ಎಲ್ಲ ಪುಟಗಳು

ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
October 13, 2007
ವಿನಾಶ ಕಾಲೇ ವಿಪರೀತ ಬುದ್ಧಿ! ಇತಿಹಾಸ, ಪುರಾಣ ಹಾಗೂ ಅಶ್ಲೀಲ ರಾಜಕಾರಣ ಇಪ್ಪತ್ತು-ಇಪ್ಪತ್ತು ವಿಶ್ವಕಪ್ ಕ್ರಿಕೆಟ್ನ ಅಂತಿಮ ಪಂದ್ಯದ ದಿನ ಕೌಟುಂಬಿಕ ಸಮಾರಂಭವೊಂದಕ್ಕಾಗಿ ಹಾಸನಕ್ಕೆ ಹೋಗಿದ್ದ ನಾನು ಶಿವಮೊಗ್ಗಕ್ಕೆ ವಾಪಸಾಗುತ್ತಿದ್ದೆ. ಕ್ರಿಕೆಟ್ ಅಭಿಮಾನಿಯಾದ ನನಗೆ ಇಪ್ಪತ್ತು - ಇಪ್ಪತ್ತು ಕ್ರಿಕೆಟ್ ಬಗ್ಗೆ ಅಷ್ಟೇನೂ ಉತ್ಸಾಹವಿಲ್ಲದಿದ್ದರೂ, ಭಾರತ ಅಂತಿಮ ಪಂದ್ಯ ಆಡುವ ಸಡಗರದ ಹಿನ್ನೆಲೆಯಲ್ಲಿ ಪಂದ್ಯವನ್ನು ನೋಡಲಾಗದ ಬೇಸರ ಪ್ರಯಾಣದುದ್ದಕ್ಕೂ ಕಾಡುತ್ತಿತ್ತು. ದಾರಿ ಮಧ್ಯೆ…
ಲೇಖಕರು: vijayamma
ವಿಧ: ಬ್ಲಾಗ್ ಬರಹ
October 13, 2007
ಸೌಂದರ್ಯ ವರ್ಷಗಳುರುಳಿದಂತೆ ಕಮ್ಮಿಯಾಗುತ್ತಾ ಹೋಗುವುದು ಸಾಮಾನ್ಯ.ಆದರೆ ಕೆಲವರಲ್ಲಿ ವಯಸ್ಸಾದಂತೆ ಸೌಂದರ್ಯ ವರ್ಧಿಸುತ್ತಾ ಹೋಗುವುದು. ಹೇಮಾಮಾಲಿನಿ ಆ ಕಾಲದ 'ಡ್ರೀಮ್ ಗರ್ಲ್'ಈ ಕಾಲಕ್ಕೂ ಅವಳ ಮಗಳಿಗಿಂತ ಸುಂದರವಾಗಿದ್ದಾಳೆ.ರೇಖಾ ವಯಸ್ಸು ಮುಂದೆ ಹೋಗೇ ಇಲ್ಲ ಅನಿಸುತ್ತದೆ.ಅಮಿತಾಭ್ ಬಿಳಿಗಡ್ಡದಲ್ಲಿಯೂ ಯುವ ಅಭಿಷೇಕ್ ಗಿಂತ ಜಾಸ್ತಿ ಅಭಿಮಾನಿಗಳನ್ನು ಹೊಂದಿರುವನು. ಭಾರತದಾದ್ಯಂತ ಎಲ್ಲರೂ ದಿನವೂ ನೋಡುವ ಅತೀ ಸುಂದರ ಮುಖ-"ಗಾಂಧೀಜೀ"ಯದ್ದು.…
ಲೇಖಕರು: vedumaani
ವಿಧ: ಬ್ಲಾಗ್ ಬರಹ
October 13, 2007
