ವಿಧ: ಬ್ಲಾಗ್ ಬರಹ
May 13, 2007
ಸಮಾಜದ, ಪರಂಪರೆಯ, ಸನಾತನ ಧರ್ಮದ ಭಯ ಮತ್ತು ನಿಯಂತ್ರಣಗಳಾಚೆಯೂ ಒಂದು ಸಂಸಾರ ತಾನು ಏಕಘಟಕವಾಗಿ ಗಟ್ಟಿಯಾಗಿ ನಿಲ್ಲುವುದಕ್ಕಾಗಿಯೇ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ವ್ಯಕ್ತಿಯ ವೈಯಕ್ತಿಕ ಧರ್ಮ ಮತ್ತು ಸಂಸಾರದ ಸಮಷ್ಟಿ ಧರ್ಮಗಳ ನಡುವೆಯೇ ಸಂಘರ್ಷ ಸುರುವಾದರೆ ಅಲ್ಲಿ ಹೊಂದಾಣಿಕೆಯಾಗಲೀ ಸಹಜೀವನವಾಗಲೀ ಸಾಧ್ಯವೆ?
ತನ್ನ ತಾಯಿ ಪರಪುರುಷನ ಹಾಸುಗೆಯ ವಸ್ತುವಾಗುವುದನ್ನು ಮನಸಾ ಒಪ್ಪಿಕೊಳ್ಳಲಾರದ ಶ್ವೇತಕೇತು ತನ್ನ ತಾಯಿಯನ್ನು ಯಾರೋ ಉದ್ಧಾಲಕನ ಪತ್ನಿ ಎಂದುಕೊಂಡು ತಾನು ನಂಬಿದ…
ವಿಧ: ಚರ್ಚೆಯ ವಿಷಯ
May 13, 2007
ಏಕಬೆಳೆ,ಪಾಮೆಣ್ಣೆ ಇಂತಹ ಬೇರೆ ಬೇರೆ ಭಾಷೆಗಳ ಶಬ್ದಗಳನ್ನು ಸಂಧಿ ಮಾಡುವುದು ಕನ್ನಡಕ್ಕೆ ಹೊಸದೇ? ಅಂತಹ ಪದಗಳು ಚಾಲ್ತಿಯಲ್ಲಿವೆಯೇ? ಓದಿ ಇಗೋ ಕನ್ನಡ
ವಿಧ: ಚರ್ಚೆಯ ವಿಷಯ
May 13, 2007
’ಮಾತೆ’ಯರ ದಿನದಂದು ಶ್ರೀವತ್ಸ ಜೋಷಿಯವರು ಅಮ್ಮನ ಮಮತೆಯ ವಿವಿಧ ಮಜಲುಗಳನ್ನು ನಮ್ಮ ಮುಂದಿರಿಸಿದ್ದಾರೆ. ಅಂದ ಹಾಗೆ ಅಮ್ಮ ಎನ್ನುವ ಶಬ್ದ ಹೆಚ್ಚಿನೆಲ್ಲಾ ಭಾಷೆಗಳಲ್ಲಿ ’ಮ’ಕಾರದೊಂದಿಗೆ ಥಳಕು ಹಾಕಿಕೊಂಡಿದೆಯಂತೆ. ಲೇಖನ ಓದಿ: ಅಮ್ಮ
ವಿಧ: ಬ್ಲಾಗ್ ಬರಹ
May 13, 2007
“ನಾನು ಹೀಗೆ ಸೆರೆಗೆ ಸಿಕ್ಕಿಬಿದ್ದೆ. ಜನ ಅದನ್ನು ಪ್ರೀತಿಯಲ್ಲಿ ಸಿಕ್ಕಿಬೀಳುವುದು ಅನ್ನುತ್ತಾರೆ. ಅವಳು ನನಗೆ ಪರಿಪೂರ್ಣ ಹೆಣ್ಣಿನಂತೆ ಕಂಡಳು. ಅವಳೆದುರು ನಾನು ಪರಿಶುದ್ಧ ಕಾಗೆಯಂತಿದ್ದೆ. ಈ ಲೋಕದಲ್ಲಿ ತನಗಿಂತ ಕೀಳಾದ ಹಾಳಾದ ಮನುಷ್ಯರು ಕಣ್ಣಿಗೆ ಬೀಳದಷ್ಟು ಪತಿತನಾದ ಮನುಷ್ಯ ಯಾರೂ ಇಲ್ಲ ಅನ್ನುವುದು ಪರಮ ಸತ್ಯ. ಆದ್ದರಿಂದಲೇ ಪತಿತನಾದವನು ತನಗಿಂತ ಕೀಳಾದವನ್ನು, ಹಾಳಾದವನನ್ನು ಕಂಡು ಆತ್ಮ ತೃಪ್ತಿಯಿಂದಲೂ ಜಂಬದಿಂದಲೂ ಬೀಗುತ್ತಾನೆ. ನಾನೂ ಹಾಗೆಯೇ ಇದ್ದೆ. ನಾನು ಮದುವೆಯಾಗಿದ್ದು…
