ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 05, 2007
ಶಿವಾಜಿ ಒಂದು ಸಲ ಹಂಪೆಯ ಸುತ್ತಲ ಪ್ರದೇಶಕ್ಕೆ ಭೆಟ್ಟಿ ಕೊಟ್ಟನು . ಈ ಭಾಗದಲ್ಲಿ ಅರಾಜಕತೆ ಇತ್ತು . ಆಗ ಜನರು ಅವನನ್ನು ಈ ಭಾಗದ ಆಡಳಿತ ವಹಿಸಿಕೊಳ್ಳಲು ಕೇಳಿಕೊಳ್ಳುವರು . ಅವನು ಅದೇಕೋ ಒಪ್ಪುವದಿಲ್ಲ . ಬಹುಶ: ಇದು ಬೆಳವಡಿ ಇರಬೇಕು ...ನಾನು ಓದಿದ್ದು ನನಗೆ ಸರಿಯಾಗಿ ನೆನಪಿಲ್ಲ . ... ಅಲ್ಲಿ ಹಾದು ಹೋಗುವಾಗ ಅವರೂ ಸ್ವಾಗತಿಸಿ ... ಗೌರವಿಸುವರು ... ಆದರೆ ... ಶಿವಾಜಿಯ ಸಂಗಡಿಗರು ಸ್ಥಳೀಯರನ್ನು ಕೆಣಕಿ ಸ್ವಲ್ಪ ಗೊಂದಲ ಉಂಟಾಗುವದು . ಅದೇನು ಅಂತ ನೋಡಿ ಬಗೆ ಹರಿಸಲು ಹೋದ ರಾಜನನ್ನು…
ಲೇಖಕರು: vijayamma
ವಿಧ: ಬ್ಲಾಗ್ ಬರಹ
October 05, 2007
ಭೃಷ್ಟಾಚಾರ ನಿರ್ಮೂಲನೆ,ಸ್ವಚ್ಛ ಆಡಳಿತ,ರೋಟಿ,ಕಪ್ಡಾ,ರೋಡ್,ಮಕಾನ್,ಗರೀಬೀ ಹಟಾವೊ,....ಇತ್ಯಾದಿ,ಇತ್ಯಾದಿ.ಎಷ್ಟೊಂದು ಬಣ್ಣಬಣ್ಣದ ಮಾತುಗಳನ್ನು 'ಜನತೆಗೆ' ಕೊಟ್ಟ ಕಾಂಗ್ರೆಸ್, ಬಿ.ಜೆ.ಪಿ.,ಪಕ್ಷಗಳ ದೊಡ್ಡದೊಡ್ಡ ಲೀಡರುಗಳು ತಮ್ಮ ತಮ್ಮ ಮಾತು ಉಳಿಸಿಕೊಂಡಿದ್ದಾರೆಯೆ? ಸ್ವಾಮಿ,ಕುಮಾರ ರಾಜಕೀಯದಲ್ಲಿ ಇನ್ನೂ ಬಚ್ಚಾ."ಜನತೆಗೆ"ಅಲ್ಲಾ,ಏನು ಒಂದು ಬಿ.ಜೆ.ಪಿ.,ಗೆ ಕೊಟ್ಟ ಮಾತು ತಪ್ಪಿದ್ದು ಅಷ್ಟೆ. ಅದಕ್ಕೆ ಇಲ್ಲಿಂದ ದೆಹಲಿಯವರೆಗೂ ಗಲಾಟೆ ಎಬ್ಬಿಸಿದಾರಲ್ಲಾ...ನ್ಯಾಯವಾ?
