ವಿಧ: Basic page
March 15, 2006
ಈ ಸಂದರ್ಭದಲ್ಲಿ ನನಗೆ ಶಾಂತಾರಾಮ್ ರವರ ಹಿಂದಿಯ ನವರಂಗ್ ಚಿತ್ರದ ಸಂಧ್ಯಾರವರ ನೃತ್ಯ ಜ್ಞಾಪಕ ಬರುತ್ತಿದೆ. ಆದರೆ ಅಂದಿನ ಹೋಲಿ ಎಲ್ಲಿ, ಇಂದಿನ ಹೋಲಿ ಎಲ್ಲಿ? ಸಾಮ್ಯತೆ ಇದೆಯೇ?
ಈಗೀಗ ಹೋಲಿ ಆಚರಣೆಯಲ್ಲಿ ಮಾದಕತೆ ತುಂಬಿದೆ
ಕುಡಿಯಲು ಭಾಂಗ್ (ಮತ್ತೇರಿಸುವ ಪೇಯ) ಬೇಕೇ ಬೇಕು.
ಪ್ರಾಪ್ತ ವಯಸ್ಕ ಗಂಡು ಹೆಣ್ಣುಗಳು ಬೀದಿ ಬೀದಿಯಲ್ಲಿ ರಂಗು ರಂಗಿನ ನೀರಿನಲ್ಲಿ ತೊಯ್ದು ತೊಪ್ಪೆಯಾಗಿ ಚೆಲ್ಲಾಟವಾಡಿ ನೋಡುಗರನ್ನೂ ಉತ್ತೇಜಿಸುವ ನೋಟ ಸಾಮಾನ್ಯ.
ಈ ವರ್ತನೆ ನಿಜವಾಗಲೂ ಈ ಹಬ್ಬದ ದ್ಯೋತಕವೇ?
ಹಬ್ಬ ಬರಲು…
ವಿಧ: Basic page
March 15, 2006
ಕೆಲಸ ಕಾರ್ಯಗಳನು ನಾಳೆಗೆ
ಮುಂದೂಡಿ ಕುಳಿತು
ಇಂದಿನಾ ದಿನವನ್ನು ಮುಗಿಸುವ
ನಾವುಗಳೇ ಹೀಗೆ
ದಿನವನ್ನು ಕಳೆಯುತ್ತೇವೆ
ಬೆಲೆ ನೀಡುವುದಿಲ್ಲ.
ತಿರುಳಿಲ್ಲದ ಘಟನೆಗಳನು
ಬಹು ಸೃಷ್ಟಿಮಾಡಿ
ಹುರುಳಿಲ್ಲದೆಯೆ ನೆನೆದು
ದುಃಖಿಸುವ ನಾವುಗಳೇ ಹೀಗೆ
ಹಿಂದಿನದ ತಿರುಚುತ್ತೇವೆ
ಹೊಸದ ಸೃಷ್ಟಿಸುವುದಿಲ್ಲ
ಮುಂದಿನಾಬದುಕಿಗೆ
ಕನಸಗೋಪುರವನ್ನು
ಮನಸಲ್ಲೇ ಕಟ್ಟುತ್ತಾ
ನಿದ್ರಿಸುವ ನಾವುಗಳೇ ಹೀಗೆ
ಭ್ರಮೆಯ ಲೋಕದಲಿ ಸಾಗುತ್ತೇವೆ
ಗುರಿ ತಲುಪುವುದೇ ಇಲ್ಲ.
ವಿಧ: Basic page
March 15, 2006
ನಿಸರ್ಗವೇ ಹೀಗೆ. ಮನುಷ್ಯನು ಯೋಚಿಸಲು ಪ್ರಾರಂಭಿಸಿದಾಗಿನಿಂದಲೂ, ತನ್ನ ಸೌಂದರ್ಯದಿಂದ ಅವನನ್ನು ಆಕರ್ಷಿಸಿ ತನ್ನ ಆರಾಧಕನನ್ನಾಗಿಸುವುದು. ನಿಸರ್ಗದ ಸೌಂದರ್ಯವನ್ನು ವರ್ಣಿಸುವ ಕವಿಗಳ ಕೊನೆಯಿಲ್ಲದ ಸಾಲು ಇದಕ್ಕೆ ಸಾಕ್ಷಿ.ಆದರೆ ಅದೇ ಸೌಂದರ್ಯದೊಳಗೆ ಅಡಗಿರುವ ಭೀಕರತೆ ಕಂಡವರು ಕೆಲವೇ ಮಂದಿ. ಆ ಭೀಕರತೆಯನ್ನು ಕಂಡವರು ನಿಸರ್ಗದ ನಿಷ್ಕರುಣ ವ್ಯವಸ್ಥೆಗೆ ತಲೆದೂಗಿ ಗೌರವಿಸುವುದುಂಟು. ಇದು ಎಲ್ಲರಿಗೂ ಸಾಧ್ಯವಾಗದ ಕೆಲಸ. ನಿಸರ್ಗವನ್ನು ಹತ್ತಿರದಿಂದ ನೋಡಿರದಿದ್ದರೆ ಅದನ್ನು “ಕವಿಗಣ್ಣಿ”ನಿಂದ…
