ಮೇ-೧೩ ಮಾತೆಯರ ದಿನ

ಮೇ-೧೩ ಮಾತೆಯರ ದಿನ

ಬರಹ

ಮೇ -೧೩ ಮಾತೆಯರ ದಿನವನ್ನಾಗೆ ಆಚರಿಸಲಾಗುತ್ತಿದೆ. ಸಾಮನ್ಯವಾಗಿ ಇದು ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸುತ್ತಾರೆ. ಈ ರೀತಿ ವರ್ಷದ ೩೬೫ ದಿನವೂ ಯಾವುದಾದರೊಂದು ವಿಶೇಷ ದಿನವಾಗಿಯೇ ಆಚರಿಸಲ್ಪಡುತ್ತದೇನೋ, ಒಮ್ಮೆ ಪಟ್ಟಿ ಮಾಡಬೇಕು. ಹೋದ ವರ್ಷ ನಾನು ಮಾತೆಯರ ದಿನದ ವಿಶೇಷವಾಗಿ ವಸುಧೇಂದ್ರ ಅವರ ಲೇಖನವನ್ನು ವಿಜಯ ಕರ್ನಾಟಕದಲ್ಲಿ ಓದಿದ್ದೆ. ಅವರ ಅಮ್ಮನ ಸ್ಟೀಲ್ ಪಾತ್ರೆಗಳ ಬಗೆಗಿನ ಪ್ರೇಮವನ್ನು ಕುರಿತು ಬರೆದಿದ್ದರು. ಅಂದಿನಿಂದ ನಾನು ಅವರ ಬೀಸಣಿಕೆ (ಫ್ಯಾನ್) ಆಗ್ಬಿಟ್ಟೆ. ನಂತರ ಅವರು ಹೊರತಂದ ಪುಸ್ತಕ ನಮ್ಮಮ್ಮ ಅಂದ್ರೆ ನನಗಿಷ್ಟ ಓದಿದೆ. ನಾನೂ ಅದರಲ್ಲಿ ಒಂದು ಪಾತ್ರವೇನೊ ಎಂಬಂತೆ ಭಾಸವಾಗಿ ಬಿಟ್ಟಿತ್ತು. ಈ ವರ್ಷದ ಮಾತೆಯರ ದಿನಕ್ಕೆ ಅಂತಹದೇ ಒಂದು ಸುಂದರ ಲೇಖನವನ್ನು ಅವರಿಂದ ನಿರೀಕ್ಷಿಸುತ್ತಿರುವೆ.....