ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 11, 2007
ಅವನು, ಇವನು , ಅವಳು, ಇವಳು ಇಂಥ ಶಬ್ದಗಳ ರೂಪಗಳನ್ನು ಇವತ್ತು ನೋಡೋಣ ಅಂವ /ಅಂವಾ ( ಇಲ್ಲಿ ಒಂದು ಅನುನಾಸಿಕ(?) ದ ಉಚ್ಚಾರ ಆಗುತ್ತದೆ ... ಹಾವು ಅನ್ನು ಉಚ್ಚಾರ ಮಾಡುವ ಹಾಗೆ ) - ಅವನು ಅವಂದು - ಅವನದು ಅವನ್‍ಹತ್ರ / ಅವನ ಕಡೆ - ಅವನ ಬಳಿ ಅಂವಗ - ಅವನಿಗೆ ಹೀಂಗS ಇಂವಾ , ಇವಂದು , ಇವನ್ ಹತ್ರ / ಇಂವಗ ಇತ್ಯಾದಿ ಇದೇ ರೀತಿ ಅಕಿ / ಆಕಿ - ಅವಳು ( --- ಆಕೆ ನೆನಪಿಸಿಕೊಳ್ಳಿ ) ಅಕೀದು /ಆಕೀದು , ಅಕೀ ಕಡೆ ಅಕೀಗೆ ಹೀಂಗS ಇಕಿ , ಇಕೀ ದು ., ಇಕೀ ಕಡೆ , ಇಕೀ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 11, 2007
ನಿನ್ನೊಂದಿಗಲ್ಲದೆ ಬದುಕಿನೊಂದಿಗೆ ನನ್ನದೇನೂ ತಕರಾರಿಲ್ಲ ಇಷ್ಟಕ್ಕೂ ನೀನಿಲ್ಲದೇ ಬದುಕು ಬದುಕೇ ಅಲ್ಲ ! ಮನಸ್ಸಿನಲ್ಲಿ ಹೀಗೊಂದು ವಿಚಾರ ಬರುತ್ತದೆ ... ನಿನ್ನ ಮಡಿಲಲ್ಲಿ ತಲೆಯನ್ನಿಟ್ಟು ಅತ್ತು ಬಿಡೋಣ ಅಂತ , ಅಳ್ತಾ ಇದ್ದು ಬಿಡೋಣ ಅಂತ . ಆದ್ರೆ ನಿನ್ನ ಕಣ್ಣಲ್ಲಾದರೂ ಕಂಬನಿಗೇನೂ ಬರ ಇಲ್ಲವಲ್ಲ ? ಇವತ್ತಿನ ರಾತ್ರಿ ಚಂದ್ರ ಮುಳಗದೇ ಇರಲಿ , ರಾತ್ರಿಯನ್ನು ತಡೆದುಬಿಡಬೇಕು ... ರಾತ್ರಿಯ ವಿಷಯ ಏನು , ಜೀವನ ಆದ್ರೂ ಇನ್ನೆಷ್ಟು ಬಾಕಿ ಉಳ್ದಿರೋದು ! ... ಇದು ಇಂದಿರಾಗಾಂಧಿ ಜೀವನ ಆಧಾರಿತ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 11, 2007
ನಿನ್ನೊಂದಿಗಲ್ಲದೆ ಬದುಕಿನೊಂದಿಗೆ ನನ್ನದೇನೂ ತಕರಾರಿಲ್ಲ ಇಷ್ಟಕ್ಕೂ ನೀನಿಲ್ಲದೇ ಬದುಕು ಬದುಕೇ ಅಲ್ಲ ! ಮನಸ್ಸಿನಲ್ಲಿ ಹೀಗೊಂದು ವಿಚಾರ ಬರುತ್ತದೆ ... ನಿನ್ನ ಮಡಿಲಲ್ಲಿ ತಲೆಯನ್ನಿಟ್ಟು ಅತ್ತು ಬಿಡೋಣ ಅಂತ , ಅಳ್ತಾ ಇದ್ದು ಬಿಡೋಣ ಅಂತ . ಆದ್ರೆ ನಿನ್ನ ಕಣ್ಣಲ್ಲಾದರೂ ಕಂಬನಿಗೇನೂ ಬರ ಇಲ್ಲವಲ್ಲ ? ಇವತ್ತಿನ ರಾತ್ರಿ ಚಂದ್ರ ಮುಳಗದೇ ಇರಲಿ , ರಾತ್ರಿಯನ್ನು ತಡೆದುಬಿಡಬೇಕು ... ರಾತ್ರಿಯ ವಿಷಯ ಏನು , ಜೀವನ ಆದ್ರೂ ಇನ್ನೆಷ್ಟು ಬಾಕಿ ಉಳ್ದಿರೋದು ! ... ಇದು ಇಂದಿರಾಗಾಂಧಿ ಜೀವನ ಆಧಾರಿತ…
