ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 26, 2007
ಈ ತಲೆಬರಹದ ಲೇಖನವೊಂದನ್ನು ಈ ತಿಂಗಳ ( ಅಕ್ಟೋಬರ್ ೨೦೦೭) ಮಯೂರದಲ್ಲಿ ಪದಗತಿ ಅಂಕಣದಲ್ಲಿ ಶ್ರೀ ಕೆ.ವಿ.ನಾರಾಯಣ ಅವರು ಬರೆದಿದ್ದಾರೆ . ( ಅದೇಕೋ ಸಂಪದದ ಅವರ ಬ್ಲಾಗ್ ನಲ್ಲಿ ಅವರ ಲೇಖನಗಳು ಇತ್ತೀಚೆಗೆ ಕಾಣುತ್ತಿಲ್ಲ ) ಸಾರಾಂಶ ಹೀಗಿದೆ . ಕನ್ನಡದಲ್ಲಿ ಅನೇಕ ಬಗೆಗಳಿವೆ. ಪ್ರಮಾಣ(Standard) ಕನ್ನಡವನ್ನು ಎಲ್ಲ ಕನ್ನಡಿಗರ ನಡುವಿನ ಸಂವಹನಕ್ಕಾಗಿ ಶಿಕ್ಷಣದಲ್ಲೂ , ಬರಹದಲ್ಲೂ ಅಳವಡಿಸಿಕೊಂಡೆವು. ಆದರೆ ಈ ಪ್ರಮಾಣ ಕನ್ನಡವು ನಮ್ಮಲ್ಲನೇಕರಿಗೆ ನಮ್ಮದಲ್ಲ ಎನಿಸುತ್ತಿದೆ. ಮಾತಾಡುವ ಕನ್ನಡ ,…
ವಿಧ: ಬ್ಲಾಗ್ ಬರಹ
September 26, 2007
ನೀನಾಸಂ ಸಂಸ್ಕೃತಿ ಶಿಬಿರ ಅಕ್ಟೋಬರ್ ನಲ್ಲಿ ನಡೆಯುತ್ತಿರುವುದು ಸಂಪದದಲ್ಲಿ ಈಗಾಗಲೇ ಪ್ರಕಟವಾಗಿದೆ. ಇನ್ನೇನು ತಡ, ಹೊರಡುವ ಬೇಗ.. ಮತ್ತೆಂತ? ಸಿಗುವ ಮಾರಾಯ್ರೆ ಹೆಗ್ಗೋಡಿನಲ್ಲಿ?
ಲೇಖಕರು: anivaasi
ವಿಧ: ಬ್ಲಾಗ್ ಬರಹ
September 26, 2007
ಲೇಖಕರು: vijayamma
ವಿಧ: ಬ್ಲಾಗ್ ಬರಹ
September 26, 2007
ವರಿಷ್ಠರ ಭೇಟಿಗೆ ಬೆಂಗಳೂರು-ದೆಹಲಿ ಓಡಾಟ ನಂತರ ಮಂತ್ರಿಮಂಡಲ ರಚನೆ ಪರದಾಟ ಮತ್ತೆರಡು ತಿಂಗಳು ಮಸೀದಿ ತೀರ್ಥಕ್ಷೇತ್ರ ಭೇಟಿ ನಂತರ ಇದ್ದೇಇದೆ ಗೌಡರೊಂದಿಗೆ ಜಟಾಪಟಿ
ಲೇಖಕರು: thewiseant
ವಿಧ: ಚರ್ಚೆಯ ವಿಷಯ
September 25, 2007
ಓದುಗ ಮಿತ್ರರಿಗೆಲ್ಲ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಕೃಷ್ಣಾಷ್ಟಮಿ ಮತ್ತು ಕ್ರಿಸ್ಮಸ್ ಎರಡೂ ಸಂಭ್ರಮದ ಹಬ್ಬಗಳು. ಈ ಎರಡೂ ಭಗವದ್ ಅವತಾರಗಳ ಜೀವನ ಮತ್ತು ಸಂದೇಶಗಳಲ್ಲಿ ಅನೇಕ ಸಾಮ್ಯಗಳಿವೆ. ಕೆಲವು ಕುತೂಹಲಕಾರಿ ಹೋಲಿಕೆಗಳನ್ನು ಪಟ್ಟಿಮಾಡಿದ್ದೇನೆ. ಗಮನಿಸೋಣ. ಈ ಎರಡೂ ಅದ್ಭುತ ಅವತಾರಗಳೂ ಪೌರಾತ್ಯ ಜಗತ್ತಿನಿಂದ ಉಗಮಿಸಿದ್ದು. ಇವರೀರ್ವರ ತಂದೆ ತಾಯಂದಿರೂ ಧರ್ಮನಿಷ್ಠ ದೈವಭಕ್ತರು. ಯಾದವ ಕೃಷ್ಣ ಸೆರೆಮನೆಯಲ್ಲಿ ಜನಿಸಿದರೆ, ಯೇಸು ಕ್ರಿಸ್ತನ ಜನನ ಕೊಟ್ಟಿಗೆಯಲ್ಲಾಯಿತು. ಬಾಲಕ…
ಲೇಖಕರು: prakashrmgm
ವಿಧ: ಬ್ಲಾಗ್ ಬರಹ
September 25, 2007
