ವಿಧ: ಚರ್ಚೆಯ ವಿಷಯ
May 27, 2007
ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಭಾರೀ ಹಿಟ್ ಆಗಿದೆ. ಎಲ್ಲೆಲ್ಲೂ ಅದರ ಬಗ್ಗೆಯೇ ಮಾತು.
ಯಕ್ಷಗಾನ ಪ್ರದರ್ಶನದಲ್ಲಿ ವಿದೂಷಕ ಪಾತ್ರಧಾರಿಯೂ ಪರೋಕ್ಷವಾಗಿ ಇದರ ಬಗ್ಗೆ ಪ್ರಸ್ತಾವಿಸಿದ್ದನ್ನು ನಾನು ಇತ್ತೀಚೆಗೆ ನೋಡಿದೆ.
ರಾಜನೊಬ್ಬ "ಮುಖ್ಯಮಂತ್ರ್ರಿಯನ್ನು ಕರೆದು ತಾ" ಎಂದು ಸೇವಕ(ವಿದೂಷಕ ಪಾತ್ರ)ನಿಗೆ ಆಜ್ಞಾಪಿಸುತ್ತಾನೆ. ಸೇವಕ ಸ್ವಗತವೆಂಬಂತೆ " ಈ ಮುಖ್ಯಮಂತ್ರಿ ಯಾವ ಹಳ್ಳಿಯಲ್ಲಿ ಮಲಗಿರುವನೋ..ಎಲ್ಲೀಂತ ಅವನನ್ನು ಹುಡುಕುವುದು.." ಎಂದು ಗೊಣಗಿದಾಗ ಪ್ರೇಕ್ಷಕರು ನಗೆಗಡಲಲ್ಲಿ ಮುಳುಗದೆ…
ವಿಧ: Basic page
May 27, 2007
ÀiÁ£ÀªÀd£Àä zÉÆqÀØzÀÄ - EzÀ |
ºÁ¤ ªÀiÁqÀ®Ä ¨ÉÃr ºÀÄZÀÑ¥ÀàUÀ½gÁ ¥À.
PÀtÄÚ PÉÊPÁ°Ì« £Á®UÉ EgÀ°PÉÌ |
ªÀÄtÄÚªÀÄÄQÌ ªÀÄgÀļÁUÀĪÀgÉ ||
ºÉÆ£ÀÄß ºÉtÂÚUÁV ºÀj£ÁªÀiÁªÀÄÈvÀªÀ£ÀÄ |
GtÚzÉ G¥ÀªÁ¸À«gÀĪÀgÉÃ£ÉÆÃ 1
PÁ®£ÀªÀgÀÄ §AzÀÄ PÀgÀ¦rzɼɪÁUÀ |
vÁ¼ÀÄ vÁ¼ÉAzÀgÉ PÉüÀĪÀgÉ ? ||
ªÉÃ¼É ºÉÆÃUÀzÀ ªÀÄÄ£Àß zsÀªÀÄðªÀ UÀ½¹gÉÆ |
¸ÀĽî£À ¸ÀA¸…
ವಿಧ: ಬ್ಲಾಗ್ ಬರಹ
May 26, 2007
||ಓಂ ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ||
ಇದು ನನ್ನ ಪ್ರಥಮ ಬರಹ...
ವಿಧ: Basic page
May 26, 2007
೧೯೩೪ ನೇ ಇಸವಿಯ ವೈದ್ಯಕೀಯ ಕ್ಷೇತ್ರಕ್ಕೆ ಮೀಸಲಾಗಿರುವ ನೋಬಲ್ ಬಹುಮಾನವನ್ನು ಮೂವರು ವಿಜ್ಞಾನಿಗಳಿಗೆ ಕೊಡಲಾಯಿತು - ಜಾರ್ಜ್ ವ್ಹಿಪಲ್, ಜಾರ್ಜ್ ಮಿನಾಟ್ ಮತ್ತು ವಿಲ್ಲಿಯಮ್ ಮರ್ಫಿ. ಈ ಮೂವರು ’ಪರ್ನೀಶಿಯಸ್ ಅನೀಮಿಯಾ’ ಎಂಬ ಒಂದು ತರಹದ ರಕ್ತಹೀನತೆಗೆ ಔಷಧ ಕಂಡುಹಿಡಿದಿದ್ದರು; ಅದಕ್ಕಾಗಿ ಈ ಗೌರವ.
