ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..

ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..

ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..

ಇವರು ಎಲ್ಲವನ್ನು ತಮ್ಮ ನುಡಿಯಲ್ಲಿ ಸಾಧಿಸಿರೋದರಿಂದ ಇಂಗಲೀಸು ಅಂದರೆ ಅಸಡ್ಡೆ ಜಾಸ್ತಿ..

ಇವತ್ತು ನಡೆದ ವಿಷಯ ಹೇಳುತ್ತೀನಿ..
ಬೆಳಿಗ್ಗೆ arbeitsplatzಗೆ (ಕೆಲಸದಜಾಗ ಅಂತ ಜರ್ಮನಿಯಲ್ಲಿ ಆಫೀಸಿಗೆ ಕರೀತಾರೆ :)) ಬಂದ ಕೂಡಲೆ, ನನ್ನ ಜರ್ಮನ್ mitarbeiter (mit + arbeiter) ಅಂದರೆ ಜೊತೆಗೆಲಸಗಾರ :) ನನ್ನ ಬಳಿ ಬಂದು Guten Morgen ಅಂದು ಹಲ್ಲು ಕಿರಿದ..
ನಾನು ಮುಂಜಾವಿನ ಬಯಕೆ (ಮೊರ್ನಿಂಗ ವಿಷಸ್)ಹೇಳಿ.. ಏನಪ್ಪ ಸಮಾಚಾರ ಎಂದೆ..
"There´s a flu shot from the company." ಅಂತ ಅಂದ..
ಅವನು ಜರ್ಮನಿಯಲ್ಲಿ ಮಾತಾಡೋದನ್ನ ಹಾಗೆ ಇಂಗ್ಲೀಷಗೆ ಭಟ್ಟಿ ಇಳಿಸಿದ್ದ ಆ ಪುಣ್ಯಾತ್ಮಾ..
ನಾನು ಆವಕ್ಕಾದೆ... ಏನಪ್ಪ ಕಂಪನೀಲಿ.. ಫ್ಲು ಹೊಡೀತೀದಾರಾ.. ಅಂದೆ..

ಅದಕ್ಕೆ ಅವನು.. "Nein, nein.. Der Winter naht. Der Grippeimpfstoff steht zur Verfügung."
ಅಂತ ಅಂದ... ಮೊದಲು ತಿಳಿಲಿಲ್ಲ ಆಮೇಲೆ ನಿಧಾನವಾಗಿ ಅರಿವಾಯ್ತು.. ಹೆಮ್ಮಾರಿ ನೆಗಡಿನ ಓಡಿಸಲಿಕ್ಕೆ ಚುಚುಮದ್ದು ಕೊಡ್ತಾ ಇದ್ದಾರೆ.. ಅದಿಕ್ಕೆ ಕರೀತಿದ್ದಾನೆ ಅಂತ
ಸರಿ ಅವನ ಜೊತೆಗೆ Arzt (ಡಾಕ್ಟರ್ !!) ಹತ್ತಿರ ಹೋದೆ.

ಅವಳಿಗೋ ಒಂದು ಚೂರು ಇಂಗ್ಲೀಷು ಬರಲ್ಲ.. ನನಗಾದರೋ ಜರ್ಮನಿ ನುಡಿ ತುಸುತುಸು ತಿಳಿಯುತ್ತೆ.. ಆದರೆ ವೈದ್ಯಕೀಯ ನುಡಿಒರೆಗಳು ನನಗೆಲ್ಲಿ ತಿಳಿಯಬೇಕು..
ಅವಳಾದರೋ ನಾಲ್ಕೈದು ಇಂಜೆಕ್ಷನ್ ತೋರಿಸಿ ಯಾವದು ಕೊಡಲಿ ಅಂತ ಕೇಳ್ತಿದಾಳೆ.. ನನಗೋ ಅದರಲ್ಲಿ ಯಾವುದು ಅಂತ ತಿಳೀತಿಲ್ಲ..
ನನಗೆ ಮೈ ಬಿಸಿ ಏರಲಿಕ್ಕೆ ಸುರು ಆಯಿತು.. ಎಲ್ಲಿ ಈ ಮಾರಾಯತಿ ಗೊತಾಗದೇನೆ.. ಯಾವುದಾದರೊ Reaction ಆಗೋ ಚುಚ್ಚು ಮದ್ದು ಕೊಟ್ಟರೆ ಹೇಗೆ ಅಂತ
ಅಲ್ಲಿ ಹುಡುಕಿದರೆ ಯಾರಿಗೂ ಇಂಗಲೀಸು ಬರ್ತಾ ಇಲ್ಲ.. ಅಯ್ಯೋ ದೇವರೆ ಅನ್ನೋವಾಗ ಯಾವನೋ ಒಬ್ಬ ಒಂದು ಜರ್ಮನ-ಇಂಗಲೀಸು ಒರೆಗಂಟು ನೋಡಿದರು....
ನನ್ನ ಹೈಟು, ವೈಟು, ಬ್ಲಡ್ ಪ್ರೆಜರ್ , ಮತ್ತೆ ರಕ್ತ ನೋಡಿ.. ಕೊನೆಗೆ ಯಾವದನ್ನೋ ಒಂದು ಬರುತ್ತೆ ಅಂತ ಚುಚ್ಚಿದರು..
ಎಲ್ಲ ಆಯ್ತು ಅಂತ ಹಲ್ಲು ಕಿರಿದಳು.. ಅವಳಿಗೆ aufwiedersehen ( ಮತ್ತೆ ಸಿಗೋಣ :) ಅಂತ ವಿದಾಯ)ಹೇಳಿ..
ಅಬ್ಬ ಬದುಕಿದೆಯ ಬಡಜೀವವೆ ಅಂತ ಹೊರಬಂದೆ .. ಹಿಂದೆ ನೋಡದೆನೆ.. ನನ್ನ arbeitsplatzಗೆ ಹಿಂದಿರುಗಿದೆ..

