ವಿಧ: Basic page
October 11, 2007
ಓಡಿ, ಓಡೋಡಿ
ಪೊದೆಗಳೆನ್ನದೆ ನುಸುಳಿ
ಬಸವಳಿದು ಉಸ್ಸೆಂದ, ಬೆವರು
ಮೈಯ ತುಂಬಾ
ದಾಟಿ
ಅಡ್ಡ ಗೋಡೆಯನು,
ಕಾಡು ಗುಡ್ಡ
ಮಲಗಿದ್ದವೆಲ್ಲ ಅಡ್ಡಡ್ಡ
ಬಿಡುತ್ತಿಲ್ಲ,
ಬೆನ್ನಟ್ಟಿ ಬರುತಿದೆ
ನೆರಳದು, ಅಲ್ಲಲ್ಲ
ಸಮಸ್ಯೆಯ ಉರುಳದು
ಮುಂದೋಡುತಿರೆ ಅವನು
ತಗ್ಗಿ ಬಗ್ಗಿ
ಹಿಂದಿಂದ ಮುನ್ನುಗ್ಗಿ
ಬರುತಿವೆ
ಮುಗಿಲ ಕವಿದ ಕಾರ್ಮುಗಿಲು
ಅವನ ಹಿಮ್ಮೆಟ್ಟಿಸಿ
ಬೆತ್ತಲೆ ಕತ್ತಲಲೂ
ಬರುತಿಹನು ಬೆನ್ನಟ್ಟಿಸಿ
ಮುಗಿಲು ಮುಡಿದ ಚಂದ್ರ
ನಿಂತು ಉಸಿರೆಳೆದ
ಕೂತ, ಮಾತಿಲ್ಲದೆ
ಹಾಗೆ ಬರಿದೆ
ಇಲ್ಲ ನಿದ್ದೆ, ಸಮಯ
ಮೈ,…
ವಿಧ: Basic page
October 11, 2007
ಹುಡುಗಿ
ಕಣ್ಣಂಚಿನಲೆ ಕೊಂದಳು ಹುಡುಗಿ
ಕುಡಿ ನೋಟದ ಬಾಣವ ನನ್ನೆದೆಗೆ ಎಸೆದು
ಮತ್ತೆ ಜೀವ ಬರಿಸಿದಳು ಬೆಡಗಿ
ತುಟಿಯಂಚಿನ ನಗುವಿನಮೃತವ ಎರೆದು
ವಿಧ: Basic page
October 11, 2007
ಭಾವನೆಗಳ ಕಾಮನಬಿಲ್ಲು
ಕಾಯುತ್ತಿದ್ದವನ ಮನದ ತುಂಬಾ
ಕಣ್ಣಲ್ಲಿ ಮೂಡಿ ಮರೆಯಾಗುತ್ತಿದೆ
ಆಕೆಯದೇ ಬಿಂಬ
ಈ ಹುಡುಗಿಯರೇ ಹೀಗೆ!
ಕಾಡುವುದು, ಕಾಯಿಸುವುದು
ಹುಡುಗರ ಕೆಣಕಲು
ಕಣ್ಣಾಮುಚ್ಚಾಲೆ ಆಡುವುದು
ವಿಧ: ಬ್ಲಾಗ್ ಬರಹ
October 11, 2007
ಬಿಸಿಲೇರುವವರೆಗೂನನ್ನ ನಲ್ಲನ ತೋಳುಗಳ ನಡುವೆಸರಸವಾಡಿ ಎದ್ದ ದಿನವೆಲ್ಲಾ ನಿದ್ದೆಗಣ್ಣು.ಕೂದಲ ಜಿಡುಕಲ್ಲಿ ಆಲಸಿ ಬೆರಳು.ಬಾಚಿ ಬಿಗಿದು ಕಟ್ಟಿದ ಕೂದಲ ಏಕಾಂಗಿ ಗೆಳತಿಏನೋ ನೆಪಮಾಡಿ ಸಿಡುಕುತ್ತಾಳೆ-ಎದುರಾಡಲಿಲ್ಲಎಂದಿನಂತೆ!
ವಿಧ: Basic page
October 10, 2007
ಏಕಾಂತದಲ್ಲೆಲ್ಲೋ.. ಕಾಡುವ ದನಿ..
ಯಾವುದೋ ಪಿಸುಮತು, ಮತ್ತಾವುದೋ ಸ್ವರ..
ಯಾರದೋ ಕೇಕೆ, ಮತ್ತಾರದೋ ಆಕ್ರಂದನ..