ಲೇಖಕರು: srinivasps
ವಿಧ: Basic page
October 05, 2007
ಮುಗಿಲು ಬಾನು-ಆಗಸ-ಮುಗಿಲು ನಿನಗಿದೆ ಹೆಸರಲೂ ವಿವಿಧತೆ, ನಿನ್ನ ಗುಣದಂತೆ... ಯಾರು ಬಣ್ಣ ತುಂಬುವರೋ ನಿನಗೆ ನಸು ಕೆಂಪು-ತುಸು ಹಳದಿ-ತಿಳಿ ನೀಲಿ ರಾತ್ರಿಯಾಗಲು ನೀನಾಗುವೆ, ಬೆಳ್ಳಿ ಚುಕ್ಕಿಯ ರಂಗೋಲಿ... ಕ್ಷಣ ಕ್ಷಣವು ಹೊಸ ರಂಗು ಅದೇನು ಚತುರ ಕಲೆ! ಸದಾ ಮಾಡುವೆ ದಂಗು! ದಿನ ದಿನವು ಬಗೆ ಬಗೆಯ ಚಿತ್ತಾರ ಯಾರದಿದು ಅದ್ಭುತ ಚಮತ್ಕಾರ? ಒಂದೆಡೆ ಮಳೆಯ ಸುರಿಸುತ ಪನ್ನೀರ ಸಿಂಚನ ಮತ್ತೊಂದೆಡೆ ಎಳೆದಿದೆ ಬಣ್ಣದಾ ಬಿಲ್ಲು, ಒಹ್ ರೋಮಾಂಚನ! ಖುಷಿ ಕೊಡಲೆಂದೋ ಏನೋ, ಬಿಲ್ಲ ಮೇಲೆ ಮಗದೊಂದು ಬಿಲ್ಲು ಇದ…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
October 05, 2007
"ಚೀನಾವನ್ನು ಸುತ್ತು ಹಾಕಿಕೊಂಡು ಬಂದರೆ ಅಲ್ಲಿ ಬದುಕಲು ಕಾರಣಗಳೇ ಇಲ್ಲ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ." ಹೀಗೆಂದು ಸಾರಾಸಗಟಾಗಿ ಬರೆದ ವಾಕ್ಯವನ್ನು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಮೊದಲ ಪುಟದಲ್ಲಿ ನೋಡಿ ನಿಜಕ್ಕೂ ಗಾಬರಿಯಾಯಿತು. 132 ಕೋಟಿ ಜನರ, ಜನಸಂಖ್ಯೆಯ ದೃಷ್ಟಿಯಿಂದ ಪ್ರಪಂಚದಲ್ಲಿಯೆ ಅತಿ ದೊಡ್ಡ ದೇಶವಾದ ಚೀನಾದ ಅಷ್ಟೂ ಜನರನ್ನು ಕಾರಣಗಳಿಲ್ಲದ ಬದುಕುತ್ತಿರುವ ಜನ ಎಂದು ಭಾವಿಸುವುದು ಕೇವಲ ಅಮಾನವೀಯ ಮಾತ್ರವಲ್ಲ ಜೀವವಿರೋಧಿಯೂ ಸಹ, ಅಲ್ಲವೆ? ರವೀಂದ್ರ ಭಟ್ಟ ಎನ್ನುವವರು…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
October 05, 2007
ನನ್ನ ಶ್ವೇತಸುಂದರಿಯ ಬಗ್ಗೆ ಕನ್ನಡದಲ್ಲಿ ಒಂದು ಪ್ರಾಡಕ್ಟ್ ರಿವ್ಯೂ (ಉತ್ಪನ್ನ ವಿಮರ್ಶೆ?) ಬರೆಯಬೇಕೆಂದುಕೊಂಡಿದ್ದ ನನ್ನ ಕನಸು ಇನ್ನೂ ಈಡೇರಿಲ್ಲ. ಅವಳ ಕೆಲವು ಚಿತ್ರಗಳನ್ನು ತೆಗೆಯಬೇಕೆಂಬ ಕನಸು ಅವಳು ನನ್ನವಳಾದ ಸುಮಾರು ೬ ತಿಂಗಳ ಬಳಿಕ ಈಡೇರಿದೆ!. ಆಪಲ್ ನವರ ವಿನ್ಯಾಸದ ಈ ನಯವಾದ ಹೊರಮೈಯ ಫಿನಿಶ್ ಈಗಂತೂ fashion ಆಗಿ ಸ್ವಲ್ಪಮಟ್ಟಿಗೆ old fashion ಆಗಿಬಿಟ್ಟಿದೆಯೇನೋ (popup window ಗಳೂ ಈಗ glossy finish ಇಟ್ಟುಕೊಂಡಿರುತ್ತವೆ).
