ವಿಧ: ಬ್ಲಾಗ್ ಬರಹ
May 16, 2007
ಇತ್ತೀಚಿಗೆ
ಸಂಬಂಧಗಳು ಉಳಿಯೋದು
ಹನಿಗವನಗಳಷ್ಟು ಉದ್ದಮಾತ್ರವೆ ಹೆಚ್ಚು;
ಅದಕ್ಕೆ ಇರಬೇಕು
ಇತ್ತೀಚಿಗೆ ಎಲ್ಲರಿಗೂ
ಹನಿಗವನಗಳೆ ಅಚ್ಚು-ಮೆಚ್ಚು!
---ಅಮರ್
ವಿಧ: ಬ್ಲಾಗ್ ಬರಹ
May 16, 2007
ನಮ್ಮ ಕಂಪೆನಿಯಲ್ಲಿ ನಿಶ್ಚಿತಾರ್ಥವಾದ ಸಹೋದ್ಯೋಗಿ ಸ್ನೇಹಿತೆಯ ಕಂಡು... ನಾನು ಅವಳಾಗಿ ಕಲ್ಪಿಸಿ
ಬರೆದದ್ದು....
-: ಹೃದಯ ಪ್ರಭು ಗೀತೆ:-
ನಿಮ್ಮ ನೋಡಿದಂದಿನಿಂದ
ಹೃದಯಗೀತೆ ಹಾಡುತಿದೆ;
ನಿಮ್ಮ ನೆನೆದರೆ ಸಾಕು
ರೋಮಾಂಚನ ಮೈಗೂಡುತಿದೆ;
ನಿಮ್ಮ ಕಾಣದೆ ಅರೆಘಳಿಗೆ
ರೆಪ್ಪೆ ಮುಚ್ಚದೆ ನಿದ್ದೆಗೆ;
ನಿಮ್ಮ ಕನಸ ಕಾಣದೆ
ಕಂಗಳು ಬೆಳಕ ನೋಡದೆ;
ನಿಮ್ಮ ಒಲವು ದೊರೆಯದೆ
ನನ್ನ ಬಾಳಿಗರ್ಥವೆಲ್ಲಿದೆ?
ನಿಮ್ಮ ನೆರಳು ಸೋಕದೆ
ಮೊಗವು ಹಾಗೆ ಬಾಡಿದೆ;
ಹೊಸಬಾಳಿಗೆ ಮುನ್ನುಡಿ ಬರೆದವರೆ
ತಾಳಿಯ…
ವಿಧ: ಬ್ಲಾಗ್ ಬರಹ
May 16, 2007
ಅದು ಚೆನ್ನಾನೋ ಇಲ್ಲಾ ಇದು ಚೆನ್ನಾನೋ ಅಂತ ಅನ್ಕೋತಾ ಕೂತ್ರೆ, ಚೆನ್ನಾಗಿರೋದೆಲ್ಲಾ ಚೆಂದ ಕಳ್ಕೊಂಡು ಛಿದ್ರವಾಗಿ ಹೋಗಿರುತ್ತೆ, ಹಾಗ್ ಆಗೋದ್ಕಿಂತ ಮುಂಚೆ ಯಾರ್ಯಾರಿಗೆ ಏನೇನ್ ಚೆನ್ನ ಅನ್ಸುತ್ತೆ, ಅದನ್ನ ಮಾಡ್ಬೇಕು ಅಷ್ಟೆ... ನಾವು ಇಷ್ಟ ಪಟ್ಟಿದ್ದು ಸಿಕ್ಕ್ರೆ ಚೆನ್ನ, ಇಲ್ಲಾ ಅಂದ್ರೆ ಸಿಕ್ಕಿದ್ನ ಇಷ್ಟ ಪಡ್ಬೇಕು....
ಏನಂತಿರಾ?
ವಿಧ: ಬ್ಲಾಗ್ ಬರಹ
May 16, 2007
ಹೀಗಾಗಿದೆ ಬದುಕು...
