ವಿಧ: ಬ್ಲಾಗ್ ಬರಹ
September 21, 2007
ಜಾತಿಕೂಪದಲ್ಲೊಂದು ಪ್ರೀತಿಯ ಹೂವು
ಬಿಹಾರದಿಂದ ಮತ್ತೆರಡು ಆಘಾತಕಾರಿ ಸುದ್ದಿಗಳು ಬಂದಿವೆ. ಸರಗಳ್ಳನನ್ನು ಒದ್ದು ಬೈಕ್ಗೆ ಕಟ್ಟಿ ಎಳೆದಾಡಿದ ಈ ಜನ ಈಗ ಹತ್ತು ಜನ ಕಳ್ಳರ ಕಣ್ಣುಗಳನ್ನೇ ಕಿತ್ತುಹಾಕಿದ್ದಾರೆ. ಇನ್ನೂ ಹತ್ತು ಜನ ಕಳ್ಳರನ್ನು ಬಡಿದು ಸಾಯಿಸಿದ್ದಾರೆ. ಇವರಿಗೆ ಒಟ್ಟಿಗೇ ಹತ್ತು ಜನವೇ ಹೇಗೆ ಸಿಗುತ್ತಾರೋ ತಿಳಿಯದು! ಅದೇನೇ ಇರಲಿ, ಇದನ್ನು ಮಾಡಿದವರು ಶ್ರೀಮಂತರೇನಲ್ಲ; ನನ್ನ ನಿಮ್ಮಂತಹ ಜನಸಾಮಾನ್ಯರೇ. ಸದ್ಯಕ್ಕೆ ರಾಜ್ಯವನ್ನು, ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಇಡೀ…
ವಿಧ: ಬ್ಲಾಗ್ ಬರಹ
September 21, 2007
ಮೊನ್ನೆ ಬಿಎಂಟಿಸಿ ಬಸ್ಸ್ ಹಿಂದುಗಡೆ ‘ಸಾರ್ವಜನಿಕ ವಾಹನ ಬಳಸಿ ವಾಯುಮಾಲಿನ್ಯ ತಗ್ಗಿಸಿ’ ಎಂಬ ಬರಹ ಓದಿದೆ. ಸಾರ್ವಜನಿಕ ವಾಹನ ಬಳಸಿದರೆ ವಾಯುಮಾಲಿನ್ಯ ಹೇಗೆ ಕಡಿಮೆ ಆಗುತ್ತಿದೆ. ಆ ವಾಹನಗಳಿಂದ ಹೊಗೆ ಬರುವುದಿಲ್ಲವೇ ಎಂಬ ತುಂಟ ಪ್ರಶ್ನೆ ಮನದಲ್ಲಿ ಎದ್ದಿತು. ಅಷ್ಟೇ ಅಲ್ಲ ‘ಸಾರ್ವಜನಿಕ ವಾಹನ ತಾನೇ ಬಳಸಿದರಾಯಿತು. ಉಚಿತವಾಗಿ ಸಿಗುವುದಾದರೆ’ ಎಂಬ ಮತ್ತೊಂದು ಅಭಿಪ್ರಾಯನೂ ನನ್ನೊಳಗೆ ಇತ್ತು.
ಪ್ರತೀ ನಾಗರಿಕನೂ ತನ್ನ ಸ್ವಂತ ವಾಹನದಲ್ಲಿ ಪಯಣಿಸಿದರೆ ಟ್ರಾಫಿಕ್ ಜಾಮ್, ವಾಯು ಮಾಲಿನ್ಯ, ಸಮಯ…
ವಿಧ: ಚರ್ಚೆಯ ವಿಷಯ
September 21, 2007
"ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ...." ಈ ಸಾಲು ಯಾವ ಕವನದಲ್ಲಿದೆ ಮತ್ತು ಇದನ್ನು ಬರೆದವರಾರು ಎಂಬುದನ್ನು ತಿಳಿದವರು ದಯಮಾಡಿ ತಿಳಿಸುವಿರಾ?
ವಿಧ: Basic page
September 21, 2007
ಎನ್ನೊಳಗೆ ನೀ ಹೊಕ್ಕುನಿನ್ನೊಳಗೆ ನಾ ಹೊಕ್ಕುನೀನಿಲ್ಲದೆ ನಾನುಂಟೆ ?ನಾನಿಲ್ಲದೆ ನೀನುಂಟೆ?ನಾ ಮೇಲೋ, ನೀ ಮೇಲೋಮೇಲ್ಯಾರು ಓ ದೇವರೆ? ನೀನೇ, ನಿನ್ನ ಒಕ್ಕಲಾದ ನಾನೆ ?ತಿಳಿಯದಾಗಿದೆ ನೋಡಾ
ವಿಧ: ಬ್ಲಾಗ್ ಬರಹ
September 20, 2007
ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ಇವರು ಎಲ್ಲವನ್ನು ತಮ್ಮ ನುಡಿಯಲ್ಲಿ ಸಾಧಿಸಿರೋದರಿಂದ ಇಂಗಲೀಸು ಅಂದರೆ ಅಸಡ್ಡೆ ಜಾಸ್ತಿ..
