ವಿಧ: ಚರ್ಚೆಯ ವಿಷಯ
May 15, 2007
ವಿಚಿತ್ರಾನ್ನದಲ್ಲಿ ವಿಶಿಷ್ಟ ಸಮಸ್ಯೆಯೊಂದನ್ನು ಬಿಡಿಸಿದ ಬಗೆಯನ್ನು ವರ್ಣಿಸಿದ್ದಾರೆ ಶ್ರೀವತ್ಸ ಜೋಷಿ. ಟಾಯ್ಲೆಟ್ ಪೇಪರಿನ ಒಂದು ಉಪಯೋಗ ನಿಮಗೆ ಗೊತ್ತೇ ಇದೆ.ಇನ್ನೊಂದು ಉಪಯೋಗ ಈ ಸಮಸ್ಯೆ ಬಿಡಿಸಲು! ಹೇಗೆ? ಓದಿ:
http://thatskannada.oneindia.in/column/vichitranna/150507paper_fold1.html
ವಿಧ: ಚರ್ಚೆಯ ವಿಷಯ
May 15, 2007
ನಮಸ್ಕಾರ ಸಂಪದಿಗರಿಗೆ,
ನಿನ್ನೆ ಹೀಗೆ ನಮ್ಮ ಮನೆಯವರಿಗೆ (ದಾವಣಗೆರೆ ಭಾಷೆಯಲ್ಲಿ, ಇದರ ಅರ್ಥ ಮಡದಿ/ಹೆಂಡತಿ ಎಂದು) ಕುತೂಹಲ ಕೆರಳಿಸಲೊ ಅಥವ ವಾದಿಸಲೊ ದೇವರ ಶ್ಲೊಕಗಳ ಬಗ್ಗೆ ಹೇಳಿದೆ, ಆಗ ಈ http://sampada.net/blog/mahesha/18/04/2007/3735 ಕೊಂಡಿಯ ಅಗತ್ಯ ನನಗೆ ಇತ್ತು. ಹುಡುಕಲೆಂದು ಸಂಪದದ ಗೂಗಲ್ ಹುಡುಕಾಟ ಬಳಸಿದೆ, ಆದರೆ ಯಾವುದೊಂದು ಕೊಂಡಿ/ಮಾಹಿತಿ ನನಗೆ ಸಿಗಲಿಲ್ಲ, ಕಂಡದ್ದು "your search - ವಿಜಯೀಭವ did not match any documents" ಪುಟ. ಕೊನೆಗೆ ಕಷ್ಟಪಟ್ಟು ಹೇಗೊ…
ವಿಧ: ಬ್ಲಾಗ್ ಬರಹ
May 15, 2007
ಸಮವಾಯೋ ಏವ ಸಾಧು - (ಹೊಂದಿಕೊಂಡು ಬದುಕುವದು- ಅದೇ ಒಳ್ಳೆಯದು) ಇದು ಅಶೋಕನ ಶಿಲಾಶಾಸನದಲ್ಲಿನ ವಾಕ್ಯ . ಸ್ವಮತವನ್ನು ಪೂಜಿಸುವದಾಗಲೀ ಪರಮತವನ್ನು ನಿಂದಿಸುವದಾಗಲೀ ಆಗಬಾರದು . ಇದೇ ಮಾತನ್ನೇ ಭಗವಾನ್ ಬುದ್ಧನೂ ಹೇಳಿದ್ದಾನೆ . ''ಅನ್ಯರಿಗೆ ಅಸಹ್ಯಪದಬೇಡ ,ತನ್ನ ಬಣ್ಣಿಸಬೇಡ, ಇದಿರ ಹಳಿಯಲು' ಬೇಡ ' ಎಂದು ಬಸವಣ್ಣನವರೂ ಹೇಳಿದ್ದಾರೆ. ಇಂತ್ಹದೇ ಮಾತನ್ನು ಬುಕ್ಕರಾಯನ ಶಾಸನದಲ್ಲಿ - ಶೈವರಿಗೂ ವೈಷ್ಣವರಿಗೂ ಇದ್ದ ಮನಸ್ತಾಪವನ್ನು ನಿವಾರಿಸುವಲ್ಲಿ ನೋಡಬಹುದು. ಇದೇ ಮಾತನ್ನು 'ರಸವೇ ಜನನ ,…
ವಿಧ: ಬ್ಲಾಗ್ ಬರಹ
May 15, 2007
ಎಷ್ಟೋ ಸಿದ್ಧವಾದ ವಿಷಯಗಳನ್ನು ಕೂಡ ಮತ್ತೆ ಮತ್ತೆ ಹೇಳುತ್ತಲೇ ಇರಬೇಕಾಗುತ್ತದೆ .
ಉದಾಹರಣೆಗೆ , ಮರಾಠೀ ಮತ್ತು ಕನ್ನಡದ ಸಂಬಂಧ
೧. ಈಗಿನ ಮಹಾರಾಷ್ಟ್ರದಲ್ಲೆಲ್ಲ ಕನ್ನಡವೇ ಇತ್ತು .
