ಎಲ್ಲ ಪುಟಗಳು

ಲೇಖಕರು: kuchela
ವಿಧ: ಬ್ಲಾಗ್ ಬರಹ
May 12, 2007
ನಿಮಗೆ ಗೊತ್ತಾ, ೫೦ ವಷ೯ದ ಕೆಳಗೆ ಮಲೆನಾಡು ಭಾಗದಲ್ಲಿ ೭೦ಕ್ಕೂ ಹೆಚ್ಚು ರೀತಿ ಪಾನಕ ಇತ್ತು. ಇದು ಪ್ರೂವ್ ಆಗಿದೆ. ದಾಖಲೆ ಸಮೇತ. ಕೃಷಿ ಪ್ರಯೋಗ ಪರಿವಾರ ಸಂಸ್ಥೆಯು ೪೦ ಜನರ ಸಹಾಯ ಪಡೆದು ಈ ಮಹತ್ ಕಾರ್ಯ ಮಾಡಿದೆ. ಇದು ೨ ವಷ೯ದ ಪ್ರಯತ್ನ. ಸಾಗರ, ಸೊರಬ, ಶಿರಸಿ, ಸಿದ್ದಾಪುರ ಸುತ್ತಮುತ್ತಲ ಹಳ್ಳಿಗಳಲ್ಲಿ ತಿರುಗಿ, ಮನೆಗಳಲ್ಲಿರುವ ಅಜ್ಜಿಯರನ್ನು ಮಾತನಾಡಿಸಿ ಪಾನಕದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಪಾನಕ ಮಾಡುವ ವಿಧಾನ, ಬಳಸುವ ವಸ್ತು, ಪ್ರಮಾಣ, ಅದನ್ನು ಸೇವಿಸುವುದರಿಂದ ಆಗುವ ಪ್ರಯೋಜನ…
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
May 12, 2007
ಎಣಿಸಿಗೆ ಬಲೆಯಲ್ಲಿ ಕನ್ನಡ PDF ಹೊತ್ತಿಗೆಗಳು ಬಾಳ ಕಡಿಮೆ. http://dli.iiit.ac.in ನಲ್ಲಿ ಆನ್‍ಲೈನ್ ಹೊತ್ತಿಗೆಗಳನ್ನು ಓದಬಹುದು. http://mykannada.net ನಲ್ಲಿ ನೇರವಾಗಿ ಇಳಿಸಿಕೊಳ್ಳಬಹುದಾದ ಕೆಲವು PDF ಹೊತ್ತಿಗೆಗಳು ಸಿಗುತ್ತವೆ. ನೋಡಿ.
ಲೇಖಕರು: betala
ವಿಧ: ಚರ್ಚೆಯ ವಿಷಯ
May 11, 2007
ನಂ ಮಾನ್ಯ ಮುಖ್ಯ ಮಂತ್ರಿಗಳು ಅವಗವಾಗ ಪಂಚೆ-ಶರಾಯಿಗೆ ಶಿಫ್ಟ ಆಗ್ತ ಇತ್ರಾರೆ ? ಇದರ ಉದ್ದೇಶ ಏನು ಶಿವಾ ? ಖಾದಿಯಿಂದ ಪಂಚೆ-ಶರಾಯಿಗೆ ? ಎನಾದ್ರು ???? ;)    
ಲೇಖಕರು: veena
ವಿಧ: Basic page
May 11, 2007
ಮೇ -೧೩ ಮಾತೆಯರ ದಿನವನ್ನಾಗೆ ಆಚರಿಸಲಾಗುತ್ತಿದೆ. ಸಾಮನ್ಯವಾಗಿ ಇದು ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸುತ್ತಾರೆ. ಈ ರೀತಿ ವರ್ಷದ ೩೬೫ ದಿನವೂ ಯಾವುದಾದರೊಂದು ವಿಶೇಷ ದಿನವಾಗಿಯೇ ಆಚರಿಸಲ್ಪಡುತ್ತದೇನೋ, ಒಮ್ಮೆ ಪಟ್ಟಿ ಮಾಡಬೇಕು. ಹೋದ ವರ್ಷ ನಾನು ಮಾತೆಯರ ದಿನದ ವಿಶೇಷವಾಗಿ ವಸುಧೇಂದ್ರ ಅವರ ಲೇಖನವನ್ನು ವಿಜಯ ಕರ್ನಾಟಕದಲ್ಲಿ ಓದಿದ್ದೆ. ಅವರ ಅಮ್ಮನ ಸ್ಟೀಲ್ ಪಾತ್ರೆಗಳ ಬಗೆಗಿನ ಪ್ರೇಮವನ್ನು ಕುರಿತು ಬರೆದಿದ್ದರು. ಅಂದಿನಿಂದ ನಾನು ಅವರ ಬೀಸಣಿಕೆ (ಫ್ಯಾನ್) ಆಗ್ಬಿಟ್ಟೆ. ನಂತರ ಅವರು…