ಇವತ್ತು ನಡೆದ ವಿಷಯ ಹೇಳುತ್ತೀನಿ..
ಬೆಳಿಗ್ಗೆ arbeitsplatzಗೆ (ಕೆಲಸದಜಾಗ ಅಂತ ಜರ್ಮನಿಯಲ್ಲಿ ಆಫೀಸಿಗೆ ಕರೀತಾರೆ :)) ಬಂದ ಕೂಡಲೆ, ನನ್ನ ಜರ್ಮನ್ mitarbeiter (mit + arbeiter) ಅಂದರೆ ಜೊತೆಗೆಲಸಗಾರ :) ನನ್ನ ಬಳಿ ಬಂದು Guten Morgen ಅಂದು ಹಲ್ಲು ಕಿರಿದ..
ನಾನು ಮುಂಜಾವಿನ ಬಯಕೆ (ಮೊರ್ನಿಂಗ ವಿಷಸ್)ಹೇಳಿ.. ಏನಪ್ಪ ಸಮಾಚಾರ ಎಂದೆ..
"There´s…
ವಿಧ: ಬ್ಲಾಗ್ ಬರಹ
September 20, 2007
ಗಾಂಧಿ ಎಂದರೆ ಸೋನಿಯಾಗಾಂಧಿ.
ಮಹಾತ್ಮಾಗಾಂಧಿ ಬಿಡಿ,ಕೆಲವರ್ಷಗಳ ಹಿಂದೆ ಇದ್ದ ಇಂದಿರಾ,ರಾಜೀವ್ ಗಾಂಧಿಯನ್ನು ಮರೆತು ಬಿಡುವ ಕಾಂಗೈಗಳು 'ರಾಮ ಇಲ್ಲ'ಎನ್ನುವುದರಲ್ಲಿ ವಿಶೇಷವೇನಿಲ್ಲ.
ಇನ್ನು ಕರುಣಾನಿಧಿ- ಮುದಿ ಪ್ರಾಯ,ಮುಖ್ಯಮಂತ್ರಿ,ಜತೆಗೆ ಮಹಾನ್ ಸಾಹಿತಿ, ಅರಳುಮರಳು-ಅಹಂಕಾರ ಸಹಜ.ಬಾಯಿಗೆ ಬಂದುದನ್ನು ಹೇಳುತ್ತಾರೆ.ಬಾಕಿ ಧರ್ಮವನ್ನು ನಿಂದಿಸಲಿ ಎಂದು ಕೇಳುವುದು ಸರಿಯಲ್ಲ.
ಆ ಕಾಲದ ರಾಮಭಕ್ತರು ಸಾವಿರಾರು ಮೈಲಿ…
ವಿಧ: ಬ್ಲಾಗ್ ಬರಹ
September 20, 2007
ಉತ್ತರ ಕನ್ನಡ ಜಿಲ್ಲೆಯ ಹಳದಿಪುರವೆಂಬ ಊರಿನಿಂದ ‘ಯಕ್ಷರಂಗ’ ಎಂಬ ಮಾಸಪತ್ರಿಕೆ ಕಳೆದೊಂದು ವರ್ಷದಿಂದಲೂ ಪ್ರಕಟವಾಗುತ್ತಿದೆ. ಯಾಕ್ಷಗಾನಕ್ಕೆ ಮೀಸಲಾದ ಪತ್ರಿಕೆಯೊಂದರ ಹೊಣೆಯನ್ನು ಒಬ್ಬನೇ ಹೊರುವುದೆಂದರೆ ತ್ರಿವಿಕ್ರಮನ ಹೆಜ್ಜೆಗೆ ತಲೆಯೊಡ್ಡಿದಂತೆ ಎಂದು ಗೊತ್ತಿದ್ದೂ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು ಗೋಪಾಲಕ್ರಷ್ಣ ಭಾಗವತ ಎಂಬ ಪ್ರತಿಭೆ.