ಲೇಖಕರು: bvatsa
ವಿಧ: Basic page
October 04, 2007
ಇನ್ನಾದರೂ ಸೋಲು.. ಇಷ್ಟೆಲ್ಲಾ ಆದ ಮೇಲೂ.. ಬಂದ ಭಾವನೆಗಳಿಗೆ ಬೇಲಿ ಹಾಕಿ ಬಂಧಿಸಿದಾದ ಮೇಲೂ .. ಆಸರೆಗಾಗಿ ತಡಕಾಡುತಿದ್ದ ಕರಗಳಾ.. ಕಟ್ಟಿ ಹಾಕಿದ ಮೇಲೂ... ಸಜ್ಜನರಿಗಾದರೂ ಬಾಗಬೆಕಿದ್ದ ಶಿರವ.. ಧಿಕ್ಕರಿಸಿ ಮೆರೆವಂತೆ ಮಾಡಿದ ಮೇಲೂ.. ಒತ್ತರಿಸಿ ಬಂದ ಕಂಬನಿಯಾ.. ಕಣ್ಣೆವೆಗಳ ತೇವಕ್ಕೆ ಮಾತ್ರ, ಮೀಸಲಾಗಿಸಿದ ಮೇಲೂ.. ಇನ್ನಾದರೂ ಬಿಡುವೆಯ ನನ್ನ.. ಒಮ್ಮೆ ಮನತುಂಬಿ ನಿರರ್ಗಳವಾಗಿ ಅಳಲು... ಇನ್ನಾದರೂ ಸೋಲು ನೀ ಮನವೇ.. ಇಷ್ಟೆಲ್ಲಾ.. ಆದ ಮೇಲೂ..
ಲೇಖಕರು: Khavi
ವಿಧ: ಚರ್ಚೆಯ ವಿಷಯ
October 04, 2007
ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ... ಇವತ್ತಿನ ಪ್ರಜಾವಾಣಿಯಲ್ಲಿ ಬಂದಿರುವ ಕನ್ನಡ ಸುದ್ದ್ದಿಓದಿ..ಖುಷಿ ಆಯ್ತು.. ತಮಿಳರು, ತೆಲುಗರು ತಮ್ಮ ತಮ್ಮ ನುಡಿಗಳನ್ನು ಹಾಗು ತಮ್ಮ ಜನರನ್ನು ಬೇರೆ ಬೇರೆ ದೇಶಗಳಲ್ಲಿ ಗಟ್ಟಿಯಾಗಿ ನೆಲೆಸಿದ್ದಾರೆ.. ಅಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿ ನೆರವಾಗ್ತಾರೆ.. ಆವಾಗಾವಗ ಔತಣಕೂಟಗಳನ್ನೂ ಏರ್ಪಡಿಸುತ್ತಾರೆ.. ಹೀಗೇಕೆ ನಮ್ಮ ಕನ್ನಡಿಗರಿಗಿಲ್ಲ ಎಂದು ತುಂಬಾ ಯೋಚಿಸಿದ್ದೆ.. ಈಗ ಈ ಸುದ್ದಿ ಕೇಳಿ ಮನಸ್ಸಿಗೆ ಒಳ್ಳೆ ನೆಮ್ಮದಿ ಸಿಕ್ಕಿತು.. ನ್ಯೂಜಿಲೆಂಡಿನಲ್ಲಾದರೂ…
ಲೇಖಕರು: ymravikumar
ವಿಧ: Basic page
October 04, 2007