ಲೇಖಕರು: anivaasi
ವಿಧ: ಬ್ಲಾಗ್ ಬರಹ
May 11, 2007
ಮಾಡಿನ ಕಿಂಡಿ ಮತ್ತು ತೆರೆದ ಕಿಟಕಿಯಿಂದ ತೂರಿ ಬಂದು ದಿನವಿಡೀ ನನ್ನ ಮೈಗೆಲ್ಲಾ ಕಚಗುಳಿಯಿಟ್ಟು, ಬಿಡುಬೀಸಾಗಿ ಮನೆಯೆಲ್ಲಾ ಮೈ ಹರಡಿ ನನ್ನ ಜತೆ ಚಕ್ಕಂದವಾಡಿ ಸಂಜೆ ಹೋಗುವಾಗ "ಮುಳುಗುವ ಸಮಯ ಬಂತು, ನಾನು ಇಲ್ಲಿಂದ ಹೋಗುತ್ತಲೂ ಕತ್ತಲಾಗೋಕೆ ಬಿಡದ ಹಾಗೆ ಬಿಳಿಯ ಬೆಳಕಿನ ಮೋಡಿ ಹಾಕಿ, ರಾತ್ರಿ ಇಡೀ ಚುಂಬಿಸ್ತೀನಂತ ಆ ಮಾಯಗಾತಿ ಬರುತ್ತಾಳೆ. ಹುಷಾರಾಗಿರು. ಸುಮ್ಮನೆ ನಿದ್ದೆ ಮಾಡು" ಎಂದು ಹಿಂದೆ ತಿರುಗಿ ನೋಡದೆ ಮಾಯವಾದಳು. ಅವಳ ಚೆಲುವಿಗೆ ಸೋತು ಅವಳ ಕನಸೇ ಕಾಣಬೇಕೆಂದು ಗಟ್ಟಿಮಾಡಿಕೊಂಡೆ.ಮಾಡಿನ…
ಲೇಖಕರು: ASHOKKUMAR
ವಿಧ: Basic page
May 11, 2007
 ಇಥೆನಾಲ್ ಬಳಸಿ ವಾಹನ ಓಡಿಸಲು ಸಾಧ್ಯ. ಅದನ್ನು ಪೆಟ್ರೋಲ್ ಜತೆ ಮಿಶ್ರ ಮಾಡಿಯೂ ಬಳಸಬಹುದು. ಏರುತ್ತಿರುವ ಕಚ್ಚಾ ತೈಲದ ಬಳಕೆ ಮತ್ತು ಅದರಿಂದ ಭೂಮಿಯ ವಾತಾವರಣಕ್ಕೆ ಅಗುತ್ತಿರುವ ಹಾನಿ, ಶಾಖದ ಏರಿಕೆ ಇವುಗಳ ಬಗ್ಗೆ ಚಿಂತಿಸಿದ ಸಂಶೋಧಕರು, ಇಥೆನಾಲ್‍ನಂತಹ ಜೈವಿಕ ಇಂಧನ ಬಳಕೆ ಒಳಿತು ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಅದರೆ ಈಗ ವಿಶ್ವ ಸಂಸ್ಥೆಯು ಜೈವಿಕ ಇಂಧನದ ಬಳಕೆಯೂ ಅಪಾಯಕಾರಿ ಆಗಬಲ್ಲುದು, ಇದರಿಂದ ಭೂಮಿಯ ಪರಿಸರದ ಮೇಲೆ ಆಗುತ್ತಿರುವ ಕೆಡುಕನ್ನು ನಿವಾರಿಸಲು ಅಸಾಧ್ಯವಾಗಬಹುದು ಎನ್ನುವ…
ಲೇಖಕರು: anivaasi
ವಿಧ: Basic page
May 11, 2007
-೧-ಮುಗಿಲೆತ್ತರ ನಿಂತು ನಗುವ ಜಾದುಗಾರನೆದುರು ಕಪ್ಪು ಮೇಜು ಕಪ್ಪು ಹೊದಿಕೆ ನಟ್ಟ ನಡುವೆ ಹೊಳೆವ ಕಪ್ಪು ನೀಳ ಹ್ಯಾಟು.ಹ್ಯಾಟಿನೊಳಗೆ ಇಳಿವ ಅವನ ಕೈಗೆಕಿವಿಯ ಕೊಡಲು ಕಾದು ಕೂತ ಬೆಳ್ಳಿತೊಗಲ ಮುದ್ದು ಮೊಲ.ಹ್ಯಾಟಿನಾಚೆ ಎತ್ತಿದೊಡನೆಕೂಗಲೆಂದೆ ಕಾದು ಕೂತ ಪುಟ್ಟ ಪುಟ್ಟ ದನಿಗಳು,ತೂಗಲೆಂದೆ ಕಾದು ಕೂತ ನೆರೆತ ಹಿರಿಯ ತಲೆಗಳು;ಹ್ಯಾಟು ಮೊಲದ ಟ್ರಿಕ್ಕಿಗಾಗಿ ಸ್ಥಬ್ಧ ಮೌನ ಸುತ್ತಲು.ಅಷ್ಟರಲ್ಲಿ ಧಡೀರನೆ-ಹ್ಯಾಟು ಬಾಯಿಯಿಂದ ಬಿದ್ದ ಮುಗಿಲ ಬೆಳ್ಳಿ ಬೆಳಕು,ಮುದ್ದು ಮೊಲದ ಎದೆಯ ಲೋಕದಾಸೆ ಮಣಿಗೆ ಹೊಳೆದು…