ವಿಧ: ಬ್ಲಾಗ್ ಬರಹ
May 13, 2007
“ನಿಮಗೆ ಗೊತ್ತಾ” ಪಾಸ್‌ಡ್ನಿಶೆವ್ ಟೀಪುಡಿಯನ್ನೂ ಸಕ್ಕರೆ ಡಬ್ಬಿಯನ್ನೂ ಚೀಲಕ್ಕೆ ಹಾಕುತ್ತ ಕೇಳಿದ, “ನಿಮಗೆ ಗೊತ್ತಾ, ಜಗತ್ತನ್ನು ನರಳುವ ಹಾಗೆ ಮಾಡುವ ಹೆಣ್ಣಿನ ಶಕ್ತಿ ಈಗ ನಾನು ಹೇಳಿದ ಸಂಗತಿಗಳಿಂದಲೇ ಹುಟ್ಟಿದ್ದು.”
“ಹೆಂಗಸಿನ ಶಕ್ತಿ ಅಂದರೇನು? ಹೆಣ್ಣಿಗೆ ಹಕ್ಕುಗಳಿಲ್ಲ, ದಮನಕ್ಕೆ ಒಳಗಾಗಿದ್ದಾಳೆ ಅನ್ನುತ್ತಾರೆ. ಕಾನೂನುಗಳೆಲ್ಲ ಗಂಡಸರ ಪರವಾಗಿಯೇ ಇವೆಯಲ್ಲ?” ನಾನು ಕೇಳಿದೆ.
“ಕರೆಕ್ಟು. ಅದೇ, ಈ ಅಸಾಮಾನ್ಯವಾದ ಶಕ್ತಿಗೆ ಅದೇ ಕಾರಣ. ಅತ್ಯಂತ ಕೀಳು ಮಟ್ಟದ ಅಪಮಾನಕ್ಕೆ…
ವಿಧ: ಬ್ಲಾಗ್ ಬರಹ
May 13, 2007
“ಎಲ್ಲವೂ ಕರೆಕ್ಟಾಗಿ ಸೆಟ್ಟಾಗಿತ್ತು-ನನ್ನ ಪರಿಸ್ಥಿತಿ, ಅವಳ ಡ್ರೆಸ್ಸು, ನಮ್ಮ ಬೋಟಿಂಗು. ಬೋನಿಗೆ ಬಿದ್ದೆ. ಹಿಂದೆ ಇಪ್ಪತ್ತು ಸಾರಿ ತಪ್ಪಿಸಿಕೊಂಡಿದ್ದೆ, ಈಗ ಬಿದ್ದೆ. ಜೋಕು ಮಾಡುತ್ತಿಲ್ಲ. ಈಗಿನ ಕಾಲದ ಮದುವೆ ಅಂದರೆ ಬೋನು. ರೆಡೀ ಮಾಡಿಟ್ಟಿರುತ್ತಾರೆ. ಸಹಜವಾದ ಮದುವೆ ಹೇಗಿರುತ್ತದೆ? ಹುಡುಗಿ ವಯಸ್ಸಿಗೆ ಬಂದಳು, ಮದುವೆ ಮಾಡಬೇಕು. ಅಪ್ಪ ಅಮ್ಮ ಅರೇಂಜು ಮಾಡುತ್ತಾರೆ. ಸಿಂಪಲ್ಲು. ಈಗಲೂ ಮನುಷ್ಯರೆಲ್ಲ ಹಾಗೇ ಮಾಡುತ್ತಾರೆ. ಚೀನೀಯರು, ಹಿಂದೂಗಳು, ಮುಸಲ್ಮಾನರು, ಸಾಮಾನ್ಯ ಜನ, ಎಲ್ಲರೂ. ಇಡೀ…
ವಿಧ: ಬ್ಲಾಗ್ ಬರಹ
May 13, 2007
“ಹೌದು. ಅವಳು ಧರಿಸಿದ್ದ ಜರ್ಸಿಗೆ, ಅವಳ ಉಡುಪಿನ ನಿರಿಗೆಗಳಿಗೆ, ಅವಳ ಗುಂಗುರುಕೂದಲಿಗೆ ಮರುಳಾದೆ, ಸೆರೆಯಾದೆ.