ಲೇಖಕರು: girish.shetty
ವಿಧ: Basic page
October 11, 2007
ಓಡಿ, ಓಡೋಡಿ ಪೊದೆಗಳೆನ್ನದೆ ನುಸುಳಿ ಬಸವಳಿದು ಉಸ್ಸೆಂದ, ಬೆವರು ಮೈಯ ತುಂಬಾ ದಾಟಿ ಅಡ್ಡ ಗೋಡೆಯನು, ಕಾಡು ಗುಡ್ಡ ಮಲಗಿದ್ದವೆಲ್ಲ ಅಡ್ಡಡ್ಡ ಬಿಡುತ್ತಿಲ್ಲ, ಬೆನ್ನಟ್ಟಿ ಬರುತಿದೆ ನೆರಳದು, ಅಲ್ಲಲ್ಲ ಸಮಸ್ಯೆಯ ಉರುಳದು ಮುಂದೋಡುತಿರೆ ಅವನು ತಗ್ಗಿ ಬಗ್ಗಿ ಹಿಂದಿಂದ ಮುನ್ನುಗ್ಗಿ ಬರುತಿವೆ ಮುಗಿಲ ಕವಿದ ಕಾರ್ಮುಗಿಲು ಅವನ ಹಿಮ್ಮೆಟ್ಟಿಸಿ ಬೆತ್ತಲೆ ಕತ್ತಲಲೂ ಬರುತಿಹನು ಬೆನ್ನಟ್ಟಿಸಿ ಮುಗಿಲು ಮುಡಿದ ಚಂದ್ರ ನಿಂತು ಉಸಿರೆಳೆದ ಕೂತ, ಮಾತಿಲ್ಲದೆ ಹಾಗೆ ಬರಿದೆ ಇಲ್ಲ ನಿದ್ದೆ, ಸಮಯ ಮೈ,…
ಲೇಖಕರು: girish.shetty
ವಿಧ: Basic page
October 11, 2007
ಹುಡುಗಿ ಕಣ್ಣಂಚಿನಲೆ ಕೊಂದಳು ಹುಡುಗಿ ಕುಡಿ ನೋಟದ ಬಾಣವ ನನ್ನೆದೆಗೆ ಎಸೆದು ಮತ್ತೆ ಜೀವ ಬರಿಸಿದಳು ಬೆಡಗಿ ತುಟಿಯಂಚಿನ ನಗುವಿನಮೃತವ ಎರೆದು
ಲೇಖಕರು: girish.shetty
ವಿಧ: Basic page
October 11, 2007
ಭಾವನೆಗಳ ಕಾಮನಬಿಲ್ಲು ಕಾಯುತ್ತಿದ್ದವನ ಮನದ ತುಂಬಾ ಕಣ್ಣಲ್ಲಿ ಮೂಡಿ ಮರೆಯಾಗುತ್ತಿದೆ ಆಕೆಯದೇ ಬಿಂಬ ಈ ಹುಡುಗಿಯರೇ ಹೀಗೆ! ಕಾಡುವುದು, ಕಾಯಿಸುವುದು ಹುಡುಗರ ಕೆಣಕಲು ಕಣ್ಣಾಮುಚ್ಚಾಲೆ ಆಡುವುದು
ಲೇಖಕರು: anivaasi
ವಿಧ: ಬ್ಲಾಗ್ ಬರಹ
October 11, 2007
  ಬಿಸಿಲೇರುವವರೆಗೂನನ್ನ ನಲ್ಲನ ತೋಳುಗಳ ನಡುವೆಸರಸವಾಡಿ ಎದ್ದ ದಿನವೆಲ್ಲಾ ನಿದ್ದೆಗಣ್ಣು.ಕೂದಲ ಜಿಡುಕಲ್ಲಿ ಆಲಸಿ ಬೆರಳು.ಬಾಚಿ ಬಿಗಿದು ಕಟ್ಟಿದ ಕೂದಲ ಏಕಾಂಗಿ ಗೆಳತಿಏನೋ ನೆಪಮಾಡಿ ಸಿಡುಕುತ್ತಾಳೆ-ಎದುರಾಡಲಿಲ್ಲಎಂದಿನಂತೆ!
