ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
October 03, 2007
ಈ ಬಾರಿಯ ವಿಚಿತ್ರಾನ್ನದಲ್ಲಿ, ಶ್ರೀವತ್ಸ ಜೋಷಿಯವರು ಸೊಳ್ಳಾಯಣ ವನ್ನು ಮುಂದಿಟ್ಟಿದ್ದಾರೆ. ರಾಮ ಇದ್ದದ್ದು ನಿಜವೋ ಸುಳ್ಳೋ, ಆದರೆ ರಾಮಾಯಣ ಇರುವುದಂತೂ ನಿಜ. ರಾಮನನ್ನು ಕಂಡವರು ಈಗ ಯಾರೂ ಇಲ್ಲ. ಆದರೆ, ಸೊಳ್ಳೆಗಳನ್ನು ಕಾಣದವರುಂಟೇ? ಇದ್ದನೋ ಇಲ್ಲವೋ ತಿಳಿಯದ ಅಂತಹ ರಾಮನಂತಹ ರಾಮನಿಗೆ, ವಾಲ್ಮೀಕಿ ೨೪೦೦೦ ಶ್ಲೋಕಗಳ ರಾಮಾಯಣವನ್ನು ರಚಿಸಿದ ಮೇಲೆ, ಸರ್ವವ್ಯಾಪಿ ಸೊಳ್ಳೆಗಳ ಮೇಲೆ್ ಒಂದು ಮಹಾಕಾವ್ಯ ಇಲ್ಲದಿದ್ದರೆ, ಒಂದು ಕಾದಂಬರಿ ಇಲ್ಲದಿದ್ದರೆ, ಒಂದು ಅಂಕಣಬರಹವನ್ನಾದರೂ ಬರೆಯಬೇಕೆಂಬ ಬಯಕೆ…
ಲೇಖಕರು: Ennares
ವಿಧ: Basic page
October 03, 2007
( ಮೂಲ - ಇಂಗ್ಲೀಷ್‍ನಲ್ಲಿ ಶ್ರೀ ಎಸ್. ಆರ್.ಪಂಢರಿನಾಥ್ ರವರ ಲೇಖನದ ಭಾವಾನುವಾದ) - ನವರತ್ನ ಸುಧೀರ್ ಪಂದ್ಯ ಮುಗಿದ ನಂತರ, ರವಿ ಶಾಸ್ತ್ರಿ ಪ್ರೆಸೆಂಟೇಷನ್ ಸಮಯದಲ್ಲಿ ಧೋಣಿಯನ್ನು ಸಂದರ್ಶನಕ್ಕಾಗಿ ಆಮಂತ್ರಿಸುತ್ತಾರೆ. ರ: ಧೋಣಿ, ವಿಶ್ವ ಕಪ್ ಗೆದ್ದ ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆಗಳು. ನೀವುಗಳು ನಿಜಕ್ಕೂ ಉಗುರುಕಚ್ಚುವಷ್ಟು ರೋಚಕ ರೀತಿಯಲ್ಲಿ ಪಂದ್ಯ ಗೆದ್ದಿರಿ. ನಿಮ್ಮ ಸಂತೋಷವನ್ನು ನಮ್ಮೊಡನೆ ಹಂಚಿಕೊಳ್ಳಿ ಬನ್ನಿ!” ಧೋ: ಧನ್ಯವಾದ ರವಿ, ಪಂದ್ಯದ ಕೊನೆ…
ಲೇಖಕರು: poornimas
ವಿಧ: Basic page
October 03, 2007
