ವಿಧ: ಬ್ಲಾಗ್ ಬರಹ
May 28, 2007
ಇವತ್ತಿನ ಪತ್ರಿಕೆಗಳಲ್ಲಿಯ ವರದಿಯನ್ನು ನೋಡಿದರೆ ಯಾಕೋ ಅನಂತಮೂರ್ತಿ ಮತ್ತವರ ಪಟಾಲಂನ ಉಪದ್ವ್ಯಾಪತನ ಅತಿಯಾಯಿತು ಅನಸತದ. ಅಲ್ಲಿಯ ಭಾಷೆಯನ್ನು ನೋಡಿದರ (ಉದಾ : "ಬಾಡಿಗೆ ಹಂತಕ", "ಹಾಸಿಗೆ ವಿಷಯ", "’ಆವರಣ’ದ ಮಾರಾಟ ಮತ್ತು ಜನಪ್ರಿಯತೆ ಕಂಡು ದಿಗಿಲು!" ಇತ್ಯಾದಿ) ಯಾಕೋ ಎಂದಿನದೋ ಸಿಟ್ಟನ್ನ ಇಂದ ಕಾರಕೊಂಡಾರ ಅನಸಲಿಕ್ಕತ್ತೇದ. ಮೂರ್ತಿಯವರ ಈ ವೈರತ್ವ, ದ್ವೇಷದ ಬೇರುಗಳನ್ನು ಭಿತ್ತಿಯಲ್ಲಿನ್ನೂ ಓದಬಹುದು..
ಆದ್ರ ಯಾಕೋ ಸುದ್ದಿ ಓದಿದ ಮ್ಯಾಲೆ "ಥತ್..ಎಲ್ಲೀಗಿ ಬಂತು..ಕನ್ನಡ ಸಾಹಿತ್ಯ"…
ವಿಧ: ಚರ್ಚೆಯ ವಿಷಯ
May 28, 2007
ಗಿಡ ನೆಡುವುದು ಬಿಟ್ಟು ಇದೇನು ಮರ ನೇಡುವುದು ಅಂದಿರಾ? ರಸ್ತೆ ಅಭಿವೃದ್ಧಿ ಯೋಜನೆಗಳಿಗಾಗಿ ಮರ ಕಡಿಯಬೇಕಾದಾಗ ಅದನ್ನು ಬೇರೆಡೆ ನೆಟ್ಟು ಅದಕ್ಕೆ ಪುನರುಜ್ಜೀವನ ನೀಡಬಹುದೇ? ಅಂಥ ಪ್ರಯೋಗಗಳು ಅಲ್ಲಲ್ಲಿ ಆಗುವುದನ್ನು ಕೇಳಿದ್ದೇವೆ. ಮೆಟ್ರೋ ರೈಲ್ ಕಾಮಗಾರಿಯಿಂದ ತೆಗೆವ ಮರಗಳಿಗೆ ಮರುಜೀವ ನೀಡಲಾಗುತ್ತಿದೆಯಂತೆ. ವರದಿ ಪ್ರಜಾವಾಣಿಯದ್ದು:
http://prajavani.net/Content/May282007/metromon2007052730158.asp
ವಿಧ: ಬ್ಲಾಗ್ ಬರಹ
May 28, 2007
ನನ್ನ ಹತ್ತಿರ ಎರಡು ತುದಿಗಳು ಇವೆ. ಯಾವಾಗಿಂದ ಇದೆ, ಎಲ್ಲಿ ಸಿಕ್ಕಿತು ಅನ್ನೋದೆಲ್ಲ ಮರೆತುಹೋಗಿದೆ. ನಾನು ಹೇಳಬೇಕಂತಿರೋದಕ್ಕೆ ಅದು ಮುಖ್ಯಾನೂ ಅಲ್ಲ ಬಿಡಿ. ಯಾಕೆಂದರೆ ಎಲ್ಲರಿಗೂ ಅಂಥವು ಎಲ್ಲೆಲ್ಲೋ ಯಾವಾವಾಗಲೋ ಸಿಕ್ತವೆ. ಆದರೆ ನನಗಂತೂ ಈ ತುದಿಗಳು ತುಂಬಾ ಕಷ್ಟಕೊಡ್ತಾವೆ. ಅವು ಇಲ್ಲದೆ ಇದ್ದರೆ ಆಗಲ್ಲ. ಇದ್ದಾಗ ಏನು ಮಾಡಬೇಕು ಅಂತ ಹೊಳೆಯೋದಿಲ್ಲ. ಯಾವ ತುದೀನ ಎಲ್ಲಿ ಕೈಗೆತ್ತಿಕೋಬೇಕು ಅನ್ನೋದೆ ಗೊತ್ತಾಗಲ್ಲ. ಮೊನ್ನೆ ನಡೆದಿದ್ದು ಕೇಳಿ ಏನು ಹೇಳ್ತಾ ಇದೀನಿ ಅನ್ನೋದು ಗೊತ್ತಾಗತ್ತೆ.…
ವಿಧ: Basic page
May 28, 2007
(ಇ-ಲೋಕ-24)(28/5/2007)
ಅಮೆರಿಕಾದ ಗೂಢಚಾರ ಸಂಸ್ಥೆ ಎಫ್‍ಬಿಐಯ ಗುಮಾನಿಗೊಳಗಾದ ಹಸನ್ ಇಲಾಹಿ, ತನ್ನ ಜೀವನದ ಕ್ಷಣ-ಕ್ಷಣವನ್ನು ಅಂತರ್ಜಾಲದ ಮೂಲಕ ಸಾರ್ವಜನಿಕರಿಗೆ ಬಯಲಾಗಿಸುವ ನಿರ್ಧಾರ ತೆಗೆದುಕೊಂಡ. ಇದು ಐದು ವರ್ಷದ ಹಿಂದಿನಂದಲೇ ನಡೆದು ಬಂದಿದೆ. ಬಾಂಗ್ಲಾ ಸಂಜಾತ ಹಸನ್ ಇಲಾಹಿ ವೃತ್ತಿಯಿಂದ ಕಾಲೇಜು ಪ್ರೊಫೆಸರ್. ಎರಡು ಸಾವಿರದ ಎರಡನೆಯ ಇಸವಿಯಲ್ಲಿ ಆತ ಡೆನ್ಮಾರ್ಕ್‍ನಿಂದ ಡೇಟ್ರಾಯಿಟ್‍ಗೆ ಪ್ರಯಾಣಿಸುತ್ತಿದ್ದಾಗ, ಭಯೋತ್ಪಾದಕನೆಂಬ ಸಂಶಯದಲ್ಲಿ ಆತನನ್ನು ಬಂಧಿಸಲಾಯಿತು. ತಾನು…
