ವಿಧ: Basic page
May 18, 2007
(ಸುಖಾಂತವೋ ದುಃಖಾಂತವೋ ತಿಳಿಯದ ಬುದ್ಧ ಜಾತಕ ಕತೆಯನ್ನು ಆಧರಿಸಿದ ಕಥನ ಕವನ)
-೧-ಊರು ಊರಿಗೆ ಸುತ್ತಿ ಸರಕನು ಕೊಂಡು ಮಾರುತಇರುಳು ಇಳಿದೊಡೆ ಪೇಟೆ ಪಕ್ಕದಿನಿದ್ದೆ ಝಂಪಿಗೆ ಇಳಿವವರೆಗೂ ಜೂಜನಾಡುವ ರೂಢಿಗಿಳಿದವ ಧನಿಕ ಚುರುಕುಮತಿ.
ಎಂದಿನಂತೇ ಪಣದ ಗಂಟನುಹೊತ್ತ ಧನಿಕನು ಜೂಜನಾಡಲು ಕಟ್ಟೆ ಹತ್ತಿದನು.ಪಣದ ಗಂಟನು ತೂಗಿ ಅಳೆಯುತ ಒಬ್ಬ ಠಕ್ಕಾ ಜೂಜುಕೋರನು ಎದುರು ಬಂದೊಡೆದೃಷ್ಠಿ ಸಂದಿತು; ಮನಸು ಒಪ್ಪಿತು;ಜೂಜಿನಾಟದ ಮೋಹ ಮೋಜಿಗೆ ಮಾರು ಹೋದವರಾಟವಾಡಲುಕೂತೊಡನೆ ಉತ್ಸಾಹದಲ್ಲಿ ಅರಳಿಕೊಂಡವು ಲಕ್ಷ…
ವಿಧ: Basic page
May 18, 2007
ಶೌಟಾಲಯ(shoutಆಲಯ) : ವಿಧಾನಸಭೆ, ಲೋಕಸಭೆಗಳು, ಗಂಟಲ್‌ಮನ್‌ಗಳ ದರ್ಬಾರು ನೆಡೆಯುವ ಸ್ಥಳ
ಜಾಗಟೀಕರಣ : ಜಾಗತೀಕರಣದ ಬಗ್ಗೆ ವಿಶ್ವಕ್ಕೇ ಭಾಷಣ ಬಿಗಿಯುವುದು.
ಉದಾರೀಕರಣ : ಕೆಲವು ಹುಡುಗಿಯರು ತಮಗೆ ಪ್ರಪೋಸ್ ಮಾಡಿದ “ಸರಿ ಇರದ” ಹುಡುಗರ ಬಗ್ಗೆ ಉದಾರ ಭಾವನೆ ಹೊಂದುವುದು; ನಟಿಯರು “ಪಾತ್ರಕ್ಕೆ ಅವಶ್ಯವಿ(ರದಿ)ದ್ದರೆ” ವಿವಸ್ತ್ರರಾಗಿ ದೇಹ ಪ್ರದರ್ಶನ ಮಾಡುವಾಗ ಅನುಸರಿಸುವ ಉದಾರತೆ(ಉದ್ಧಾರತೆ)! ; ಉದ್ಧಾರದ ದಾರಿ ತೋರುವುದು.