ಇವರಲ್ಲಿ ಮೊತ್ತಮೊದಲು ಈ ರೋಗದ ಮೇಲೆ ಕೆಲಸ ಮಾಡಿದ್ದು ಜಾರ್ಜ್ ವ್ಹಿಪಲ್. ಆತ ತನ್ನ ಪ್ರಯೋಗಶಾಲೆಯಲ್ಲಿ ನಾಯಿಗಳ ದೇಹದಿಂದ ಕೃತಕವಾಗಿ ರಕ್ತಸ್ರಾವ ಆಗುವಹಾಗೆ ಮಾಡಿ, ಅನಂತರ…
ವಿಧ: Basic page
May 26, 2007
ಮೈಸೂರು ನಗರದ ಇಲವಾಲದಿಂದ ಕೆ ಆರ್ ನಗರಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ೨೫ ಕಿಲೋಮೀಟರು ದೂರದಲ್ಲಿ ದೊಡ್ಡೇಕೊಪ್ಪಲು ಎಂಬ ಊರು ಸಿಗುತ್ತದೆ. ಈ ರಸ್ತೆಯ ಎಡಭಾಗ ಹುಣಸೂರು ತಾಲೂಕಿಗೂ ಬಲಭಾಗ ಕೆ ಆರ್ ನಗರ ತಾಲೂಕಿಗೂ ಒಳಪಡುತ್ತದೆ. ಈ ದೊಡ್ಡೇಕೊಪ್ಪಲು ಗ್ರಾಮದ ಬಳಿ ಬಲಕ್ಕೆ ತಿರುಗಿ ಸ್ವಲ್ಪ ದೂರ ಹೋಗಿ ಊರು ಹಾಗೂ ತೋಪು ದಾಟಿದ ಕೂಡಲೇ ದೂರದಲ್ಲಿ ಬಾನಿಗೆ ಗುರಿಯಿಟ್ಟ ಜೋಡಿಗೋಪುರಗಳು ಕಾಣುತ್ತವೆ. ಅವು ಇಲ್ಲಿಂದ ಮೂರು ಕಿಲೋಮೀಟರು ದೂರದಲ್ಲಿರುವ ಪ್ರಸಿದ್ಧ ಡೋರನಹಳ್ಳಿ ಗ್ರಾಮದ ಚರ್ಚ್ ಗೋಪುರ.…
ವಿಧ: Basic page
May 26, 2007
ಫಿಲಿಪ್ಪೀನ್ಸ್ ದೇಶದ ರಾಜಧಾನಿ ಮನಿಲಾದ ಒಂದು ಹಳೆಯ ಬಡಾವಣೆ ಕಿಯಾಪೊ. ಈ ಪ್ರದೇಶದ ಹೆಂಚಿನ ಮಾಳಿಗೆಯ ಪುಟ್ಟಗಾತ್ರದ ಸಂತ ಸ್ನಾನಿಕ ಯೊವಾನ್ನರ ಚರ್ಚ್ ಅತ್ಯಂತ ನಯನ ಮನೋಹರವಾಗಿದೆ. ಸುತ್ತೆಲ್ಲ ವಾಣಿಜ್ಯಕೇಂದ್ರಗಳು, ತಿಂಡಿತಿನಿಸಿನ ಮಳಿಗೆಗಳು, ಸರಿಸರಿ (ಮನರಂಜನೆ) ಕೇಂದ್ರಗಳಿಂದ ತುಂಬಿದ್ದರೂ ಈ ಪುಟ್ಟ ಚರ್ಚ್ ಹಗಲೂ ರಾತ್ರಿ ಜನಜಂಗುಳಿಯಿಂದ ತುಂಬಿ ತುಳುಕುತ್ತದೆ. ಅಲ್ಲಿಗೆ ನೀವು ಯಾವಾಗ ಭೇಟಿ ನೀಡಿದರೂ ಅಲ್ಲಿನ ಪ್ರಸಾದಸಂಪುಟದ ಮುಂದೆ ಮೊಣಕಾಲೂರಿ ಭಕ್ತಿಯಿಂದ ಪ್ರಾರ್ಥಿಸುತ್ತಿರುವ…
ವಿಧ: Basic page
May 26, 2007
ದಿವಂಗತ ರಾಜ್ಕುಮಾರ್ರವರ ಸಾಂಪ್ರದಾಯಿಕ ಶಿಕ್ಷಣ ಇವರಿಗೆ ಆಗಿಬರಲಿಲ್ಲವಾದ್ದರಿಂದ ಮೂರನೇ ತರಗತಿಗೇ ಓದು ಕುಂಠಿತವಾಯಿತು. ಆದರೆ ಜೀವನವೆಂಬ ವಿಶ್ವವಿದ್ಯಾಲಯದಲ್ಲಿ ಅವರು ಎಲ್ಲ ರೀತಿಯ ಶಿಕ್ಷಣ ಪಡೆದು ಸಾರ್ಥಕ ಜೀವಿಯಾದರು. ಜೀವನದ ಅನುಪಮ ಸಾಧನೆಗೆ ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ತನ್ನನ್ನೇ ಗೌರವಿಸಿಕೊಂಡಿದೆ.
ಕನ್ನಡದ ಆದಿಕವಿ ಪಂಪ ತನ್ನ ಮೇರುಕೃತಿಯಲ್ಲಿ ಹೀಗೆನ್ನುತ್ತಾನೆ:
ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರಮಾದ ಮಾನಸರೇ ಮಾನಸರ್ . . .
