ವಿಧ: ಬ್ಲಾಗ್ ಬರಹ
May 20, 2007
(ಅಚಿನ್ ವನಾಯಕ್ ಅವರ ನಿಲುವುಗಳು ಮತ್ತು ವಿಚಾರ - ನನ್ನ ಗ್ರಹಿಕೆಯಲ್ಲಿ)
ನುಡಿದರೆ ಮುತ್ತಿನಂತಿರಬೇಕು ಎನ್ನುತ್ತಾರೆ. ನೀವು ಅಚಿನ್ ವನಾಯಕ್ ಮಾತುಗಳನ್ನು ಒಮ್ಮೆ ಕೇಳಬೇಕು. "ಭಾರತದ ಕೋಮುವಾದೀ ಇತಿಹಾಸ: ಸಾರ್ವಜನಿಕ ತಿಳುವಳಿಕೆಯಲ್ಲಿ ಉಂಟಾಗಿರುವ ಬದಲಾವಣೆಗಳು" ಎಂಬ ವಿಚಾರದ ಬಗ್ಗೆ ಮಾತನಾಡಲು ಅವರು ಮಂಗಳೂರಿಗೆ ಬಂದಿದ್ದರು. ಕರೆಸಿದವರು ಕರ್ನಾಟಕ ಕೋಮುಸೌಹಾರ್ದ ವೇದಿಕೆಯವರು. ಎರಡು ದಿನಗಳ ಕಾರ್ಯಾಗಾರದಲ್ಲಿ ಪೇಪರ್ ಪ್ರೆಸೆಂಟ್ ಮಾಡಲೆಂದು ಬಂದವವರಲ್ಲಿ ಹೆಚ್ಚಿನವರು ನಿರ್ದಿಷ್ಟ…
ವಿಧ: Basic page
May 20, 2007
ವಿಕಾಸವಾದದ ಹರಿಕಾರ,ಮಂಗನಿಂದ ಮಾನವನ ಉಗಮವಾಯಿತೆಂದು ಪ್ರತಿಪಾದಿಸಿದ ವಿಜ್ಞಾನಿ ಡಾರ್ವಿನ್ ತಮ್ಮ ಜೀವಿತ ಕಾಲದಲ್ಲಿ ಬರೆದ ಪತ್ರಗಳ ಸಂಖ್ಯೆ ಅಪಾರ. ಸುಮಾರು ಎರಡು ಸಾವಿರ ಜನರ ಜತೆ ಪತ್ರ ವ್ಯವಹಾರ ಹೊಂದಿದ್ದ, ಡಾರ್ವಿನ್ ತಮ್ಮ ಸಂಶೋಧನೆಗೆ ಬೇಕಾದ ಮಾಹಿತಿ ಕಲೆ ಹಾಕಲು ಪತ್ರಗಳನ್ನೇ ಅವಲಂಬಿಸಿದ್ದರು.ಡಾರ್ವಿನ್ ಬರೆದ ಹದಿನಾಲ್ಕು ಸಾವಿರಕ್ಕೂ ಅಧಿಕ ಪತ್ರಗಳು ಲಭ್ಯವಿದ್ದು, ಇವನ್ನು ಈಗಾಗಲೇ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಈಗ ಅವುಗಳ ಪೈಕಿ ಮೂರನೆ ಒಂದಂಶ ಪತ್ರಗಳ ಡಿಜಿಟಲ್ ಪ್ರತಿಗಳು…
ವಿಧ: ಚರ್ಚೆಯ ವಿಷಯ
May 20, 2007
ನಮ್ಮಲ್ಲಿ ಹಲವರಿಗೆ ಭಾರತೀಯತೆ ಅಂದ್ರೆ ಹಿಂದಿಯಲ್ಲಿ ಮಾತಾಡೋದು, ಹಿಂದಿ ಚಿತ್ರಗಳನ್ನು ನೋಡುವುದು( ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ ) ಎನ್ನುವ ತಪ್ಪು ತಿಳುವಳಿಕೆ ಇದೆ. "ಒಂದು ದೇಶ, ಹಲವು ಭಾಷೆ, ಹಲವು ಸಂಸ್ಕೃತಿ" ಎನ್ನುವುದನ್ನು ನಾವು ಮರೆತಿದ್ದೇವೆಯೆ?
ಹಲವು ಬೇರೆ ಬೇರೆ ತನಗಳಿಂದ ಕೂಡಿ ಒಂದೇತನವನ್ನು ಮೈಗೂಡಿಸಿಕೊಂಡಿದೆ ಎನ್ನುವುದು ಅಪ್ಪಟ ದಿಟ.
