ವಿಧ: ಬ್ಲಾಗ್ ಬರಹ
May 29, 2007
ಎಲ್ಲರಿಗೂ ಈಗ ನಡಿಲಿಕತ್ತಿರೂ ಅನಂತಮೂರ್ತಿ ಮತ್ತು ಭೈರಪ್ಪ ವಾದ-ವಿವಾದ ಗೊತ್ತಿದೆ ಅನಕೊತಿನಿ. ಅಂಧ್ಹಂಗ ಇವತ್ತು ವಿಜಯ ಕರ್ನಾಟಕ ಈ ವಿಷಯದ ಬಗ್ಗೆ, ಅಂದ್ರ ಅನಂತಮೂರ್ತಿಯವರ ಅದ್ಭುತ ಕಾಮೆಂಟ್ ಬಗ್ಗೆ ಓದುಗರ ಅಭಿಪ್ರಾಯವನ್ನ ಕೇಳ್ಯೇದ..ಇಲ್ಲಿ ಜಗಳ್ಯಾಡಿ..ಗುದ್ಯಾಡೂ ಬದ್ಲಿ..ಸ್ವಲ್ಪ ವಿಕದಂತಹ ದೊಡ್ಡ ಗ್ರೌಂಡಿಗೆ..ಶಿಫ್ಟ್ ಅಗೂಣ...ಅದಕ್ಕ ಇವತ್ತ ಸಂಜಿ ಆರರೊಳಗ ನಿಮ್ಮ ನಿಮ್ಮ (ನಿಮ್ಮದೆ ಇರ್ಲಿ ಮತ್ತ..) ಅಭಿಪ್ರಾಯ ಕೆಳಕಂಡ ರೀತಿ ಕಳಸಬಹುದು..
1. SMS : "VKPOLL " to 8888
2. email :…
ವಿಧ: ಬ್ಲಾಗ್ ಬರಹ
May 29, 2007
ದಕ್ಷಿಣ ಭೂಗೋಲಕ್ಕೆ ಚಳಿಗಾಲ ಕಾಲಿಡುತ್ತಿದ್ದಂತೆ ತಡವಾಗಿಯಾದರೂ ಸಿಡ್ನಿಯನ್ನೂ ಚಳಿ ಆವರಿಸುತ್ತಿದೆ. ದಪ್ಪ ದಪ್ಪನೆ ಬಟ್ಟೆಗಳು ಪೆಟ್ಟಿಗೆಯಿಂದ, ಗೂಡುಗಳಿಂದ ಹೊರಗೆ ಬಂದು ಮೈಗಳನ್ನು ತಬ್ಬಿಕೊಂಡು ಇನ್ನು ಮೂರು ನಾಕು ತಿಂಗಳು ನಗಾಡುತ್ತವೆ. ಅಡ್ಡಕ್ಕೆ ಬೀಳುವ ಬೆಳಗಿನ ಸೂರ್ಯನ ಬೆಳಕು ಶಾಖ ಹುಟ್ಟಿಸಲು ಮನಸ್ಸೇ ಇಲ್ಲದಂತೆ ರಸ್ತೆ, ರೈಲು ಹಳಿಗಳ ಮೇಲೆ ಬಿದ್ದುಕೊಂಡಿರುತ್ತದೆ. ಅನಾಥವಾಗಿ ಆದರೆ ತುಂಬಾ ತಾಜಾತನದಿಂದ.
ಇಂಥ ಮುಂಜಾನೆ ಆಪ್ತತೆ ಎಂದರೇನು ಎಂಬ ಪ್ರಶ್ನೆ ಮನಸ್ಸನ್ನಾವರಿಸಿತು. ಇಷ್ಟು…
ವಿಧ: ಬ್ಲಾಗ್ ಬರಹ
May 28, 2007
ಭಾವಗೀತೆ ಎಂದರೆ ನಂಗೆ ತುಂಬಾ ಇಷ್ಟ. ಭಾವಗೀತೆಗಳನ್ನು ನಮಗೆ ನಾವೆ (ಯಾರಿಗೂ ಕೇಳಿಸದ ಹಾಗೆ ) ಗುಣುಗಿಕೊಂಡರೆ ಮನಸ್ಸಿಗೆ ಏನೋ ಒಂದು ಸಮಾಧಾನ. ..ಕಣ್ಣಲ್ಲಿ ಎರಡು ಹನಿ ನೀರು (ಕೆಲವು ಸಲ ಆನಂದ ಭಾಷ್ಪ) ಬಂದರೆ ಅದಕ್ಕಿನ್ನೂ ಬಹುಮಾನ/ಪ್ರಶಸ್ತಿ ಬೇಕಾ...?