(…
ವಿಧ: ಬ್ಲಾಗ್ ಬರಹ
May 26, 2007
ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿರುವುದರ ಜೊತೆಗೆ ಅದರ ಪಾರಂಪರಿಕ ಸೊಗಡು ಸಂಸ್ಕೃತಿಗಳೂ ಕ್ರಮೇಣ ಮಾಯವಾಗುತ್ತಿವೆ. ನಗರ ಸಾರಿಗೆ ಬಸ್ಸುಗಳ ಆಮೆವೇಗ, ಸಮಯಕ್ಕೆ ಸರಿಯಾಗಿ ಸಿಗದಿರುವಿಕೆ, ಸುತ್ತುಬಳಸಿನ ಹಾದಿ ಇತ್ಯಾದಿಗಳ ಅಸಮರ್ಪಕ ನಿರ್ವಹಣೆಯಿಂದ ರೋಸಿದ ಜನರು ಸಿಟಿ ಬಸ್ಸುಗಳಿಂದ ವಿಮುಖರಾಗಿ ತಮ್ಮದೇ ಸ್ವಂತ ವಾಹನಗಳ ಮರೆ ಹೊಕ್ಕಿದ್ದು ಇತಿಹಾಸ.
ಇತ್ತೀಚೆಗೆ ವಲಸಿಗೆ ಹೆಚ್ಚಳದಿಂದ ಬಸ್ಸುಗಳ ಸಂಖ್ಯೆ ಬೆಳೆದಿದ್ದರೂ ಸ್ವಂತ ವಾಹನಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಅಲ್ಲದೆ ದ್ವಿಚಕ್ರ ವಾಹನಗಳ…
ವಿಧ: Basic page
May 26, 2007
ಅಲ್ಲಿ ಎಲ್ಲರೂ ಕಲ್ಲಾಗಿದ್ದಾರೆ
ಪಲ್ಲಕ್ಕಿ ಹಿಡಿದು ನಿಂತವರು, ವಾಲಗದವರು, ಆರತಿ ತಟ್ಟೆ ಹಿಡಿದೋರು ಒಟ್ಟಿನಲ್ಲಿ ಅವತ್ತು ದಿಬ್ಬಣಕ್ಕೆ ಹೊರಟಿದ್ದ ಎಲ್ರೂವೇ ಕಲ್ಲಾಗಿದ್ದಾರೆ ಕಣ್ರೀ... ಕತೆ ಕೇಳುತ್ತಿದ್ದ ನಮ್ಮ ಮುಖಗಳನ್ನು ನೋಡಿ ಮತ್ತೆ ಮುಂದುವರೆಸಿದ... ಇಗ್ಲೂ ಆ ಗುಡ್ಡದ ಮೇಲೆ ಆವತ್ತು ಕಲ್ಲಾದವರೆಲ್ಲಾ ಹಂಗೇ ನಿಂತಿದ್ದಾರೆ.. ಬೇಕಾರೆ ನೀವು ಹೋಗಿ ನೋಡಬಹುದು ಅಂದಾಗ ನಾವು ಒಮ್ಮೆ ಗುಡ್ಡ ನೋಡಿ ಇನ್ನೊಮ್ಮೆ ಆತನ ಮುಖ ನೋಡಿದೆವು…
ವಿಧ: Basic page
May 26, 2007
ನುಸುಳಿ ಬರುವ ಚೈತ್ರ ಚಿಗುರು
ಸೂಸಿ ತರಲಿ ಸವಿ ಸುಖದ ತಂಪೆಲರು
ಅಳಿಸಿ ಮನದ ಹೊಲಸು ಬಾವ
ಉಳಿಸಿ ಬಿಡಲಿ ಚಿರವಾಗುವಂತೆ ಜೀವ
ಮರೆಸಿ ಬಾಳಿನೆಲ್ಲ ನೋವ
ಸುರಿಸಿ ಬದುಕಲ್ಲಿ ಸಂತಸವ
ಬೆರೆಸಿ ಬದುಕಲ್ಲಿ ಅರಿವ ಗುರುವ
ಇಣುಕುತಿರುವ ಮುಂಗಾರು ಮಳೆ
ತೊಳೆದು ಬಿಡಲಿ ಮೈ ಮನದ ಕೊಳೆ
ಬೆಳೆದು ನಿಲ್ಲಲಿ ಎಲ್ಲಕಡೆ ಜ್ನಾನದ ಬೆಳೆ
ಮನದಲಿರುವ ಮತ,ಧರ್ಮಗಳ ಜಿಡ್ಡತೊಳೆ
ಜಗದಿ ಇರುವುದೆರಡು ಹೆಣ್ಣು-ಗಂಡು
ಜೊತೆಗೆ ಬೆರೆತು ಸಂತಸವ ಉಂಡು
ಜೀವನದ ಅರ್ಥವನ್ನು ಜನತೆ ಕಂಡು
ಬದುಕಿದರೆ ಬಾಳು ಬಂಗಾರದ ತುಂಡು
ಅರಿತು…