ಎಲ್ಲ ಪುಟಗಳು

ಲೇಖಕರು: yogeesh.bhat
ವಿಧ: ಬ್ಲಾಗ್ ಬರಹ
September 14, 2007
ಪ್ರತಿಯೊಬ್ಬರಿಗೂ ಸಿಗುವುದು ದಿನಕ್ಕೆ 24 ಗಂಟೆಗಳು ಮಾತ್ರ..... --ರಾಬಿನ್ ಶರ್ಮಾ
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
September 14, 2007
ಕೆಲವು ಹಳ್ಳಿ/ಊರುಗಳ ಹೆಸರು . ಇವುಗಳ ತಿಳಿವು ಎನು? ಹಿರಿಕಾಂಟಿತೆರಕಣಾಂಬಿತೇರಂಬಳ್ಳಿಅನಿಯಂಬಳ್ಳಿಉತ್ತಂಬಳ್ಳಿಕವಲಂದೆಸೋಸಲೆನಗರ್ಲೆ
ಲೇಖಕರು: venkatesh
ವಿಧ: Basic page
September 14, 2007
ವರಸಿದ್ಧಿವಿನಾಯಕ ವ್ರತ : ಭಾದ್ರಪದ ಶುಕ್ಲ ಚತುರ್ಥೀ ಮದ್ಯಾನ್ಹ ವ್ಯಾಪಿನಿ ಮತ್ತು ಯಾಮದ್ವಯವ್ಯಾಪಿನಿಯಿರುವದಿನ, [೧೫, ಶುಕ್ರವಾ ರ, ಸೆಪ್ಟೆಂಬರ್, ೨೦೦೭ ] ಆಚರಿಸತಕ್ಕ ವ್ರತ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪ್ರಾಣಪ್ರತಿಷ್ಠಾಪನಾ ಪುರುಸ್ಸರ ಪೂಜಿಸಿ, ಮೋದಕಗಳನ್ನೂ, ನೈವೇದ್ಯಮಾಡಿ, ಸ್ಯಮಂತಕೋಪಾಖ್ಯಾನ ಕಥೆಯನ್ನು ಶ್ರವಣಮಾಡಬೇಕು. ಸಕಲ ಕಾರ್ಯಗಳೂ, ನಿರ್ವಿಘ್ನವಾಗಿ ನೆರವೇರಲೂ, ವಿದ್ಯಾಪ್ರಾಪ್ತಿಗಾಗಿಯೂ ಇಷ್ಟಾರ್‍ಥ ಸಿದ್ಧಿಗೂ ಈ ವ್ರತ ಪ್ರಸಿದ್ಧವಾಗಿದೆ. ಸಾಮಾನ್ಯವಾಗಿ,…
ಲೇಖಕರು: muralihr
ವಿಧ: ಚರ್ಚೆಯ ವಿಷಯ
September 14, 2007
ನ೦ಗೇ ಮೊನ್ನೆ ಗೂಗಲ್ನವರ ಸೈಟ್ ನಲ್ಲಿ ರುವ ಕೀಬೋರ್ಡ್ ನಲ್ಲಿ ಈ ಅಕ್ಷರಗಳು ಕ೦ಡು ಬ೦ದವು. "ಞ ಞಾ ಞಿ ಞೀ ಞು ಞೂ ಞೃ ಞೆ ಞೇ ಞೈ ಞೊ ಞೋ ಞೌ ಞಂ ಞ" ಇವು ವಿಕಿಪೀಡಿಯಾದಲ್ಲಿ ಕೂಡ ಇದೆಯ೦ತಾ ಗೊತಾಯ್ತು. ಈ ಗುಣಿತಾಕ್ಷರಗಳು ಕನ್ನಡ ವ್ಯಾಕರಣದಲ್ಲು೦ಟೋ ಎ೦ಬುದೇ ನನ್ನ ಅನುಮಾನ..
