ಎಲ್ಲ ಪುಟಗಳು

ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
September 13, 2007
ಈ ಹಿಂದೆ ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳ(http://sampada.net/blog/12/07/2007/4913) ಬಗ್ಗೆ ಬರೆದಿದ್ದೆ. ಅವರ 'ಕವಿರಾಜ ಮಾರ್ಗ ವಿವೇಕ ಭಾಗ ೧' ಓದಿದಾಗ ಈ ವಿಶಯ ತಿಳಿಯಿತು. ಕ್ರಿ.ಶ.793-813 ರ ವರೆಗೆ ಜಗತ್ತುಂಗನ ಆಳುವಿಕೆ ಇತ್ತು. ಸುಮಾರು ಒಂಬತ್ತನೆಯ ನೂರೇಡಿನಿಂದ ತನ್ನಾಳಿಕೆಯ ಕಡೆಯವರೆಗೆ ಹಿಮಗಿರಿಯಿಂದ ಹಿಡಿದು ಲಂಕಾದವರೆಗೂ ಇರುವ ಭಾರತ ಬುವಿಗೆ ಚಕ್ರವರ್ತಿಯಾಗಿದ್ದನು. ಮೌರ್ಯಕುಳದ ಅಶೋಕನನ್ನು ಚಕ್ರವರ್ತಿ ಎನ್ನುತ್ತಾರೆ. ಅವನು ತೀರ ಹೋರಾಟಗಾರನು ಹೌದು. ಆದರೆ ಅವನ…
ಲೇಖಕರು: manjunathsinge
ವಿಧ: ಬ್ಲಾಗ್ ಬರಹ
September 12, 2007
ಜೀವನ, ಭಾವನೆಗಳ ಒಂದು ಕೊನೆಯಿಲ್ಲದ ಸರಪಳಿ. ಮೊದಮೊದಲು ನಮ್ಮೆಲ್ಲರ ಭಾವನೆಗಳ ಮೂಲ ಯಾವುದು ಎಂಬುದರ ಪ್ರಶ್ನೆಯೊಂದನ್ನು ಮುಂದಿಟ್ಟುಕೊಂಡು "ಸ್ಪೂರ್ತಿ" ಎಂಬ ಲೇಖನವನ್ನು ಬರೆದಿದ್ದೆ [ಓದಲು ಇಲ್ಲಿ Click ಮಾಡಿ]. ಪ್ರತಿಯೊಂದು ಕ್ಷಣವೂ ನಾವು ಒಂದಿಲ್ಲ ಒಂದು ವಿಷಯದಲ್ಲಿ ನಮ್ಮನ್ನು ನಾವು ಮಗ್ನರನ್ನಾಗಿಸಿಕೊಳ್ಳುತ್ತೇವೆ, ಇಲ್ಲವಾದರೆ ನಮ್ಮ ಮನಸ್ಸು ಯಾವುದೋ ವಿಷಯವನ್ನು ಮೆಲುಕು ಹಾಕುತ್ತ ದೇಶದೇಶಾಂತರ ಸುತ್ತಾಡುತ್ತಿರುತ್ತದೆ. ಕಥೆ ಕಾದಂಬರಿಗಳನ್ನು ಅಥವ ಇನ್ಯಾವುದೇ ಪುಸ್ತಕಗಳನ್ನು ಓದುತ್ತ…
ಲೇಖಕರು: kpbolumbu
ವಿಧ: ಚರ್ಚೆಯ ವಿಷಯ
September 12, 2007
ಅಚ್ಚಗನ್ನಡ ಒರೆಗಳು:ಈ ಕೆಳಗಿನ ಒರೆಗಳ ಅರಿತವೇನು?೧.ಪುರ್ಬು(ದ.ಕ.ದ್ದಲ್ಲ)೨.ಕರ್ಚು(ಕೞ್ಚು)೩.ತೋೞ್(ಹೊಸಗನ್ನಡದ ತೋಳಲ್ಲ!) ಸೂ: ಮುದ್ದಣ ಪ್ರಯೋಗ೪.ತೂಬು
ಲೇಖಕರು: ritershivaram
ವಿಧ: ಬ್ಲಾಗ್ ಬರಹ
September 12, 2007
ನಾನು ಇತ್ತೀಚೆಗೆ ಓದಿ ಮೆಚ್ಚಿಕೊಂಡ “ಮನು” ಅವರ “ಕಥೆಯೊಳಗಿನ ಕಥೆ”- ಒಂದು ಸಾಹಿತ್ಯಕ ಆತ್ಮ ಕಥನದಲ್ಲಿ ಸಾಹಿತಿ ಮನು(ಪಿ.ಎನ್.ರಂಗನ್ ಇವರು ಇಂಜಿನಿಯರ್ ಆಗಿದ್ದು  ಆ ಕ್ಷೇತ್ರದಲ್ಲಿಯೆ ಕೆಲಸ ಮಾಡುತ್ತ, ಉನ್ನತ ಹುದ್ದೆಯಲ್ಲಿದ್ದೂ, ಎಂ.ಎ.ಪದವಿಯನ್ನೂ ಗಳಿಸಿ, ಹಿಂದಿ, ಇಂಗ್ಷೀಷ್, ಸಂಸ್ಕೃತ ಮತ್ತು ಶಾಸನ ಶಾಸ್ತ್ರ ಇವುಗಳಲ್ಲಿ ಪ್ರಾವಿಣ್ಯತೆ ಪಡೆದ ಘನ ವಿದ್ವಾಂಸರು). ಇಂಗ್ಷೀಷ್ ಭಾಷೆಯ ಮೇಲೆ ಅವರು ಪಡೆದ ಹಿಡಿತವೇನೆಂಬುದರ ಬಗ್ಗೆ ಅವರ ಮಾತುಗಳಲ್ಲೇ ಕೇಳಿ- “ಅಷ್ಟೇಕೆ ಇಂಗ್ಷೀಷಿನ ತವರು ಮನೆಯಾದ…