ಅಪರೂಪಕ್ಕೆಂಬಂತೆ, ಸಾಂಸ್ಕ್ರತಿಕ ಕಾಳಜಿಯುಳ್ಳ, ಸೀಮಿತ ಮಾರುಕಟ್ಟೆಯುಳ್ಳ, ಯಕ್ಷಗಾನದ ಕುರಿತು ಬರೆಯುವುದಕ್ಕೆ ಎಷ್ಟು ಸರಕು ಇದೆ ಎಂದು ಮನವರಿಕೆ…
ವಿಧ: Basic page
September 20, 2007
ಉತ್ತರ ಕನ್ನಡ ಜಿಲ್ಲೆಯ ಹಳದಿಪುರವೆಂಬ ಊರಿನಿಂದ ‘ಯಕ್ಷರಂಗ’ ಎಂಬ ಮಾಸಪತ್ರಿಕೆ ಕಳೆದೊಂದು ವರ್ಷದಿಂದಲೂ ಪ್ರಕಟವಾಗುತ್ತಿದೆ. ಯಾಕ್ಷಗಾನಕ್ಕೆ ಮೀಸಲಾದ ಪತ್ರಿಕೆಯೊಂದರ ಹೊಣೆಯನ್ನು ಒಬ್ಬನೇ ಹೊರುವುದೆಂದರೆ ತ್ರಿವಿಕ್ರಮನ ಹೆಜ್ಜೆಗೆ ತಲೆಯೊಡ್ಡಿದಂತೆ ಎಂದು ಗೊತ್ತಿದ್ದೂ ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದು ಗೋಪಾಲಕ್ರಷ್ಣ ಭಾಗವತ ಎಂಬ ಪ್ರತಿಭೆ.
ಅಪರೂಪಕ್ಕೆಂಬಂತೆ, ಸಾಂಸ್ಕ್ರತಿಕ ಕಾಳಜಿಯುಳ್ಳ, ಸೀಮಿತ ಮಾರುಕಟ್ಟೆಯುಳ್ಳ, ಯಕ್ಷಗಾನದ ಕುರಿತು ಬರೆಯುವುದಕ್ಕೆ ಎಷ್ಟು ಸರಕು ಇದೆ ಎಂದು ಮನವರಿಕೆ…
ವಿಧ: ಬ್ಲಾಗ್ ಬರಹ
September 20, 2007
ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಸಾಲು ಆರಂಭವಾಗುತ್ತದೆ. ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಪ್ರಾದೇಶಿಕ ವಿಶೇಷತೆ ಇರುತ್ತದೆ. ಭೀಮನ ಅಮವಾಸ್ಯೆ, ನಾಗರ ಚೌತಿ, ಪಂಚಮಿ (ಇವೆರಡೂ ಉತ್ತರ ಕರ್ನಾಟಕದಲ್ಲಿ ಬಲು ಜೋರಾಗಿ ಆಚರಿಸಲ್ಪಡುತ್ತದೆ.) ವರಮಹಾಲಕ್ಷ್ಮಿ, ನಂತರ ಭಾದ್ರಪದದಲ್ಲಿ ಸ್ವರ್ಣಗೌರಿ, ವಿನಾಯಕ ಚತುರ್ಥಿ ಹೀಗೆ ಮಕ್ಕಳಿಂದ ವೃಧ್ಧರವರೆಗೂ ಒಂದೊಂದು ರೀತಿಯ ಸಂಭ್ರಮ. ಹಬ್ಬಗಳ ಪ್ರಯುಕ್ತ ವಿಶೇಷ ರಿಯಾಯಿತಿ ಪ್ರಕಟಿಸಿ ಲಾಭ ಮಾಡಿಕೊಳ್ಳುವ ತವಕ ಬಟ್ಟೆ ಬರೆ ಅಂಗಡಿಯವರಿಗಾದರೆ, ಕೊಳ್ಳುವ…
ವಿಧ: ಬ್ಲಾಗ್ ಬರಹ
September 20, 2007
ನಮ್ಮ KSRTC ನವರು ಬಸ್ ಗಳಲ್ಲಿ ಸೂಕ್ತಿಗಳನ್ನೂ, ಸುಭಾಷಿತಗಳನ್ನೂ ತುಂಬಾ ದಿನಗಳಿಂದ ಬರೆಯುತ್ತಿದ್ದಾರೆ. ಇದು ಒಳ್ಳೆಯದೆ. ಆದರೆ ಇವರಿಗೆ ಪ್ರಾಸದ ಹುಚ್ಚು ಬಹಳ ಇದೆ. ಏನೇ ಬರೆಯಲಿ ಅದು ಪ್ರಾಸದಲ್ಲಿದ್ದರೆ ಜನರಿಗೆ ನಾಟುತ್ತದೆ ಅಂತ ಅನ್ಕೊಂಡಿದ್ದಾರೆ. ಕೆಲವು ಸಲ ಇದು ಅತಿರೇಕಕ್ಕೆ ಹೋಗುತ್ತದೆ.
ಇತ್ತೀಚಿಗೆ ಒಂದು ಬಸ್ ನಲ್ಲಿ ಕಂಡಿದ್ದು.
ಶಿವನೆಂದರೆ ನೆಲ ಜಲ
ಅರಿತು ನಡಿ ಬಲಾಬಲ
ಅಲ್ಲೆ ಇರುವುದು ಮನುಕುಲ.
ಇದು ಪರಿಸರ ಉಳಿಸಿಕೊಳ್ಳೊದರ ಬಗ್ಗೆ ಎನೋ ಸಂದೇಶ ಇರ ಬೇಕು ಅನ್ನಿಸುತ್ತೆ. ಆದರೆ…