ಲೇಖಕರು: ravikreddy
ವಿಧ: ಬ್ಲಾಗ್ ಬರಹ
September 14, 2007
ಭೂತಾಯಿಯ ತಾಪಮಾನ ಏರುತ್ತಿರುವ ವಿಷಯ ಇವತ್ತು ಕೇವಲ ಭವಿಷ್ಯದ ಪೀಳಿಗೆಯ ಬಗ್ಗೆ ಕಾಳಜಿ ಇರುವವರ ಅಥವ ತಾವು ತೆರಳುವಾಗ ತಾವು ಬಂದಾಗ ಹೇಗಿತ್ತೊ ಅದಕ್ಕಿಂತ ಉತ್ತಮವಾದ ಸ್ಥಿತಿಯಲ್ಲಿ ಈ ನಿಸರ್ಗವನ್ನು ಬಿಟ್ಟು ಹೋಗಬೇಕು ಎಂದು ಹಂಬಲಿಸುವ ಸಜ್ಜನರ ಕಾಳಜಿ ಮಾತ್ರವಾಗಿ ಉಳಿದಿಲ್ಲ. ಜಾತಿ, ಮತ, ವರ್ಣ ಶ್ರೇಷ್ಠತೆ ಎಂದೆಲ್ಲ ಸಂಕುಚಿತವಾಗಿ ಕನವರಿಸುವ ಧರ್ಮಲಂಡರೆಲ್ಲ ಈಗ ಪರಿಸರ ಪರಿಸರ ಎಂದು ಕನವರಿಸುವಷ್ಟು ಭೂಮಿ ಬಿಸಿಯಾಗುತ್ತಿದೆ. ಕನ್ನಡದ ದಿನಪತ್ರಿಕೆಯೊಂದರಲ್ಲಿ ಪರಿಸರದ ಬಗ್ಗೆ ಮತಾಂಧರೊಬ್ಬರು…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
September 13, 2007
ಹೇಗೆ ಹಾಡಲಿ ನಾನುದೇಶವೇ ಹೊತ್ತಿ ಉರಿಯುವಾಗಅಗೋ ಕೇಳಿಲ್ಲವೇ ಅಂದು- ನಿರೋ ದೊರೆ ಪಿಟೀಲು ಬಾರಿಸಿದನೆಂದು, ಇನ್ನು ಹೇಗೆ ಬಾರಿಸಲಿ ನಾನಿಂದು ನನ್ನೀ ದಳ್ಳುರಿಯ ಡೋಲು? ಇಲ್ಲಿ ನಾವೆಲ್ಲ ಒಂದೇಎಂದು ನುಡಿದು ನಡೆದು ಬಂದ ಮಾತೇನಮಗೆ ಬೊಟ್ಟು ಮಾಡಿ ಅಣಕಿಸುವಂತಾದುದೇಕೆ? ಅಯ್ಯೋ ! ಅದ್ಯಾವ ಕತ್ತಲೆಯ ಲೋಕದ ಕರೆ ಶತಶತಮಾನಗಳ ಧಾರ್ಮಿಕ ಪರಂಪರೆಯನೇ ನಮ್ಮೊಳಗಿನ ರಾಜಕೀಯವೇ ಹೊಸಕಿಹಾಕಲು ಹೊಂಚುತಿಹುದೋ ಬೇರೆ ಕಾಣೆ... ಇನ್ನು ಹೇಗೆ ನುಡಿಸಲಿ ನಾನು ಇಂದು ನನ್ನ ಹೃದಯ ವೀಣೆ? ಇಲ್ಲೇ ಆರು ದಶಕಗಳಿಂದಲೂ…
ಲೇಖಕರು: arunhegde
ವಿಧ: ಚರ್ಚೆಯ ವಿಷಯ
September 13, 2007
ಶ್ರೀರಾಮ, ರಾಮಾಯಣ, ವಾನರರು ಲಂಕೆಗೆ ಕಟ್ಟಿದ ಶ್ರೀರಾಮ ಸೇತುವೆ ಎಲ್ಲವೂ ಒಂದು ಕಾಲ್ಪನಿಕ ಕಟ್ಟು ಕಥೆ ಮಾತ್ರ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಸೇತು ಸಮುದ್ರಂ ಯೋಜನೆಗೋಸ್ಕರ ಶ್ರೀರಾಮ ಸೇತುವೆಯನ್ನು ಧ್ವಂಸಗೊಳಿಸುವ ಕೇಂದ್ರದ ನಿರ್ಧಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ದಿನೇ ದಿನೇ ಕಾವನ್ನು ಪಡೆದು ಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕೇಂದ್ರದ ಈ ರೀತಿಯ ಹೇಳಿಕೆ ದೇಶದಾದ್ಯಂತ ಕೋಟ್ಯಂತರ ಜನರಿಗೆ ಅತೀವ ನೋವನ್ನುಂಟುಮಾಡಿದೆ.