ಒಮ್ಮೆ, ಕಟ್ಟು ಬಿಚ್ಚಿದ ಅಶ್ವಗಳ ನಾಗಲೋಟದಂತೆ..
ಮತ್ತೊಮ್ಮೆ, ಯಾರೋ ಹಾಕಿದ ಲಯಬದ್ದ ತಾಳದಂತೆ..
ಎಷ್ಟೋ ಬಾರಿ.. ಮಲಗಿದ್ದಿದೆ, ಶಪಿಸಿ..
ಯಾವುದೀ ದರಿದ್ರ ದನಿಯೆಂದು..
ಬಹಳ ತಡವಾಯಿತೋ ಏನೋ.. ತಿಳಿದದ್ದು
ಈ ರೀತಿ ವರ್ತಿಸುವ ಹೃದಯ, ನನ್ನಲ್ಲೇ.. ಇದೆಯೆಂದು..
ವಿಧ: ಚರ್ಚೆಯ ವಿಷಯ
October 10, 2007
ನನಗೆ ತಿಳಿದಿರುವಂತೆ ’ರಾಜೀನಾಮೆ’ ಉರ್ದು / ಪಾರ್ಸಿಯಿಂದ ಬಂದ ಒರೆ. ಆ ನುದಿಗಳಲ್ಲಿ ಈ ಪದದ ಅರ್ಥ -- ಒಡಂಬಡಿಕೆ ( agreement or treaty).ಆದ್ದರಿಂದ ಇದು ಆ ಕಾರಣದಿಂದಲೂ ತಪ್ಪು. ಉರ್ದುವಿನಲ್ಲಿ ಸರಿಯಾದ ಅರ್ಥ ಕೊಡುವ ಪದ " ಇಸ್ತೀಫಾ" .ಹಿಂದಿಯಲ್ಲಿ ಸಂಸ್ಕೃತದಿಂದ ಬಂದ ’ ತ್ಯಾಗ ಪತ್ರ" ಬಳಸುತ್ತಾರೆ.
ಅಚ್ಚಕನ್ನಡದಲ್ಲಿ ಇದಕ್ಕೆ ಸರಿಯಾದ ಒರೆ ಇದೆಯೇ?
ನನಗೆ ಹೊಳೆದದ್ದು-- ’ ಕಡೆಯೋಲೆ’ / ’ ತೊರೆದೋಲೆ’
ವಿಧ: Basic page
October 09, 2007
ನಮ್ಮ ಮನೆ
******
ಹೀಗೆ ಇದ್ದರೆಷ್ಟು ಚೆನ್ನ
ಒಂದು ಮನೆಯ ಚಿತ್ರಣ.
ಬಾಳಬಂಡಿ ಪಯಣದಲ್ಲಿ
ಇರದೆ ಯಾವ ತಲ್ಲಣ.
ಹೊಳೆವ ಚುಕ್ಕಿಯ ಹೆಕ್ಕಿ
ಕಟ್ಟಿದ ಹೆಬ್ಬಾಗಿಲ ತೋರಣ.
ಏಳು ಬಣ್ಣದ ಇಂದ್ರಚಾಪದ
ಕಮಾನು ಕಟ್ಟಿದ ಅಂಕಣ.
ಮೊಲ್ಲೆ ಮಲ್ಲಿಗೆ ಜಾಜಿ ಸಂಪಿಗೆ
ಪಾರಿಜಾತದ ಹಿತ್ತಲು.
ತುಂಬುತಿಂಗಳು ಕ್ಷೀರಪಥದೊಳು
ತೊಳೆದು ಇರುಳಿನ ಕತ್ತಲು.
ಹಿರಿಯ ಕಿರಿಯರ ನಡುವೆ
ಮಮತೆ ಒಲುಮೆಯ ಬಂಧನ.
