ಆಯ್ದ ಸಂಸ್ಕೃತ ಸುಭಾಷಿತಗಳು. (೩೭-೩೯)

ಆಯ್ದ ಸಂಸ್ಕೃತ ಸುಭಾಷಿತಗಳು. (೩೭-೩೯)

ಬರಹ

೩೭. ಆಪತ್ತು ಬರುವ ಮೊದಲೇ ಅದಕ್ಕೆ ಉಪಾಯಗಳನ್ನು ಯೋಚಿಸಬೇಕು. ಬೆಂಕಿ ಹತ್ತಿದ ಮೇಲೆ ಬಾವಿ ತೋಡಲು ಆರಂಭಿಸುವದು ಸರಿಯಲ್ಲ.
ಮೂಲ:-
ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾಗೃಹೇ ||
೩೮.
ದಾನ , ಉಪಭೋಗ, ನಾಶ ಇವು ಹಣದ ಮೂರು ಸಾಧ್ಯತೆಗಳು . ದಾನವನ್ನೂ ಮಾಡದ , ಸ್ವಂತದ ಸುಖಕ್ಕೆ ಉಪಯೋಗವಾಗದ ಹಣ ನಾಶವನ್ನೇ ಹೊಂದುವದು.
ಮೂಲ:-
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾಗತಿರ್ಭವತಿ ||
೩೯.
ಕೇವಲ ಪಾಂಡಿತ್ಯ ಇದ್ದು ವಿವೇಕ ಇಲ್ಲದವನು ಶಾಸ್ತ್ರದ ನಿಜವಾದ ಅರ್ಥವನ್ನೇನು ಬಲ್ಲನು ? ಅಡಿಗೆಯಲ್ಲಿರುವ ಸವುಟಿನ ಹಾಗೆ . ಅದಕ್ಕೆ ಅಡಿಗೆಯ ರುಚಿಯೇನು ತಿಳಿದೀತು?
ಮೂಲ
ಯಸ್ಯ ನಾಸ್ತಿ ವಿವೇಕಸ್ತು ಕೇವಲಂ ಯೋ ಬಹುಶ್ರುತ: |
ನ ಸ ಜಾನಾತಿ ಶಾಸ್ತ್ರಾರ್ಥಾನ್ ದರ್ವೀ ಪಾಕರಸಾನ್ನಿವ  ಪಾಕರಸಾನ್ ಇವ||