ಹಿಂದಿಗೆ ಸಿಗುವಷ್ಟು ಕನ್ನಡಕ್ಕೆ ಅಥವಾ ತುಳುವಿಗೆ ಅಥವ ಕೊಡವಕ್ಕೆ ಬೆಲೆ ಸಿಗುತ್ತಿದಿಯೆ( ನಮ್ಮ ನೆಲೆದಲ್ಲಿಯೆ)? ಬ್ರಿಟಿಷರ…
ವಿಧ: ಬ್ಲಾಗ್ ಬರಹ
May 19, 2007
ಹೌದು! ಅಮ್ಮ-ತಾಯಿ-ಮಾತೃಶ್ರೀ! ಬಗ್ಗೆ ನಾನು ಹೇಳ್ತಾ ಇರೋದು!
ಏನು ವಿಷಾದ!
ಇತ್ತೀಚೆಗೆ ಯಾವ ಕಡೆ ಸಿಗ್ನಲ್ಲಿನಲ್ಲೂ, ಬೀದಿಗಳಲ್ಲೂ, ಹೋಟೆಲ್ ಮುಂಭಾಗದಲ್ಲೂ.... ಬರೀ ವೃದ್ಧರೇ! ಇವರ ಕೆಲಸವಾದರೂ ಏನು? ಎದುರಿಗೆ ಯಾರೇ ಸಿಕ್ಕರೂ ಕೈ ಚಾಚಿ, ಕೈ ಮುಗಿದು ಬೇಡುವುದು! ಒಂದೋ, ಎರಡೋ ರುಪಾಯಿ ಕೈಗಿತ್ತರೆ, ಅದೇನೋ ತೃಪ್ತಿ ಅವರ ಮುಖದಲ್ಲಿ! ಇರಲಿ, ನೀವೂ ಕೂಡ ಇದನ್ನು ಸಾಕಷ್ಟು ಕಡೆ ಗಮನಿಸಿರಬಹುದು!
ವಿಪರ್ಯಾಸವೆಂದರೆ ಎಷ್ಟೋ ಮಂದಿಗೆ ನಡೆಯಲೂ ಸಹ ಆಗದಂಥಹ ವಯಸ್ಸೂ! ಯಾಕೆ ಹೀಗೆ ಎಂದು ಯೋಚಿಸಿದರೆ…
ವಿಧ: ಚರ್ಚೆಯ ವಿಷಯ
May 19, 2007
ಹೌದು! ಅಮ್ಮ-ತಾಯಿ-ಮಾತೃಶ್ರೀ! ಬಗ್ಗೆ ನಾನು ಹೇಳ್ತಾ ಇರೋದು!
ಏನು ವಿಷಾದ!
ಇತ್ತೀಚೆಗೆ ಯಾವ ಕಡೆ ಸಿಗ್ನಲ್ಲಿನಲ್ಲೂ, ಬೀದಿಗಳಲ್ಲೂ, ಹೋಟೆಲ್ ಮುಂಭಾಗದಲ್ಲೂ.... ಬರೀ ವೃದ್ಧರೇ! ಇವರ ಕೆಲಸವಾದರೂ ಏನು? ಎದುರಿಗೆ ಯಾರೇ ಸಿಕ್ಕರೂ ಕೈ ಚಾಚಿ, ಕೈ ಮುಗಿದು ಬೇಡುವುದು! ಒಂದೋ, ಎರಡೋ ರುಪಾಯಿ ಕೈಗಿತ್ತರೆ, ಅದೇನೋ ತೃಪ್ತಿ ಅವರ ಮುಖದಲ್ಲಿ! ಇರಲಿ, ನೀವೂ ಕೂಡ ಇದನ್ನು ಸಾಕಷ್ಟು ಕಡೆ ಗಮನಿಸಿರಬಹುದು! ವಿಪರ್ಯಾಸವೆಂದರೆ ಎಷ್ಟೋ ಮಂದಿಗೆ ನಡೆಯಲೂ ಸಹ ಆಗದಂಥಹ ವಯಸ್ಸೂ! ಯಾಕೆ ಹೀಗೆ ಎಂದು ಯೋಚಿಸಿದರೆ…
ವಿಧ: Basic page
May 19, 2007