ಹರೆಯದಲಿ ಹುಂಬುತನದಿಂದ ಹಂಬಲಗಳ ಹಿಂದೆಹೋಗಿ, ಹೃದಯಕ್ಕೆ ಹುಚ್ಚು-ಹಿಡಿಸಿಕೊಂಡು, ಹೋಗುವಾಗ ಹರುಷ, ಹುರುಪುಲ್ಲಿದೇ ಹೇಯಕರವಾಗಿ ಹೋಗ್ತೀವಿ;
ಗೊಂದಲಗಳ ಗೋಜಿನಿಂದಾಗಿ ಬದುಕೆಲ್ಲಾ ಗಿಜಿ-ಗಿಜಿ;
ವಿಧ: ಬ್ಲಾಗ್ ಬರಹ
May 16, 2007
ನೂರು ಕೋಟಿದಾಟಿರುವ, ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಅಭಿವೃಧ್ದಿ ಪಥದಲ್ಲಿ ಸಾಗುತ್ತಿರುವ ಭಾರತದಂತಹ ದೇಶವನ್ನು ಆಳುತ್ತಿರುವ ನಮ್ಮ ರಾಜಕಾರಣಿಗಳಿಗೆ ಕನಿಷ್ಟ ವಿದ್ಯಾರ್ಹತೆಯೂ ಅಗತ್ಯವಿಲ್ಲವೆಂದಾದರೆ, ನಮಗೆ ನಾಚಿಕೆಯೆನಿಸುತ್ತದೆ. ಇಂದಿನ ಕಾಲದಲ್ಲಿ ಒಂದು ಜವಾನನ ಕೆಲಸಕ್ಕೂ ವಿದ್ಯಾರ್ಹತೆ ನಿಗದಿ ಪಡಿಸಿರುವಾಗ ಆಡಳಿತದ ಚಿಕ್ಕಾಣಿ ಹಿಡಿದಿರುವ ನಮ್ಮ ನಾಯಕರಿಗೆ ವಿದ್ಯೆಯ ಅಗತ್ಯ ಕಾಣುತ್ತಿಲ್ಲವೆ. ಇಂತಹ ಪರಿಸ್ಥಿತಿಯಿರುವಾಗಲೆ ಆಡಳಿತವು ಅಧಿಕಾರಿಗಳ ಕೈ ವಶವಾಗಿ ,…
ವಿಧ: Basic page
May 16, 2007
[ಇಂಗ್ಲೆಂಡಿನ ರಾಜಕುಮಾರಿ ಡಯಾನಾ ಸತ್ತ ಸಮಯದಲ್ಲೇ, ಮದರ್ ತೆರೇಸಾ ಸತ್ತ ಸಮಯದಲ್ಲೇ, ಅಲ್ಜೀರಿಯಾದಲ್ಲಿ ನಡೆದ ಹಳ್ಳಿಯ ತಾಯಂದಿರು, ಅವರೊಡನಿದ್ದ ಹಸುಗೂಸುಗಳ ಹತ್ಯಾಕಾಂಡ ಸುದ್ದಿಯಾಗದೇ ತೇಲಿಹೋದಾಗ]
ಅಮ್ಮಂದಿರಾ, ನಿಮ್ಮ ಸುದ್ದಿಯೆಂದರೆ,ಕ್ಷುಲ್ಲಕ ಸಾವಿಗೀಡಾದ ಚೆಲುವೆ ಬಿಳೀ ರಾಜಕುಮಾರಿಅಮ್ಮನ ಸುದ್ದಿಯಲ್ಲ.ವಾತ್ಸಲ್ಯಪೂರ್ಣ ದೇವತಾಸ್ವರೂಪಿ ಬಿಳೀ ಸೀರೆಯ ಅಜ್ಜಿಅಮ್ಮನ ಸುದ್ದಿಯಲ್ಲ.
ಮುಂಜಾನೆ ಅರೆ ಹರಿದ ಬೆಳಕಿನಲ್ಲಿ,ಆಲ್ಜೀರಿಯಾದ ಹಳ್ಳಿಗಾಡಿನ ಮುರುಕು ಮನೆಗಳಲ್ಲಿ,ಕೊರಳು ಕೊಯ್ಯಲು ಬಂದ…
ವಿಧ: ಬ್ಲಾಗ್ ಬರಹ
May 16, 2007
ಹನಿ ಹನಿಗೂಡಿದರೆ ಹಳ್ಳವಾಗುತ್ತದೆ ಎಂದು ಯಾರು ಹೇಳಿದ್ದು? ಹೇಗೆ ಹಳ್ಳವಾಗುತ್ತದೆ ಎಂದು ಕೇಳದೆ ಒಪ್ಪಿಬಿಟ್ಟೆನಲ್ಲ! ಹಳ್ಳವಾದರೂ ಅದು ಎಂಥ ಹಳ್ಳ; ನನಗೆ ಬೇಕಾದ ರೂಪ ಇದೆಯ; ಬೇಕಾದಷ್ಟು ದೊಡ್ಡದಿದೆಯ; ಅಂದಕೊಂಡಷ್ಟೇ ಚಿಕ್ಕದಾಗಿ ಉಳಿದಿದೆಯ; ಹಳ್ಳವಾಗಲು ಹತ್ತು ಹಲವು ಬೇರೆ ಬೇರೆ ಅನುಕೂಲಗಳು ಬೇಕು ಅನ್ನೋದು ಹೇಗೆ ನನಗೆ ತಿಳಿಯದೇ ಹೋಯಿತು ಅಂತ ಬೇಸರವಾಗತ್ತೆ.ಅದೆಲ್ಲಾ ಪಾಂಡಿತ್ಯ ಬದಿಗಿಡಿ. ಪಂಡಿತರನ್ನು ಬಯ್ಯೋ ಪಂಡಿತ ಆಗಬಾರದು. ಆದರೂ ನೋಡಿ- ಆಶ್ಚರ್ಯವಾಗತ್ತೆ. ಹನಿಗಳು ಕೂಡುತ್ತಲೇ ಇದ್ದರೂ…