ಅದೊಂದು ನಕ್ಷತ್ರ. ಅನಂತವಾದ ವಿಶ್ವದ ಯಾವುದೋ ಮೂಲೆಯಲ್ಲಿ, ಕ್ಷಮಿಸಿ, ವಿಶ್ವಕ್ಕೆ ಮೂಲೆಯೆಂಬುದೇ ಇಲ್ಲವಲ್ಲ; ವಿಶ್ವದ ಯಾವುದೋ ಒಂದು ಕಡೆ ಹುಟ್ಟಿಕೊಂಡಿತ್ತು. ಅದರ ಹುಟ್ಟಿನಲ್ಲಿ ವಿಶೇಷವೇನಿರಲಿಲ್ಲ, ಬೇರೆಲ್ಲಾ ನಕ್ಷತ್ರಗಳು ಹುಟ್ಟಿದ ರೀತಿಯಲ್ಲೇ ಇದೂ ಹುಟ್ಟಿತ್ತು. ಅದು ಹುಟ್ಟಿದಾಗ ಹೆಸರು ಇಡುವವರು ಯಾರೂ ಇರಲಿಲ್ಲವೆಂದೋ ಏನೋ ಅದಕ್ಕೆ ಹೆಸರಿರಲಿಲ್ಲ. ಹೆಸರಿನಲ್ಲೇನಿದೆ ಬಿಡಿ, ಹೆಸರೆಂಬುದೊಂದು ಹಿಡಿ ಅಷ್ಟೇ. ಯಾರನ್ನದರೂ ಹಿಡಿದು ಹಿಗ್ಗಾಮುಗ್ಗಾ ತಿರುಗಿಸಲು ಇರುವ ಹಿಡಿ. ಅದಿರಲಿ, ನಮ್ಮ…
ಲೇಖಕರು: girish.rajanal
ವಿಧ: Basic page
October 13, 2007
ನಮಸ್ಕಾರ ಎಲ್ಲರಿಗೂ,  ನೆನಪುಗಳೇ ಹೀಗೆ ಏನೋ, ಇದ್ದಕ್ಕಿದ್ದಂಗೆ ನೆನಪಾಗುತ್ತೆ. ಹಾಗೆ ಲೋಕಾಭಿರಾಮಿಯಾಗಿ ನನ್ನ ಸಹೋದ್ಯೋಗಿಗಳೊಂದಿಗೆ ಹರಟುತ್ತಿದ್ದಾಗ ತಾಯಿ ವಿಷಯ ಬಂತು, ಎಲ್ಲರೂ ತಂತಮ್ಮ ತಾಯಿ ವಿಷಯ ಹೇಳಿದರು ಆಮೇಲೆ ನನ್ನ ಸರದಿ ಬಂತು. ನಾನು ಕೂಡ ಕೆಲವೊಂದು ಸಂಗತಿಗಳನ್ನ ಹೇಳಿದೆ, ಅದರಲ್ಲಿ ಒಂದನ್ನ ನಿಮಗೆ ಹೇಳಲಿಚ್ಛಿಸುವೆ. ನಾನು ಚಿಕ್ಕವನಿದ್ದಾಗ ನನ್ನ ತಾಯಿ ನನ್ನ ಮತ್ತು ನನ್ನ ತಂಗಿಯರನ್ನ ದೇವರ ಕೋಣೆಯಲ್ಲಿ ಕೂಡಿಸಿಕೊಂಡು ವಚನ ಹೇಳಿಕೊಡುತ್ತಿದ್ದಳು. ಅದೇ ಸಮಯಕ್ಕೆ ನಮ್ಮ ಮಾವ ಬಂದ.…
ಲೇಖಕರು: girish.rajanal
ವಿಧ: ಚರ್ಚೆಯ ವಿಷಯ
October 13, 2007
ಕನ್ನಡದಲ್ಲಿ ’ಸ್ಲೇಟ್’ ಗೆ ಏನಂತೀರಾ? ನಿಮಗಿದು ಗೊತ್ತೇ? ಇಂದ, ಗಿರೀಶ ರಾಜನಾಳ.