ಲೇಖಕರು: ವೈಭವ
ವಿಧ: Basic page
September 12, 2007
                                                ಅಲ್ಲಿಂದ ಇಲ್ಲಿಗೆ ಬಂದೆ                                                  ನಲಿವ ಹುಡುಕುತ್ತಾ                                           ಮುಸುಕಾದ ನುಲಿದುಕೊಂಡಿರುವ                                              ದಾರಿಗಳಲ್ಲಿ ಓಡುವುದಿರಲಿ                                               ನಡೆಯುವುದೇ ಎಡರು.                                            ಆದರೂ ಸುಳ್ಳು ನಲಿವ ನಂಬಿ…
ಲೇಖಕರು: keshav
ವಿಧ: ಬ್ಲಾಗ್ ಬರಹ
September 12, 2007
ಕಾಗಿನಿಲೆಯವರ 'ಬಿಳಿಯ ಚಾದರ' ಕಾದಂಬರಿ ಓದಿ ಅನಿಸಿದ್ದು: (ಕಾದಂಬರಿಯ shortcomings ಬಗ್ಗೆ, ನ್ಯೂನತೆಗಳ ಬಗ್ಗೆ ನಾನು ಬರೆಯುವುದಿಲ್ಲ, ಅದನ್ನು ಕನ್ನಡದ ವಿಮರ್ಶಕರು ಮಾಡಲಿ - ಅದು ಕಾಗಿನೆಲೆಯವರ ಬೆಳವಣಿಗೆಗೆ ಅಗತ್ಯ ಕೂಡ) ಅನಿವಾಸಿ ಅಮೇರಿಗನ್ನಡಿಗರ (ಭಾರತೀಯರ) ಬದುಕನ್ನು ತಿಳಿಹಾಸ್ಯದ ವಿಡಂಬಣೆಯಲ್ಲಿ ಬಿಚ್ಚುತ್ತಾ ಸಾಗುವ ಕತೆ, ಅಂತ್ಯದ ವೇಳೆಗೆ ವಾಂತಿ ಬರುವಂತೆ ಮಾಡಿ ಉಸಿರುಗಟ್ಟಿಸುತ್ತದೆ. ಶ್ರೀಧರ, ರಶ್ಮಿ ಮತ್ತು ನಾಗೇಶರೆಂಬ ಮೂರು ಪಾತ್ರಗಳಲ್ಲಿ - ನಾಗಮಂಗಲದಂಥ ಹಳ್ಳಿ ಮತ್ತು…
ಲೇಖಕರು: keshav
ವಿಧ: ಬ್ಲಾಗ್ ಬರಹ
September 12, 2007
ಕಾಗಿನಿಲೆಯವರ 'ಬಿಳಿಯ ಚಾದರ' ಕಾದಂಬರಿ ಓದಿ ಅನಿಸಿದ್ದು: (ಕಾದಂಬರಿಯ shortcomings ಬಗ್ಗೆ, ನ್ಯೂನತೆಗಳ ಬಗ್ಗೆ ನಾನು ಬರೆಯುವುದಿಲ್ಲ, ಅದನ್ನು ಕನ್ನಡದ ವಿಮರ್ಶಕರು ಮಾಡಲಿ - ಅದು ಕಾಗಿನೆಲೆಯವರ ಬೆಳವಣಿಗೆಗೆ ಅಗತ್ಯ ಕೂಡ) ಅನಿವಾಸಿ ಅಮೇರಿಗನ್ನಡಿಗರ (ಭಾರತೀಯರ) ಬದುಕನ್ನು ತಿಳಿಹಾಸ್ಯದ ವಿಡಂಬಣೆಯಲ್ಲಿ ಬಿಚ್ಚುತ್ತಾ ಸಾಗುವ ಕತೆ, ಅಂತ್ಯದ ವೇಳೆಗೆ ವಾಂತಿ ಬರುವಂತೆ ಮಾಡಿ ಉಸಿರುಗಟ್ಟಿಸುತ್ತದೆ. ಶ್ರೀಧರ, ರಶ್ಮಿ ಮತ್ತು ನಾಗೇಶರೆಂಬ ಮೂರು ಪಾತ್ರಗಳಲ್ಲಿ - ನಾಗಮಂಗಲದಂಥ ಹಳ್ಳಿ ಮತ್ತು…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
