ಎಲ್ಲ ಪುಟಗಳು

ಲೇಖಕರು: kishorpatwardhan
ವಿಧ: ಬ್ಲಾಗ್ ಬರಹ
May 24, 2007
’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ - ಅಡಿಗರ ಕವಿತೆಯ ಈ ಸಾಲು ಕ್ಲೀಶೆ (Cliche) ಅನ್ನಿಸುವಷ್ಟರ ಮಟ್ಟಿಗೆ ಉಪಯೋಗವಾಗಿದೆ. ಆದರೆ ನಾನು ಎಲ್ಲೋ ಓದಿದ ನೆನಪು ಹೀಗಿದೆ: Original ಕವಿತೆಯಲ್ಲಿ ಈ ವಾಕ್ಯದ ಕೊನೆಗೊಂದು ಪ್ರಶ್ನಾರ್ಥಕ ಚಿಹ್ನೆ ಇದೆಯಂತೆ: ’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?’ - ಎಂದು. ( So, ಇದೊಂದು conclusion ಅಥವಾ statement ಅಲ್ಲ. ) ಹಾಗಾಗಿ ಈ ವಾಕ್ಯದ ಅರ್ಥ ನಿಜಕ್ಕೂ ’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಜೀವನ…
ಲೇಖಕರು: srivathsajoshi
ವಿಧ: Basic page
May 24, 2007
ಅಮೆರಿಕದ ಕನ್ನಡ ಸಾಹಿತ್ಯ ರಂಗವು ಇತ್ತೀಚೆಗೆ (19,20 ಮೇ 2007) ಚಿಕಾಗೊದಲ್ಲಿ ’ವಸಂತ ಸಾಹಿತ್ಯೋತ್ಸವ’ವನ್ನು ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲೇ ಆಧುನಿಕ ಕನ್ನಡ ಹಾಸ್ಯಸಾಹಿತ್ಯವನ್ನು ಪರಿಚಯಿಸುವ ’ನಗೆಗನ್ನಡಂ ಗೆಲ್ಗೆ’ ಎಂಬ ಉದ್ಗ್ರಂಥವೊಂದನ್ನು ಬಿಡುಗಡೆ ಮಾಡಲಾಯಿತು. ಗ್ರಂಥದ ಮೊದಲ ಭಾಗದಲ್ಲಿ ಕನ್ನಡದ ಹಾಸ್ಯಸಾಹಿತಿಗಳ ಕುರಿತಾದ ಲೇಖನಗಳಿವೆ. ಅವುಗಳಲ್ಲಿ ಹೆಚ್ಚಿನವು ಅಮೆರಿಕನ್ನಡಿಗ ಬರಹಗಾರರಿಂದೆಲೇ ಬರೆಯಲ್ಪಟ್ಟವು. ಖ್ಯಾತ ಹನಿಗವಿ ಎಚ್.ಡುಂಡಿರಾಜ್ ಬಗ್ಗೆ ಲೇಖನ ಬರೆಯುವ ಜವಾಬ್ದಾರಿ…
ಲೇಖಕರು: betala
ವಿಧ: ಬ್ಲಾಗ್ ಬರಹ
May 24, 2007