ಈ ಕೆಳಗಿನ ಸಾಲ್ಗಳ ಎತ್ತರ (ಭಾವ) ಗಮನಿಸಿ....ಪ್ರೇಮದಲ್ಲೂ ಎಷ್ಟೂಂದು ಧನಾತ್ಮಕವಾದ
ಆಕಾಂಕ್ಷೆಗಳನ್ನು (ಕವಿ) ವ್ಯಕ್ತಪಡಿಸಿದ್ದಾರೆ.
ನೀನಿಲ್ಲದೆ ನನಗೇನಿದೆ
ಮನಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ…
ವಿಧ: ಬ್ಲಾಗ್ ಬರಹ
May 28, 2007
ಭಾವಗೀತೆ ಎಂದರೆ ನಂಗೆ ತುಂಬಾ ಇಷ್ಟ. ಭಾವಗೀತೆಗಳನ್ನು ನಮಗೆ ನಾವೆ (ಯಾರಿಗೂ ಕೇಳಿಸದ ಹಾಗೆ ) ಗುಣುಗಿಕೊಂಡರೆ ಮನಸ್ಸಿಗೆ ಏನೋ ಒಂದು ಸಮಾಧಾನ. ..ಕಣ್ಣಲ್ಲಿ ಎರಡು ಹನಿ ನೀರು (ಕೆಲವು ಸಲ ಆನಂದ ಭಾಷ್ಪ) ಬಂದರೆ ಅದಕ್ಕಿನ್ನೂ ಬಹುಮಾನ/ಪ್ರಶಸ್ತಿ ಬೇಕಾ...?
ಈ ಕೆಳಗಿನ ಸಾಲ್ಗಳ ಎತ್ತರ (ಭಾವ) ಗಮನಿಸಿ....ಪ್ರೇಮದಲ್ಲೂ ಎಷ್ಟೂಂದು ಧನಾತ್ಮಕವಾದ
ಆಕಾಂಕ್ಷೆಗಳನ್ನು (ಕವಿ) ವ್ಯಕ್ತಪಡಿಸಿದ್ದಾರೆ.
ನೀನಿಲ್ಲದೆ ನನಗೇನಿದೆ
ಮನಸೆಲ್ಲ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ನೀನಿಲ್ಲದೆ…
ವಿಧ: Basic page
May 28, 2007
ಧಾರ್ಮಿಕ ಸಂಕೇತಗಳ ಪ್ರಸ್ತಾಪ ಬಂದಾಗ ಶಿಲುಬೆಯನ್ನು ಕ್ರೈಸ್ತಧರ್ಮದೊಂದಿಗೆ ವಿಶೇಷವಾಗಿ ಗುರುತಿಸಲಾಗುತ್ತದೆ. ಹಾಗೆ ನೋಡಿದರೆ ಶಿಲುಬೆಗುರುತು ಒಂದು ಮೂಲಭೂತ ವಿನ್ಯಾಸವಾಗಿದ್ದು ಕುಂಬಾರಕಲೆಯಲ್ಲಿ, ನೆಯ್ಗೆಯಲ್ಲಿ, ಕೆತ್ತನೆಯಲ್ಲಿ, ಚಿತ್ರಕಲೆಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಲೇ ಇರುವುದನ್ನು ಕಾಣುತ್ತೇವೆ. ಅದನ್ನು ಅಲಂಕಾರಕ್ಕಾಗಲೀ ಗುರುತಿಗಾಗಲೀ ಬಳಸಿರುವ ಸಾಧ್ಯತೆ ಇರುತ್ತದೆ.