ವಿಧ: ಬ್ಲಾಗ್ ಬರಹ
March 14, 2006
ನಿನ್ನೆ ಸಿಎನ್ಎನ್-ಐಬಿಎನ್‌ನಲ್ಲಿ ಕರ್ನಾಟಕದ ಮುಸ್ಲೀಮರ ಬಗ್ಗೆ ಒಂದು ಚಿಕ್ಕ ರಿಪೋರ್ಟ್ ಇತ್ತು. . ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಜನಪದ ಕವಿ ಎಸ್.ಕೆ.ಕರೀಮ್ ಖಾನ್ ಅವರು ನಾನು ಕನ್ನಡಿಗನೂ ಹೌದು , ಮುಸಲ್ಮಾನನು ಹೌದು ಎಂದರು.ಆಮೇಲೆ ಸಂತ ಶಿಶುನಾಳ ಶರೀಫರ ಬಗ್ಗೆ ಶಿವಮೊಗ್ಗ ಸುಬ್ಬಣ್ಣ ಮಾತನಾಡಿದರು.ಹಿನ್ನಲೆಯಲ್ಲಿ ಸುಬ್ಬಣ್ಣನವರ
ಢ್ವನಿಯಲ್ಲಿ "ತಾಳಲಾರೆ ತಗಣೆಯ ಕಾಟ" ಬರ್ತಾ ಇತ್ತು.ಹಾಡಿನ ಉಳಿದ ಸಾಲುಗಳು ನೆನಪಿಲ್ಲ.ಹಾಡು ಅರ್ಥವೂ ಆಗಲಿಲ್ಲ.:-(
ಕೇರಳ ಮೂಲದವರಾದ ಯೂಸಫ್ ಆರಕ್ಕಲ್…
ವಿಧ: Basic page
March 14, 2006
೪೦. ಪೂರ್ಣವಾಗಿ ಸಜ್ಜನರ ದಾರಿಯನ್ನು ಅನುಸರಿಸಲು ಸಾಧ್ಯವಿಲ್ಲದಿದ್ದರೆ ಸಾಧ್ಯವಿದ್ದಷ್ಟಾದರೂ ಅನುಸರಿಸಬೇಕು. ಅವರು ಹಾಕಿಕೊಟ್ಟ ದಾರಿಯಿಂದ ದೂರ ಸರಿಯಬಾರದು.
ಅನುಗಂತುಂ ಸತಾಂ ವರ್ತ್ಮ ಕೃತ್ಸ್ನಂ ಯದಿ ನ ಶಕ್ಯತೇ |
ಸ್ವಲ್ಪಮಪಿ ಅನುಗಂತವ್ಯಂ ಮಾರ್ಗಸ್ಥೋ ನಾವಸೀದತಿ ||
೪೧. ಪ್ರತಿದಿನವೂ ಮನುಷ್ಯನು ತನ್ನ ನಡತೆಯನ್ನು ನೋಡಿಕೊಳ್ಳಬೇಕು. ತಾನು ಪಶುಗಳ ಹಾಗೆ ವರ್ತಿಸುತ್ತಿರುವೆನೋ ಅಥವಾ ಸತ್ಪುರುಷರ ಹಾಗೋ ಎಂದು ವಿಚಾರ ಮಾಡಬೇಕು
ಪ್ರತ್ಯಹಂ ಪ್ರತ್ಯವೇಕ್ಷ್ಯೇತ ನರ: ಚರಿತಂ ಆತ್ಮನ: |…
ವಿಧ: Basic page
March 14, 2006
೨೧. ಅರಮನೆಯಿದ್ದರೂ ನೆರೆಮನೆ ಬೇಕು
೨೨. ಅರಸನ ಅಂಕೆಯಿಲ್ಲ ; ದೆವ್ವದ ಕಾಟ ಇಲ್ಲ .(ನಿಶ್ಚಿಂತ ಜೀವನ)
೨೩. ಅರಸನ ಕುದುರೆ ಲಾಯದಲ್ಲಿ ಮುಪ್ಪು . ( ಮಂತ್ರಿಯ ಕಾರು ಷೆಡ್ಡಿನಲ್ಲಿ ತುಕ್ಕು ಹಿಡಿದ ಹಾಗೆ!)
೨೪. ಅರಸನ ಮಾನ ಅರಸನಿಗೆ , ಅಗಸನ ಮಾನ ಅಗಸನಿಗೆ.
೨೫. ಅರಿಯೆ ಅನ್ನುವದನ್ನು ಆನೆ ಕೊಟ್ಟಾದರೂ ಕಲಿ.
೨೬. ಅರಿಯೆನೆಂದರೆ ಅರವತ್ತು ಗುಣ , ಕಾಣೆನೆಂದರೆ ಕೋಟಿ ಗುಣ.
೨೭. ಅಲಗಿನ ಗಾಯಕ್ಕಿಂತ ಗಲಗಿನ ಗಾಯ ಹೆಚ್ಚು.