೨. ೧೦-೧೨ ಶತಮಾನದ ಹೊತ್ತಿಗೆ ಮರಾಠಿ ಉದಯವಾಯಿತು .
೩. ಅದರ ಆಧಾರ ಕನ್ನಡವೇ .
೪. ಇದನ್ನು ಅನೇಕ ಮರಾಠೀ ಸಂಶೋಧಕರೂ ನೇರವಾಗಿ ಅಥವಾ ಸುತ್ತು ಬಳಸಿ ಒಪ್ಪಿದ್ದಾರೆ.
೫. ೫ ನೇ ಶತಮಾನದಿಂದ ೧೫ ರವರೆಗೆ ಮಹಾರಾಷ್ಟ್ರವನ್ನು ಕನ್ನಡ ಅರಸರೇ ಆಳಿದ್ದಾರೆ.
೬. ಅತೀ ಹೆಚ್ಚು ಕನ್ನಡ ಶಾಸನಗಳು ಮಹಾರಾಷ್ತ್ರದಲ್ಲೇ…
ವಿಧ: ಬ್ಲಾಗ್ ಬರಹ
May 15, 2007
ಔಷಧೀಯ ಗುಣಗಳಿರುವ, ನೆಲಮಟ್ಟದಲ್ಲಿ ಬೆಳೆಯುವ ಪುಟ್ಟ ಸಸ್ಯ ನೆಲ ನೆಲ್ಲಿ. ಔಷಧೀಯ ಗುಣಗಳು ಏನೆಂದು ಕೇಳಿದರೆ ನನಗೆ ತಿಳಿಯದು. ನನ್ನ ಅಜ್ಜಿ ಇದನ್ನು ಕಂಡರೆ ಕಿತ್ತು ತೊಳೆದು ತಿನ್ನುತ್ತಾರೆ / ಅಥವಾ ಕಷಾಯ ಮಾಡಿ ಕುಡಿಯುತ್ತಾರೆ. ಅದರ ಹೊರತಾಗಿ ನನಗೆ ನೆಲನೆಲ್ಲಿಯ ಬಗ್ಗೆ ಯಾವುದೇ ಜ್ನಾನ ಇಲ್ಲ. ಗೊತ್ತಿದ್ದವರಿದ್ದರೆ ತಿಳಿಸಿ.
ತುಂಬಾ ಹತ್ತಿರದಿಂದ ಚಿತ್ರ ತೆಗೆದಿದ್ದೇನೆ. ನೋಡುಗರಿಗೆ ಸಸ್ಯದ/ಕಾಯಿಯ ಗಾತ್ರದ ಬಗ್ಗೆ ಸ್ಪಷ್ಟ ಚಿತ್ರ ದೊರೆಯದೇನೋ. Objects in the mirror appear closer…
ವಿಧ: ಬ್ಲಾಗ್ ಬರಹ
May 15, 2007
ಆಹಾ, ಚಹಾ...
ಬೆಳಗ್ಗೆ ೪ ಗಂಟೆಗೇ ಏಳಿ,ಇಲ್ಲಾ ೮ ಗಂಟೆಗೆ, ಮೊದಲಿಗೆ ನೆನಪು ಬರುವುದು ಚಹಾ,ಆಹಾ.
ಕೆಲವರು ಕಾಫಿ ಎನ್ನಬಹುದು. ಅವರು ಹೇಳಿಕೊಳ್ಳಲಿ ಬಿಡಿ. ಚಹಾದಲ್ಲಿ ಸಿಕ್ಕುವಷ್ಟು ಚೈತನ್ಯ ಬೇರಾವುದರಲ್ಲೂಇಲ್ಲ.ಚೈತನ್ಯವೂ(chaitanya) ಸಹ ಚಹಾಮಯ ನೋಡಿ-
CHA-Iತನ್ಯ,
ಚೈT(ಟೀ)a ನ್ಯ;
ಎಲ್ಲಾ ಹೆಂಗಸರ ಬೆಳಗ್ಗಿನ ಡ್ಯೂಟಿ ಸುರುವಾಗುವುದೇ ಚಹಾದಿಂದ.
ಚಹಾ ಮಾಡಿ, ಯಜಮಾನರನ್ನು,ಮಕ್ಕಳನ್ನು " ಚಹಾ ರೆಡಿ,ಏಳಿ,ಏಳಿ,"
ಎಂದು ಒಬ್ಬೊಬ್ಬರನ್ನು ಎಬ್ಬಿಸುತ್ತಾ,ಚಾಕುಡಿಸಿ ಬರುವಾಗ…
ವಿಧ: ಚರ್ಚೆಯ ವಿಷಯ
May 14, 2007
ಹೆಚ್ಚು ಹೊತ್ತು ಟಿವಿ ನೋಡುವ ಮಕ್ಕಳು ಕಾಲೇಜು ಸೇರುವ ಸಂಭಾವ್ಯತೆ ಕಡಿಮೆಯೆ? ಸುಧೀಂದ್ರರ ನೆಟ್‍ನೋಟ ಅಂಕಣ ಓದಿ.
http://vijaykarnatakaepaper.com/pdf/2007/05/14/20070514a_006101002.jpg
ವಿಧ: ಚರ್ಚೆಯ ವಿಷಯ
May 14, 2007
ನಾನು ಗೂಗಲಿಸಿದಾಗ ಇದು ಸಿಕ್ಕ್ಕಿತು.