ಲೇಖಕರು: bvatsa
ವಿಧ: ಬ್ಲಾಗ್ ಬರಹ
October 13, 2007
ಅಂದಳು ಗೆಳತಿ, ಕಾಣದ ದೇಶಕೆ ವಲಸೆ ಹೋಗುವ ಯೋಜನೆ, ಸದ್ಯದಲ್ಲೇ.. ಇದೆಯೆಂದು.. ಓ! ಕೂಲ್, ಅಭಿನಂದನೆಗಳು ಬಡಬಡಿಸ ಹತ್ತಿತ್ತು ಬಾಯಿ, ಎಲ್ಲೋ ಎದ್ದ, ಕ್ಷೀಣ ದನಿಯ, ಮರೆಮಾಚಲೇನೋ ಎಂಬಂತೆ.. ನಿಯಂತ್ರಣ ತಪ್ಪಿದಂತೆ, ಒಂದೆ ಸಮನೇ ಕುಲುಕುತಿದ್ದವು ಕೈಗಳು, ಒಳಗಿದ್ದ ನಡುಕದ, ವಿಜೃಂಭಣೆಯೇನೋ, ಎಂಬಂತೆ.. ಸಂತಸ, ಹೆಮ್ಮೆ ಸೂಚಿಸುತ್ತಿತ್ತು ಮೊಗ, ಎಂದೆಂದೂ ಕಾಣದ ಕಾಂತಿಯ.. ಸೂಸುತಿದ್ದವು ಕಂಗಳು, ಮನದಲ್ಲೆದ್ದ ಜ್ವಾಲೆಯ., ಸಾಕ್ಷಿಯೇನೋ, ಎಂಬಂತೆ.. ನನಗೂ, ಇದೆಲ್ಲದಕ್ಕೂ.. ಸಂಭಂಧವೇ..…

ಏಕಾಂತದಲ್ಲೆಲ್ಲೋ.. ಕಾಡುವ ದನಿ.. ಯಾವುದೋ ಪಿಸುಮಾತು, ಮತ್ತಾವುದೋ ಸ್ವರ.. ಯಾರದೋ ಕೇಕೆ, ಮತ್ತಾರದೋ ಆಕ್ರಂದನ.. ಒಮ್ಮೆ, ಕಟ್ಟು ಬಿಚ್ಚಿದ ಅಶ್ವಗಳ ನಾಗಾಲೋಟದಂತೆ.. ಮತ್ತೊಮ್ಮೆ, ಯಾರೋ ಹಾಕಿದ ಲಯಬದ್ದ ತಾಳದಂತೆ.. ಎಷ್ಟೋ ಬಾರಿ.. ಮಲಗಿದ್ದಿದೆ, ಶಪಿಸಿ.. ಯಾವುದೀ ದರಿದ್ರ ದನಿಯೆಂದು.. ಬಹಳ ತಡವಾಯಿತೋ ಏನೋ.. ತಿಳಿದದ್ದು ಈ ರೀತಿ ವರ್ತಿಸುವ ಹೃದಯ, ನನ್ನಲ್ಲೇ.. ಇದೆಯೆಂದು..

ಇನ್ನಾದರೂ ಸೋಲು.. ಇಷ್ಟೆಲ್ಲಾ ಆದ ಮೇಲೂ.. ಬಂದ ಭಾವನೆಗಳಿಗೆ ಬೇಲಿ ಹಾಕಿ ಬಂಧಿಸಿದಾದ ಮೇಲೂ .. ಆಸರೆಗಾಗಿ ತಡಕಾಡುತಿದ್ದ ಕರಗಳಾ.. ಕಟ್ಟಿ ಹಾಕಿದ ಮೇಲೂ... ಸಜ್ಜನರಿಗಾದರೂ ಬಾಗಬೆಕಿದ್ದ ಶಿರವ.. ಧಿಕ್ಕರಿಸಿ ಮೆರೆವಂತೆ ಮಾಡಿದ ಮೇಲೂ.. ಒತ್ತರಿಸಿ ಬಂದ ಕಂಬನಿಯಾ.. ಕಣ್ಣೆವೆಗಳ ತೇವಕ್ಕೆ ಮಾತ್ರ, ಮೀಸಲಾಗಿಸಿದ ಮೇಲೂ.. ಇನ್ನಾದರೂ ಬಿಡುವೆಯ ನನ್ನ.. ಒಮ್ಮೆ ಮನತುಂಬಿ ನಿರರ್ಗಳವಾಗಿ ಅಳಲು... ಇನ್ನಾದರೂ ಸೋಲು ನೀ ಮನವೇ.. ಇಷ್ಟೆಲ್ಲಾ.. ಆದ ಮೇಲೂ..