ಲೇಖಕರು: bvatsa
ವಿಧ: Basic page
October 10, 2007
ಏಕಾಂತದಲ್ಲೆಲ್ಲೋ.. ಕಾಡುವ ದನಿ.. ಯಾವುದೋ ಪಿಸುಮತು, ಮತ್ತಾವುದೋ ಸ್ವರ.. ಯಾರದೋ ಕೇಕೆ, ಮತ್ತಾರದೋ ಆಕ್ರಂದನ.. ಒಮ್ಮೆ, ಕಟ್ಟು ಬಿಚ್ಚಿದ ಅಶ್ವಗಳ ನಾಗಲೋಟದಂತೆ.. ಮತ್ತೊಮ್ಮೆ, ಯಾರೋ ಹಾಕಿದ ಲಯಬದ್ದ ತಾಳದಂತೆ.. ಎಷ್ಟೋ ಬಾರಿ.. ಮಲಗಿದ್ದಿದೆ, ಶಪಿಸಿ.. ಯಾವುದೀ ದರಿದ್ರ ದನಿಯೆಂದು.. ಬಹಳ ತಡವಾಯಿತೋ ಏನೋ.. ತಿಳಿದದ್ದು ಈ ರೀತಿ ವರ್ತಿಸುವ ಹೃದಯ, ನನ್ನಲ್ಲೇ.. ಇದೆಯೆಂದು..
ಲೇಖಕರು: ಕೇವೆಂ
ವಿಧ: ಚರ್ಚೆಯ ವಿಷಯ
October 10, 2007
ನನಗೆ ತಿಳಿದಿರುವಂತೆ ’ರಾಜೀನಾಮೆ’ ಉರ್ದು / ಪಾರ್ಸಿಯಿಂದ ಬಂದ ಒರೆ. ಆ ನುದಿಗಳಲ್ಲಿ ಈ ಪದದ ಅರ್ಥ -- ಒಡಂಬಡಿಕೆ ( agreement or treaty).ಆದ್ದರಿಂದ ಇದು ಆ ಕಾರಣದಿಂದಲೂ ತಪ್ಪು. ಉರ್ದುವಿನಲ್ಲಿ ಸರಿಯಾದ ಅರ್ಥ ಕೊಡುವ ಪದ " ಇಸ್ತೀಫಾ" .ಹಿಂದಿಯಲ್ಲಿ ಸಂಸ್ಕೃತದಿಂದ ಬಂದ ’ ತ್ಯಾಗ ಪತ್ರ" ಬಳಸುತ್ತಾರೆ. ಅಚ್ಚಕನ್ನಡದಲ್ಲಿ ಇದಕ್ಕೆ ಸರಿಯಾದ ಒರೆ ಇದೆಯೇ? ನನಗೆ ಹೊಳೆದದ್ದು-- ’ ಕಡೆಯೋಲೆ’ / ’ ತೊರೆದೋಲೆ’
ಲೇಖಕರು: poornimas
ವಿಧ: Basic page
October 09, 2007
ನಮ್ಮ ಮನೆ ****** ಹೀಗೆ ಇದ್ದರೆಷ್ಟು ಚೆನ್ನ ಒಂದು ಮನೆಯ ಚಿತ್ರಣ. ಬಾಳಬಂಡಿ ಪಯಣದಲ್ಲಿ ಇರದೆ ಯಾವ ತಲ್ಲಣ. ಹೊಳೆವ ಚುಕ್ಕಿಯ ಹೆಕ್ಕಿ ಕಟ್ಟಿದ ಹೆಬ್ಬಾಗಿಲ ತೋರಣ. ಏಳು ಬಣ್ಣದ ಇಂದ್ರಚಾಪದ ಕಮಾನು ಕಟ್ಟಿದ ಅಂಕಣ. ಮೊಲ್ಲೆ ಮಲ್ಲಿಗೆ ಜಾಜಿ ಸಂಪಿಗೆ ಪಾರಿಜಾತದ ಹಿತ್ತಲು. ತುಂಬುತಿಂಗಳು ಕ್ಷೀರಪಥದೊಳು ತೊಳೆದು ಇರುಳಿನ ಕತ್ತಲು. ಹಿರಿಯ ಕಿರಿಯರ ನಡುವೆ ಮಮತೆ ಒಲುಮೆಯ ಬಂಧನ. ಕಾಮಧೇನು ಕಲ್ಪವೃಕ್ಷ ಸೇರಿ ಸೊಬಗಿನ ನಂದನ -೦-