ವಿಧ: ಕಾರ್ಯಕ್ರಮ
November 07, 2007
ಮಾನ್ಯರೆ,
ಕನ್ನಡ ಸ೦ಘ,ಮೊವಾ೦ಜ ,ತಾ೦ಜಾನಿಯದವರ ವತಿಯಿ೦ದ ಆಚರಿಸಲ್ಪಟ್ಟ ಕನ್ನಡ ರಾಜ್ಯೋತ್ಸವದ ವಿವರಣೆ.ದಿನಾ೦ಕ 4.11.2007 ರ ಭಾನುವಾರ ಸ೦ಜೆ 7 ಘ೦ಟೆಗೆ ಕಾರ್ಯಕ್ರಮ ಪ್ರಾರ೦ಭವಾಯಿತು.ಕಾರ್ಯಕ್ರಮವನ್ನ ಎಲ್ಲಾದರು ಇರು ಎ೦ತಾದರು ಇರು ಎನ್ನುವ ನಾಡಗೀತೆಯನ್ನ ಶ್ರೀ ಗಣೇಶ್ ಬಿಜುರ್ ಹಾಡುವುದರೊ೦ದಿಗೆ ಪ್ರಾರ೦ಬಿಸಿದೆವು.ನ೦ತರ ಕನ್ನಡ ಜ್ಯೋತಿಯನ್ನ ಹಚ್ಹಲಾಯಿತು.
ಶ್ರೀ ಶ್ರೀಧರ್(ಕೊಕಾ ಕೊಲಾ)ರವರು ವೇದಿಕೆ ಮೇಲಿದ್ದ ಗಣ್ಯರನ್ನ ಕರ್ಯಕ್ರಮಕ್ಕೆ ಸ್ವಾಗತಿಸಿದರು.
ಕನ್ನಡ ರಾಜ್ಯೋತ್ಸವದ ಮಹತ್ವವನ್ನ…
ವಿಧ: ಬ್ಲಾಗ್ ಬರಹ
November 07, 2007
ಪ್ರಮಾಣ ಕನ್ನಡದ ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು ’ಇ’ ದಿಂದ ಕೊನೆ ಆಗುತ್ತವೆ
ಉದಾ: ಶಾಲೆ - ಸಾಲಿ
ಮನೆ - ಮನಿ
ಆನೆ - ಆನಿ
ರಾಟೆ - ರಾಟಿ
ಇತ್ಯಾದಿ
ಎಲ್ಲ ಶಬ್ದಗಳೂ ಈ ತರ ಆಗ್ತಾವ ಅಂತ ಅಲ್ಲ ;
ಕಡೆಯ .... ಕಡೀ ಆದರೂ
ಕಡೆ ... ಕಡೆ ಎಂದೇ ಇರುವದು ..
ನಿಂ ಕಡೆ .. (ನಿಮ್ಮ ಹತ್ರ .. ನಿಮ್ಮ ಭಾಗದಲ್ಲಿ…
ವಿಧ: ಬ್ಲಾಗ್ ಬರಹ
November 07, 2007
ಪ್ರಮಾಣ ಕನ್ನಡದ ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು ’ಇ’ ದಿಂದ ಕೊನೆ ಆಗುತ್ತವೆ
ಉದಾ: ಶಾಲೆ - ಸಾಲಿ
ಮನೆ - ಮನಿ
ಆನೆ - ಆನಿ
ರಾಟೆ - ರಾಟಿ
ಇತ್ಯಾದಿ
ಎಲ್ಲ ಶಬ್ದಗಳೂ ಈ ತರ ಆಗ್ತಾವ ಅಂತ ಅಲ್ಲ ;
ಕಡೆಯ .... ಕಡೀ ಆದರೂ
ಕಡೆ ... ಕಡೆ ಎಂದೇ ಇರುವದು ..