ಮೂಡನಂಬಿಕೆ ೧. ಮನೆಯಿಂದ ಹೊರಗಡೆ ಹೋಗಬೇಕೆಂದಾಗ ಎಡವಿದರೆ , ನೀವು ಕುಳಿತು ಹೋಗಬೇಕಂತೆ . ೨. ನೀವು ಮನೆಯಿಂದ  ಹೊರಗಡೆ ಹೋಗಬೇಕಾದರೆ, ಎದುರುಗಡೆ ಖಾಲಿ ಬಿಂದಿಗೆ ನೋಡಿದರೆ, ನಿಮ್ಮ ಕೆಲಸ ಆಗಲ್ವಂತೆ .೩. ಬೆಕ್ಕು ಅಡ್ಡ ಬಂದರೆ, ನಿಂ ಕೆಲಸ ಎಡವಟ್ಟು.೪. ಎಡ (ಬಲ) ಗಣ್ಣು ರೆಪ್ಪೆ ಬಡಿದರೆ, ಏನೊ ಆಪತ್ತು.೫. ನೀವು ಎನೋ ಯೋಚನೆ ಮಾಡ್ತ ಇರ್ ಬೇಕಾದ್ರೆ , ಹಲ್ಲಿ ಕೂಗಿದರೆ ಅದು ಸತ್ಯ.... ಖಚಿತವಾಗಿ ನಡಿಯುತ್ತೆ !!೬. ನಾಯಿ ಅತ್ತರೆ, ಯಾರಾದ್ರು ನೆಗೆದು ಬಿದ್ದು ನೆಲ್ಲಿಕಾಯಿ ಆಗ್ತರೆ.೭. ಬೆಳಿಗ್ಗೆ…
ಲೇಖಕರು: medhadongre
ವಿಧ: ಬ್ಲಾಗ್ ಬರಹ
May 24, 2007
ಬದುಕೆಂಬ ಪಾಠಶಾಲೆ ಜೀವನವು ಸುಖಕರವಾಗಿರಲು ಏನೆಲ್ಲ ಬೇಕೆಂದು ಕೇಳಿದರೆ ಕೈ ತುಂಬ ಹಣ,ಒಳ್ಳೆಯ ಸಾಂಸಾರಿಕ ಜೀವನ ,ಸಂತೃಪ್ತಿ ಕೊಡುವಂತಹ ಕೆಲಸ ,ಸುಂದರ ಊರು ಎಂದೆಲ್ಲ ಆರಂಭವಾಗುವ ಪಟ್ಟಿನೆರೆಕೆರೆಯವರ ಜತೆ ಸೌಹಾರ್ದಯುತ ಸಂಬಂಧ,ಉತ್ತಮ ಸ್ನೇಹಿತರು,ದೊಡ್ಡದಾದ ಒಂದು ಮನೆ,ಮನೆಗೆ ತಕ್ಕುದಾದ ಕಾರು,ಕಾರಿಗೆ ತಕ್ಕ ಡ್ರೈವರ್, ಮನೆಯಲ್ಲಿ ಕೈಗೊಂದು ಕಾಲಿಗೊಂದರಂತೆ ಆಳುಕಾಳುಗಳು, ವರ್ಷಕ್ಕೆರಡು ಫಾರಿನ್ ಪ್ರವಾಸ…….ಇತ್ಯಾದಿ ಬೆಳೆದು ನಮ್ಮ ಹನುಮಂತಪ್ಪನ ಬಾಲಕ್ಕೇ ಸ್ಪರ್ಧೆ ನೀಡೀತು. ಆದರೆ…
ಲೇಖಕರು: veena
ವಿಧ: ಬ್ಲಾಗ್ ಬರಹ
May 24, 2007
ಬಹುಶಃ ಎಲ್ಲ ಕೆಲಸಕ್ಕೆ ಹೋಗುವ ತಾಯಂದಿರಿಗೂ ಈ ರೀತಿ ಅನಿಸಿರಲೂ ಬಹುದು. ಒಂದು ಮಗುವಿನ ತಾಯಿಯಾದ ಮೇಲೆ ಮನೆ ಹಾಗೂ ಕಚೇರಿಯನ್ನು ನಿಭಾಯಿಸಿಕೊಂಡು ಹೋಗುವುದು ಒಂದು ಸವಾಲೇ ಸರಿ. ಹಿರಿಯರು ಜೊತೆಯಲ್ಲಿ ಇಲ್ಲದೆ ಇರುವುದು, ನಮ್ಮ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸುತ್ತದೆ. ಮಗುವಿನ ಪ್ರತಿಯೊಂದು ಕೆಲಸಕ್ಕೂ ಕೆಲಸದವರನ್ನು ಅವಲಂಬಿಸಬೇಕು, ಎಲ್ಲಿ ಮಗುವು ಅಮ್ಮನಿಗಿಂತ, ಕೆಲಸದ ಆಂಟಿಯನ್ನೇ ಹಚ್ಚಿಕೊಂಡು ಬಿಡುತ್ತದೋ ಎಂದು ಕಾಡುವ ಸದಾಕಾಲದ ಭಯ. ಮಗುವು ಅಮ್ಮನನ್ನು ಮಿಸ್ ಮಾಡಿಕೊಂಡರೆ ಒಂಥರಾ ಸಂಕಟ…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
May 24, 2007
ಛಾಯಾಚಿತ್ರಗ್ರಹಣದಲ್ಲಿ ಸ್ವಲ್ಪ ಆಸಕ್ತಿಯಿದ್ದವರಿಗೆ ಚಿತ್ರ ತೆಗೆಯುವಾಗ ಹಿನ್ನೆಲೆಯಲ್ಲಿ ಮುನ್ನೆಲೆಗಿಂತ ಹೆಚ್ಚು ಬೆಳಕು ಇದ್ದರೆ ಆಗುವ ಸಮಸ್ಯೆಯ ಬಗ್ಗೆ ಅರಿವಿರಬಹುದು. ಫ್ಲಿಕರ್ ನಲ್ಲಿ ಡೀಪ್ಸನ್ ಅಂತ ಒಬ್ಬರು ಇದ್ದಾರೆ. ಅವರ ನಿಜ ನಾಮ ಸಂದೀಪ್ ಅಂತ. ಅವರು ಹಿನ್ನೆಲೆಯಲ್ಲಿ bright ಮತ್ತು ಖಾಲಿ ಬಿಳಿ ಬಣ್ಣವಷ್ಟೇಇದ್ದು, ಮುನ್ನೆಲೆಯಲ್ಲಿ overexpose ಆಗದಂತೆ ಚಿತ್ರಗಳನ್ನು ತೆಗೆದುದನ್ನು ನೋಡಿದೆ. ನನಗೆ ಅವರು ಇದನ್ನು ಹೇಗೆ ಸಾಧಿಸಿದ್ದಾರೆಂದು ಕುತೂಹಲವಿತ್ತು. ನಾನು ಕೇಳಿದ್ದಕ್ಕೆ…
ಲೇಖಕರು: venkatesh
ವಿಧ: Basic page
May 23, 2007
ಏಪ್ರಿಲ್ ತುಷಾರ, ೨೦೦೭ ಯುಗಾದಿಯ ವಿಶೇಷಸಂಚಿಕೆ. ಅದು ಕಾಲಕ್ಕೆ ಮೀಸಲಾಗಿರುವ ಅನೇಕ ರೋಚಕ ಸತ್ಯಗಳನ್ನು ಹೊರಗೆಡಹಿದೆ. ಅವೇನು ಹೊಸ ಸತ್ಯಗಳಲ್ಲ. ವರುಷ ವರುಷವೂ ನಾವು ಅನುಭವಿಸುವ ನಮ್ಮ ಜೀವನದ ಕಾಲ ಪರಿಧಿಯ ಒಂದು ಸಮಗ್ರ ನೋಟವನ್ನು ಈ ಬಾರಿಯೂ ಪುನಃ ಓದಬಹುದು. ಸಂಪಾದಕೀಯ ಯುಗಾದಿಯ ಸಮಯದಲ್ಲಿ ಕಾಲಗಣನೆ, ಜ್ಯೋತಿಷದ ಸಂವೇದನೆಗಳು ಸಂಚಿಕೆಯಲ್ಲಿ ಪ್ರಧಾನವಾದ ವಿಷಯಗಳು. ಮೊದಲ ಪುಟದಲ್ಲಿ ಸಂಪಾದಕೀಯ ಹೇಳುವುದು ಸಮಯೋಚಿತವಾಗಿದೆ. ಕಾಲವನ್ನು ತನ್ನ ತೆಕ್ಕೆಯೊಳಗಿರಿಸಿರುವೆವೆಂದು ಬೀಗಿದವರು…
ಲೇಖಕರು: srimanmohan
ವಿಧ: ಬ್ಲಾಗ್ ಬರಹ