ಜನರ ಗಮನವನ್ನು ಸುಲಭವಾಗಿ ಸೆಳೆಯಲು ಸ್ತಂಭದ ಮೇಲೆ ಬರೆಯುವ, ಸ್ತಂಭದ ತುದಿಯಲ್ಲಿ ಬಾವುಟ ಹಾರಿಸುವ,…
ವಿಧ: ಚರ್ಚೆಯ ವಿಷಯ
May 28, 2007
ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ಒದಗಿಸಿದ ಕೀರ್ತಿ ಕಿಟೆಲರದೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದಕ್ಕಾಗಿ ಕಿಟೆಲರು ಕನ್ನಡದ ಎಲ್ಲ ಪ್ರಾಚೀನ ಗ್ರಂಥಗಳ, ಕಡತಗಳ, ಶಾಸನಗಳ, ಜನಸಾಮಾನ್ಯರ ಆಡುನುಡಿಗಳ ಅಧ್ಯಯನ ಮಾಡಿದರು. ಅವರ ದುರದೃಷ್ಟವೆಂದರೆ ಅವರಿಗೆ ಪಂಪನು ಬರೆದ 'ವಿಕ್ರಮಾರ್ಜುನ ವಿಜಯ' ಸಿಗದೇ ಹೋದದ್ದು. ಸಿಗಲಿಲ್ಲ ಎಂದರೆ ಏನರ್ಥ? ಆ ಸಮಯದಲ್ಲಿ ಅಂಥದೊಂದು ನಿಜವಾಗಿ ಇರಲಿಲ್ಲವೆಂದೇ? ಅಥವಾ ಲಂಡನ್, ಪ್ಯಾರಿಸ್, ಜರ್ಮನಿಯ ಲೈಬ್ರರಿಗಳಿಗೆ ಯಾರಾದರೂ ಹೊತ್ತೊಯ್ದರೆಂದೇ? ಎಂಥದೂ ಇಲ್ಲ.…
ವಿಧ: Basic page
May 28, 2007
ನಾನು ಓದಿದ ಪುಸ್ತಕ Spencer Johnson ಬರೆದ Who moved my cheese? ನ ರೂಪಾಂತರ.
ಅದೊಂದು ಏಳು ಸುತ್ತಿನ ಕೋಟೆ. ಒಳಗಿನ ಹರವಾದ ನೆಲದಲ್ಲಿ ಹಲವಾರು ನಾಲೆಗಳು ಅಡ್ಡಡ್ಡವಾಗಿ ಉದ್ದುದ್ದವಾಗಿ ಹಾದು ಹೋಗಿವೆ. ಒಂದಕ್ಕೊಂದು ಸಂಪರ್ಕವಿದ್ದರೂ ಅದು ಗೋಜಲು ಗೋಜಲಾಗಿ ಸಂಕೀರ್ಣಮಯವಾಗಿದೆ. ಅಲ್ಲಿ ನಮ್ಮ ಹೆಬ್ಬೆರಳು ಗಾತ್ರದ ಇಬ್ಬರು ಪುಟ್ಟ ಮನುಷ್ಯರಿದ್ದಾರೆ. ಒಬ್ಬನ ಹೆಸರು ಗುಟುರು ಮತ್ತೊಬ್ಬ ಗಮಾರ. ಆ ಇಬ್ಬರಿಗಾಗಿ ಒಂದು ಸ್ಥಳದಲ್ಲಿ ಶುಭ್ರವಾದ ಸುವಾಸನಾಯುಕ್ತವಾದ ಭರ್ಜರಿ ಬೆಣ್ಣೆಯನ್ನು ದೊಡ್ಡ…
ವಿಧ: ಬ್ಲಾಗ್ ಬರಹ
May 28, 2007