ಹಣ : “ಹಣವೆಂದರೆ ಹೆಣವೂ ಬಾಯಿ ಬಿಡುತ್ತದೆ” ಹಾಗಾಗಿ ಇದನ್ನು…
ವಿಧ: ಬ್ಲಾಗ್ ಬರಹ
May 18, 2007
“ಹೌದು. ಅಸೂಯೆ. ಮದುವೆಯಾದ ಎಲ್ಲರಿಗೂ ಗೊತ್ತಿರುವ, ಆದರೆ ಎಲ್ಲರೂ ಮುಚ್ಚಿಡುವ ರಹಸ್ಯ. ಮನುಷ್ಯತ್ವವನ್ನು ಭ್ರಷ್ಟಗೊಳಿಸುವ ಪರಸ್ಪರ ದ್ವೇಷವಲ್ಲದೆ ಬಲುದೊಡ್ಡ ವೈವಾಹಿಕ ಗಾಯವಾಗುವುದು ಅಸೂಯೆಯಿಂದ. ಮೌನ ಒಪ್ಪಿಗೆಯಿಂದೆಂಬಂತೆ ಎಲ್ಲರೂ ಅಸೂಯೆಯನ್ನು ಬಚ್ಚಿಟ್ಟುಕೊಳ್ಳಲು ನಿರ್ಧಾರಮಾಡಿರುತ್ತಾರೆ. ಅಸೂಯೆಗೆ ಒಳಗಾದ ಪ್ರತಿಯೊಬ್ಬನೂ ಇದು ನನ್ನೊಬ್ಬನ ದುರದೃಷ್ಟ ಅಂದುಕೊಳ್ಳುತ್ತಾನೆಯೇ ಹೊರತು ಮನುಷ್ಯನ ವಿಧಿಯೇ ಅದು ಎಂದುಕೊಳ್ಳುವುದಿಲ್ಲ. ನಾನೂ ಹಾಗಿದ್ದೆ. ಅನೈತಿಕವಾಗಿ ಬದುಕುವ ದಂಪತಿಗಳ ನಡುವೆ…
ವಿಧ: ಬ್ಲಾಗ್ ಬರಹ
May 18, 2007
“ಹೌದು. ಮನುಷ್ಯ ಮನುಷ್ಯನ ಹಾಗೆ ಬದುಕದೆ ಇದ್ದಾಗ ಅವನು ಪ್ರಾಣಿಗಿಂತ ಕೀಳು. ನಾನು ಹೀಗೆ, ಹಂದಿಯ ಹಾಗೆ ಇದ್ದೆ. ಬೇರೆಯ ಹೆಂಗಸರು ನನಗೆ ಪ್ರಲೋಭನೆ ಒಡ್ಡುವುದಕ್ಕೆ ಅವಕಾಶ ಕೊಟ್ಟಿಲ್ಲ. ಆದ್ದರಿಂದ ನಾನು ಪ್ರಾಮಾಣಿಕ, ನೀತಿವಂತ. ನಾವು ಆಗಾಗ ಜಗಳವಾಡಿದರೂ ಅದು ನನ್ನ ಹೆಂಡತಿಯ ತಪ್ಪೇ ಹೊರತು ನನ್ನದಲ್ಲ ಎಂದು ನಂಬಿಕೊಂಡಿದ್ದೆ, ಅದನ್ನು ನೆನೆದರೆ ಭಯವಾಗುತ್ತದೆ.
“ಆದರೆ ತಪ್ಪು ಅವಳದಲ್ಲ. ಅವಳು ಹೆಂಗಸರು ಹೇಗಿರುತ್ತಾರೋ ಹಾಗೇ ಇದ್ದಳು. ನಮ್ಮ ಶ್ರೀಮಂತ ಸಮಾಜದ ಪರಿಸ್ಥಿತಿಯಲ್ಲಿ ಯಾವ ತತ್ವಗಳಿಗೆ…
ವಿಧ: ಬ್ಲಾಗ್ ಬರಹ
May 18, 2007
ಇಬ್ಬರು ಹೊಸಬರು ನಮ್ಮ ಬೋಗಿಗೆ ಹತ್ತಿದರು. ತೀರ ಆ ಕಡೆಯ ತುದಿಗೆ ಹೋಗಿ ಕುಳಿತರು. ಅವರು ಕೂರುವವರೆಗೆ ಅವನು ಸುಮ್ಮನೆ ಇದ್ದ. ಆಮೇಲೆ ಮತ್ತೆ ಶುರುಮಾಡಿದ. ಅವನ ಆಲೋಚನೆಯ ಎಳೆ ತುಂಡಾಗಿರಲಿಲ್ಲ.