May 23, 2007
ಕಳೆದ ತಿಂಗಳು ಮಂಗಳೂರಿನ ಸಾಹಿತ್ಯಕೇಂದ್ರದಿಂದ ಎಸ್.ಎಲ್. ಭೈರಪ್ಪನವರ ಹೊಸಪುಸ್ತಕ "ಆವರಣ" ಕೊಂಡುಕೊಂಡೆ. ಓದುತ್ತಾ ಹೋದಂತೆ ಪುಸ್ತಕ ನನ್ನ ಮನಸ್ಸನ್ನೆ ಆವರಿಸಿಕೊಂಡಿತು. ಇನ್ನೂ ಓದಿ ಮುಗಿದಿಲ್ಲ. ತಾವು ಮಾತ್ರ ಮಹಾಬುದ್ದಿವಂತರು, ಸರ್ವವಿಷಯಪಂಡಿತರೆಂದು ಸ್ವಯಂ ಭಾವಿಸಿಕೊಂಡು ಎಲ್ಲರಿಗೂ ಬುದ್ಧಿಹೇಳಲು ತುದಿಕಾಲಲ್ಲಿ ಕಾದಿರುವ ಬುದ್ಧಿಜೀವಿಗಳ ಟೊಳ್ಳುತನದ ಅನಾವರಣವನ್ನು ಈ ಪುಸ್ತಕದಲ್ಲಿ ಲೇಖಕರು ಮಾಡಿದ್ದಾರೆ. ಸಂಪೂರ್ಣ ಓದಿ ನಂತರ ಒಂದು…
ಲೇಖಕರು: venkatesh
ವಿಧ: Basic page
May 23, 2007
ಇದೇ ದಿನ, ೧೦೦ ವರ್ಷಗಳ ಹಿಂದೆ, ಅಂದರೆ, ಮೇ ೨೨, ೧೯೦೭ ರಲ್ಲಿ ಬೆಲ್ಜಿಯಮ್ ದೇಶದ ಬ್ರಸಲ್ಸ್ ಪಟ್ಟಣದಲ್ಲಿ , ಹರ್ಜ್ ಜನ್ಮಿಸಿದ್ದರು. ಈಗ ಅವರು ಬದುಕಿದ್ದಿದ್ದರೆ, ತಮ್ಮ ಜೀವನದ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ಅವರು ಈ ದಿನವನ್ನು ನೋಡುವ ಮೊದಲೇ ಸುಮಾರು ೨೪ ವರ್ಷಗಳ ಹಿಂದೆಯೇ ಕಣ್ಣುಮುಚ್ಚಿದ್ದರು. ಬೆಲ್ಜಿಯಮ್ ದೇಶದ ಪ್ರಖ್ಯಾತ ವ್ಯಂಗ್ಯ ಚಿತ್ರ ಲೇಖಕ, ನಿರ್ಮಾಪಕ ಹರ್ಜ್, [ ಆತನ ನಿಜವಾದ ಹೆಸರು, ಜಾರ್ಜಸ್ ರೆಮಿ ಎಂದು. ಹರ್ಜ್ ಅವರ ಪೆನ್ ಹೆಸರು.] ೧೯೨೯ ರಲ್ಲಿ…
ಲೇಖಕರು: ವೈಭವ
ವಿಧ: Basic page
May 23, 2007
ಹಸಿ 'ಮೈ'ಗಳಹಸೆಮಣೆಗೇರಿಸಿಬೆಸುಗೆಯ ಒಸಗೆಯಮುಗಿಸಿದರು, ಹರಸಿದರು'ಹಸಿರಾಗಿರಿ' ಎಂದುಮೊಸರಾಗಿ ಕಂಡ ಬೆಸುಗೆ ಕೆಸರಾಯ್ತು ಕಾಣಾ ಭರತೇಶ!  ----- ಬೆಸುಗೆ  = ಮದುವೆ ( ಗಂಡು ಹೆಣ್ಣನ್ನು ಬೆಸೆಯುವುದು ಮದುವೆ ತಾನೆ..ಆದ್ದರಿಂದ ಬೆಸುಗೆಯನ್ನು ಮದುವೆ ಎಂದು ಹೇಳಬಹುದು :) )ಒಸಗೆ  = ಸಮಾರಂಭ