ಡೀಪ್ಸನ್ ಎಫೆಕ್ಟ್
ಛಾಯಾಚಿತ್ರಗ್ರಹಣದಲ್ಲಿ ಸ್ವಲ್ಪ ಆಸಕ್ತಿಯಿದ್ದವರಿಗೆ ಚಿತ್ರ ತೆಗೆಯುವಾಗ ಹಿನ್ನೆಲೆಯಲ್ಲಿ ಮುನ್ನೆಲೆಗಿಂತ ಹೆಚ್ಚು ಬೆಳಕು ಇದ್ದರೆ ಆಗುವ ಸಮಸ್ಯೆಯ ಬಗ್ಗೆ ಅರಿವಿರಬಹುದು.
ಫ್ಲಿಕರ್ ನಲ್ಲಿ ಡೀಪ್ಸನ್ ಅಂತ ಒಬ್ಬರು ಇದ್ದಾರೆ. ಅವರ ನಿಜ ನಾಮ ಸಂದೀಪ್ ಅಂತ. ಅವರು ಹಿನ್ನೆಲೆಯಲ್ಲಿ bright ಮತ್ತು ಖಾಲಿ ಬಿಳಿ ಬಣ್ಣವಷ್ಟೇಇದ್ದು, ಮುನ್ನೆಲೆಯಲ್ಲಿ overexpose ಆಗದಂತೆ ಚಿತ್ರಗಳನ್ನು ತೆಗೆದುದನ್ನು ನೋಡಿದೆ. ನನಗೆ ಅವರು ಇದನ್ನು ಹೇಗೆ ಸಾಧಿಸಿದ್ದಾರೆಂದು ಕುತೂಹಲವಿತ್ತು. ನಾನು ಕೇಳಿದ್ದಕ್ಕೆ ಅವರು ಅವರ ತಂತ್ರವನ್ನು ನನಗೆ ಹೇಳಿಕೊಟ್ಟರು. ಅವರು background ನಲ್ಲಿ ಆಕಾಶವನ್ನು ಇಟ್ಟು foreground ಸಾಕಷ್ಟು expose ಆಗುವ ತನಕ ಚಿತ್ರವನ್ನು over-expose ಮಾಡುತ್ತಿದ್ದರು. ಇದು ನಿಮಗೆ ತುಂಬ ಸರಳ ಅಂತ ಅನ್ನಿಸಬಹುದು. ಆದರೆ ಅವರು ನನಗೆ ಹೇಳಿ ಕೊಡುವ ತನಕ ನನಗೆ ಇದು ಹೊಳೆಯಲೇ ಇಲ್ಲ. ನಾನು ಅಂದಿನಿಂದ ಈ ತಂತ್ರವನ್ನು ಡೀಪ್ಸನ್ ಎಫೆಕ್ಟ್ ಎಂದೇ ಕರೆಯುತ್ತೇನೆ. ಇದರ ಜನಕ ಅವರೋ, ಅಥವಾ ಅವರೂ ನನ್ನಂತೆ ಎರವಲು ಪಡೆದಿದ್ದಾರೋ ನನಗೆ ಗೊತ್ತಿಲ್ಲ.
ಇಲ್ಲಿ ಕಾಣಿಸಿದ ಚಿತ್ರ ಯಾವುದೇ modification ಗೆ ಒಳಪಟ್ಟಿಲ್ಲ.
ವಂದನೆಗಳು,
ವಸಂತ್.
Rating
Comments
ಉ: ಡೀಪ್ಸನ್ ಎಫೆಕ್ಟ್
ಉ: ಡೀಪ್ಸನ್ ಎಫೆಕ್ಟ್
ಉ: ಡೀಪ್ಸನ್ ಎಫೆಕ್ಟ್
In reply to ಉ: ಡೀಪ್ಸನ್ ಎಫೆಕ್ಟ್ by createam
ಉ: ಡೀಪ್ಸನ್ ಎಫೆಕ್ಟ್