟಿದ್ದು 1974 ರಲ್ಲಿ ಅಂತೆ. ಆಗಿನದ್ದೇನು ಹೆಚ್ಚಿನ ನೆನಪಿಲ್ಲ. ನೆನಪಿನಲ್ಲಿರುವುದೆಂದರೆ ಒಂದು ಬಣ್ಣದ ತೊಟ್ಟಿಲು, ನನ್ನನ್ನು ಎತ್ತಿ ಇಡುವಾಗ ಕೇಳುತ್ತಿದ್ದ ಬಳೆಗಳ ಸದ್ದು, ಬಂದು ಹೋಗುವರೆಲ್ಲರ ಕಾಲುಗಳು. ಆಗ ನಾನು ಎಲ್ಲವನ್ನು ಬರೀ ನೋಡುತ್ತಿದ್ದೆ, ಕೆಲವೊಮ್ಮೆ ಕೇಳುತ್ತಿದ್ದೆ. 1983 ಜನವರಿ 1 ನೇ ತಾರೀಖು ಎಲ್ಲರೂ ಏನೋ ಸಂಭ್ರಮದಲ್ಲಿ ಇರಬೇಕಾದರೆ ನನಗೆ ಸ್ವಲ್ಪ ಸ್ವಲ್ಪವಾಗಿ ಈ ಜಗತ್ತಿನ ಅರಿವಾಗಿ ತೊಡಗಿತು. ಕಾಲ ವರುಷಗಳ ಲೆಕ್ಕದಲ್ಲಿ ಕಳೆಯುತ್ತಿದೆ. ಆಗಲೇ ಸಾಕಷ್ಟು ದಾರಿ…