೨೮. ಅಲ್ಪ ಕಾರ್ಯಕ್ಕೆ ಅರಮನೆಗೆ ಹೋಗಬಾರದು.
೨೯. ಅಲ್ಲದ ಕೆಲಸಕ್ಕೆ ಹೋಗಿ…
ವಿಧ: ಬ್ಲಾಗ್ ಬರಹ
March 13, 2006
ಶ್ರೀನಿವಾಸ ವೈದ್ಯ ಅವರ ' ಹಳ್ಳ ಬಂತು ಹಳ್ಳ' ಮತ್ತು ಎನ್ಕೆ ಅವರ 'ಅಶ್ವತ್ಥಮರ'
ಶ್ರೀಯುತ ಶ್ರೀನಿವಾಸ ವೈದ್ಯ ಅವರ ಬರವಣಿಗೆ ಮೊದಲು ಕಸ್ತೂರಿಯಲ್ಲಿ ಪ್ರಕಟವಾದ ಎರಡು ಮೂರು ಸರಸಮಯ ಹೃದಯಸ್ಪರ್ಶಿ ಪ್ರಬಂಧಗಳಿಂದ ಗಮನಕ್ಕೆ ಬಂದಿತು. ಅಲ್ಲಿ 'ಮನಸುಖರಾಯನ ಮನಸು' ಪುಸ್ತಕದಿಂದ ಎಂದು ಹೇಳಿದ್ದರಿಂದ ಧಾರವಾಡದ ಪುಸ್ತಕದ ಅಂಗಡಿಗಳಿಗೆ ಹೋದಾಗಲೆಲ್ಲ ಆ ಪುಸ್ತಕವನ್ನು ಕೇಳುತ್ತಿದ್ದೆ. ಅದು ಇರುತ್ತಿರಲಿಲ್ಲ ; ಅವರ ಬೇರೆ ಪುಸ್ತಕಗಳನ್ನು ತೋರಿಸುತ್ತಿದ್ದರು . ಅದೂ ಒಳ್ಳೆಯದೇ ಆಯಿತು .…
ವಿಧ: Basic page
March 13, 2006
೩೭. ಆಪತ್ತು ಬರುವ ಮೊದಲೇ ಅದಕ್ಕೆ ಉಪಾಯಗಳನ್ನು ಯೋಚಿಸಬೇಕು. ಬೆಂಕಿ ಹತ್ತಿದ ಮೇಲೆ ಬಾವಿ ತೋಡಲು ಆರಂಭಿಸುವದು ಸರಿಯಲ್ಲ.
ಮೂಲ:-
ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾಗೃಹೇ ||
೩೮.
ದಾನ , ಉಪಭೋಗ, ನಾಶ ಇವು ಹಣದ ಮೂರು ಸಾಧ್ಯತೆಗಳು . ದಾನವನ್ನೂ ಮಾಡದ , ಸ್ವಂತದ ಸುಖಕ್ಕೆ ಉಪಯೋಗವಾಗದ ಹಣ ನಾಶವನ್ನೇ ಹೊಂದುವದು.
ಮೂಲ:-
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾಗತಿರ್ಭವತಿ ||
೩೯…
ವಿಧ: ಬ್ಲಾಗ್ ಬರಹ
March 13, 2006
Namaskara to all Kanndigas
I shall try to post few articles whenever i get some time. Nice to visit and know so many kannadigas online.
till then
visit www.prashanth.s5.com
ವಿಧ: Basic page
March 13, 2006
ನಾವು ತಿಳಿಯದ ಎಷ್ಟೋ ಗಾದೆ ಮಾತುಗಳು ಇರುತ್ತವೆ. ಈ ಗಾದೆಗಳಲ್ಲಿ ಹೊಸ ವಿಚಾರಗಳು , ಹೊಸ ನುಡಿಗಟ್ಟುಗಳು ಸಂಪದ ಓದುಗರಿಗೆ ಸಿಕ್ಕಾವು ಎಂಬ ಆಸೆಯಿಂದ ಕಂತುಗಳಲ್ಲಿ ನನಗೆ ವಿಶಿಷ್ಟವೆನಿಸಿದ ಗಾದೆಮಾತುಗಳನ್ನು ಇಲ್ಲಿ ಕಂತುಗಳಲ್ಲಿ ಕೊಡುತ್ತಿದ್ದೇನೆ.
೧೧. ಅಂಟು ತಪ್ಪಿದರೆ ನಂಟು ತಪ್ಪೀತೆ? ( ಬಳಕೆ ತಪ್ಪಿದರೂ ನೆಂಟತನ ತಪ್ಪುವದಿಲ್ಲ)
೧೨. ಅಂಬಲಿ ಕುಡಿದರೂ ಇಂಬಾಗಿ ಕುಡಿಯಬೇಕು .
೧೩. ಅಗಸನಿಗೊಂದು ಎದ್ದ ಕಲ್ಲು , ಪೂಜಾರಿಗೊಂದು ಬಿದ್ದ ಕಲ್ಲು.
೧೪. ಅಚ್ಚಕ್ಕಿ ಇದ್ದಾಗ ನುಚ್ಚಕ್ಕಿ ಹಂಗೇನು?…