ಬಾಲ್ಯದ ಸೊಗಸು ********** ಹೋಗದೇಕೆ ನನ್ನ ಬದುಕು ಮರಳಿ ಮತ್ತೆ ಬಾಲ್ಯಕೆ ? ಹೊಳೆಯದೇಕೆ ಚುಕ್ಕಿ ಬೆಳಕು ಮುಗ್ಧ ಮನದ ಲಾಸ್ಯಕೆ? ಅರಳದೇಕೆ ಮೊಲ್ಲೆ ಮೊಗ್ಗು ಜಡೆಗೆ ಮಾಲೆಯಾಗಲು? ನುಡಿಯದೇಕೆ ತಾಯಿ ಕೊರಳು ಜೋಜೋ ಲಾಲಿ ಹಾಡಲು? ಉಲಿಯದೇಕೆ ಗೆಜ್ಜೆ ಪಲುಕು ಊರಿ ನಡೆವ ಹೆಜ್ಜೆಗು? ಒಲಿಯದೇಕೆ ಮಮತೆ ಮೆಲುಕು ಹಠವ ಹಿಡಿದ ರಚ್ಚೆಗು? ರುಚಿಸದೇಕೆ ತಿಂಡಿ ಹಲವು ತಾಯಿ ಗುಟುಕ ಸೊಗಸಿಗೆ? ಚಿಗುರದೇಕೆ ಮತ್ತೆ ಚೆಲುವು ಸುಕ್ಕು ಬಿದ್ದ ಬದುಕಿಗೆ? -೦-
ಲೇಖಕರು: ismail
ವಿಧ: Basic page
October 02, 2007
ಗೆಳೆಯರೆ, ತಂತ್ರಜ್ಞಾನದ ಸಾಧ್ಯತೆಗಳಿಂದಾಗಿ ಜಗತ್ತು ಕಿರಿದಾಗುತ್ತಿದೆ. ಕನ್ನಡ ಈಗ ಕರ್ನಾಟಕದಲ್ಲಷ್ಟೇ ಅಲ್ಲದೆ ಸಾಮಾನ್ಯ ಕನ್ನಡಿಗನು ಕೇಳಿಯೂ ಅರಿಯದ ಅನೇಕ ದೇಶಗಳಲ್ಲಿ ಅನುರಣಿಸುತ್ತಿದೆ. ಅಂತರ್ಜಾಲದ ಮೂಲಕ ಕನ್ನಡ ವಿಶ್ವಾತ್ಮಕ ದೇಶ ಭಾಷೆಯೂ ಆಗಿಬಿಟ್ಟಿದೆ. ಈ ಪ್ರಕ್ರಿಯೆಗಳು ತೆರೆದಿಟ್ಟಿರುವ ಸಾಧ್ಯತೆಗಳ ಜತೆ ಜತೆಯಲ್ಲೇ ಕನ್ನಡ ಭಾಷೆ, ಅದರ ಅಕ್ಷರಗಳಿಗಿರುವ ಅನನ್ಯತೆಯನ್ನು ಕಿತ್ತುಕೊಳ್ಳುವ ಪ್ರಯತ್ನಗಳೂ ಚಾಲನೆಯಲ್ಲಿವೆ. ಇದಕ್ಕೆ ಉತ್ತಮ ಉದಾಹರಣೆ ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಆಪರೇಟಿಂಗ್…
ಲೇಖಕರು: venkatesh
ವಿಧ: Basic page
October 02, 2007
ಆಕ್ಟೋಬರ್ ತಿಂಗಳ, 'ಮಯೂರ,' ಮಾಸಪತ್ರಿಕೆಯಲ್ಲಿ " ವಿಹಾರಿ" ಯವರು ಬರೆದ ಲೇಖನ, ಇಂದಿಗೆ ಬಹುಪ್ರಸ್ತುತವಾದ ಲೇಖನ. [ಪುಟ- ೧೨೨.] ಓದುಗರ ಗಮನಕ್ಕಾಗಿ, ಅದನ್ನು ಮತ್ತೆ ಪ್ರಸ್ತುತ ಪಡಿಸುತ್ತಿದ್ದೇನೆ. ಕೆಳಗಿನ ವಿಶಿಷ್ಟ ಕವನವನ್ನು ಬರೆದವರು, ನಮ್ಮ ಪ್ರಖ್ಯಾತ ನಾಟಕಕಾರರಾದ ಕೈಲಾಸಂರವರು. ನಾಟಕಗಳನ್ನೇ ಅತಿಯಾಗಿ ಬರೆದ ಅವರು, ಕವನವನ್ನು ಬರೆದಿರುವುದು ಅಪರೂಪ. ಅದನ್ನು ಹೆಚ್ಚಾಗಿ ಯಾರೂ ಗಮನಿಸಿಲ್ಲ. ಆದರೆ, 'ವಿಹಾರಿ' ಯವರ ಕಣ್ಣಿನಿಂದ ಅದು ತಪ್ಪಿಸಿಕೊಂಡುಹೋಗಿಲ್ಲ. ನಮ್ಮಲ್ಲಿ ಕೆಲವರು,…