Link
ಆದರೆ ಇದ್ರ ಬೆಲೆ ೧೩೫$ ...ಸಕ್ಕತ್ ಟೋಪಿ :) ...ಆದ್ರೆ ಇಲ್ಲಿರುವ ನುಡಿಗಳಲ್ಲಿ ಕನ್ನಡ ಇರುವುದಕ್ಕೆ ನನಗೆ ನಲಿವು .. :)
(ಸೂ: ಇಲ್ಲಿ ಸೇರಿಸಲ್ಪಟ್ಟಿದ್ದ [http://www.worldlanguage.com/|ವರ್ಲ್ಡ್ ಲ್ಯಾಂಗ್ವೇಜ್] ತಾಣದವರ ಕಾಪಿರೈಟ್ ಇರುವ ಮಾಹಿತಿ ಸಂಪದ ಪಾಲಿಸಿಯನ್ವಯ ನಿರ್ವಾಹಕರಿಂದ ತೆಗೆದುಹಾಕಲ್ಪಟ್ಟಿದೆ)
ವಿಧ: ಚರ್ಚೆಯ ವಿಷಯ
May 14, 2007
ಮಂಗಳೂರು ಕನ್ನಡದ ಬಗ್ಗೆ ಸಂಪದದಲ್ಲಿ ಆಗೀಗ ಕೆಲವು ಚರ್ಚೆಗಳಾಗಿವೆ. ಈ ಚರ್ಚೆ ಅದಕ್ಕೇ ಮೀಸಲು.
ಮಂಗಳೂರು ಕನ್ನಡದ ಬಗ್ಗೆ ಕೇಳಿಬರುವ ಮಾತುಗಳು -ಕೆಲವು- ಹೀಗಿವೆ:
೧. ಈ ಕನ್ನಡ ನಾವು ಬರೆಯುವ ಕನ್ನಡಕ್ಕೆ ಹತ್ತಿರವಾಗಿದೆ. ಅಂದರೆ ಹೆಚ್ಚು ಶಿಷ್ಟ / ಗ್ರಾಂಥಿಕ.
೨. ಮಂಗಳೂರು ಕಡೆಯವರ ಮನೆಯ ಭಾಷೆ ಕನ್ನಡವಲ್ಲ - ಅದು ತುಳು ಅಥವಾ ಕೊಂಕಣಿ. ಹಾಗಾಗಿ ಆ ಕನ್ನಡ ’ಕನ್ನಡಿಗರಲ್ಲದವರು” ಮಾತಾಡುವ ಕನ್ನಡ- ಅದಕ್ಕೇ ಅದು ಬರಹದ ಕನ್ನಡಕ್ಕೆ ಹತ್ತಿರವಾಗಿದೆ.
೩. ಮಂಗಳೂರು ಕನ್ನಡದಲ್ಲಿ ಬೇರೆಡೆ ಕಾಣಸಿಗದ…
ವಿಧ: ಚರ್ಚೆಯ ವಿಷಯ
May 14, 2007
ಸ್ನೇಹಿತರೆ, ಬರೀ ಮಗುವಿಗೆ ಹೆಸರು ಸೂಚಿಸಿ ಅಂತ ಕೇಳ್ತಿದ್ದೀನಿ ಎಂದು ಬೇಜಾರು ಮಾಡಿಕೊಳ್ಳಬೇಡಿ. ಈ ಪ್ರಕರಣ ಸ್ವಲ್ಪ ಕಾಂಪ್ಲೆಕ್ಸ್ ಆಗಿದೆ. ಏನೆಂದರೆ, ನನ್ನ ಸ್ನೇಹಿತರೊಬ್ಬರಿಗೆ ಮೊನ್ನೆ ತಾನೇ ಜನಿಸಿದ ಗಂಡು ಮಗುವಿಗೆ ಒಂದು ಹೆಸರು ಬೇಕಾಗಿದೆ. ಗಂಡು ಮಗುವಿಗೇನು, ಬೇಕಾದಷ್ಟು ಹೆಸರುಗಳು ಸಿಗುತ್ತವೆ ಎನ್ನುತ್ತೀರಾ? ಸಮಸ್ಯೆ ಇರುವುದೇ ಇಲ್ಲಿ. ತುಸು ಸಂಪ್ರದಾಯಸ್ಥರಾದ (ತುಸು ಏನು, ಬಹಳಾನೇ!) ಅವರಿಗೆ ಮಗು ಹುಟ್ಟಿದ ಗಳಿಗೆ, ರಾಶಿ, ನಕ್ಷತ್ರ ಇತ್ಯಾದಿ ಆಧಾರಗಳ ಮೇಲೆ ಇಡಬಹುದಾದ ಹೆಸರು…