ವಿಧ: Basic page
May 16, 2007
ಮೋಡದೊಂದಿಗೆ ಗುದ್ದಾಡಲು, ಆಕಾಶವನ್ನು ಮುಟ್ಟಲು... ಬನ್ನಿ
ಮೋಡದ ಜೊತೆ ಗುದ್ದಾಡಬೇಕೇ? ದೂರದಲ್ಲೆಲ್ಲೋ ಕಾಣುವ ಆಕಾಶವೆಂಬುದನ್ನು ಮುಟ್ಟಬೇಕೆ? ವಿಶಾಲ ಪಶ್ಚಿಮ ಘಟ್ಟವನ್ನು ಒಂದು ಕೇಂದ್ರ ಬಿಂದುವಾಗಿಟ್ಟುಕೊಂಡು ಸುತ್ತಲೂ ನೋಡಬೇಕೆ? ಇನ್ನು ಕರ್ನಾಟಕಕ್ಕೇ ಕರೆಂಟುಕೊಡುವುದಕ್ಕಾಗಿ ಸಾವಿರಾರು ಎಕರೆ ಮುಳುಗಡೆ ಮಾಡಿದಂತೆ ವಾರಾಹಿ ಹಿನ್ನೀರಿನ ಕರಾಳ ದೃಶ್ಯ ನೋಡಬೇಕೆ? ಹಾಗಿದ್ದರೆ ಬನ್ನಿ... ನಿಮ್ಮನ್ನು ಕೈ ಬೀಸಿ ಕರೆಯತ್ತಿದೆ ಕುಂದಾದ್ರಿ ಬೆಟ್ಟ.
ದೂರದಲ್ಲೋ ಕಾಣುವ ಮೋಡ ಈ ಕುಂದಾದ್ರಿಯ ಮೇಲೆ…
ವಿಧ: ಬ್ಲಾಗ್ ಬರಹ
May 16, 2007
http://www.kannadasaahithya.com http://www.kanlit.com
ತನ್ನ ಆರಂಭಕಾಲದಿಂದಲೂ, ಕನ್ನಡಸಾಹಿತ್ಯ.ಕಾಂ, ಕನ್ನಡದಲ್ಲಿಯೇ ಅಲ್ಲದೇ, ಅಂತರ್ಜಾಲ ಮಾಧ್ಯಮದಲ್ಲಿನ, ಭಾರತೀಯ ಭಾಷಾ ವಲಯದಲ್ಲಿ ಹಲವು ಪ್ರಥಮಗಳನ್ನು ಯಶಸ್ವಿಯಾಗಿ ಸೃಷ್ಟಿಸುತ್ತಾ ಸಾಗಿದೆ. ಕನ್ನಡ ಸಾಹಿತ್ಯದ ಉತ್ಕೃಷ್ಟ ಕೃತಿಗಳನ್ನು ಅಂತರ್ಜಾಲದಲ್ಲಿ ಲೇಖಕರ ಅನುಮತಿಯೊಂದಿಗೆ, ಮೊಟ್ಟಮೊದಲ ಬಾರಿಗೆ ಒದಗಿಸಿದ್ದಲ್ಲದೆ, ಕನ್ನಡಕ್ಕೆ ಬೇಕಾದ ತಾಂತ್ರಿಕ ಪರಿಕರಗಳನ್ನು ಅಭಿವೃದ್ಧಿಪಡಿಸಲು…
ವಿಧ: ಬ್ಲಾಗ್ ಬರಹ
May 16, 2007
http://www.kannadasaahithya.com http://www.kanlit.com
ತನ್ನ ಆರಂಭಕಾಲದಿಂದಲೂ, ಕನ್ನಡಸಾಹಿತ್ಯ.ಕಾಂ, ಕನ್ನಡದಲ್ಲಿಯೇ ಅಲ್ಲದೇ, ಅಂತರ್ಜಾಲ ಮಾಧ್ಯಮದಲ್ಲಿನ, ಭಾರತೀಯ ಭಾಷಾ ವಲಯದಲ್ಲಿ ಹಲವು ಪ್ರಥಮಗಳನ್ನು ಯಶಸ್ವಿಯಾಗಿ ಸೃಷ್ಟಿಸುತ್ತಾ ಸಾಗಿದೆ. ಕನ್ನಡ ಸಾಹಿತ್ಯದ ಉತ್ಕೃಷ್ಟ ಕೃತಿಗಳನ್ನು ಅಂತರ್ಜಾಲದಲ್ಲಿ ಲೇಖಕರ ಅನುಮತಿಯೊಂದಿಗೆ, ಮೊಟ್ಟಮೊದಲ ಬಾರಿಗೆ ಒದಗಿಸಿದ್ದಲ್ಲದೆ, ಕನ್ನಡಕ್ಕೆ ಬೇಕಾದ ತಾಂತ್ರಿಕ ಪರಿಕರಗಳನ್ನು ಅಭಿವೃದ್ಧಿಪಡಿಸಲು…