ಲೇಖಕರು: narendra
ವಿಧ: ಬ್ಲಾಗ್ ಬರಹ
October 01, 2007
ಅದು ತೀರ ಹಳ್ಳಿಯೇನೂ ಅಲ್ಲ. ಉಡುಪಿಗೂ ಕುಂದಾಪುರಕ್ಕೂ ನಟ್ಟ ನಡುವೆ ಇದ್ದ ಊರು. ಗುಂಡ್ಮಿ, ಪಾಂಡೇಶ್ವರ, ಐರೋಡಿ ಎಂದೆಲ್ಲ ನಾಲ್ಕಾರು ಗ್ರಾಮಗಳು ಸೇರಿ ಒಂದು ಊರು ಆದ ಹಾಗಿತ್ತದು. ನನ್ನ ಬಾಲ್ಯದ ಬಹಳ ಮುಖ್ಯ ಎನ್ನಬಹುದಾದ ದಿನಗಳನ್ನೆಲ್ಲ ನಾನು ಕಳೆದಿದ್ದು ಇಲ್ಲೇ. ನಾನು ಹೈಸ್ಕೂಲಿಗೂ ಬರುವ ಮೊದಲಿನ ಕೆಲವು ನೆನಪುಗಳನ್ನು ಹೇಳುತ್ತೇನೆ. ನಮ್ಮ ಮನೆಗೆ ಹತ್ತಿರದಲ್ಲೇ ಅಮ್ಮನ ಮನೆ ಎಂದು ನಾವೆಲ್ಲ ಕರೆಯುತ್ತಿದ್ದ ಒಂದು ಮನೆಯಿತ್ತು. ಊರಿಗೇ ಬಹುಷಃ ಎರಡನೆಯ ಅಥವಾ ಮೂರನೆಯ ಶ್ರೀಮಂತ ಕುಟುಂಬ…
ಲೇಖಕರು: narendra
ವಿಧ: Basic page
October 01, 2007
`ಬಿಳಿಯ ಚಾದರ' ಗುರುಪ್ರಸಾದ್ ಕಾಗಿನೆಲೆಯವರ ಹೊಸ ಮತ್ತು ಮೊದಲ ಕಾದಂಬರಿ. ಇದನ್ನು ಧಾರವಾಡದ ಮನೋಹರ ಗ್ರಂಥ ಮಾಲೆಯವರು ಹೊರತಂದಿದ್ದಾರೆ. ಕಾಗಿನೆಲೆಯವರು ತಮ್ಮ ಕಾದಂಬರಿಯಲ್ಲಿ ಇಂಗ್ಲೀಷ್‌ಗೆ ಪರ್ಯಾಯವಾಗಿ ಕೆಲವು ಹೊಸ ಕನ್ನಡ ಶಬ್ದಗಳನ್ನು ಬಳಸಿದ್ದಾರೆ. ಹಾಗೆ ಮಾಡಿರುವುದಕ್ಕೆ ತಮಗಿರುವ ನಿರ್ದಿಷ್ಟ ಉದ್ದೇಶಗಳ ಕುರಿತೂ ಹೇಳಿದ್ದಾರೆ. ಹಾಗೆಯೇ ತಮ್ಮ ಮುನ್ನುಡಿಯಲ್ಲಿ ಅನಂತಮೂರ್ತಿಯವರು ಕಾದಂಬರಿಯ ಉಜ್ವಲ ಅಂಶಗಳತ್ತ ಗಮನ ಸೆಳೆಯುತ್ತಲೇ ಈ ಭಾಷಾಪ್ರಯೋಗದ ಪರಿಣಾಮದ ಕುರಿತೂ ಬರೆದಿದ್ದಾರೆ.…
ಲೇಖಕರು: ASHOKKUMAR
ವಿಧ: Basic page
October 01, 2007
(ಇ-ಲೋಕ-42)(01/10/2007) UDAYAVANI ಮೈಕ್ರೊಸಾಫ್ಟ್ ಕಂಪೆನಿ ಜನರು ತಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದುವ ಇ-ಮೇಲ್ ವಿಳಾಸವನ್ನು ಹೊಂದುವ ಅವಕಾಶ ನೀಡಿದ್ದಾರೆ.