“ನನ್ನನ್ನು ಸೆರೆಹಿಡಿಯುವುದು ಸುಲಭವಾಗಿತ್ತು. ಕೃತಕವಾದ ಪರಿಸರದಲ್ಲಿ, ಹಾಟ್ ಹೌಸಿನಲ್ಲಿ ಬೆಳೆಯುವ ಸೌತೆಕಾಯಿಯ ಹಾಗೆ ಬೆಳೆದಿದ್ದೆ. ಅತಿ ಸಮೃದ್ಧವಾದ ಊಟ ಉಪಚಾರ, ಮೈಮುರಿಯುವಂಥ ಕೆಲಸ ಇಲ್ಲ, ಮನಸ್ಸನ್ನು ಕ್ರಮಬದ್ಧವಾಗಿ ಕೆರಳಿಸಿಕೊಳ್ಳುವುದೇ ಕೆಲಸ. ನನಗೆ ಇತ್ತೀಚಿನವರೆಗೂ ಇದು ಗೊತ್ತಾಗಿರಲಿಲ್ಲ. ಈಗ ಗೊತ್ತಾಗಿದೆ. ಬೇರೆಯವರಿಗೆ ಗೊತ್ತಾಗುತ್ತಿಲ್ಲವಲ್ಲ ಎಂದು…
ವಿಧ: ಬ್ಲಾಗ್ ಬರಹ
May 13, 2007
“ಆಗಿದ್ದೆಲ್ಲ ಆಗಿಹೋಯಿತು. ನನಗೆ ಹಾಗೇ ಆಗಬೇಕಾಗಿತ್ತು! ಇಂಥ ವಿಷಯಗಳಲ್ಲಿ ಪಾಪದ ಹೆಣ್ಣುಗಳೇ ಯಾವಾಗಲೂ ಮೋಸಹೋಗುವುದು. ಅಮ್ಮಂದಿರು, ಅದರಲ್ಲೂ ಹೆಣ್ಣುಮಕ್ಕಳ ಅಮ್ಮಂದಿರು, ತಮ್ಮ ಗಂಡಂದಿರಿಂದ ಪಾಠ ಕಲಿತಿರುತ್ತಾರೆ, ಅವರಿಗೆ ಎಲ್ಲಾ ಗೊತ್ತಿರುತ್ತದೆ. ಆದರೂ ಮದುವೆಯಾಗಲಿರುವ ವರ ಪರಿಶುದ್ಧನೆಂದೇ ನಂಬಿದವರಹಾಗೆ ನಟನೆಮಾಡುತ್ತಾರೆ. ಮಗಳಿಗಾಗಿ ಗಂಡನ್ನು ಹಿಡಿಯುವುದಕ್ಕೆ, ಮತ್ತೆ ತಮ್ಮನ್ನೂ ನಂಬಿಸಿಕೊಳ್ಳುವುದಕ್ಕೆ, ಗಾಳ ಹೇಗೆ ಹಾಕಬೇಕು ಎಂದು ಗೊತ್ತು ಅವರಿಗೆ.
“ಗೊತ್ತಿಲ್ಲದೆ ಇರುವುದು ನಮಗೆ,…
ವಿಧ: ಬ್ಲಾಗ್ ಬರಹ
May 13, 2007
ನನ್ನ ಸಹೋದ್ಯೋಗಿ ರಾಘವೇಂದ್ರ ರಾವ್ ಅವರ ಮಗಳು ’ಸಿರಿ’.
ವಂದನೆಗಳು,
ವಸಂತ್ ಕಜೆ.
ವಿಧ: ಬ್ಲಾಗ್ ಬರಹ
May 13, 2007
ನನ್ನ ಸಹೋದ್ಯೋಗಿ ರಾಘವೇಂದ್ರ ರಾವ್ ಅವರ ಮಗಳು ’ಸಿರಿ’.
ವಂದನೆಗಳು,
ವಸಂತ್ ಕಜೆ.