ನಾವಿಬ್ಬರೇ ಬೆಂಗಳೂರಿನಲ್ಲಿ ಇದ್ದೇವೆ. ಮಕ್ಕಳು ಅವರ ಗಂಡಂದಿರ ಮತ್ತು ಮಕ್ಕಳ ಜೊತೆ ಸಂಸಾರ ಮಾಡಿಕೊಂಡು ಅಮೇರಿಕದಲ್ಲಿ ನೆಲೆಸಿದ್ದಾರೆ. ನೀವಿಬ್ಬರೇ ಇದ್ದೀರಿ ಬೇಜಾರಗಲ್ವೆ ಅಂತ ಮಕ್ಕಳು ಕೇಳೋದ್ರಲ್ಲಿ ಆಶ್ಚರ್ಯ ಇಲ್ಲ; ಆದರೆ ನಮ್ಮ ಸುತ್ತುಮುತ್ತಿನವರೂ ಅದೇ ರೀತಿ ಕೇಳ್ತಾರೆ. ನಿಮಗೆ ವಯಸ್ಸಾದ ಕಾಲಕ್ಕೆ ನೋಡಿಕೊಳ್ಳಲು ಹತ್ತಿರದಲ್ಲಿ ಯಾರು ಇಲ್ಲವಲ್ಲ ಎಂದು ನಮಗಿಂತ ಅವರೇ ಪೇಚಾಡಿಕೊಳ್ಳುವವರು 'ಅಯ್ಯೋ ಪಾಪ’ ಅನ್ನೋ ಇನ್ನೊಂದು ಥರಹ ಜನ ಇದ್ದಾರೆ. ಈಗೇನೋ ಅಂತೂ ಇಂತೂ ಗಟ್ಟಿ ಮುಟ್ಟಾಗಿಯೇ…
ವಿಧ: ಬ್ಲಾಗ್ ಬರಹ
May 19, 2007
ಪಾಲಿ ಪಬ್ಬ ಪುಷ್ಪಾಂಜಲಿ ( ಜೀ.ಪಿ. ರಾಜರತ್ನಂ) ಎನ್ನುವ ಪುಸ್ತಕದಿಂದ ಇನ್ನಷ್ಟು .
ಯಾವುದನ್ನು ಮಾಡಿ ಅನುತಾಪ ಪಡುವನು
ಯಾವುದರ ಪಕ್ವ ಫಲವನ್ನು ಅಳುತ್ತ
ಕಣ್ಣೀರಿನೊಂದಿಗೆ ಅನುಭವಿಸುವನು -
ಮಾಡಿದ ಆ ಕೆಲಸ ಒಳ್ಳೆಯದಲ್ಲ .
ಯಾವುದನ್ನು ಮಾಡಿ ಅನುತಾಪ ಪಡನು
ಯಾವುದರ ಪಕ್ವ ಫಲವನ್ನು ಸಂತೋಷದಿಂದ
ಒಳ್ಳೆಯ ಮನಸ್ಸಿನಿಂದ ಅನುಭವಿಸುವನು -
ಮಾಡಿದ ಆ ಕೆಲಸ ಒಳ್ಳೆಯದು .
ಅತ್ತಿತ್ತ ತಿರುಗದೆಯೆ ಅದನಿದನು ನೋಡದೆಯೆ
ಸಂಚಾರಗೈವಾಗ ಗ್ರಾಮಗಳಲಿ
ಏನನೂ ಬಯಸದೆಯೇ ನಡೆದುಹೋಗುವರವರು
ಸವಣರಲಿ ಪ್ರೀತಿ…
ವಿಧ: ಬ್ಲಾಗ್ ಬರಹ
May 18, 2007
ಸತ್ಯ ಹೇಳಿದರೆ , ಕೋಪಿಸದಿದ್ದರೆ ,
ಬೇಡಿದಾಗ ಕೊಂಚವಾದರೂ ಕೊಟ್ಟರೆ ,
ಈ ಮೂರು ಮೆಟ್ಟಲುಗಳಲ್ಲಿ ದೇವತೆಗಳ ಸಮೀಪ ಹೋಗುವನು.
ಅಪ್ರಮಾದವು ಅಮೃತಕ್ಕೆ ದಾರಿ
ಅಪ್ರಮಾದವು ಮೃತ್ಯುವಿಗೆ ದಾರಿ
ಅಪ್ರಮತ್ತರು ಸಾಯುವದಿಲ್ಲ
ಪ್ರಮತ್ತರು ಸತ್ತಂತೆಯೇ
ಶಾಂತಿಯಿಂದ ಕ್ರೋಧವನ್ನು
ಕೆಟ್ಟುದನ್ನು ಒಳ್ಳೆಯದರಿಂದ
ಜಿಪುಣನನ್ನು ದಾನದಿಂದ
ಸತ್ಯದಿಂದ ಸುಳ್ಳಾಡುವನನ್ನು ಗೆಲ್ಲಬೇಕು.