“ಬದುಕಿನಲ್ಲಿ ನಡುವೆ ಮೂಡುವ ಕಾಮವನ್ನೇ ಪ್ರೀತಿ ಎಂದು ಕರೆಯುತ್ತಾ ಬೆಳೆಯುತ್ತೇವೆ. ಪ್ರೀತಿಯು ಉದಾತ್ತ, ಉನ್ನತ ಅನ್ನುವ ತತ್ತ್ವ ಕೇಳುತ್ತೇವೆ. ಆದರೆ ನಿಜವಾಗಿ ಪ್ರೀತಿಮಾಡುವುದಿದೆಯಲ್ಲ ಅದರ ಬಗ್ಗೆ ಮಾತಾಡುವುದು, ನೆನೆಯುವುದು ಎರಡೂ ಹಾರಿಬಲ್, ಮತ್ತೆ ಅಸಹ್ಯ. ನಿಸರ್ಗವು ಇದನ್ನು ನಾಚಿಕೆಯ,…
ವಿಧ: ಬ್ಲಾಗ್ ಬರಹ
May 18, 2007
“ಆದರೆ, ನಮ್ಮ ಸಮಾಜದಲ್ಲಿರುವ ಹಾಗೆ, ಮನುಷ್ಯ ಕೇವಲ ದೈಹಿಕ ಪ್ರೀತಿಯನ್ನು ಮಾತ್ರ ಬಯಸುತ್ತಿದ್ದರೆ, ಅದಕ್ಕೆ ಮದುವೆಯ ಎಂಥದೇ ಸುಳ್ಳುರೂಪಗಳ ಡ್ರೆಸ್ಸು ತೊಡಿಸಿದರೂ ಅದು ಕೇವಲ ಅನುಮತಿ ಪಡೆದುಕೊಂಡ ಲಂಪಟತನ ಅಷ್ಟೇ. ನಾನು ಅನೈತಿಕವಾಗಿ ಬದುಕಿದೆ, ಹೆಂಡತಿಯನ್ನೂ ಆ ಬದುಕಿಗೆ ಎಳೆದೆ, ಮತ್ತೆ ಇದನ್ನೇ ನಾವು ಪ್ರಾಮಾಣಿಕ ಕೌಟುಂಬಿಕ ಜೀವನ ಎಂದು ಕರೆಯುತ್ತೇವೆ. ಸ್ವಾತಂತ್ರ್ಯ, ಪಾವಿತ್ರ್ಯ ಇವು ಮನುಷ್ಯನ ಅತ್ಯಂತ ಆನಂದದ ಸ್ಥಿತಿಯಾಗಿದ್ದರೆ ಅವನ್ನು ಹಾಸ್ಯಾಸ್ಪದವೆಂದೋ ಅಸಹನೀಯವೆಂದೋ ಕರೆಯುವುದು…
ವಿಧ: ಬ್ಲಾಗ್ ಬರಹ
May 18, 2007
“ಎಲ್ಲರೂ ಹೀಗೆಯೇ ಮದುವೆಯಾಗುತ್ತಾರೆ, ನಾನೂ ಹಾಗೆಯೇ ಮದುವೆಯಾದೆ. ಹನಿಮೂನಿಗೆ ಹೋದೆವು. ಹನಿಮೂನು ಅಂದರೆ ಯಾಕೆ ಜೊಲ್ಲು ಸುರಿಸುತ್ತಾರೋ! ಯಾವಾಗಲೂ ಭ್ರಮನಿರಸನವೇ! ಆ ಹೆಸರೇ ಅಸಹ್ಯ!” ಹಾವಿನಂತೆ ಬುಸುಗುಟ್ಟಿದ.
“ಒಂದು ದಿನ ಪ್ಯಾರಿಸ್ಸಿನ ಪ್ರದರ್ಶನಗಳಲ್ಲಿ ಅಡ್ಡಾಡುತ್ತಿದ್ದೆ. ಒಂದು ಮಳಿಗೆಯ ಮುಂದೆ ಇದ್ದ ಬೋರ್ಡು ನೋಡಿದೆ. ಹೋದೆ. ಅದರಲ್ಲಿ ಗಡ್ಡವಿದ್ದ ಒಬ್ಬ ಹೆಂಗಸು ನೀರುನಾಯಿಯ ಜೊತೆ ಇದ್ದಳು. ಅವಳು ಹೆಂಗಸಲ್ಲ, ವೇಷ ಮರೆಸಿಕೊಂಡಿದ್ದ ಗಂಡಸು. ಅದು ನೀರುನಾಯಿಯೂ ಅಲ್ಲ, ಸಾಮಾನ್ಯ ನಾಯಿ.…
ವಿಧ: ಬ್ಲಾಗ್ ಬರಹ
May 18, 2007