ವಿಧ: Basic page
May 28, 2007
ಗುಣಮುಖ
ಬೆಂಗಳೂರಿನ ರಂಗಶಂಕರದಲ್ಲಿ ನಮ್ ಟೀಮ್ ತಂಡದ ‘ಗುಣಮುಖ’ ನಾಟಕವು ಮೇ ೩೧, ೨೦೦೭ರಂದು ಸಂಜೆ ೭.೩೦ಕ್ಕೆ ಪ್ರದರ್ಶನಗೊಳ್ಳಲಿದೆ.
ಪಿ. ಲಂಕೇಶರ ಪ್ರಮುಖ ನಾಟಕ ಗುಣಮುಖ. ಎಲ್ಲ ಕಾಲಕ್ಕೂ ಸಲ್ಲುವ ವಿಷಯವನ್ನು ಅಳವಡಿಸಿಕೊಂಡಿರುವ ಈ ಕೃತಿ ಇಂದು ಹೆಚ್ಚು ಪ್ರಸ್ತುತ. ನಾಡಿನ ರಂಗತಂಡಗಳನ್ನು ಈ ನಾಟಕವನ್ನು ಮತ್ತೆಮತ್ತೆ ರಂಗದ ಮೇಲೆ ತರುತ್ತಿರುವುದೇ ಅದಕ್ಕೆ ಸಾಕ್ಷಿ.
ಪರ್ಷಿಯಾ ದೇಶದ ರಾಜ ನಾದಿರ್ ಭಾರತ ಮೇಲೆ ದಾಳಿ ಮಾಡಿ ಮೊಘಲ್ ಚಕ್ರವರ್ತಿ ನಜರುದ್ದೀನ್‌ನನ್ನು ಸೋಲಿಸುತ್ತಾನೆ. ಲೋಲುಪ…
ವಿಧ: Basic page
May 28, 2007
ಗಾಳಿ ಮಣ್ಣುಂಡೇಯೊಳಹೊಕ್ಕು ಹೊರಹರಳಲದು|
ಆಳನಿಪುದಂತಾಗದರೆ ಬರಿಯ ಹೆಂಟೆ||
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ|
ಕ್ಷ್ವೇಳವೇನಮೃತವೇಂ? - ಮಂಕುತಿಮ್ಮ|| ೧೯
ವಿಧ: ಬ್ಲಾಗ್ ಬರಹ
May 28, 2007
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು |
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸ-
ಲಲ್ಲಲ್ಲಿ ಕರಣ ಚಾಚೇವು
ನಡು ನಾಡೆ ಇರಲಿ, ಗಡಿನಾಡೆ ಇರಲಿ
ಕನ್ನಡದ ಕಳೆಯ ಕಚ್ಚೇವು
ಮರತೇವು ಮರವ, ತೆರೆದೇವು ಮನವ, ಎರೆದೇವು ಒಲವ-ಹಿರಿ ನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ
೨
ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯ…
ವಿಧ: ಚರ್ಚೆಯ ವಿಷಯ
May 27, 2007
ಕಳಬೇಡ ಕೊಲಬೇಡ
ಕಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
-ಬಸವಣ್ಣ
ವಿಧ: ಚರ್ಚೆಯ ವಿಷಯ
May 27, 2007
http://thatskannada.com ಅಂತರ್ಜಾಲದ ಕನ್ನಡ ಬ್ಲಾಗ್‍ಗಳ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತಿದೆ. ನಿಮ್ಮ ಬ್ಲಾಗನ್ನೂ ಇದಕ್ಕೆ ಸೇರಿಸಿಬಿಡಿ.
http://thatskannada.oneindia.in/hand_post/blogs/index.html
ವಿಧ: ಚರ್ಚೆಯ ವಿಷಯ
May 27, 2007
ಬೇಸಗೆಯ ಕೊನೆಯಲ್ಲಿದ್ದೇವೆ. ಸುಡು ಬಿಸಿಲು. ಎಷ್ಟೋಕಡೆ ನೀರು ಎಂದರೆ ಈಗ ಅಪೂರ್ವ ವಸ್ತು.ನಿಮ್ಮ ಮುದುಡಿದ ಮನಸ್ಸಿಗೆ ನೀರೆರವ ಪಾಂಡುರಂಗರಾಯರ ಕಾರ್ಟೂನ್ ನೋಡಿ. ನಕು ಬಿಡಿ. :)
http://www.paanduwatertoons.blogspot.com/