ಎಲ್ಲ ಪುಟಗಳು

ಲೇಖಕರು: narendra
ವಿಧ: Basic page
January 27, 2008
ಅತ್ಯಂತ ಸಹೃದಯಿ ಕವಿ, ಮೃದುಮಾತಿನ, ಮಾನವೀಯ ಕಳಕಳಿಯ ಸಾಹಿತಿ ನಿಸಾರ್‌ ಅಹಮ್ಮದ್‌ಗೆ ಈ ಬಾರಿಯ ಪದ್ಮಶ್ರೀ ಒಲಿದಿದೆ. ಇದು ಕನ್ನಡಕ್ಕೆ, ಕನ್ನಡದ ಸಂಸ್ಕಾರಕ್ಕೆ ಸಂದ ಗೌರವ. ನಿಸಾರರ ಕವನಗಳಲ್ಲಿ ತುಂಬಿರುವ ಸಾತ್ವಿಕವಾದ ಸೌಂದರ್ಯಾನುಭೂತಿ , ಅಬ್ಬರದ ಸದ್ದುಗದ್ದಲವಿಲ್ಲದ ಶಬ್ದಸಂಸ್ಕೃತಿ, ನವಿರಾದ ಗೇಯತೆಯ ಸಾಕಾರ, ಹೃದಯವೈಶಾಲ್ಯ ಒಂದೊಂದೂ ಕನ್ನಡ ನಾಡಿನ ಸಾಮಾನ್ಯನ ಸಹಜ ಸಂಸ್ಕಾರವಾಗಿದೆ. ನಿಸಾರ್ ತಮ್ಮ ಸಾಹಿತ್ಯದಿಂದ ಮುಗಿಲಿಗೆ ಕೈಚಾಚಿದವರಲ್ಲ. ಅವರ ನಿಲುವು ನೀತಿಗಳೆಲ್ಲ ಸಾಮಾನ್ಯರಲ್ಲಿ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
January 27, 2008
ವಿಶ್ವದ ಶ್ರೇಷ್ಠ ಸ್ಪಿನ್ನರ್ ಗಳಾದ ಚಂದ್ರಶೇಖರ್,ಹಾಗೂ ಪ್ರಸನ್ನರನ್ನು ನೋಡಿದ ನಾವು ಕುಂಬ್ಲೆಯನ್ನು ಸ್ಪಿನ್ನರ್ ಎಂದು ಒಪ್ಪಲು ರೆಡಿಯಿರಲಿಲ್ಲ. ಹೆಚ್ಚಿನ ಬಾರಿ ಅನಗತ್ಯ ಕಾರಣಕ್ಕೆ ಟೀಮಿನಿಂದ ಹೊರಹಾಕಿದಾಗಲೂ ನಮಗೆ ಬೇಸರ ಅಗಲಿಲ್ಲ. ರಾಜು,ಕಾರ್ತಿಕ್,ಹರಭಜನ್..ರ ಭಜನೆ ಮಾಡುತ್ತಿದ್ದೆವು ಹೊರತು ಕುಂಬ್ಲೆ ಇರಬೇಕಿತ್ತು ಎಂದು ಒಮ್ಮೆಯೂ ಹೇಳಿರಲಿಲ್ಲ. ಇಂಡಿಯಾದ ಕ್ಯಾಪ್ಟನ್ ಆಗಿ ಕುಂಬ್ಲೆಯನ್ನು ಆರಿಸಿದಾಗಲೂ 'ಧೋನಿ'ಆದರೆ ಒಳ್ಳೆಯದಿತ್ತು ಎಂದೆವು. ಏಟು ಬಿದ್ದಾಗಲೂ ಮುಖಕ್ಕೆ…
ಲೇಖಕರು: manjunathsinge
ವಿಧ: ಬ್ಲಾಗ್ ಬರಹ
January 27, 2008