ಒಂದೆರಡು ದಿನದ ಕೆಳಗೆ my life without me (2003) ಎಂಬ ಚಿತ್ರ ನೋಡಿದೆ. ಕೆನಡಾ ದೇಶದ್ದು. ನಿರ್ದೇಶಕಿ Isabel Coixet ಎಂಬ ಸ್ಪಾನಿಶ್ ಮಹಿಳೆ. (ಈ ಚಿತ್ರ ಸ್ಪಾನಿಶ್ ಮತ್ತು ಫ್ರೆಂಚ್ ಭಾಷೆಯಲ್ಲೂ ಒಟ್ಟಿಗೆ ಮಾಡಿದ್ದಾರೆ)
ಹೊಟ್ಟೆಯ ಟ್ಯೂಮರ್‌ನಿಂದ ಸಾವಿಗೆ ಒಂದೆರಡು ತಿಂಗಳು ಮಾತ್ರ ಉಳಿದಿರುವ ಆನ್ ಎಂಬವಳು ರಾತ್ರಿ ಯೂನಿವರ್ಸಿಟಿ ಕ್ಲೀನ್ ಮಾಡುವ 23 ವರ್ಷದ ಹೆಣ್ಮಗಳು. ಗೊತ್ತಾದಾಗಿನಿಂದ ಕಡೆಯವರೆಗೂ ಅವಳ ಪ್ರತಿಕ್ರಿಯೆ ಯಾವುದೇ ಭಾವೋದ್ವೇಗಕ್ಕೂ ಒಳಗಳ್ಳದೆ ಉಳಿಯುವುದು ಒಂದು ವಿಶೇಷ.…
ವಿಧ: ಬ್ಲಾಗ್ ಬರಹ
May 18, 2007
ಹಾಸನ ಜಿಲ್ಲೆ ಹೊಯ್ಸಳರ ಹಲವಾರು ದೇವಾಲಯಗಳ ನೆಲೆಬೀಡು. ಬೇಲೂರು ಹಳೇಬೀಡಿನ ದೇವಾಲಯಗಳಂತೂ ವಿಶ್ವವಿಖ್ಯಾತವಾಗಿವೆ. ಆದರೆ ಇವುಗಳನ್ನು ಬಿಟ್ಟು ನುಗ್ಗೇಹಳ್ಳಿ, ಜಾವಗಲ್ಲು, ದೊಡ್ಡಗದ್ದವಳ್ಳಿ, ಹಾರನಹಳ್ಳಿ ಮೊದಲಾದೆಡೆ ಇರುವ ಸುಂದರ ದೇವಾಲಯಗಳು ಅಷ್ಟು ಜನರಿಗೆ ಪರಿಚಯವಾಗಿಲ್ಲ. ಅಷ್ಟೇ ಏಕೆ, ಥಟ್ಟಂತ ಹೋಗಿ ಫಟ್ಟಂತ ಬರುವ ಈ ವೇಗದ ಜಮಾನಾದಲ್ಲಿ, ಹಳೇಬೀಡಿಗೆ ಹೋದವರೂ, ಒಂದು ಕಿಲೋಮೀಟರ್ ದೂರದ ಬಸ್ತಿಹಳ್ಳಿಗೇ ಹೋಗದೆ, ಸುಂದರವಾದ ಬಸದಿಗಳನ್ನೂ, ಕೇದಾರೇಶ್ವರ ದೇವಾಲಯವನ್ನೂ ನೋಡದೇ ಬರುವುದೇ ಹೆಚ್ಚು…
ವಿಧ: ಬ್ಲಾಗ್ ಬರಹ
May 18, 2007
ಹಾಸನ ಜಿಲ್ಲೆ ಹೊಯ್ಸಳರ ಹಲವಾರು ದೇವಾಲಯಗಳ ನೆಲೆಬೀಡು. ಬೇಲೂರು ಹಳೇಬೀಡಿನ ದೇವಾಲಯಗಳಂತೂ ವಿಶ್ವವಿಖ್ಯಾತವಾಗಿವೆ. ಆದರೆ ಇವುಗಳನ್ನು ಬಿಟ್ಟು ನುಗ್ಗೇಹಳ್ಳಿ, ಜಾವಗಲ್ಲು, ದೊಡ್ಡಗದ್ದವಳ್ಳಿ, ಹಾರನಹಳ್ಳಿ ಮೊದಲಾದೆಡೆ ಇರುವ ಸುಂದರ ದೇವಾಲಯಗಳು ಅಷ್ಟು ಜನರಿಗೆ ಪರಿಚಯವಾಗಿಲ್ಲ. ಅಷ್ಟೇ ಏಕೆ, ಥಟ್ಟಂತ ಹೋಗಿ ಫಟ್ಟಂತ ಬರುವ ಈ ವೇಗದ ಜಮಾನಾದಲ್ಲಿ, ಹಳೇಬೀಡಿಗೆ ಹೋದವರೂ, ಒಂದು ಕಿಲೋಮೀಟರ್ ದೂರದ ಬಸ್ತಿಹಳ್ಳಿಗೇ ಹೋಗದೆ, ಸುಂದರವಾದ ಬಸದಿಗಳನ್ನೂ, ಕೇದಾರೇಶ್ವರ ದೇವಾಲಯವನ್ನೂ ನೋಡದೇ ಬರುವುದೇ ಹೆಚ್ಚು…