ಈಗ ashok567@yahoo.com ಅಂತಹ ಸಾಮಾನ್ಯ ಅಂಚೆ ವಿಳಾಸ ಹೊಂದುವ ಬದಲು ವ್ಯಕ್ತಿಯ ಆಸಕ್ತಿ,ವಾಸಿಸುವ ಸ್ಥಳ,ಮೆಚ್ಚುವ ವ್ಯಕ್ತಿ,ತಾನು ಯಾರು ಎಂದು ಸೂಚಿಸುವ ಮಿಂಚಂಚೆ ವಿಳಾಸವನ್ನು ಹೊಂದಲು ಸಾಧ್ಯ.ಸುಮಾರು ಇನ್ನೂರ ಐವತ್ತು ವಿವಿಧ ಆಯ್ಕೆಗಳು ಉಚಿತವಾಗಿ ಲಭ್ಯ.coolhotmail.com ಅಂತರ್ಜಾಲ ತಾಣದ ಮೂಲಕ ಈ ಸೌಲಭ್ಯವನ್ನು…
ಲೇಖಕರು: nagashree
ವಿಧ: ಬ್ಲಾಗ್ ಬರಹ
October 01, 2007
ಜೀವ ಕೊಟ್ಟೆ ಸಮಯ ಕೊಟ್ಟೆ ನನ್ನ್ದದಾದ ಆ ಎಲ್ಲ ಕನಸನೂ ಬಿಟ್ಟೆ ಅ೦ಬರದ ಮೇಲೆ ಕೂರುವ ಆಸೆ ಅಷ್ಟು ಬೇಗ ತೀರದು ಮುಳ್ಳಿನ ಏಣಿ ಹತ್ತಿ ಕುಳಿತೆ ಅತ್ತಿತ್ತ ಕಣ್ಣಾಡಿಸಿದೆ ಅದೆಷ್ಟು ಸು೦ದರ ನೋಟ ನೋವೇ ಇಲ್ಲದ ನಗರ ಎ೦ದನಿಸುತ್ತದೆ ಹೊರನೋಟಕ್ಕೆ ಹತ್ತಿಯ ಹಾಸಿಗೆ ಎಲ್ಲೆಡೆ ಕೆಲಸವಿಲ್ಲ ಕಾರ್ಯವಿಲ್ಲ,ದಣಿವ ಮಾತೇ ಇಲ್ಲ ಆದರೆ ಮೈಮೇಲೆ ಹೊದೆದ ಚಿನ್ನದ ಉಡುಪಿನ ಭಾರ ಮಾತ್ರ ಕೆಲವೊಮ್ಮೆ ದೇಹವನ್ನೇ ಹರಿದು ಬಿಟ್ಟೀತೇನೋ ಏನ್ನುವಷ್ಟು ಮುಜುಗರ ಆ ಉಡುಪಿನ೦ತೆ ನನ್ನ ಭಾವನೆಗಳೂ ಚಿನ್ನದ ತಗಡಾಗಿಬಿಟ್ಟರೆ ಮೋಜೆ…
ಲೇಖಕರು: sankul
ವಿಧ: ಬ್ಲಾಗ್ ಬರಹ
October 01, 2007
ರಾಮ ಮತ್ತು ಹನುಮಂತನ ನಡುವೆ ಇತ್ತೀಚೆಗೆ ನಡೆದ ಒಂದು ಸಂಭಾಷಣೆ. ಬಹಳಷ್ಟು ಹೊತ್ತು 'ರಾಮ ಸೇತು'ವನ್ನು ಅವಲೋಕಿಸಿದ ನಂತರ ರಾಮನೆಂದ "ಹನುಮಂತ, ಬಹಳಷ್ಟು ಶತಮಾನಗಳ ಹಿಂದೆ ನೀನು ಮತ್ತು ನಿನ್ನ ವಾನರ ಸೈನ್ಯ ಸೇರಿ ಎಷ್ಟು ಪರಿಶ್ರಮದಿಂದ ಮತ್ತು ಶ್ರದ್ಢೆಯಿಂದ ಈ ಸೇತುವೆಯನ್ನು ನಿರ್ಮಿಸಿದ್ದಿರಿ. ಹವಾಮಾನ ವೈಪರಿತ್ಯ ಮತ್ತು ಭೂ ಬದಲಾವಣೆಯನ್ನು ಈ ಸೇತುವೆ ಇಷ್ಟೊಂದು ಶತಮಾನಗಳಿಂದ ತಡೆದುಕೊಂಡಿದ್ದೆ ಒಂದು ಅಸಾಮಾನ್ಯ ಸಂಗತಿಯಾಗಿದೆ. ಇತ್ತೀಚೀನ ಮತ್ತು ಅತ್ಯಂತ ಮುಂದುವರೆದ…