ಮಧ್ಯಾನ ಊಟವಿಲ್ಲದಿದ್ದರೂ ಜಾತ್ರೆಯಲ್ಲಿ ಕೊಂಡು ತಿಂದ ಸಂಕ್ರಾಂತಿಯ ಕಬ್ಬು ನನ್ನನ್ನು ಮತ್ತಷ್ಟು ಉತ್ಸಾಹಿಯಾಗಿಸಿತ್ತು. ಕಬ್ಬಿನ ರುಚಿಯೇ ಹಾಗಿತ್ತು ಅನ್ನಿ! ಜರ್ಜರಿತವಾಗಿದ್ದ ಜಾತ್ರೆಯ ಜನದಟ್ಟಣೆ ೩ ಗಂಟೆಯ ನಂತರ ಕಡಿಮೆಯಾಗುತ್ತಾ ಬಂತು. ಮತ್ತೆ ಬೆಟ್ಟದತ್ತ ನಮ್ಮ(ನಾನು, ಕಾಕಾ, ಲೋಕನಥ ಸರ್) ಸವಾರಿ. ನನಗಂತು ಜಾತ್ರೆಯ ಪ್ರತಿಯೊಂದು ದೃಶ್ಯವೂ ವಿನೊತನವೆನಿಸುತ್ತಿತ್ತು. ಹೀಗೂ ಉಂಟೆ ಅಂತ! ಮೈಲಾಪುರದಲ್ಲಿ ಬಸ್ ಸ್ಟ್ಯಾಂಡ್ ಅಂತ ಇಲ್ಲ. ಆದರೆ ಜಾತ್ರೆಯ ಸಮಯದಲ್ಲಿ ಬೆಟ್ಟದ…
ಲೇಖಕರು: svnaik.p
ವಿಧ: ಚರ್ಚೆಯ ವಿಷಯ
January 26, 2008
ಹಲೋ ಸ್ನೇಹಿತರೇ ಹೆಸರು, Chandrashekar ಊರೂ, Bengalore (Malleswaram) ಸ್ವಂತ ಉರು ಹೊನ್ನಾವರ (ಉತ್ತರ ಕನ್ನಡ) ಕೆಲಸ, OFFICE BOY in Software Companyಯಲ್ಲಿ (small Company 6 employs) ನಾನು 10ನೇ ಕ್ಲಾಸ್ ಪಾಸಾಗಿದ್ದೇನೇ. ಯಾವಾಗ್ಲೂ officalli ಕುತ್ಗೊಂಡೆ ಈರ್ಬೇಕು ತೂನ್ಬಾ ಬೇಜಾರು ಆಗ್ತಾ ಇದೆ. ಆದ್ರೂ ನಾನು ಇಲ್ಲೇ COMPUTER ಕಲ್ತಿದ್ದೇನೆ (Basic Networking, Hardware,software instalation, photoshopಲ್ಲಿ ನಮ್ಮ companyಯಲ್ಲಿ work ಮಾಡುವಂತ…
ಲೇಖಕರು: Nitte
ವಿಧ: Basic page
January 26, 2008
ನಡೆ ನಿನ್ನದು ಚುರುಕಾಗದೆ ಹೀಗೇಕೆ ಸಾಗಿದೆ ಮೆಲ್ಲಗೆ... ಕಾರಣವಿಲ್ಲದ ಈ ನಗು ಈಗೇಕೆ ಮಿ೦ಚೆರಗಿದ೦ತೆ ಇಲ್ಲಿ ನನಗೆ... ನೂರಾಸೆಯು ಹೊ೦ಗನಸುಗಳು ಅಡಗಿದೆಯೆ ನಿನ್ನ ಕ೦ಗಳಲ್ಲಿ... ಒಮ್ಮೆ ಬಳಿ ಬ೦ದು ನಗುತ ಹೇಳೆ ಎನಿದೆಯೇ ನಿನ್ನ ಮನದಲ್ಲಿ... ಮೆಲ್ಲ ಬಳುಕುತ ತಿರುಗಿ ನೊಡುತ ನೀ ನಡೆದಿರುವೆ ಹೀಗೆ ಯಾರ ಹಾದಿಯಲ್ಲಿ...? ನಿನ್ನ ಮುಡಿ ಮಲ್ಲಿಗೆಯು ತುಸು ನಾಚದೆ ತಲೆ ಎತ್ತಿದೆ ಜ೦ಭದಲ್ಲಿ... ನಿನ್ನ ಕಾಲ್ಗೆಜ್ಜೆಯು ವೀಣೆಯ ಮೀರಿಸಿದೆ ಸಿಹಿ ಗಾನ ಅದರ ಕೊರಳಿನಲ್ಲಿ... ತ೦ಗಾಳಿಗು ನಶೆ ಎರಿದೆ…