September 11, 2007
ಓದಿ ವಿಚಿತ್ರಾನ್ನ ಅಂಕಣ...ಶ್ರೀವತ್ಸ ಜೋಷಿ ಮುಂಗಾರುಮಳೆ ಸಿನೆಮಾ ಪ್ರಭಾವವೋ, ಅದಕ್ಕೆ ತಕ್ಕಂತೆ ಮುಂಗಾರು ಮಳೆ ಅತಿವೃಷ್ಟಿಯೆನಿಸುವಂತೆಯೇ ಸುರಿದು ನದಿಗಳೆಲ್ಲ ಉಕ್ಕಿಹರಿದಿದ್ದರಿಂದಲೋ, ಅಥವಾ ಮಾಧ್ಯಮಗಳಲ್ಲಿ ಜೋಗ ಜಲಪಾತ ವೈಭವದ ಸುಂದರ ಸಚಿತ್ರವರದಿಗಳು ಪ್ರಕಟವಾಗಿದ್ದರಿಂದಲೋ ಅಂತೂ ಈವರ್ಷ ಜೋಗದಲ್ಲಿ ನೀರು ಹರಿದುದಕ್ಕಿಂತಲೂ ಹೆಚ್ಚಾಗಿ ಅಲ್ಲಿಗೆ ಪ್ರವಾಸಿಗರು ಹರಿದುಬಂದಿರಬಹುದು
ಲೇಖಕರು: anivaasi
ವಿಧ: ಬ್ಲಾಗ್ ಬರಹ
September 11, 2007
ನಡೀವಾಗ ಯಾರಾದರೂ ಜತೆಗೆ ಬೇಕು.ಬೇರೇ ಬೇರೇ ಸೂರ್ಯನ ಬೆಳಕಿಗೆ ಮೈಕಾಯಿಸಿಕೊಂಡಿದ್ದರೂ ಪರವಾಗಿಲ್ಲ. ಜತೆಗಿರಬೇಕು. ಜತೆಗಿರೋ ಮನಸ್ಸಿದ್ದರೂ ಸುಲಭ ಅಲ್ಲ. ಒಬ್ಬೊಬ್ಬರಿಗೆ ಒಂದೊಂದು ನಮೂನೆ ಕಾಲು. ಆನೆ ಕಾಲು, ಕುದುರೆ ಕಾಲು, ಇಲಿ ಕಾಲು. ಕೆಲವರಿಗೆ ಹಕ್ಕಿ ಕಾಲು. ಇನ್ನು ಕೆಲವರಿಗೆ ಕಾಲಿಲ್ಲದೇನೂ ಹೋಗತೀನಿ ಅನ್ನೋ ಹಾವಿನ ಛಲವೇ ಕಾಲು.ತುಂಬಾ ದೂರದ ದಾರಿ;ಏರು ಪೇರು;ಹಳ್ಳ ಕೊಳ್ಳ;ಬೆಟ್ಟ ಕಣಿವೆ;ಟ್ರಾಫಿಕ್ಕು ಹೊಗೆ; ತುಂಬಾ ಗೋಜಲಿನ ದಾರಿ;ಸುಸ್ತಾದರೆ ಏನು ಮಾಡೋದು? ಕೇಳೋದು ಏನು ಬಂತು? ಜೇಬಿಂದ…
ಲೇಖಕರು: yajamanfrancis
ವಿಧ: Basic page
September 11, 2007
ಆತ ಕೂತಲ್ಲೇ ಕೂತಿದ್ದ. ಕದಲಲಿಲ್ಲ ಒಂದಿನಿತೂ ! ಬೆಳಗಾಗೆದ್ದಾಗ ಯಾರೋ ಹೇಳಿದರು – “ನೀನಿರುವುದು ಭಾರತದಲ್ಲಲ್ಲ, ಇದು ಪಾಕಿಸ್ತಾನ, ಹೊರಡು ಇಲ್ಲಿಂದ…” ಆ ವ್ಯಕ್ತಿ ಈ ಸಂದಿಗ್ಧತೆಯ ಉರುಳಿಗೆ ಸಿಕ್ಕಿದ್ದು, ಭಾರತ – ಪಾಕ್ ವಿಭಜನೆಗೊಂಡಾಗ. ಹೃದಯ ಡವಗುಟ್ಟತೊಡಗಿತು. ಮಂದಿ, ಸಾಮಾನು ಸರಂಜಾಮು ಹೊತ್ತು, ದೋಣಿ ಸೇರಿಕೊಳ್ಳುತ್ತಿದ್ದರು. ಎಲ್ಲರೂ ಮುಸ್ಲಿಂ ಪ್ರಜೆಗಳ ಹಾಗೆ ಬಟ್ಟೆ ಧರಿಸಿದ್ದರು. ತಾನು ಹೋದೇನು ಎಲ್ಲಿಗೆ? ಚಿಂತಿಸಿದ. ಇಲ್ಲೇ ತನ್ನ ಮನೆಯಿದೆ, ಹೆಂಡತಿ ಮಗುವಿದೆ, ಫಲವತ್ತಾದ ಭೂಮಿಯೂ…