ನನ್ನ ಆಫೀಸಿನಲ್ಲಿರೋರಿಗೆ ತುಸು ಇಂಗಲೀಸು ಗೊತ್ತು... (ಇಲ್ಲಿ ಇಂಗ್ಲಿಷ ಅವಶ್ಯಕತೆ ಇದ್ದರೆ ಮಾತ್ರ ಅಂಥವರಿಗೆ ಇಂಗ್ಲೀಷ ಟ್ರೇನಿಂಗ ಕೊಡುತ್ತಾರೆ..)
ಆದರೂ ಗೊತ್ತಿರೋ ಇಂಗ್ಲೀಷ ಅಂದರೆ ಹರುಕು ಮುರುಕು ಆದ Technical words ಅಷ್ಟೆ..
ಅದನ್ನೆ ಕಷ್ಟಪಟ್ಟು... ಹಾಗೂ ಹೀಗೂ ಮಾತಾಡುತಾರೆ..
ಹೀಗಾಗಿ ನಾನು ಇವರ ಜೊತೆಗೆ ಇಂಗಲೀಸಿನಲ್ಲಿ ತುಂಬಾ ನಿಧಾನವಾಗಿ ಮೆಲ್ಲಗೆ ಮಾತಾಡಬೇಕು...

ನಾನು ನನ್ನ ಇಂಡಿಯದ ಜೊತೆಗಲಸಗಾರರೊಂದಿಗೆ ಇಂಗಲೀಸಿನಲ್ಲಿ ಮಾತಾಡೋದನ್ನ ತುಂಬಾ ಗಮನಿಸಿದ್ದಾರೆ..
ಅದಕ್ಕೆ ಒಂದು ಸಾರಿ ಚಾ ಸಮಯದಲ್ಲಿ ನನ್ನ ಕೇಳಿದರು.. ನೀವು ಯಾಕೆ ನಿಮ್ಮ ನುಡಿಯಲ್ಲಿ ಮಾತಾಡೋದಿಲ್ಲ ಅಂತ ..
ಅದಕ್ಕೆ ನಾನೆಂದೆ.. ಇಂಗಲೀಸು ನಮಗೆ ಆಫೀಸಿಯಲ್ ನುಡಿ ಅದಿಕ್ಕೆ ಅದರಲ್ಲಿ ಮಾತಾಡೋದು..
ಆಗ ಅವನು ಹುಬ್ಬೇರಿಸಿ.. "ach so.., aber warum nicht Ihre Mutter-Sprache Ihre offizielle Sprache ist" ಅಂತ ಮತ್ತೆ ಕೇಳಿದರು (ಓಹೋ.. ಆದರೆ ನಿಮ್ಮ ತಾಯಿ ನುಡಿ ಯಾಕೆ ನಿಮ್ಮ official ನುಡಿ ಅಲ್ಲ?)
ಅದಕ್ಕೆ ನಾ ಹೇಳಿದೆ.. ಅದು ನಮ್ಮ ಹಣೆಬರಹ ಅಂತ.. ಅವರು ಸುಮ್ಮನೆ ನಕ್ಕರು.. ಏನು ತಿಳಿದರೋ ಏನೋ..

ಆದರೆ ಜನ ಒಳ್ಳೆಯವರು..

ಅಂತು ಇಂತು ಇವರನ್ನ್ ನೋಡಿ ಒಂತರ ಹೆಮ್ಮೆ ಬರುತ್ತೆ...
ಬಿನ್ನೆತ್ತೆಯಿಂದ ಇಂಜನೀಯರಿಂಗ, ಮೆಡಿಕಲ್ ಎಲ್ಲಾನು ಜರ್ಮನಿಯಲ್ಲೇ ಕಲೀತಾರಲ್ಲ ...
ನಮ್ಮ ದೇಸದಲ್ಲು ಹೀಗೆ ಇದ್ದರೆ ಚೆನ್ನ ಅಲ್ಲವ ಅನಕೋತೀನಿ.. ಆದರೆ ಅನಕೋಂಡು ಸುಮ್ಮನೆ ಕೂರಬೇಕಾಗಿದೆ ನನಗೆ..

Rating
No votes yet

Comments