ನಿಂ ಕಡೆ .. (ನಿಮ್ಮ ಹತ್ರ .. ನಿಮ್ಮ ಭಾಗದಲ್ಲಿ…
ವಿಧ: Basic page
November 06, 2007
ಇದೇ ೦೮.೧೧.೦೭ ರ ರಾತ್ರಿ ೯.೩೦ ನಿಮಿಷಕ್ಕೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಬಿ.ಆರ್.ಲಕ್ಶ್ಮಣರಾವ್ ಹಾಗೂ ಕುಮಾರಿ ಸುಪ್ರಿಯಾ ಆಚಾರ್ಯ ಅವರು ಭಾಗವಹಿಸಲಿದ್ದಾರೆ. ಬಿ.ಆರ್.ಎಲ್ ಅವರು ತಮ್ಮ ಹಾಡುಗಳನ್ನು ಸ್ವಯಂ ಹಾಡಲಿದ್ದಾರೆ. ಅವರೊಡನೆ ಧ್ವನಿಗೂಡಿಸಲಿದ್ದಾರೆ ಸುಪ್ರಿಯಾ ಅವರು. ನೆಪೋಲಿ ಬಾರಿನಲ್ಲಿ ಗೋಪಿ, ಅಮ್ಮನ ಗಾಳಕ್ಕೆ ಸಿಕ್ಕ ಗೋಪಿ, ಹಳೇ ಸ್ಕೂಟರನ್ನೇರಿ ಹೊರಟ ಮಧ್ಯಮವರ್ಗದ ದಂಪತಿಗಳ ಹಾಸ್ಯದ ಲೇಪನ ಹೊತ್ತ ವಿಷಾಧ ಗೀತೆಗಳನ್ನು ಕೇಳಲು ಮರೆಯದಿರಿ. ಇದು ದೀಪಾವಳಿಯ ವಿಶೇಷ…
ವಿಧ: ಬ್ಲಾಗ್ ಬರಹ
November 06, 2007
ಹೀಗೆ, ಅಮ್ಮನ ಬಗ್ಗೆ ಒಂದು ಕವನ ಬರೀಬೇಕು ಅಂತ ಶುರು ಆಗಿ, ಅದೇಕೋ ಸ್ವಲ್ಪ ಪದಗಳ ಜೊತೆ ಆಟ ಆಡೋ ಮನಸಾಗಿ ಈ ಕವಿತೆ ಬರೆದಿದ್ದೇನೆ.
ಈ ಕವನದ ವಿಶೇಷ ಏನೆಂದರೆ, ಈ ಕವನದ ಶೀರ್ಷಿಕೆಯಲ್ಲಿ ತಪ್ಪಿ ಹೋದ ಒಂದು ಅಕ್ಷರ, ಕವನದ ಪ್ರತಿ ಪದದಲ್ಲೂ ಪದೇ ಪದೇ ಇಣುಕಿ ಹಾಕುತ್ತೆ :-).
------------------
ಮ್ಮ.
ಅಪರಿಮಿತ ಅಕ್ಕರೆಯ,
ಅನ್ವರ್ಥವೇ..
ಅಮ್ಮ.
ಅನ್ಯಾಯವ ಅರಿಯದ,
ಅನುರಕ್ತೆ..
ಅಮ್ಮ.
ಅದೆಷ್ಟೋ ಅಸಹನೆಗಳ,
ಅದುಮಿಡಬಲ್ಲಳು..
ಅಮ್ಮ.
ಅರೆಕ್ಷಣದ ಅಗಲಿಕೆಯನೂ,
ಅನುಭವಿಸಳು..
ಅಮ್ಮ.
ಅಸಾಧ್ಯ…
ವಿಧ: Basic page
November 06, 2007
ಉದಯವಾಣಿ
(ಇ-ಲೋಕ-47)(6/11/2007)
ತರಗತಿಯಲ್ಲಿ ಕೆಲಸ ಕೊಟ್ಟರೆ,ಅಂತರ್ಜಾಲದ ಪುಟಗಳನ್ನು ಜಾಲಾಡಿ ಕೆಲಸ ಪೂರೈಸುವ ಚಾಳಿ ಇಂದು ಸಾಮಾನ್ಯ.ನ್ಯೂಯಾರ್ಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಈ ಅಡ್ಡಹಾದಿಗೆ ಮದ್ದರೆಯಲು ಹೊಸ ಉಪಾಯ ಹುಡುಕಿದ್ದಾರೆ.ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಮಾತಿನಂತೆ ಅವರು ಮುಕ್ತ ವಿಶ್ವಕೋಶ ವಿಕಿಪೀಡಿಯಾದಲ್ಲಿ ತಮ್ಮ ಲೇಖನ ಬರೆದು ಪ್ರಕಟಿಸಲು ವಿದ್ಯಾರ್ಥಿಗಳಿಗೆ ಪಂಥಾಹ್ವಾನ ನೀಡುತ್ತಿದ್ದಾರೆ.ಕೊನೆ ಪಕ್ಷ ಇರುವ ಲೇಖನವನ್ನು ತಿದ್ದಿ…
ವಿಧ: Basic page
November 06, 2007
ಮಗು - ನಗು
*********
ಮಗುವೆ ನೀನು ನಗುತಲಿರಲು
ಗೆಜ್ಜೆ ಘಲಿರು ಉಲಿಯುತಿರಲು
ಗಿಲಕಿ ಗಿಲಿರು ಗೀತವಿರಲು
ಬದುಕು ಬೆಳಕು ಬೆಳದಿಂಗಳು.
ಕಣ್ಣಿನಂದ ನೋಟ ಹೊಳಪು
ಕೆನ್ನೆ ನೋಡಿ ಎಷ್ಟು ನುಣುಪು!
