ತಾಯಿಯೇ ದೇವರು..

ತಾಯಿಯೇ ದೇವರು..

ಬರಹ

ನಮಸ್ಕಾರ ಎಲ್ಲರಿಗೂ,

 ನೆನಪುಗಳೇ ಹೀಗೆ ಏನೋ, ಇದ್ದಕ್ಕಿದ್ದಂಗೆ ನೆನಪಾಗುತ್ತೆ. ಹಾಗೆ ಲೋಕಾಭಿರಾಮಿಯಾಗಿ ನನ್ನ ಸಹೋದ್ಯೋಗಿಗಳೊಂದಿಗೆ ಹರಟುತ್ತಿದ್ದಾಗ ತಾಯಿ ವಿಷಯ ಬಂತು, ಎಲ್ಲರೂ ತಂತಮ್ಮ ತಾಯಿ ವಿಷಯ ಹೇಳಿದರು ಆಮೇಲೆ ನನ್ನ ಸರದಿ ಬಂತು. ನಾನು ಕೂಡ ಕೆಲವೊಂದು ಸಂಗತಿಗಳನ್ನ ಹೇಳಿದೆ, ಅದರಲ್ಲಿ ಒಂದನ್ನ ನಿಮಗೆ ಹೇಳಲಿಚ್ಛಿಸುವೆ. ನಾನು ಚಿಕ್ಕವನಿದ್ದಾಗ ನನ್ನ ತಾಯಿ ನನ್ನ ಮತ್ತು ನನ್ನ ತಂಗಿಯರನ್ನ ದೇವರ ಕೋಣೆಯಲ್ಲಿ ಕೂಡಿಸಿಕೊಂಡು ವಚನ ಹೇಳಿಕೊಡುತ್ತಿದ್ದಳು. ಅದೇ ಸಮಯಕ್ಕೆ ನಮ್ಮ ಮಾವ ಬಂದ. ಅದೇ ಸಮಯಕ್ಕೆ ನಮ್ಮ ವಚನದ ಧಾಟಿನೂ ಜೋರಾಗಿತ್ತು. ತಂದೆ ನೀನು ತಾಯಿ ನೀನು

 ಬಂಧು ನೀನು ಬಳಗ ನೀನು

........................

 ....................

 .......................

........................

ಇದೆಲ್ಲ ಹೇಳಿದಮೇಲೆ.. ತಾಯಿಯೇ ದೇವರು ಅಂತ ನಮ್ಮಮ್ಮ ಹೇಳಿಸ್ತಾಯಿದ್ರು.

ನಮ್ಮ ಮಾವನ ಮಾತು ಶುರುವಾಯಿತು....

 ಹೌದುಲೇ ಗಿರೀಶಾ.. ತಾಯಿಯೇ ದೇವರು..ತಂದೆ ಪೂಜಾರಿ.. ಅಂತ ಹೇಳೋದಾ?

ಮತ್ತೆ ನಾನು ನನ್ನ ತಂರೀರು... ಅಂತ ಪ್ರಶ್ನೆ ಮಾಡಿದೆ...

ಅಷ್ಟು ಗೊತ್ತಿಲ್ಲನ್ಲೇ ನೀವೆಲ್ಲಾ ಭಕ್ತರು ಅಂತ ಛೇಡಿಸ್ತಾಯಿದ್ದರು...

ನಮಗದು ತುಂಬ ತಮಾಷೆಯಾಗಿ ಕಾಣುತ್ತಿತ್ತು..

ಆದರೆ ಈಗ ನನ್ನ ಮಾವ ಇಲ್ಲ.....

ಈಗಲೂ ಮನೆಯಲ್ಲಿ ದೇವರಿಗೆ ನಮಿಸುವಾಗ ನನ್ನ ಮಾವ ನೆನಪಾಗ್ತಾರೆ..