ಲೇಖಕರು: honnalichandrashekhar
ವಿಧ: ಬ್ಲಾಗ್ ಬರಹ
May 11, 2007
ಮತ್ತದೆ ಬೇಸರ... ಅದೇ ಸಂಜೆ ಅದೇ ಏಕಾಂತ... ನಿನ್ನ ಜೊತೆ ಇಲ್ಲದೆ ಮಾತಿಲ್ಲದೆ ಮನ ವಿಭ್ರಾಂತ.... ನಿಸ್ಸಾರರ ಈ ಕವನ ಓದಿದಾಗಲೆಲ್ಲಾ ಸಂಜೆಯೂ ಆಲ್ಲದ, ರಾತ್ರಿಯೂ ಅಲ್ಲದ ಆ ಸಮಯ ನೆನಪಿಗೆ ಬರುತ್ತದೆ. ಸೂರ್ಯ ಮುಳುಗಿದ ನಂತರದ, ರಾತ್ರಿ ಆವರಿಸುವ ಮೊದಲಿನ ಆ ಸಮಯ. ಅದೊಂದು ಹಗಲು ಅಲ್ಲದ, ರಾತ್ರಿಯೂ ಅಲ್ಲದ ವಿಚಿತ್ರ ಕಾಲ. ನೆನಪುಗಳು ನುಗ್ಗಿ ಬರುವ ಸಂಕ್ರಮಣ ಸಮಯ. ಇದೇ ದಾಟಿಯ, ಹಿಂದಿಯ ಬಹು ಜನಪ್ರಿಯ.... ಫಿರ್ ವಹಿ ಶಾಮ್... ವಹಿ ಗಂ... ವಹಿ ತನಹಾಯಿ.... ಇದು ನಿಮ್ಮನ್ನು ಕಾಡಿರಬಹುದು.…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
May 10, 2007
ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. :) ೧) ಬಲಾ, ಹೊತ್ತಾಯ್ತು..ಗದ್ದೆಗೆ ಹೋಗಿ ತೆವರಿ ಸವರ್ಬುಟ್ಟು ಬರುಮ೨) ಹೊಲ ಉತ್ತಾಯ್ತು ..ನಡೀ ಅಟ್ಟಿಗೋಗಿ ಇಟ್ ಉಣ್ಕಂಡ್ಬರೂಮ.೩) ಎತ್ತು ಬಿಡ್ಸ ಕಂಡ್ ಬುಟ್ಟದೆ ಕಣ್ಲ..ಕಟ್ ಹಾಕು ವೋಗು.೪) ವಾದಂವ ಕೇಮಿ ನೋಡೋಗು.೫) ಬಲಾ,ಕಾವಲಿಗೆ ಹೋಗಿ ಈಜ್ಬುಟ್ಟು ಬರುಮ೬) ಯಾನಪ್ಪ, ಈ ಬಸ್ಸು ಚಬ್ನಳ್ಳಿಗಾಣೆ ವಾದುದಾ?೭) ಏ, ಕುರಿಗಳು ನುಗ್ಬುಟ್ಟವೆ ವೊಲದೊಳಿಕೆ..ಓಡ್ಸು ಓಗ್ಲ೮) ನಡೀಲಾ ಬಿರ್ ಬಿರ್ನೆ, ಕಳೆ ಕೀಳೋ…
ಲೇಖಕರು: bhcsb
ವಿಧ: ಚರ್ಚೆಯ ವಿಷಯ
May 10, 2007
ನಮಸ್ಕಾರ. ನನಗೆ "ಕಾರ್‍ ಪೂಲ್ಸ್" (carpools) ಮತ್ತು "ಗ್ರೀನ್ ಕನ್ಸರ್ಟ್" (green concert) ಇವುಗಳ ಅರ್ಥ ತಿಳಿದುಕೊಳ್ಳಬೇಕಾಗಿದೆ. ದಯವಿಟ್ಟು ಇವುಗಳನ್ನು ಅನುವಾದಿಸಿ ಕೊಡಿ. ಧನ್ಯವಾದಗಳು