ಕಾಮಧೇನು ಕಲ್ಪವೃಕ್ಷ
ಸೇರಿ ಸೊಬಗಿನ ನಂದನ
-೦-
ವಿಧ: Basic page
October 09, 2007
ಬಾರೊ, ತಮ್ಮ
ನಾನು-ನೀನು ಶಾಲೆಗೋಗುವಾ
ಅಆಇಈ ಕಲಿತು
ನಾವು ಜಾಣರಾಗುವಾ
ನಾನು ನೀನು
ಎಲ್ಲರು ಸೇರಿ ಆಟವಾಡುವಾ
ಆಟದಲ್ಲೇ ಪಾಠವನ್ನು
ನಾವು ಕಲಿಯುವಾ
ಶಾಲೆಯಿಂದ ಬಂದು
ನಾವು ಹೊಲಕೆ ಹೋಗುವಾ
ಅಪ್ಪ-ಅವ್ವರ ಕೆಲಸದಲ್ಲಿ
ನಾವು ನೆರವು ಆಗುವಾ
ಹೊಲದ ದಾರಿಯಲ್ಲಿ
ಇಹವು ಕವಳಿಗಿಡಗಳು
ಗಿಡವ ಕೊಡವಿ
ಹಣ್ಣುಗಳನ್ನು ಆಯ್ದು ತಿನ್ನುವಾ
ಕಾರೆ ಹಣ್ಣು, ಬಾರೆ ಹಣ್ಣು
ತಿಂದು ಬಿಕ್ಕುವಾ
ನೀರಲಣ್ಣು ತಿಂದು ನಾವು
ನೀರು ಕುಡಿಯುವಾ
ಕಕ್ಕಿ ಹಣ್ಣು ಸಿಕ್ಕರೆ
ಗುಳುಮ್ಮನೆ ನುಂಗುವಾ
ಬುಕ್ಕಿ ಹಣ್ಣು ಸಿಕ್ಕಿದರೆ
ಗಬ-ಗಬ…
ವಿಧ: ಚರ್ಚೆಯ ವಿಷಯ
October 09, 2007
ಶ್ರೀವತ್ಸ ಜೋಶಿ ಅಂಕಣ ವಿಚಿತ್ರಾನ್ನ
ಕೂಟಿನ ಬಗ್ಗೆ ಅವತ್ತಿನ ನಮ್ಮ ಚರ್ಚೆಯಲ್ಲಿ ಗುರುಮೂರ್ತಿ ಹೇಳಿದ್ದ ಒಂದು ಪುರಾಣಕಥೆ ನನಗಿನ್ನೂ ಚೆನ್ನಾಗಿ ನೆನಪಿದೆ. ಭಲೇ ರುಚಿಕರವಾಗಿರುವ ಅದನ್ನಿಲ್ಲಿ ನಿಮಗೂ ತಿಳಿಸುತ್ತೇನೆ. ಮುಂದೆಂದಾದರೂ ಕೂಟು ತಿನ್ನುವ ಸಂದರ್ಭ ಬಂದರೆ, ಬಡಿಸಿದ್ದು ಸಾಂಬಾರೂ ಅಲ್ಲ ಪಲ್ಯವೂ ಅಲ್ಲ ಇದ್ಯಾವ ಪದಾರ್ಥದಪ್ಪಾ ಎಂಬ ಸನ್ನಿವೇಶ ಎದುರಾದರೆ ಈ ಕಥೆಯನ್ನು ನೆನಪಿಸಿಕೊಳ್ಳಿ. .....ಓದಿ
ವಿಧ: Basic page
October 09, 2007
ಉದಯವಾಣಿ
(ಇ-ಲೋಕ-43)(09/10/2007)
ಸೆಲ್‍ಪೋನ್,ಡಿವಿಡಿ,ಲ್ಯಾಪ್‍ಟಾಪ್ ಅಂತಹ ಆಧುನಿಕ ಸಾಧನಗಳನ್ನು ಬಳಸುವುದರಲ್ಲಿ ಇಂದಿನ ತರುಣ ಜನಾಂಗ ಹಳಬರಿಗಿಂತ ಹೆಚ್ಚು ಪಳಗಿರುತ್ತಾರೆ.ಅವರು ಯಾವುದೇ ಗಾಬರಿ,ಆತಂಕಗಳಿಲ್ಲದೆ ಸಾಧನಗಳನ್ನು ಬಳಸುತ್ತಾರಾದ್ದರಿಂದ ಅದರ ಬಳಕೆ ಅವರಿಗೆ ಸಹಜವಾಗುತ್ತದೆ.ಇಂಗ್ಲೆಂಡಿನ ಓಕ್‍ಲ್ಯಾಂಡ್ ವಿಶ್ವವಿದ್ಯಾಲಯದವರು ಇದನ್ನು ಮನಗಂಡು ಮೂವತ್ತಕ್ಕೂ ಅಧಿಕ ವಿದ್ಯಾರ್ಥಿಗಳನ್ನು,ಶಿಕ್ಷಕರಿಗೆ ಸಾಧನಗಳ ಬಳಕೆಯಲ್ಲಿ ನೆರವು ನೀಡುವ ಇ-ಮೆಂಟರ್ ಹುದ್ದೆಗಳಿಗೆ ನೇಮಿಸಿದೆ.ಇವರಿಗೆ…