ಲೇಖಕರು: vedumaani
ವಿಧ: ಬ್ಲಾಗ್ ಬರಹ
September 13, 2007
ಮಗು ಬಿತ್ತು. ಅಳತೊಡಗಿತು. ಅಮ್ಮ ಓಡಿ ಬಂದಳು, ಮಗುವನ್ನು ಎತ್ತಿಕೊಂಡು ಮುದ್ದಿಸತೊಡಗಿದಳು. "ಅಮ್ಮಾ... ಆಯೀ" ಎಂದು ಅಳುತ್ತಿತ್ತು ಮಗು. "ಆಯಿ ಆಯ್ತಾ ನನ್ನ ಬಾಬುಗೇ... ಎಲ್ಲಿ ಆಯ್ತು ನೋಡುವ ತೋರಿಸು" ಎಂದಳು ಅಮ್ಮ ಮಗು ತಲೆ ಮುಟ್ಟಿ ತೋರಿಸಿತು. ಅಮ್ಮ ಮಗುವಿನ ತಲೆಗೆ ಮುತ್ತಿಟ್ಟಳು, "ಆಯಿ ಹೋಯ್ತು" ಅಂದಳು ಮಗು ಅಳು ನಿಲ್ಲಿಸಲಿಲ್ಲ, "ಆಯೀ... ಆಯೀ" ರಾಗ ಎಳೆಯುತ್ತಿತ್ತು "ಅಳಬೇಡ ನನ್ನ ಕಂದ, ಯಾರು ನಿಂಗೆ ಆಯಿ ಮಾಡಿದವ್ರು? ಈ ನೆಲ ಅಲ್ವ? ಆಯ್ತು ಈ ನೆಲಕ್ಕೆ ಹಚ್ಚ ಮಾಡ್ತೇನೆ. ಹಚ್ಚ,…
ಲೇಖಕರು: venkatesh
ವಿಧ: Basic page
September 13, 2007
ಶಾರದಾದೇವಿ ದೇವಸ್ಥಾನ ಮತ್ತು ವಿದ್ಯಾಶಂಕರ ದೇವಾಲಯ. ಶೃಂಗೇರಿ ದೇವಸ್ಥಾನದ ಪ್ರಾಂಗಣಕ್ಕೆ ಕಾಲಿಟ್ಟರೆ ಸಾಕು ಕಣ್ಣಿಗೆ ಗೋಚರಿಸುವುದು, ಶಾರದಾದೇವಿ ದೇವಸ್ಥಾನ. ಅದರ ಬದಿಯಲ್ಲೇ " ವಿದ್ಯಾಶಂಕರ ದೇವಾಲಯ," ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಅದರ ಪ್ರಾಚೀನ ವಾಸ್ತುಶಿಲ್ಪಶೈಲಿ ವಿಭಿನ್ನವಾಗಿದ್ದು ಕೆಲವು ವಿಶೇಷತೆಗಳನ್ನು ಹೊಂದಿದೆ ! ಈ ದೇವಾಲಯದಲ್ಲಿ ಗಮನಿಸಬೇಕಾದ ಮುಖ್ಯವಿಷಯವೆಂದರೆ, ಅದರ ಗರ್ಭಗೃಹದ ಮುಂದಿರುವ ಸಭಾಭವನ. ಅದು ಸಮವಿಸ್ತೀರ್ಣಹೊಂದಿದೆ. ಅದರ ಮೇಲಣ ಗೋಪುರವು…
ಲೇಖಕರು: ritershivaram
ವಿಧ: ಬ್ಲಾಗ್ ಬರಹ
September 13, 2007
ಇಂದಿನ ಸುದ್ದಿ ನೋಡಿ, ನಗಬೇಕೋ ಅಳಬೇಕೋ ರಾಮ ರಾಮಾ!. . ರಾಮಸೇತುವನ್ನು ರಕ್ಷಿಸಿ;ದೇಶ ಉಳಿಸಲು ಹೋಗಿ  ಇದೀಗ ನಾವು ಶ್ರೀರಾಮನನ್ನೇ ಉಳಿಸಿಕೊಳ್ಳಲು ಹೆಣಗಬೇಕಿದೆಯಲ್ಲ! ರಾಮನೇ ಇಲ್ಲಾಂದ್ಮೇಲೆ ಶ್ರೀಕೃಷ್ಣ ಇನ್ನೆಲ್ಲಿ? ಯಾಕೆಂದರೆ, ದಶಾವತಾರಗಳೇ ಇಲ್ಲವಾಗುತ್ತವೆ!! ಆಗ ನಮಗೆ ಪವಿತ್ರವೆನಿಸಿದ  ಶ್ರೀಕೃಷ್ಣನ ಭಗವದ್ದೀತೆಯೂ ನಿಪ್ಪ್ರಯೋಜಕವೇ ಆಗಿಬಿಡುತ್ತದೆ!!! ಬ್ರಿಟಿಷರ ಮತ್ತು ಮೊಘಲರ ಕಾಲದಲ್ಲು ನಮ್ಮ ಶ್ರೀರಾಮದೇವರ ಅಸ್ತಿತ್ವವನ್ನು ಪುರಾವೆಗಳಿಲ್ಲವೆಂದು ಸಾಬೀತು ಪಡಿಸಲು ಯಾರೂ ಹೋಗಲಿಲ್ಲ. …