ಲೇಖಕರು: super_shivu
ವಿಧ: ಬ್ಲಾಗ್ ಬರಹ
January 26, 2008
ನಿರ್ದೇಶಕ " ಯೋಗರಾಜ್ ಭಟ್ ರಿಗೊದು ಪ್ರೀತಿಪೂರ್ವಕ ವಾದ ಆಕ್ಷೇಪಣೆಯ ಪತ್ರ,,,, ನಾನು ನೋಡಿದ ನಿಮ್ಮ ಮೊದಲ ಚಿತ್ರ " ಮಣಿ ".....ಕೆಳವರ್ಗದ ತಾಯಿ ಮತ್ತು ಆಕೆಯ .ಮಗ ..ಮತ್ತು ಈ ಸಮಾಜದ ದ್ವಿಮುಖ ನೀತಿ ಯಿ೦ದ ಅವರು ಪಡುವ ಬವಣೆಯನ್ನು ಪ್ರೀತಿಯ ಹ೦ದರ ದಲ್ಲಿ ನೀವು ಹೇಳಿದ ರೀತಿ ಅಧ್ಬುತ ವೆನ್ನಲಾಗ ದಿದ್ದರೂ ತು೦ಬಾ ಚೆನ್ನಾಗಿತ್ತು...ಜನರಿ೦ದ ಮತ್ತು ಪತ್ರಿಕೆ ಗಳಿ೦ದ ಏಕ ಮುಖ ಪ್ರಶ೦ಸೆ ಪಡೆದು ನಿಮ್ಮನ್ನು ಪ್ರಸಿದ್ದ ನಿರ್ದೇಶಕ ಮಣಿರ೦ತ್ನ೦ ಗೆ ವಿಮರ್ಷಕರು ಮತ್ತು ಸಧಭಿರುಚಿಯ ಪ್ರೇಕ್ಷಕರು…
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
January 26, 2008
ಬಲಿದಾನ.........................." ನೇಣುಗಂಬ ಏರಿದ ಸ್ವಾತಂತ್ಯ್ರ ಯೋಧರು. ೧. ಮಂಗಲ್ ಪಾಂಡೆ. ೨. ತಾತ್ಯಾ ಟೋಪೆ. ೩. ದಾಮೋದರ್ ಚಾಪೇಕರ್. ೪. ವಾಸುದೇವ್ ಚಾಪೇಕರ್. ೫. ಬಾಲಕÅಷ್ಣ ಚಾಪೇಕರ್. ೬. ಸತ್ಯೇಂದ್ರ ಕುಮಾರ್ ಬಸು. ೭. ಚಾರೂ ಚಂದ್ ಬೋಸ್. ೮. ಖುದೀರಾಮ್ ಬೋಸ್. ೯. ಮದನ್‍ಲಾಲ್ ಡಿಂಗ್ರಾ. ೧೦. ಮೇವಾ ಸಿಂಗ್. ೧೧. ಮಾಸ್ಟರ್ ಅಮೀರ್ ಚಂದ್. ೧೨. ಭಾಯಿ ಬಾಲ್‍ಮುಕುಂದ್. ೧೩. ಸರ್ದಾರ್ ಕರ್ತಾರ್‌ಸಿಂಹ ಸರಾಬಾ. ೧೪. ಸೋಹನ್ ಲಾಲ್ ಪಾಠಕ್. ೧೫. ಕನ್ಹಾಯಿಲಾಲ್ ದತ್ತ್. ೧೬. ಗೋಪಿ ಮೋಹನ್…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
January 25, 2008