ರಾಮನಗರ ತನ್ನ ನಗರಸಭಾ ಚುನಾವಣೆಗೆ ಸಜ್ಜಾಗುತ್ತಿರುವಂತೆ ತಾಲೂಕಿನಲ್ಲಿ ನಡೆದಿರುವ ಕೋಟ್ಯಾಂತರ ರೂ.ಗಳ ಕಾಮಗಾರಿಗಳ ಬಗ್ಗೆ ರಾಜ್ಯದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆ ಡಿ ಎಸ್ ಮತ್ತು ಬಿ ಜೆ ಪಿ ಪಕ್ಷಗಳ ಅಭ್ಯರ್ಥಿಗಳು ತಮ್ಮ ಶ್ರಮವೆಂದು ಹೇಳಿಕೊಳ್ಳಲಾರಂಭಿಸಿದ್ದಾರೆ. ರಾಮನಗರ ಕ್ಷೇತ್ರದ ಶಾಸಕರೂ ಆದ ಕುಮಾರಸ್ವಾಮಿ ರಾಮನಗರವನ್ನು ರಾಜ್ಯದಲ್ಲೆ ಮಾದರಿ ನಗರವನ್ನಾಗಿ ರೂಪಿಸುವ ಹಂಬಲದಿಂದ ಮುಖ್ಯ ಮಂತ್ರಿಯಾಗಿ ಹಣ ಮಂಜೂರು ಮಾಡಿದ್ದಾರೆ ಎಂದು ಜೆ ಡಿ ಎಸ್ ನವರು ಪ್ರಚಾರದಲ್ಲಿ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
September 25, 2007
ಪ್ರಪಂಚದ ಚಾವಣಿಯಾಗಿರುವುದಷ್ಟೇ ಅಲ್ಲ, ಮನುಷ್ಯನ ತಲೆ/ಮೆದುಳು ದೊಡ್ಡದಾಗಿ ಅಕ್ಷರಶಃ ಬೋಧಿವಿಕಾಸಕ್ಕೆ ಪರೋಕ್ಷ ಕಾರಣವಾದ ಟಿಬೆಟ್ ಅಚ್ಚರಿಗಳ ಆಗರ. ಓದಿ ಆ ವಿವರ ವಿಚಿತ್ರಾನ್ನದಲ್ಲಿ ಈ ವಾರ. ಶ್ರೀವತ್ಸ ಜೋಶಿ ..ವಿಚಿತ್ರಾನ್ನ
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
September 25, 2007
ವಿಚಿತ್ರಾನ್ನ....ಶೀವತ್ಸ ಜೋಷಿ ತಪ್ಪುಮಾಡಿದ್ದಕ್ಕೊಂದು imposition ಆದಂತೆಯೂ ಆಯ್ತು, ಅಂಕಣಕ್ಕೊಂದು ಲೇಖನ in position ಆದಂತೆಯೂ ಆಯ್ತು. ತಗೊಳ್ಳಿ ಇದು ಮುಷ್ಟಿ ತಪ್ಪಿದ್ದರಿಂದಾದ ಸೃಷ್ಟಿ, ತಾಜಾ ತಾಜಾ ವಿಚಿತ್ರಾನ್ನ ಒಂದು ಮುಷ್ಟಿ!  
ಲೇಖಕರು: vikashegde
ವಿಧ: ಚರ್ಚೆಯ ವಿಷಯ
September 25, 2007
೪ ದಿಕ್ಕುಗಳಾದ ಪೂರ್ವ , ಪಶ್ಚಿಮ, ಉತ್ತರ , ದಕ್ಷಿಣ ಇವುಗಳಿಗೆ ಕನ್ನಡದಲ್ಲಿ ಮೂಡಣ, ಪಡುವಣ, ಬಡಗಣ, ತೆಂಕಣ ಎನ್ನುವುದು ಸರಿಯೆ? ಇನ್ನುಳಿದ ೪ ದಿಕ್ಕುಗಳಾದ ಆಗ್ನೇಯ, ವಾಯುವ್ಯ, ಈಶಾನ್ಯ, ನೈರುತ್ಯಗಳಿಗೆ ಕನ್ನಡ ಪದಗಳು ಇವೆಯೆ? ಇದ್ದರೆ ಅವು ಏನು? ಬಲ್ಲವರು ತಿಳಿಸಿಕೊಡಬೇಕು.
ಲೇಖಕರು: Khavi
ವಿಧ: ಚರ್ಚೆಯ ವಿಷಯ
September 25, 2007
ಸುಮಾರು ಒಂದು ತಿಂಗಳಿನಿಂದ ನನಗೆ DLI ತಾಣ ಎಟುಕುತ್ತಿಲ್ಲ.. ಈ ಕೆಳಗಿನಂತೆ ಉಲಿಯುತ್ತಿದೆ ಈ ತಾಣ.. The page is currently unavailable Due to current high demand, the page you are looking for cannot be delivered right now. ನಿಮಗೂ ಹೀಗೆಯೇ ಬರುತ್ತಿರುವುದೋ..?