ಕೆಟ್ಟ ಕದಡಿದ ಮನಸ್ಸಿಂದ ಕೆಲಸ ಮಾಡಿದರೆ , ಅಥವಾ ಮಾತನ್ನಾಡಿದರೆ
ಅವನನ್ನು ದುಃಖ ಹಿಂಬಾಲಿಸುವದು.
ತಿಳಿಯಾದ…
ವಿಧ: ಬ್ಲಾಗ್ ಬರಹ
May 18, 2007
ಶಿಲಾಬಾಲಿಕೆಯಿವಳೆಂದೇ
ಪ್ರಾಸಬದ್ಧ ಕವನ ರಚಿಸತೊಡಗುತ್ತೇನೆ
ಅವಳಂತೆಯೇ ಒಪ್ಪ, ಓರಣ, ಚಂದ- ಈ ಛಂದ ಎಂದು.
ಕಟ್ಟುಗಳಿಗೆ, ಬೇಲಿಗಳಿಗೆ ಒಗ್ಗಿ ನಿಲ್ಲುವುದಿಲ್ಲ
ಉಕ್ಕಿ, ರೆಕ್ಕೆ ಚಿಮ್ಮಿ ಆಗಸದೆಡೆ,
ಬೆರಗುಗೊಳ್ಳುವಂತೆ ನೋಡುತ್ತಿರೆ
ಹರಿಯುತ್ತದೆ ಇವಳ ಹೃದಯ
ಹಕ್ಕಿಭಾವದಲಿ ಹಾರಿ, ನೀರಭಾವದಲಿ ಹರಿದು,
ಸುಮಭಾವ ಅರಳಿ, ಹಿಮಭಾವ ಕರಗಿ,
ಘಮಭಾವ ಘಮಿಸಿ, ಶಿವಭಾವ ನಮಿಸಿ,
ಕಿವಿಯಿಲ್ಲದೆಡೆ ಸ್ವಗತ, ಕಣ್ಣಿಲ್ಲದೆಡೆ ಸ್ವಚ್ಛಂದ,
ತಾನು ತಾನಾಗಿ ಸತ್ಯದೆಡೆಗೆ ಅಡಿಯಿಡುತ್ತಾಳೆ
ಛಂದಗಳು ಬಂಧಿಸದ ಇವಳ
ಹೆಜ್ಜೆ…
ವಿಧ: Basic page
May 18, 2007
ಹೆಂಡತಿಯ ಅಥವಾ ಹೆಂಡತಿಯರ ಕುರಿತ ಜೋಕುಗಳನ್ನು ಓದಿ ಸುಸ್ತಾಗಿದ್ದೀರಿ. ಇಲ್ಲಿ ಗಂಡ, ಹೆಂಡತಿ ಮತ್ತು ಅತ್ತೆಯ ಕುರಿತ ಮೂರು ಜೋಕುಗಳಿವೆ. ಓದಿ. ಮೂರೂ ಸನ್ನಿವೇಶಗಳು ನಡೆಯುವುದು ಶವಯಾತ್ರೆಯಲ್ಲಿ.
1- ಗಂಡನ ಕುರಿತ ಜೋಕು:
ಒಬ್ಬಾಕೆಯ ಗಂಡ ದೈವಾಧೀನನಾದ. ಆತನ ಶವಯಾತ್ರೆ ಸಾಗುತ್ತಿತ್ತು. ಜನರೆಲ್ಲಾ ಅವನ ಗುಣಗಾನ ಮಾಡುತ್ತಿದ್ದರು: ಅವನು ಅಷ್ಟು ಒಳ್ಳೆಯವನಾಗಿದ್ದ, ಇಷ್ಟು ಒಳ್ಳೆಯವನಾಗಿದ್ದ, ಪರರಿಗೆ ಸಹಾಯಹಸ್ತ ಚಾಚುತ್ತಿದ್ದ, ಸಮಾಜ ಸೇವಕನಾಗಿದ್ದ.... ಇತ್ಯಾದಿ ಇತ್ಯಾದಿ.
ಜನರ ಮಾತುಗಳನ್ನು…