ಕಾಲು ಬಡಿವ ಆಟ ಹುರುಪು
ಮುಗ್ಧ ಮನವು ಹಾಲು ಬಿಳುಪು.
ಅಂಬೆಗಾಲ ನಂದಲಾಲ
ಬೆಣ್ಣೆ ಮೆದ್ದ ತುಂಟಬಾಲ
ಕಣ್ಣಲೇಕೆ ನೀರ ಜಾಲ?
ಕೊಡಲೊಲ್ಲಳೆ ತಾಯಿ ಹಾಲ?
ಬೆಣ್ಣೆಗೆನ್ನೆ ಹಾಲುಗಲ್ಲ
ಜೇನುಹೊಳೆಯು ತುಟಿಯಲೆಲ್ಲ
ಎಂಥ ಸೊಗಸು ಕಾಣಿರೆಲ್ಲ
ಸುಳ್ಳು ಸುಳ್ಳೇ ಅಳುವ ಮಳ್ಳ.
ಬೊಚ್ಚುನಗು ಬಾಯಿತುಂಬ…
ವಿಧ: ಬ್ಲಾಗ್ ಬರಹ
November 06, 2007
ನನ್ನ ಹ್ರದಯ ಬರಿದ್ದಾಗಿದದ್ದಾಗ ಭಾರವಾಗಿತ್ತು.
ಅದರೇ ನೀ ಬಂದಮೇಲೆ ಹಗುರಾಯತ್ತು...
ವಿಧ: ಬ್ಲಾಗ್ ಬರಹ
November 06, 2007
ಹೀಗೆ ಮೊನ್ನೆ ಬಸ್-ನಲ್ಲಿ ಹೋಗ್ತಾ ಇರ್ಬೇಕಾದ್ರೆ ಒಂದು ಗೋಡೆಯ ಮೇಲೆ ಹೀಗೆ ಬರೆಯಲಾಗಿತ್ತು..."ಎದೆಯುಬ್ಬಿಸಿ ಹೇಳು, ನಾನೊಬ್ಬ ಕನ್ನಡಿಗ" ಅಂತ...ಅದನ್ನೋದಿದ ಕ್ಷಣ ನನಗನ್ನಿಸಿದ್ದು ಹೀಗೆ...
ಎದೆಯುಬ್ಬಿಸಲಿ ಹೇಗೆ?ಆಗಿರುವಾಗ ನಾನೊಬ್ಬನೆ;
ಎದೆಯುಬ್ಬಿಸಲಿ ಹೇಗೆ?ನನ್ನ ಮನೆಯಲ್ಲಿ ಪರಕೀಯ ನಾನಾಗಿರುವಾಗ;
ಎದೆಯುಬ್ಬಿಸಲಿ ಹೇಗೆ?ಮನೆಯವರೆಕಾಲೆಳೆಯುತಿರುವಾಗ;
ಎದೆಯುಬ್ಬಿಸಲಿ ಹೇಗೆ?ನಮ್ಮ ಮನೆಯೆಒಡೆದು ಹೋಗುತಿರುವಾಗ;
ಎದೆಯುಬ್ಬಿಸಲಿ ಹೇಗೆ?ಉಪ್ಪುತಿಂದ ಮನೆಗೆಕೇಡು ಬಗೆಯುವವರಿರುವಾಗ;…
ವಿಧ: Basic page
November 06, 2007
ತನ್ನದಲ್ಲದ ತಪ್ಪಿಗೆ ನಿರ್ದೋಶಿಯೊಬ್ಬನನ್ನು ಜೈಲಿಗೆ ಎಳೆದುಕೊಂಡು ಹೋಗೋದೆಲ್ಲ ಫಿಲ್ಮುಗಳಲ್ಲಿ ನೋಡಿರುತ್ತೀರಿ. ನಿಜಸ್ಥಿತಿ ಎಷ್ಟು ಕೆಟ್ಟದಿರಬಹುದು ಎಂಬುದರ ಅರಿವು ಪರದೆಯ ಮೇಲಿನ ಕಥೆ ನೋಡಿಯೂ ಆಗುವುದು ಕಡಿಮೆ.
ಟೈಮ್ಸ್ ಆಫ್ [:http://timesofindia.indiatimes.com/Wrong_man_jailed_for_50_days/articleshow/2513737.cms|ಇಂಡಿಯಾದ ಈ ವರದಿ ಓದಿ.]
ತನ್ನದಲ್ಲದ ತಪ್ಪಿಗೆ ಬೆಂಗಳೂರಿನ ಇಂಜಿನೀಯರನ್ನು ಇದೇ ಆಗಸ್ಟಿನಲ್ಲಿ ಪೋಲೀಸರು ಪುಣೆಗೆ ಎಳೆದುಕೊಂಡು ಹೋಗಿ ಅಲ್ಲಿ ೫೦…