ತಡಿಮಗ ತಡಿಮಗ ತಡಿಮಗ ತಡಿಮಗ ಬಿಡಬೇಡ ಸೀಟ್ನಾ ಕಾ0ಗ್ರೆಸ್ , ಬಿ.ಜೆ.ಪಿ ಯಾರೆ ಬಡ್ಕೊ0ಡ್ರು ಕೊಡಬೇಡ ಗಮ್ನಾ ಈ ಪಾಲಿಟಿಕ್ಸಗೆ ಬ0ದಮೇಲೆ ಹೀಗೇನಾ ಅಪ್ಪಾ ಮೋಸದಿ0ದ ನೀ ಸಿ.ಎಮ್ ಮಾಡ್ದೆ ಅದು ನನ್ ತಪ್ಪ ಮಗ ಯಾರ್ನೂ ನ0ಬಬೇಡ ಮಗ ಪ್ರೆಸ್ನೋರ್ನ ಬೈಯ್ಯಬೇಡ ಒಬ್ನೆ ಪ್ರೆಸ್ ಮೀಟ್ ಮಾಡಬೇಡ ಮಾಡಿ ಏನೇನೊ ಹೇಳಬೇಡ ಹೇಳಿ ಹಗರಣದಲ್ಲಿ ಸಿಗಬ್ಯಾಡ ಸಿಕ್ಕಿ ಹಾಳಾಗಬ್ಯಾಡ ಲೇಯ್ ಪ್ರೆಸ್ನೋರ್ನೆಲ್ಲ ಮು0ದೆ ಇಟ್ಟು ಸ್ಕೆಚ್ಚು ಹಾಕ್ತಾರೊ ಡ್ಯೂಟಿ ಅ0ತ ಹಿ0ದೆ ಹೋದ್ರೆ ಚುಚ್ಚೆ ಬಿಡ್ತಾರೊ ರಾಜಕೀಯ ಗೋಳು ಅಪ್ಪ ,…
ಲೇಖಕರು: srinivasps
ವಿಧ: Basic page
October 04, 2007
ಲಾಲಿ ಬಾ ಬಾರೋ ಚಿನ್ನ, ಇನ್ನೆಷ್ಟು ಆಡುವೇ? ಬೇಡವೆ ಆಟಕೆ ಪುರುಸೊತ್ತು? ಬೇಡವೆ ಆಟಕೆ ಪುರುಸೊತ್ತು, ನನ್ನ ಚಿನ್ನ? ನಿದ್ದೆ ಮಾಡುವ ಹೊತ್ತು ಈಗಾಯ್ತು...|| ಬೆಳಗಿಂದ ನೀನು ಎಷ್ಟೊಂದು ಆಡಿದೆ, ದಣಿವಿಲ್ಲವೇನೋ ನನ್ನ ರಾಜ ದಣಿದಿಲ್ಲವೇನೋ ನನ್ನ ಮುದ್ದು ರಾಜಣ್ಣ ನಿದ್ದೆ ಮಾಡುವ ಹೊತ್ತು ಈಗಾಯ್ತು...|| ನಾಳೆ ಆಡುವೆಯಂತೆ, ತೀಟೆ ಮಾಡುವೆಯಂತೆ, ನಿದ್ದೆಯ ಮಾಡೋ ಬಂಗಾರ ನಿದ್ದೆಯ ಮಾಡೋ ಬಂಗಾರ - ದಮ್ಮಯ್ಯ ಮಲಗುವ ಹೊತ್ತು ಈಗಾಯ್ತು...|| ಹಾಲು ಕೆನ್ನೆಯ ರಾಜ, ಕಪ್ಪು ಕಂಗಳ ತೇಜ ತೂಗುವೆ ಬಾರೋ…
ಲೇಖಕರು: girish.shetty
ವಿಧ: Basic page
October 04, 2007
ದೂರದಿಂದ ಕೋಗಿಲೆಯ ಇಂಚರ "ಕುಹೂ, ಕುಹೂ" ಎಂದು ಕೇಳಿಸುತ್ತಿದ್ದರೆ, ಕಥೆಗಾರ ತನ್ನಷ್ಟಕ್ಕೆ ಆಡಿಕೊಳ್ಳುತಿದ್ದ "ಅದು ನನ್ನ ಹುಡುಗಿಯ ಕೊರಳ ದನಿಯಂತಿದೆಯಲ್ಲ!" ಇದೇನು ಹೊಸದಾಗಿರಲ್ಲಿಲ್ಲ ಕಥೆಗಾರನ ಪರಿಸರಕ್ಕೆ. ಉತ್ತರವಿಲ್ಲದ ಪ್ರಶ್ನೆಗಳನ್ನು ಕೂಡಿಸಿ ಸೇರಿಸುವುದರ ಜೊತೆಗೆ, ಜಗತ್ತಿನಲ್ಲಿ ನಡೆವ ಎಲ್ಲಾ ಸುಂದರವಾದ ಆಗುಹೋಗುಗಳನ್ನು ತನ್ನ ಮನದನ್ನೆಯ ಜೊತೆಗೆ ಹೋಲಿಸಿಕೊಳ್ಳುವುದು ಅವನಿಗೆ ದಿನನಿತ್ಯದ ರೂಡಿಯಾಗಿತ್ತು. ಕೋಗಿಲೆಯ ಗಾನ ನಿಂತರೂ ಅವನಿನ್ನೂ ಅವನ ಕಲ್ಪನಾಲೋಕದಿಂದ ಹೊರಬಂದಿರಲಿಲ್ಲ.…