ಬೆಂಗಳೂರಿನಲ್ಲಿ ಪ್ರತಿಸಲ ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಾಗಲೂ ಟಿಕೆಟ್ ನೂಕುನುಗ್ಗಲನ್ನು ತಪ್ಪಿಸಲು ಲಾಠಿಛಾರ್ಜ್ ಆಗುವುದು ಸಾಮಾನ್ಯ ಆಗಿಬಿಟ್ಟಿದೆ. ನೂರಾರು ಕೋಟಿ ಬೆಲೆಬಾಳುವ, ನಗರದ ಹೃದಯಭಾಗದಲ್ಲಿರುವ ಚಿನ್ನಸ್ವಾಮಿ ಸ್ಟೇಡಿಯಮ್ ಪೂರ್ಣಪ್ರಮಾಣದಲ್ಲಿ ಉಪಯೋಗಕ್ಕೆ ಬರುವುದೆ ಎರಡು-ಮೂರು ವರ್ಷಗಳಿಗೊಮ್ಮೆ. ಆಗಾಗ ಮತ್ತದೆ ಐದು ದಿನಗಳ ಬೋರಿಂಗ್ ಟೆಸ್ಟ್ ಕ್ರಿಕೆಟ್ - ರಣಜಿ ಪಂದ್ಯಗಳು ನಡೆಯುತ್ತವೇನೊ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾದ BCCI ನ ಮಡ್ಡ ತಲೆಗಳಿಗೆ…
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
January 25, 2008
ತರಲೆ(ಪ್ರಶ್ನೆ)ಗಳು...(೪) * ರವಿಯ ತಂದೆಗೆ ನಾಲ್ಕು ಜನ ಮಕ್ಕಳು... ಮಕ್ಕಳ ಹೆಸರು ರಂಗ, ರಾಜ, ರಾಮು... ಹಾಗದರೆ ಇನ್ನೊಬ್ಬನ ಹೆಸರೇನು.....? * ಗಡಿಯಾರದಲ್ಲಿ ಮಧ್ಯಾಹ್ನ 12 ಗಂಟೆಗೆ ಒಟ್ಟು ಸೇರಿದ ಎರಡು ಮುಳ್ಳುಗಳು ಪುನಃ ಒಟ್ಟಿಗೆ ಯಾವಾಗ ಸೇರುತ್ತದೆ.....?
ಲೇಖಕರು: sindhu
ವಿಧ: ಬ್ಲಾಗ್ ಬರಹ
January 25, 2008
ಓ ಇವತ್ತು ಈ ರಿಪೋರ್ಟು ರೆಡಿ ಮಾಡಬೇಕು. ಹಾಳಾದ್ದು ಗಣರಾಜ್ಯೋತ್ಸವ ಶನಿವಾರ ಬಂದ್ ಬಿಡ್ತು. ಒಂದು ರಜಾ ಮಿಸ್ಸಾಗೋಯ್ತು ಅಂದುಕೊಳ್ಳುತ್ತ ದಿನಚರಿ ಶುರುವಾಯಿತು. ಅಷ್ಟರಲ್ಲಿ ಹಿರಿಯ ಸಹೋದ್ಯೋಗಿಯೊಬ್ಬರು ಕ್ವಿಝ್ ಒಂದನ್ನ ಮುಂದಿಟ್ಟರು. ಎಲ್ಲರೂ ಗೊಣಗುತ್ತಲೇ ಕೈಗೆತ್ತಿಕೊಂಡೆವು. ಸ್ವತಂತ್ರ ಭಾರತದ ಬಗೆಗಿನ ಕೆಲವು ಪ್ರಶ್ನೆಗಳು. ಹೆಚ್ಚೂ ಕಡಿಮೆ ಎಲ್ಲವನ್ನೂ ನಾವು ಮಾಧ್ಯಮಿಕ ಶಾಲೆಯಲ್ಲಿ ಓದಿರಬಹುದಾದದ್ದು. ಯಾರಿಗೂ ೪ ಪ್ರಶ್ನೆಗಳಿಗಿಂತ ಹೆಚ್ಚಾಗಿ ಮುಂದೆ ಹೋಗಲಾಗಲಿಲ್ಲ. ಆ ನಾಲ್ಕರಲ್ಲೂ ಎರಡು…