ನಮ್ಮ ಅಕ್ಕನ ಮಗಳು ಎರಡು ವರೆ ವರ್ಷದ ಅವನಿ ಬಹಳ ಚುರುಕು, ಮಾತಿನಲ್ಲಿ ಎಲ್ಲರನ್ನೂ ಸಿಕ್ಕಿಸುವಂತಹವಳು. ನಾನು ಹೋದ ವರ್ಷ ಬಾಣಂತನಕ್ಕೆ ಹೋದ ಸಮಯದಲ್ಲಿ ನಮ್ಮ ಊರು ಶಿವಮೊಗ್ಗದಲ್ಲಿ ಮಾರಿ ಜಾತ್ರೆ ನಡೆಯುತ್ತಿತ್ತು. ನಮ್ಮ ಅತ್ತೆ ಮಾವ ಜಾತ್ರೆಗೆ ಹೋಗಿ, ಹಾಗೇ ನನ್ನನ್ನೂ ಮಗುವನ್ನು ನೋಡಲು ನಮ್ಮ ಅಮ್ಮನ ಮನೆಗೆ ಬಂದರು. ಒಂದು ಘಂಟೆಗೂ ಹೆಚ್ಚು ಕಾಲ ಮಾತನಾಡುತ್ತಾ ಕುಳಿತಾಗ ನಮ್ಮ ಅಕ್ಕನ ಮಗಳಿಗೆ ಬೇಜಾರಾಗಲು ಶುರುವಾಯಿತು, ಅವಳು ನನ್ನ ತಂಗಿಗೆ "ನನಗೆ ನಿದ್ದೆ ಬರ್ತಿದೆ " ಎಂದಳು, ಅದಕ್ಕೆ ನನ್ನ…
ವಿಧ: Basic page
May 28, 2007
"ಕೇವಲ ರಕ್ತಪಾತವಷ್ಟೆ ಕ್ರಾಂತಿಯಲ್ಲ. ಕ್ರಾಂತಿಯೆಂದರೆ ಬರೆ ಬಾಂಬು, ಪಿಸ್ತೂಲುಗಳ ಹೋರಾಟವಲ್ಲ. ಸ್ವಾತಂತ್ರ್ಯ ಎನ್ನುವುದೇ ಕ್ರಾಂತಿ. ಶೋಷಿತ ವ್ಯವಸ್ಥೆಯನ್ನು ಕಿತ್ತೊಗೆದು ಶ್ರಮಿಕರು ವಿಮೋಚನೆ ಪಡೆಯುವುದೇ ಕ್ರಾಂತಿ. ಅಪ್ಪಟ ಕ್ರಾಂತಿಯು ಎಂದಿಗೂ ಒಡೆಯರ, ಪ್ರಭುಗಳ, ಶೋಷಕರ ವಿರೋಧಿ." .....
"ಈಗ ಭಾರತಕ್ಕೆ ಬೇಕಾಗಿರುವ ಏಕೈಕ ಪಾಠವೆಂದರೆ, ಸಾಯುವುದು ಹೇಗೆ ಎಂಬುದನ್ನು ಕಲಿಸುವುದು. ಇದನ್ನು ಕಲಿಸಲು ಇರುವ ಒಂದೇ ಮಾರ್ಗವೆಂದರೆ ನಾವೇ ಸತ್ತು ತೋರಿಸುವುದು. ಹೀಗಾಗಿಯೇ ನಾನು ಸಾಯುತ್ತೇನೆ".…
ವಿಧ: Basic page
May 28, 2007
ನಿಸರ್ಗ ಪ್ರತಿಯೊಬ್ಬ ಮನುಷ್ಯನ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಹೊರತು ಪ್ರತಿಯೊಬ್ಬನ ದುರಾಸೆಯನ್ನಲ್ಲ.
- ಮಹಾತ್ಮ ಗಾಂಧಿ
ಜಾಗತೀಕರಣದ ಇಂದಿನ ಯುಗದಲ್ಲಿ ಒಂದೆಡೆ 'ಆಥರ್ಿಕಾಭಿವೃದ್ಧಿ ಹಾಗೂ ವಿಪುಲ ಉದ್ಯೋಗವಕಾಶ'ಗಳ ಹೊದಿಕೆ ಹೊದ್ದಿರುವ ಅತ್ಯಂತ ಹೆಚ್ಚು ಮಲಿನಕಾರಕ ಕಾಖರ್ಾನೆಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಸ್ಥಾಪಿಸಲಾಗುತ್ತಿದೆ. ಮತ್ತೊಂದೆಡೆ ಎಲ್ಲ ಕೈಗಾರಿಕೆಗಳು ಸಹ ಮಾಲಿನ್ಯವುಂಟು ಮಾಡುವುದರಿಂದ ಯಾವುದೇ ಕೈಗಾರಿಕೆ ಸ್ಥಾಪನೆಗೂ ಅವಕಾಶ ಕೂಡದು ಎಂದು ಅಭಿವೃದ್ಧಿ-ವಿರೋಧಿ ನಿಲುವು…